twitter
    For Quick Alerts
    ALLOW NOTIFICATIONS  
    For Daily Alerts

    ಏಜೆ, ಲೀಲಾಳನ್ನು ಒಂದು ಮಾಡುತ್ತಾರಾ ಅಜ್ಜಿ?

    By ಪೂರ್ವ
    |

    'ಹಿಟ್ಲರ್ ಕಲ್ಯಾಣ' ಧಾರವಾಹಿ ಇದೀಗ ಸಖತ್ತಾಗಿ ಮೂಡಿಬರುತ್ತಿದೆ. ಪ್ರೇಕ್ಷಕರಿಗೆ ಅಜ್ಜಿಯ ನಡವಳಿಕೆ ಬಹಳ ಇಷ್ಟವಾಗುತ್ತಿದೆ. ಅಜ್ಜಿಯ ಹಠದಿಂದ ಏಜೆಗೆ ದಿಕ್ಕೇ ತೋಚದಾಗಿದೆ. ಲೀಲಾಗೂ ಅಜ್ಜಿಯ ವರ್ತನೆ ಸರಿ ಕಾಣಿಸುತ್ತಿಲ್ಲ. ಇಷ್ಟರವರೆಗೆ ಸುಮ್ಮನಿದ್ದ ಅಜ್ಜಿ ಪ್ರತಿಭಟನೆ ಮಾಡುತ್ತಿರುವುದನ್ನು ಕಂಡು ಬೆರಗಾಗಿದ್ದಾಳೆ ಲೀಲಾ. ವಿರೂಪಾಕ್ಷ ಮಾಡಿರುವ ತಂತ್ರದಿಂದ ಏಜೆ ಲೀಲಾ ಒಂದಾಗುತ್ತಾರ? ಇದೀಗ ರಾತ್ರಿಯ ವೇಳೆ ಅಜ್ಜಿ ಚಳಿಯಿಂದ ಒದ್ದಾಡುತ್ತಾ ಇರುವುದನ್ನು ಏಜೆ ನೋಡುತ್ತಾರೆ.

    ಅಮ್ಮನ ಬಳಿ ಬಂದ ಏಜೆಗೆ ನಿರಾಸೆ ಕಾದಿತ್ತು. ಅಮ್ಮ ಯಾಕಮ್ಮ ಚಳಿಯಲ್ಲಿ ಮಲಗಿದ್ದಿಯಾ ಬಾ ಅಮ್ಮ ಮನೆಗೆ ಎಂದಾಗ ಇಲ್ಲ ನಾನು ಬರಲ್ಲ ನನಗೆ ಚಳಿಯ ಖಂಡಿತ ಇಲ್ಲ. ಚಳಿಯಾದರೆ ಹೋದ್ದುಕೊಳ್ಳಲು ಹೊದಿಕೆ ಇದೆ ಏನು ತೊಂದರೆ ಆಗುವುದಿಲ್ಲ. ನೀವಿಬ್ಬರೂ ಒಂದಾಗುವವರೆಗೂ ನಾನು ಮನೆಗೆ ಕಾಲಿಡುದಿಲ್ಲ ಎಂದು ಹೇಳುತ್ತಾರೆ. ಇದನ್ನು ಕೇಳಿದ ಏಜೆ ಮುಂದೆ ಎನು ಮಾತನಾಡಬೇಕೆಂದು ತಿಳಿಯುವುದಿಲ್ಲ. ಬಳಿಕ ಮನೆಯೊಳಗೆ ಹೋಗುತ್ತಾರೆ ಏಜೆ.

    ಕೋಸ್ಟಲ್‌ವುಡ್‌ನಿಂದ ಬಂದ ನಟ ರಾಕೇಶ್ ಪೂಜಾರಿ ಈಗ 'ಹಿಟ್ಲರ್ ಕಲ್ಯಾಣ'ದ ಭಾಗಕೋಸ್ಟಲ್‌ವುಡ್‌ನಿಂದ ಬಂದ ನಟ ರಾಕೇಶ್ ಪೂಜಾರಿ ಈಗ 'ಹಿಟ್ಲರ್ ಕಲ್ಯಾಣ'ದ ಭಾಗ

