Rakesh & Vinay: ಅಣ್ಣ-ತಮ್ಮಂದಿರಂತೆ ಕಾಣುವ ಇವರು ಬೆಸ್ಟ್ ಫ್ರೆಂಡ್ಸ್.. ಒಡಹುಟ್ಟಿದವರಲ್ಲ..!

By ಎಸ್ ಸುಮಂತ್

ಜೀ ಕನ್ನಡ 'ಹಿಟ್ಲರ್ ಕಲ್ಯಾಣ' ಧಾರಾವಾಹಿಯನ್ನು ಎಲ್ಲರೂ ನೋಡಿದ್ದೀರಿ, ಹಾಗೇ ಮೆಚ್ಚಿಕೊಂಡಿದ್ದೀರಿ. ಅದಕ್ಕೆ ಅಂತಾನೆ ಟಿಆರ್ ಪಿ ಯಲ್ಲೂ ಒಂದು ರೇಂಜಿಗೆ ಹೋಗುತ್ತಾ ಇರೋದು. ಈ ಧಾರಾವಾಹಿಯಲ್ಲಿ ಬರುವ ಒಂದೊಂದು ದೃಶ್ಯವೂ ಎಲ್ಲರನ್ನು ಕಾಡದೆ ಇರುವುದಿಲ್ಲ. ಲೀಲಾ-ಎಜೆ ಪಾತ್ರದ ಮೇಲೆಯೇ ಧಾರಾವಾಹಿ ನಿಂತಿದ್ದರು ಸಹ, ಸೊಸೆಯಂದಿರು, ಮಕ್ಕಳು ಕೂಡ ಈ ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ತನ್ನ ವಯಸ್ಸಿಗಿಂತ ದೊಡ್ಡವರಿಗೆ ಲೀಲಾ ಸೊಸೆಯಾಗಿದ್ದಾಳೆ. ಹಾಗೇ ಮೂವರು ಗಂಡು ಮಕ್ಕಳಿಗೆ ಅಮ್ಮ ಆಗಿದ್ದಾರೆ. ಗಂಡು ಮಕ್ಕಳು ಅಂದರೆ ಚಿಕ್ಕ ಮಕ್ಕಳಲ್ಲ.

ಎಜೆಗೆ ಈಗಾಗಲೇ ಮೂವರು ಗಂಡು ಮಕ್ಕಳಿದ್ದಾರೆ. ಅದರಲ್ಲಿ ಇಬ್ಬರು ಮನೆಯಲ್ಲಿಯೇ ಇದ್ದರೆ ಇನ್ನೊಬ್ಬನ ಮುಖ ದರ್ಶನ ಬರೀ ಫೋಟೊದಲ್ಲಿ ಆಗಿದೆ ಅಷ್ಟೆ. ಧಾರಾವಾಹಿ ನೋಡುವ ಪ್ರೇಕ್ಷಕರಿಗೆ ಆಗಿಲ್ಲ. ಸದ್ಯ ಎಜೆ ಮಕ್ಕಳಾಗಿ ನಟಿಸುತ್ತಿರುವ ರಾಕಿ ಮತ್ತು ವಿನಯ್ ಅವಳಿ ಜವಳಿಯಂತೆ ಇದ್ದಾರೆ. ಎಷ್ಟೋ ಜನರು ಧಾರಾವಾಹಿಗೆ ಬೇಕು ಅಂತಾನೆ ಅವಳಿ ಜವಳಿ ಮಕ್ಕಳನ್ನು ಹುಡುಕಿದ್ದಾರೆ ಎಂಬೆಲ್ಲಾ ಚರ್ಚೆಗಳನ್ನು ಶುರು ಮಾಡಿದ್ದಾರೆ. ಆದರೆ ಅದರ ರಿಯಾಲಿಟಿ ಬೇರೆನೇ ಇದೆ. ಅದನ್ನು ತಿಳಿಯಲು ಮುಂದೆ ಓದಿ.

