ಮತ್ತೆ ಒಂದಾದ ಏಜೆ-ಲೀಲಾ: ದುರ್ಗಾ ಸುಮ್ಮನಿರ್ತಾಳ?
'ಹಿಟ್ಲರ್ ಕಲ್ಯಾಣ' ಧಾರವಾಹಿಯಲ್ಲಿ ಇದೀಗ ಕಷ್ಟಗಳ ದಿನಗಳನ್ನೆಲ್ಲ ಏಜೆ ಮೆಟ್ಟಿ ನಿಂತಿದ್ದಾರೆ. ಆದರೆ ಏಜೆಗೆ ತನ್ನವರೇ ದ್ರೋಹ ಬಗೆಯುತ್ತಿದ್ದಾರೆ ಎಂಬ ಸತ್ಯದ ಅರಿವು ಮಾತ್ರ ಇನ್ನೂ ಆಗಿಲ್ಲ. ಸೊಸೆಯಂದಿರನ್ನು ಬಹಳ ಪ್ರೀತಿಯಿಂದ ಕಾಣುವ ಏಜೆ ಎದುರೆ ಸೊಸೆಯಂದಿರ ಮುಖವಾಡ ಬಯಲಾಗುವ ಸಮಯ ಬರುತ್ತಿದೆ. ಆದರೆ ದುರ್ಗಾ ಆದಷ್ಟು ಏಜೆ ಕೈಯಿಂದ ತಪ್ಪಿಸಿಕೊಳ್ಳಲು ನೋಡಿಕೊಳ್ಳುತ್ತಿದ್ದಾಳೆ. ಚಂದ್ರಶೇಖರ್ ವಿಚಾರದಲ್ಲಿ ಸತ್ಯದ ಜಾಡು ಹಿಡಿದ ಏಜೆಗೆ ಈ ಹಿಂದೆ ತಾನು ಮಾಡಿದ್ದೆಲ್ಲ ತಪ್ಪೆಂದು ಅರಿವಿಗೆ ಬರುತ್ತದೆ. ಆದರೆ ದುರ್ಗಾ ಮಾತ್ರ ಏಜೆಗಿಂತ ಬುದ್ಧಿವಂತೆ ಎಂಬುವುದನ್ನು ಪುನಃ ಸಾಬೀತುಮಾಡಿಕೊಂಡಿದ್ದಾಳೆ.
ಏಜೆ ಮನೆಯವರಿಗೆ ಲೀಲಾ ಊಟ ಬಡಿಸುತ್ತಿರುತ್ತಾಳೆ ಎಲ್ಲರೂ ಖುಷಿಯಿಂದ ಮಾತನಾಡುತ್ತಿರುತ್ತಾರೆ. ಅಜ್ಜಿಗಂತು ಲೀಲಾ ಮನೆಗೆ ಬಂದಿರುವುದು ಬಹಳ ಖುಷಿಯಾಗಿದೆ. ಹೀಗೆ ಮಾತನಾಡಿಕೊಂಡರಬೇಕಾದರೆ ಏಜೆ ಬರುತ್ತಾರೆ, ಅಮ್ಮ ನಾನು ನಾಳೆ ಊಟಕ್ಕೆ ಇರುದಿಲ್ಲ ಎಂದು ಹೇಳುತ್ತಾನೆ. ಅದಕ್ಕೆ ತಾಯಿ ಆಯ್ತು ಎಂದು ಹೇಳುತ್ತಾರೆ ಬಳಿಕ ಲೀಲಾ ಕೂಡ ಇರುವುದಿಲ್ಲ ಅವಳು ನನ್ನ ಜೊತೆ ಡಿನ್ನರ್‌ಗೆ ಕರೆದುಕೊಂಡು ಹೊಗುತ್ತೇನೆ ಎನ್ನುತ್ತಾನೆ. ಆಗ ಮೂವರು ಸೊಸೆಯಂದಿರ ಮುಖ ಹರಳೆಣ್ಣೆ ಕುಡಿದ ಹಾಗೆ ಆಗಿದ್ದನ್ನು ನೋಡಿದ ಲೀಲಾಗೆ ನಗು ಬರುತ್ತದೆ. ಬಳಿಕ ಏಜೆ ಮಾತಿಗೆ ಕೊಂಚ ಶಾಕ್ ಸಹ ಆಗ್ತಾಳೆ.

