Hitler Kalyana: ಲೀಲಾಳನ್ನು ಪ್ರಶ್ನೆ ಮಾಡಿದ ಅಂತರ; ಏಜೆ ಮನೆಯಲ್ಲಿ ತನ್ನ ಅಸ್ತಿತ್ವ ಕಳೆದುಕೊಂಡ ಲೀಲಾ!

By Poorva

ಹಿಟ್ಲರ್ ಕಲ್ಯಾಣ ಧಾರವಾಹಿ ನೋಡುಗರ ಮನ ಗೆಲ್ಲುತ್ತಿದೆ. ಇದೀಗ ಅಂತರಗಾಗಿ ಲೀಲಾ ತನ್ನ ಅಸ್ತಿತ್ವವನ್ನೆ ಬಿಟ್ಟು ಕೊಡುವ ಕಾಲ ಕೂಡ ಬಂದಿದೆ. ಆದರೆ ಕೌಸಲ್ಯ ಮಾತ್ರ ಏಜೆಯನ್ನು ತರಾಟೆಗೆ ತೆಗೆದುಕೊಂಡಿದ್ದಾಳೆ . ಏಜೆ ತನ್ನ ಗಂಡ ಎಂದು ಆರಾಧನೆ ಮಾಡುತ್ತಿದ್ದ ಲೀಲಾ ನೂರಾರು ಕನಸುಗಳ ಗೋಪುರ ಕಟ್ಟಿಕೊಂಡಿದ್ದಳು. ಆದರೆ ಇದೀಗ ಅದು ಒಂದೇ ಸಮ ನೆಲಕಚ್ಚಿದೆ. ತನ್ನ ಗಂಡ ಬೇರೆಯವರನ್ನು ಪ್ರೀತಿ ಮಾಡುತ್ತಾ ಇದ್ದಾನೆ ಆತನ ಮೊದಲನೇ ಹೆಂಡತಿ ಮನೆಗೆ ಬಂದಳು ಎಂದಾದ ಬಳಿಕ ಏಜೆ ಸಂತೋಷವೆ ನನ್ನ ಸಂತೋಷ ಎಂದು ಹೇಳುತ್ತಾಳೆ..

ಆದರೆ ಈ ವಿಚಾರ ಏಜೆಗೆ ಕೊಂಚ ಸಮಾಧಾನ ನೀಡುತ್ತದೆ. ಅಂತರ ಬಂದ ಬಳಿಕ ಏಜೆಗೆ ತುಂಬಾ ಟೆನ್ಶನ್ ಆಗುತ್ತದೆ. ಏನು ಮಾಡುವುದು ಯಾಕೆ ಹೀಗೆ ಆಗುತ್ತಿದೆ ಎಂದು ಯೋಚಿಸುತ್ತಾನೆ. ಇನ್ನು ಕೌಸಲ್ಯ ಏಜೆ ಬಳಿ.ಬಂದು ತನ್ನ ಮಗಳ ಪರವಾಗಿ ಮಾತನಾಡುತ್ತಾಳೆ. ನನ್ನ ಮಗಳನ್ನು ಋನು ಅಂದುಕೊಂಡು ಇದ್ದೀರಾ ಆಕೆಯ ಮನಸ್ಸಿಗೆ ಅದೆಷ್ಟು ಗಾಯ ಮಾಡಲು ಹೊರಟ್ಟಿದ್ದಿರಾ ಎಂದೆಲ್ಲ ಹೇಳುತ್ತ ಇರುತ್ತಾಳೆ.

zee kannada serial Hitler Kalyana Written Update on April 7th

ಇದನ್ನು ಕೇಳಿದ ಏಜೆ ಸುಮ್ಮನೆ ಇರುತ್ತಾನೆ. ಹೋದ ಬಾರಿ ಮಗಳಿಗಾಗಿ ಒಂದು ಕಾರ್ಯಕ್ರಮ ಮಾಡಿ ನೀನೇ ಪ್ರಾಣ ಎಂದೆಲ್ಲ ಹೇಳಿ ಆಕೆಯ ಮನಸ್ಸಿಗೆ ಆಸೆ ತುಂಬಿ ಬಿಟ್ಟಿದ್ದಿಯ, ಆದರೆ ಇದೀಗ ಮದುವೆ ಮಂಟಪ ತನಕ ಬಂದು ತಾಳಿ ಕಟ್ಟುವ ವೇಳೆ ಮದುವೆ ಮುರಿದು ಬೀಳುತ್ತದೆ ಎಂದರೆ ಏನು ಅರ್ಥ ಎಲ್ಲರೂ ಏನು ತಿಳಿದುಕೊಳ್ಳಬೇಕು ಎಂದು ಹೇಳುತ್ತ ಇರುತ್ತಾಳೆ.