ಅಣ್ಣತಮ್ಮಂದಿರಂತೆ ಇರುವ ರಾಕೇಶ್ & ವಿನಯ್

ಅಣ್ಣತಮ್ಮಂದಿರಂತೆ ಇರುವ ರಾಕೇಶ್ & ವಿನಯ್

ಒಬ್ಬರಂತೆ ಏಳು ಜನ ಇದ್ದೀವಿ ಅನ್ನೋ ಮಾತಿದೆ. ಅದು ಸತ್ಯ ಕೂಡ. ಎಷ್ಟೋ ಸಲ ನಮ್ಮಂತೆ ಇರುವವರು ನಮ್ಮ ಜೊತೆಯಾಗುತ್ತಾರೆ. ಇನ್ನು ಕೆಲವರಿಗೆ ಅವರಂತೆ ಇರುವವರು ಕಾಣಿಸುವುದೇ ಇಲ್ಲ. ಆದರೆ ಒಬ್ಬರಂತೆ ಹೋಲುವವರನ್ನು ಸಾಕಷ್ಟು ಸಲ ಪರಿಚಯಸ್ಥರು ಕಣ್ಣು ತುಂಬಿಕೊಂಡಿರುತ್ತಾರೆ. ಈಗ ಸಿನಿಮಾ, ಧಾರಾವಾಹಿ ಇಂಡಸ್ಟ್ರಿಯಲ್ಲೂ ಆ ರೀತಿಯ ವ್ಯಕ್ತಿಗಳನ್ನು ತೋರಿಸಿರುತ್ತಾರೆ. ಅದಕ್ಕೆ ಉದಾಹರಣೆ ಈಗ ಹಿಟ್ಲರ್ ಕಲ್ಯಾಣದಲ್ಲೂ ಅಂತದ್ದೊಂದು ಜೋಡಿಯನ್ನು ಕಾಣಬಹುದು. ರಾಕೇಶ್ ಮತ್ತು ವಿನಯ್ ಈ ಧಾರಾವಾಹಿಯಲ್ಲಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಅವರಿಬ್ಬರು ಬಂದು ಹೋಗುವ ಸಮಯ ಕಡಿಮೆಯದ್ದೆ ಆದರೂ ಮಕ್ಕಳು ಮಾತ್ರ ಮುದ್ದಾಗಿದ್ದಾರೆ ಎನ್ನಿಸಿಕೊಂಡಿದ್ದಾರೆ. ಜೊತೆಗೆ ಅವಳಿ ಜವಳಿಯಂತೆ ಫೀಲ್ ಆಗುತ್ತಾರೆ.

ರಾಕೇಶ್ & ವಿನಯ್ ಒಡ ಹುಟ್ಟಿದವರಲ್ಲ

ರಾಕೇಶ್ & ವಿನಯ್ ಒಡ ಹುಟ್ಟಿದವರಲ್ಲ

ರಾಕೇಶ್ ಮತ್ತು ವಿನಯ್ ಅಣ್ಣ-ತಮ್ಮಂದಿರ ಎಂದರೆ ಅವರು ಹೇಳುವುದು ಇಲ್ಲ ಎಂದೇ. ಬದಲಿಗೆ ನಾವಿಬ್ಬರು ಬೆಸ್ಟ್ ಫ್ರೆಂಡ್ಸ್ ಅಂತಾರೆ. ಈ ಬಗ್ಗೆ ಅನುಮಾನಗೊಂಡು ರಾಕೇಶ್ ಅವರಿಗೆ ಕರೆ ಮಾಡಿದಾಗ ಅವರು ಹೇಳಿದ್ದು ಹೀಗೆ, "ನೀವೂ ಅಂತಾನೆ ಅಲ್ಲ, ತುಂಬಾ ಜನರು ನಮ್ಮಿಬ್ಬರನ್ನು ಅಣ್ಣ-ತಮ್ಮಂದಿರು ಅಂತಾನೆ ಫೀಲ್ ಮಾಡುತ್ತಾರೆ. ಎಷ್ಟೋ ಸಲ ಈ ಬಗ್ಗೆ ನಮ್ಮ ಬಳಿ ಕೇಳಿದ್ದಾರೆ. ನೀವಿಬ್ಬರೂ ಅಣ್ಣ-ತಮ್ಮಂದಿರ ಅಂತ. ಆ ರೀತಿ ಕೇಳಿದಾಗ ನಮಗೂ ತುಂಬಾ ಖುಷಿಯಾಗುತ್ತೆ. ಅಲ್ಲ ಅಂತ ಹೇಳುವುದಕ್ಕೆ ಬಾಯಿ ಬರಲ್ಲ. ನಾವಿಬ್ಬರು ಫ್ರೆಂಡ್ಸ್ ಆದರೂ ಅಣ್ಣ ತಮ್ಮಂದಿರಂತೆಯೇ ಇದ್ದೇವೆ." ಎನ್ನುತ್ತಾರೆ.