    ಇದೆ ಸಂದರ್ಭ ಕಾಯುತ್ತಿದ್ದ ಇನ್ನು ದುರ್ಗಾ, ಏಜೆ ಬಳಿ ಹೇಳುತ್ತಾಳೆ, ''ಅಜ್ಜಿ ಪರಿಸ್ಥಿತಿ ಸರಿಯಿಲ್ಲ. ಈ ಹೊತ್ತಲ್ಲಿ ಅವರು ಈ ರೀತಿ ನಡೆದುಕೊಳ್ಳುವುದು ಬೇಸರ ಮೂಡಿಸಿದೆ ಎಂದಾಗ ನಂಗೂ ಇದು ಸರಿ ಕಾಣಿಸುತ್ತಿಲ್ಲ. ಆದರೆ ಅಮ್ಮ ಹಿಡಿದ ಹಠ ಪೂರ್ತಿಯಾಗುವ ತನಕ ಬಿಡುವುದಿಲ್ಲ. ಏನಾದರು ಒಂದು ವ್ಯವಸ್ಥೆ ಮಾಡುವ ಎಂದು ಹೇಳಿ ಅಲ್ಲಿಂದ ತೆರಳುತ್ತಾನೆ ಏಜೆ. ಅದಕ್ಕೆ ದುರ್ಗಾ ಮನದಲ್ಲಿ ಹೇಗಾದರೂ ಮಾಡಿ ಅಜ್ಜಿ ಪ್ಲಾನ್ ಅನ್ನು ಹಾಳು ಗೆಡವಬೇಕು ಎಂದು ಅಂದುಕೊಳ್ಳುತ್ತಾಳೆ.

    ಮರುದಿನ ಏಜೆ, ಅಜ್ಜಿ ಬಳಿ ಬರುತ್ತಿರುವುದನ್ನು ವಿರೂಪಾಕ್ಷ ಮರೆಯಲ್ಲಿ ನಿಂತು ನೋಡುತ್ತಿದ್ದ. ಕೂಡಲೇ ಅಜ್ಜಿಗೆ ಕರೆ ಮಾಡಿ, 'ಅಜ್ಜಿ ನಿಮ್ಮ ಬಳಿಗೆ ಏಜೆ ಬರುತ್ತಿದ್ದಾರೆ ಎಂದು ಸಿಗ್ನಲ್ ನೀಡುತ್ತಾನೆ . ಓಡಿ ಬಂದ ಅಜ್ಜಿ ಎದುರು ಖರ್ಚಿಯಲ್ಲಿ ಕುಳಿತು ಚಹಾ ರೆಡಿ ಮಾಡುತ್ತಿರುತ್ತಾರೆ. ಬಳಿಕ ಏಜೆ ಬರುತ್ತಿರುವುದನ್ನು ನೋಡಿದ ಅಜ್ಜಿ ಏನು ಕರ್ಮನೋ ಏನೋ .. ಯಾವಾಗ್ಲೂ ಅತ್ತೆಗೆ ಸೊಸೆ ಚಹಾ ಕೊಡುತ್ತಾಳೆ. ಏಷ್ಟು ಖಷಿಯಾಗಿರುತ್ತಾರೆ. ಆದರೆ ನನ್ನ ಹಣೆಯಲ್ಲಿ ಇದೆಲ್ಲ ಬರೆದಿಲ್ಲ ಅನ್ಸುತ್ತೆ'' ಎಂದು ಜೋರಾಗಿ ಹೇಳಿಕೊಳ್ಳುತ್ತ ಇರುವಾಗ ಏಜೆ ಬರುತ್ತಾರೆ.

     'ನನ್ನ ಹೋರಾಟ ಪ್ರೀತಿಗಾಗಿ'

    'ನನ್ನ ಹೋರಾಟ ಪ್ರೀತಿಗಾಗಿ'

    ಏಜೆಯನ್ನು ನೋಡಿದ ತಾಯಿ ಮಾತು ಕೂಡ ಆಡಿಸುವುದಿಲ್ಲ. ಅಮ್ಮ ಬಾ ಅಮ್ಮ ಒಳಗೆ ಎಂದಾಗ ಬೋರ್ಡ್ ಒಂದನ್ನು ತೋರಿಸುತ್ತಾರೆ, ಅದರಲ್ಲಿ 'ನನ್ನ ಹೋರಾಟ ಪ್ರೀತಿಗಾಗಿ' ಎಂದು ಬರೆದಿರುತ್ತದೆ. ಅದನ್ನು ನೋಡಿದ ಏಜೆಗೆ ಏನಮ್ಮ ನಿನಗೆ ಯಾರಮ್ಮ ಇದೆಲ್ಲ ಹೇಳಿಕೊಟ್ಟಿದ್ದು ಹೇಳು. ಯಾರುಂತ ಗೊತ್ತಾಗಲಿ ಆಮೇಲೆ ಅವರಿಗಿದೆ ಮಾರಿ ಹಬ್ಬ ಎಂದು ವಿರೂಪಾಕ್ಷನನ್ನೂ ನೋಡಿಕೊಂಡು ಹೇಳಿದಾಗ ವಿರೂಪಾಕ್ಷ ಗೆ ಭಯವಾಗುತ್ತದೆ. ನಾನು ಏನು ಹೇಳಿಕೊಟ್ಟಿಲ್ಲ. ನನ್ನ ತಾಯಿ ಆಣೆಗೂ'' ಎಂದು ಆಣೆ ಪ್ರಮಾಣ ಮಾಡುತ್ತಾನೆ. ಬಳಿಕ ಅಲ್ಲಿಂದ ಏಜೆ ಹೋಗುತ್ತಾನೆ.