ಏಜೆ ಜೊತೆ ಹೋಟೆಲ್‌ಗೆ ಹೊರಟ ಲೀಲಾ
ಏಜೆ ವರ್ತನೆಯಲ್ಲಿ ಆದ ಬದಲಾವಣೆ ಕಂಡು ಆಶ್ಚರ್ಯ ಚಕಿತಳಾಗಿದ್ದಾಳೆ ಲೀಲಾ. ಇತ್ತ ಲೀಲಾ ತಾಯಿ ಮಾತ್ರ ಏಜೆ ವಿರುದ್ಧ ಸಿಟ್ಟಿಗೆದ್ದಿದ್ದಾರೆ. ತನ್ನ ಗಂಡನ ಬಳಿಯಲ್ಲಿ ಮಾತನಾಡುತ್ತಾ, ಏಕೆ ಲೀಲಾಳನ್ನು ಕರೆದುಕೊಂಡು ಹೋಗಲು ಬಿಟ್ಟಿದ್ದು ಎಲ್ಲರ ಮುಂದೆ ದರ ದರ ಎಂದು ಎಳೆದುಕೊಂಡು ಹೋಗಬೇಕಾದರೆ ನೀವ್ಯಾಕೆ ಮಾತನಾಡಿಲ್ಲ ಎಂದೆಲ್ಲ ಹೇಳುತ್ತಾಳೆ ಅದಕ್ಕೆ ಚಂದ್ರಶೇಖರ್‌ರವರಿಗೆ ನಗು ಬರುತ್ತದೆ. ಎಷ್ಟೇ ಸಮಾಜಾಯಿಶಿ ನೀಡಿದರು ಕೌಸಲ್ಯ ಮಾತ್ರ ಸಮಾಧಾನಗೊಳ್ಳುವುದಿಲ್ಲ. ತನ್ನ ಮಗಳಿಗೆ ವಿಚ್ಚೇಧನ ಕೊಡಿಸಿದರೆ ಕುಳಿತು ತಿನ್ನುವಷ್ಟು ಏಜೆ ಮನೆಯಿಂದ ಹಣವನ್ನು ಪಡೆದುಕೊಳ್ಳಬಹುದು ಎಂಬುವುದು ಕೌಸಲ್ಯ ದೂರದೃಷ್ಟಿ!

ಎಜೆಗೆ ಲೀಲಾಳ ಮೇಲೆ ಪ್ರೀತಿ ಹುಟ್ಟುತ್ತಿದ್ಯಾ?
ಇತ್ತ ಸೊಸೆಯಂದಿರು ಹೊಟ್ಟೆ ಉರಿದುಕೊಳ್ಳುತ್ತಿದ್ದಾರೆ. ಏಜೆ, ಲೀಲಾಳನ್ನು ಹೋಟೆಲ್‌ಗೆ ಕರೆದುಕೊಂಡು ಹೋಗುತ್ತಾರೆ ಎಂದಾಗ ಸೊಸೆಯಂದಿರಿಗೆ ನಡುಕ ಶುರುವಾಗಿದೆ. ಹೆಂಡತಿಯನ್ನು ಏಜೆ ಪ್ರೀತಿ ಮಾಡಲು ತೊಡಗಿದ್ದಾರಾ ಎಂಬ ಅನುಮಾನಗಳು ಅವರ ತಲೆಯಲ್ಲಿ ಮೂಡುತ್ತಿವೆ. ಇನ್ನು ಲೀಲಾ ಹಾಗೂ ಏಜೆ ಕಾರಿನಲ್ಲಿ ಡಿನ್ನರ್‌ಗೆ ಪ್ರಯಾಣ ಬೆಳೆಸಿದರು. ಆದರೆ ನಮ್ಮ ಲೀಲಾ ತುಂಬಾ ಬಾಯಿಬಡಕಿ ಆಕೆಗೆ ಮಾತನಾಡದೇ ಇರಲು ಸಾಧ್ಯವಿಲ್ಲ.