ಧಾರಾವಾಹಿಯಲ್ಲಿ ನಟಿಸುವುದಕ್ಕೆ ಮೊದಲೇ ಪರಿಚಯ

ಧಾರಾವಾಹಿಯಲ್ಲಿ ನಟಿಸುವುದಕ್ಕೆ ಮೊದಲೇ ಪರಿಚಯ

ಬಣ್ಣದ ಲೋಕ ಎಲ್ಲರನ್ನು ಅದಾಗಿಯೇ ಕೈ ಬೀಸಿ ಕರೆಯುತ್ತೆ. ಅದರಂತೆ ರಾಕೇಶ್ ಹಾಗೂ ವಿನಯ್ ಅವರನ್ನು ಕೂಡ ಸೆಳೆದಿತ್ತು. ಆಸಕ್ತಿ, ಆಸೆ ಎರಡು ಒಂದೇ ಆಗಿದ್ದರಿಂದ ಇಬ್ಬರು ಈಗ ಧಾರಾವಾಹಿಗಳಲ್ಲಿ ಮಿಂಚುತ್ತಿದ್ದಾರೆ. ಈ ಬಗ್ಗೆ ಮಾತನಾಡಿದ ರಾಕೇಶ್, "ಈ ಮೊದಲು ಎಜ್ಯುಕೇಷನ್ ಮುಗಿಸಿ ನಾನು ಒಂದು ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೆ. ಅಲ್ಲಿಗೆ ವಿನಯ್ ಕೂಡ ಜಾಯಿನ್ ಆಗಿದ್ದ. ಇಬ್ಬರು ಫ್ರೆಂಡ್ಸ್ ಆದೆವು. ಮಾತಾಡುತ್ತಾ ಮಾತಾಡುತ್ತಾ ಇಬ್ಬರಿಗೂ ಆಕ್ಟಿಂಗ್ ಬಗ್ಗೆ ಆಸಕ್ತಿ ಇರುವುದು ಗೊತ್ತಾಯಿತು. ಅಂದಿನಿಂದ ಈ ಕಡೆಗೆ ಗಮನ ಕೊಟ್ಟೆವು. ವಿನಯ್ 'ಸೇವಂತಿ' ಆದ ಮೇಲೆ 'ಹಿಟ್ಲರ್ ಕಲ್ಯಾಣ'ದಲ್ಲಿ ನನಗೆ ಜೊತೆಯಾದ. ನಾನು ಈಗ 'ಗಿಣಿರಾಮ' ಧಾರಾವಾಹಿಯಲ್ಲಿ ಬ್ಯುಸಿ ಇದ್ದೇನೆ. ಸ್ಟಾರ್ ಸುವರ್ಣದಲ್ಲೂ ಒಂದು ಧಾರಾವಾಹಿಯಲ್ಲಿ ನಟಿಸುತ್ತಿದ್ದೇನೆ." ಎಂದು ತಮ್ಮ ಜರ್ನಿ ಬಗ್ಗೆಯೂ ಮಾಹಿತಿ ಹಂಚಿಕೊಂಡಿದ್ದಾರೆ.

'ಹಿಟ್ಲರ್ ಕಲ್ಯಾಣ'ಕ್ಕೆ ಜನ ಮೆಚ್ಚುಗೆ

'ಹಿಟ್ಲರ್ ಕಲ್ಯಾಣ'ಕ್ಕೆ ಜನ ಮೆಚ್ಚುಗೆ

ಜೀ ಕನ್ನಡದ ಜನಪ್ರಿಯ ಧಾರಾವಾಹಿಗಳಲ್ಲಿ 'ಹಿಟ್ಲರ್ ಕಲ್ಯಾಣ' ಕೂಡ ಒಂದು. ಎಜಿ ಹಾಗೂ ಲೀಲಾಳ ಸ್ಟೋರಿ ಪ್ರೇಕ್ಷಕರಿಗೆ ಕಿಕ್ ಕೊಡುತ್ತಿದೆ. ಆಗಾಗಾ ಎದುರಾಗುವ ಟ್ವಿಸ್ಟ್. ಲೀಲಾಳ ಎಡವಟ್ಟು, ಎಜೆ ಸೊಸೆಯಂದಿರ ಅಸೂಯೆ, ಎಜೆ ಗಾಂಭೀರ್ಯ, ಎಲ್ಲವೂ ಕಿರುತೆರೆ ವೀಕ್ಷಕರಿಗೆ ಮೆಚ್ಚಿಗೆ ಗಳಿಸಿದೆ.

More from Filmibeat

English summary
Zee Kannada Serial Hitler Kalyana Written Update On AJ Sons Episode. Here is the details about Rakesh and Vinay not a brothers but best friends.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X