    ವಿರೂಪಾಕ್ಷ-ಅಜ್ಜಿ ಮಾತುಕತೆ

    ವಿರೂಪಾಕ್ಷ-ಅಜ್ಜಿ ಮಾತುಕತೆ

    ಬಳಿಕ ಅಜ್ಜಿ ಏನೋ ವಿರೂಪಾಕ್ಷ ಟೀ ಮಾಡುತ್ತಿದ್ದಿನಿ ಕುಡಿತಿಯಾ ಎಂದು ಕೇಳಿದಾಗ ವಿರೂಪಾಕ್ಷ ಹೇಳುತ್ತಾನೆ ನನ್ನ ಬುಡನೇ ಸುಟ್ಟು ಹೋಗುತ್ತಿದೆ. ನಿಮಗೆ ಟೀ ನದ್ದೇ ಚಿಂತೆ ಎಂದು ಹೇಳುತ್ತಾನೆ. ಬಳಿಕ ಅಜ್ಜಿ ಆತನ ಬಳಿ ಹೇಳುತ್ತಾರೆ. ಇನ್ನೂ ಏಜೆ ಮತ್ತು ಲೀಲಾ ಇವತ್ತು ಒಟ್ಟಿಗೆ ಊಟ ಮಾಡಬೇಕು. ಅಷ್ಟರವರೆಗೆ ನಾನು ಏನು ತಿನ್ನುವುದಿಲ್ಲ. ಎಂದು ವಿರೂಪಾಕ್ಷ ಬಳಿ ಹೇಳುತ್ತಾರೆ. ಇದನ್ನು ಲಕ್ಷ್ಮೀ ಕದ್ದು ಕೇಳಿಸಿಕೊಳ್ಳುತ್ತಾ ಇರುತ್ತಾಳೆ.