ಜಾಸ್ತಿ ಮಾತನಾಡಿ ಪೇಚಿಗೆ ಸಿಲುಕಿದ ಲೀಲಾ
ಇನ್ನೂ ಲೀಲಾ ಮನದಲ್ಲಿ ಅಂದುಕೊಳ್ಳುತ್ತಾಳೆ ಕಾಲೇಜಿನಲ್ಲಿ ಪಾಠ ಕಲಿಯುವುದಕ್ಕಿಂತಲೂ ಇವರೊಂದಿಗೆ ಹೇಗೆ ಮಾತನಾಡಿಸುವುದು ಕಲಿಸಿಕೊಟ್ಟಿದ್ದರೆ ಎಷ್ಟು ಒಳ್ಳೆಯದಿತ್ತು ಎಂದು ಮನದಲ್ಲಿಯೇ ಹೇಗೆ ಏಜೆ ಮಾತನಾಡುವುದು ಎಂದು ಯೋಚಿಸುತ್ತಿರುತ್ತಾಳೆ. ಎಜೆಯ ಬಳಿ ಲೀಲಾ ಹೇಳುತ್ತಾಳೆ ನಾನು ಇವತ್ತು ಮಾತಾಡಲ್ಲ ಏಜೆ ನಾನು ಮಾತನಾಡಿ ಗೋ ಔಟ್ ಎಂದೆಲ್ಲ ನಿಮ್ಮ ಬಾಯಲ್ಲಿ ನಾನು ಹೇಳಿಸಿಕೊಳ್ಳಲ್ಲ ಎಂದು ಲೀಲಾ ಹೇಳುತ್ತಾಳೆ ಅದಕ್ಕೆ ಏಜೆ ಹೇಳುತ್ತಾರೆ ಮಾತನಾಡುವುದಿಲ್ಲ ಎಂದು ಹೇಳಲು ಇಷ್ಟೆಲ್ಲ ಹೇಳಬೇಕಾ ನೀನು ಎಂದು ಹೇಳಿದಾಗ ಲೀಲಾ ಇಲ್ಲಪ್ಪ ನಾನು ಜಾಸ್ತಿ ಮಾತನಾಡಿಲ್ಲ ಎಲ್ಲಿ ನಾನು ಮಾತೇ ಆಡಿಲ್ಲ ಎಂದು ಹೇಳಿದಾಗ ಏಜೆ, ಲೀಲಾಳತ್ತ ಕೋಪದಿಂದ ನೋಡುತ್ತಾರೆ ಇದನ್ನು ನೋಡಿದಾಗ ಲೀಲಾ ಸುಮ್ಮನಾಗುತ್ತಾಳೆ.

ಹೋಟೆಲ್ ನೋಡಿ ಭಯಗೊಂಡ ಲೀಲಾ
ಸ್ವಲ್ಪ ಜಾಸ್ತಿ ಮಾತನಾಡಿದೆ ಎಂದು ಹೇಳುತ್ತಾಳೆ ಬಳಿಕ ಸುಮ್ಮನಾಗುತ್ತಾಳೆ. ಇತ್ತ ಗೀತಾ ಎಜೆಗಾಗಿ ಹೋಟೆಲ್‌ನಲ್ಲಿ ಕಾಯುತ್ತಿರುತ್ತಾರೆ, ಏಜೆಯನ್ನು ನೋಡಲು ಗೀತಾ ಕಾತರರಾಗಿದ್ದಾರೆ, ಏಜೆ ಲೀಲಾ ಹೋಟೆಲ್‌ಗೆ ಆಗಮಿಸಿದ್ದಾರೆ. ಏಜೆ ಹೇಳುತ್ತಾರೆ ನೀನು ಹೊಟೇಲ್ ಒಳಗೆ ಹೋಗಿರು ನಾನು ಒಂದು ಸಣ್ಣ ಕಾಲ್ ಮುಗಿಸಿ ಬರುತ್ತೇನೆ ಎಂದು ಹೇಳುತ್ತಾರೆ ಆದರೆ ಅಷ್ಟು ದೊಡ್ಡ ಹೋಟೆಲ್ ಒಳಗೆ ಹೋಗಲು ಲೀಲಾ ಮಾತ್ರ ತಡಕಾಡುತ್ತಿದ್ದಾಳೆ.


Click it and Unblock the Notifications