    5000 ವಸೂಲಿ ಮಾಡಿದ ಸ್ವಾಮೀಜಿ

    5000 ವಸೂಲಿ ಮಾಡಿದ ಸ್ವಾಮೀಜಿ

    ಕೌಸಲ್ಯಳ ಮನೆಗೆ ಬಂದಿದ್ದ ಕಪಟ ಸ್ವಾಮೀಜಿ ವಾಪಸ್ ಬರುತ್ತಾರೆ. ಬರ ಬೇಕು ಸ್ವಾಮಿ ಬರಬೇಕು ಎಂದು ಸ್ವಾಮೀಜಿಯನ್ನು ಸ್ವಾಗತಿಸುತ್ತಾರೆ ಕೌಸಲ್ಯ. ಹೂವನ್ನು ಸ್ವಾಮೀಜಿಯ ಮೇಲೆ ಹಾಕಿ ಸ್ವಾಗತಿಸಿದಕ್ಕೆ ಯಾಕಮ್ಮ ಹೂ ಹಾಕುತ್ತಿಯಾ ಎಂದು ಕೇಳಿದ್ದಕ್ಕೆ ಇರಲಿ ಸ್ವಾಮೀಜಿ ದೇವರಿಗೆಂತಾ ತಂದಿದ್ದು ಅರ್ಪಿಸುತ್ತಿದ್ದೇನೆ ಎಂದು ಸ್ವಾಮೀಜಿಯನ್ನು ಒಳಗೆ ಕರೆದು ಕುಳ್ಳಿರಿಸುತ್ತಾಳೆ. ಬಳಿಕ ಪೂಜೆ ಮಾಡಿಸಿರುವೆ ದಕ್ಷಿಣೆ ಕೊಡಮ್ಮ ಅಂದಾಗ ದಕ್ಷಿಣೆಯನ್ನು ಸ್ವಲ್ಪ ಕಡಿಮೆ ಮಾಡಿ ಗುರುಗಳೇ ಎಂದೆಲ್ಲ ಕೇಳಿಕೊಳ್ಳುತ್ತಾರೆ. ಸರಿಯಮ್ಮ 45000 ಕೊಡು ಅಂದಾಗ ಅಷ್ಟೆಲ್ಲ ಇಲ್ಲ ಗುರೂಜಿ ಇನ್ನೂ ಚೂರು ಕಡಿಮೆ ಮಾಡಿ ಎಂದು ಹೇಳಿ 5000 ಕೊಡುತ್ತಾಳೆ. ಇನ್ನೂ ಸ್ವಾಮೀಜಿ ಅಷ್ಟಾದರೂ ಸಿಕ್ಕಿತಲ್ವಾ ಎಂದು ಮನದಲ್ಲಿ ಖುಷಿ ಪಡುತ್ತಾರೆ. ಬಳಿಕ ಸ್ವಾಮೀಜಿ ಒಂದು ಲಿಂಬೆ ಹುಳಿ ಯನ್ನು ಕೊಟ್ಟು ಇದನ್ನು ಇಬ್ಬರಿಗೂ ಜ್ಯೂಸ್ ರೂಪದಲ್ಲಿ ಕೊಟ್ಟರೆ ಇಬ್ಬರು ವಿಚ್ಛೇದನ ತೆಗೆದುಕೊಳ್ಳುತ್ತಾರೆ ಎಂದು ಹೇಳುತ್ತಾನೆ. ಬಳಿಕ ಅಲ್ಲಿಂದ ತೆರಳುತ್ತಾನೆ. ಮನೆಯ ಹೊರಗೆ ಹೋದ ಬಳಿಕ ಸ್ವಾಮೀಜಿ. ಅಬ್ಬ 5000 ವಾದರು ಸಿಕ್ಕಿತು. ಇವರ ಹಾಗೆ ಇನ್ನೂ ಪೆದ್ದರು ಸಿಕ್ಕರೆ ಸಾಕು. ಅಕ್ಕಪಕ್ಕದವರು ಆಡುವ ಮಾತು ಕೇಳಿ ಸುಮ್ಮನೆ ಒಂದು ಕಲ್ಲು ಎಸೆದೆ ಅದು ತಾಕಿ ಹಣ್ಣು ಬಿದ್ದಿತ್ತು ಎಂದು ಹೇಳಿ ಅಲ್ಲಿಂದ ಹೋಗುತ್ತಾನೆ.

    ಏಜೆ-ಲೀಲಾರನ್ನು ನೋಡಿ ಖುಷಿಪಟ್ಟ ಅಜ್ಜಿ

    ಏಜೆ-ಲೀಲಾರನ್ನು ನೋಡಿ ಖುಷಿಪಟ್ಟ ಅಜ್ಜಿ

    ಇನ್ನು ಅಜ್ಜಿ ಲೀಲಾಳನ್ನು ಕರೆದು ನೀನು ಏಜೇ ಒಟ್ಟಿಗೆ ಊಟಕ್ಕೆ ಕೂರಬೇಕು ಇಲ್ಲವಾದರೆ ನಾನು ಉಪವಾಸ ಮಾಡುತ್ತೇನೆ ಎಂದು ಹೇಳುತ್ತಾಳೆ. ಬಳಿಕ ಅಲ್ಲಿಂದ ತೆರಳಿದ ಲೀಲಾ. ಏಜೆ ಬಳಿ ಬರುತ್ತಾಳೆ. ಏಜೆ ಎಂದು ನಾನು ಮತ್ತು ನೀವು ಒಟ್ಟಿಗೆ ಊಟ ಮಾಡಬೇಕಂತೆ. ಇಲ್ಲವಾದರೆ ಅಜ್ಜಿ ಊಟ ಮಾಡುವುದಿಲ್ಲ ಎಂದು ಹೇಳುತ್ತಾಳೆ. ಇದಕ್ಕೆ ಒಪ್ಪಿದ ಏಜೆಗೆ ಲೀಲಾ ಅಜ್ಜಿ ಎದುರು ಕೈ ತುತ್ತು ತಿನ್ನಿಸುತ್ತಾರೆ. ಇದನ್ನು ನೋಡಿದ ಅಜ್ಜಿ ಖುಷಿಗೆ ಪಾರವೇ ಇಲ್ಲದಂತಾಗಿದೆ.

    English summary
    Zee Kannada serial Hitler Kalyana Written Update on 30th June. Hitler kalyana serial having many twists and turns.
    Friday, July 1, 2022, 20:46
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X