ನನ್ನ ಮಗಳು ಮದುವೆ ಆಗಿ ಗಂಡನ ಮನೆಯಲ್ಲಿ ತುಂಬಾ ಚೆನ್ನಾಗಿ ಇರಬೇಕು, ಆದರೆ ಇದೀಗ ಗಂಡನ ಮನೆಯಲ್ಲಿ ಈ ರೀತಿ ಕಷ್ಟ ಪಟ್ಟುಕೊಂಡು ಇರುವುದು ಎಷ್ಟರ ಮಟ್ಟಿಗೆ ಸರಿ ಎಂದು ಯೋಚನೆ ಮಾಡುತ್ತಾಳೆ. ಬಳಿಕ ಅದನ್ನು ಲೀಲಾ ಗಂಡನ ಬಳಿ ಪ್ರಶ್ನೆ ಕೂಡ ಮಾಡುತ್ತಾಳೆ.

ಇನ್ನು ನನ್ನ ಮಗಳ ಅಸ್ತಿತ್ವ ಈ ಮನೆಯಲ್ಲಿ ಎನು? ನಮ್ಮನ್ನೇನು ಕರೆದು ಕ್ಷಮೆ ಕೇಳಿದಿರಿ ಆದರೆ ಲೀಲಾ ಜೀವನ ಎನು? ಆಕೆಯ ಜೀವನಕ್ಕೊಂದು ದಾರಿ ಬೇಕು ಎಂಬುದನ್ನು ಯೋಚಿಸಿದ್ದೀರ ಎಂದು ಹೇಳುತ್ತ ಇರುತ್ತಾಳೆ. ಇದನ್ನು ಕೇಳಿಸಿಕೊಂಡ ಲೀಲಾ ಬಂದು ತನ್ನ ತಾಯಿಯ ಬಳಿ ಜೋರಾಗಿ ಮಾತನಾಡುತ್ತಾಳೆ. ಅಮ್ಮನಿಗೆ ಏನು ತಿಳಿಯುವುದಿಲ್ಲ, ಆಕೆ ಏನೇನೋ ಮಾತನಾಡುತ್ತಾಳೆ, ನೀವು ಬೇಸರ ಮಾಡಿಕೊಂಡಿರುವುದು ಬೇಡ ಎಂದು ಹೇಳುತ್ತಾಳೆ.

ಬಳಿಕ ಲೀಲಾ ತಂದೆಯ ಬಳಿ ಅಪ್ಪ ನೀನು ಅಮ್ಮನನ್ನು ಕರೆದುಕೊಂಡು ಹೋಗು ಎಂದಾಗ ಕೌಸಲ್ಯ ಲೀಲಾ ಬಳಿ ತನ್ನ ಮನದ ವೇದನೆಯನ್ನು ಬಳಿ ಹೇಳುತ್ತಾಳೆ. ಇದನ್ನು ಕೇಳಿದ ಲೀಲಾ ಸುಮ್ಮನೆ ಆಗುತ್ತಾಳೆ. ಆಗ ಅಲ್ಲಿಗೆ ಅಂತರ ಬರುತ್ತಾಳೆ. ಆಕೆಗೆ ಇವರಿಬ್ಬರೂ ಮಾತನಾಡುವುದನ್ನು ನೋಡಿ ಶಾಕ್.ಆಗುತ್ತದೆ. ಆಕೆ ಏನೋ ತೆಗೆದುಕೊಳ್ಳಲು ಅಲ್ಲಿಗೆ ಬರುತ್ತಾಳೆ. ಬಳಿಕ ಅದನ್ನು ತೆಗೆದುಕೊಂಡು ಹೋಗುತ್ತಾಳೆ. ಅಂತರ ಲೀಲಾ ಬಗ್ಗೆ ಬಹಳ ಮೆಚ್ಚುಗೆ ವ್ಯಕ್ತ ಪಡಿಸುತ್ತಾಳೆ.

ಲೀಲಾ ಬಗ್ಗೆ ಏನು ಗೊತ್ತಿಲ್ಲದ ಅಂತರ ಯಾರಿಗೂ ಹತ್ತಿರ ಆಗದವರು ಲೀಲಾಗೆ ಇದೀಗ ಹತ್ತಿರ ಆಗಿದ್ದಾರೆ ಎಂದರೆ ಆಕೆಗೆ ಬಹಳ ಖುಷಿ. ಇನ್ನು ಲೀಲಾ ಬಳಿ.ಅಂತರ ಲೀಲಾ ನೀನು ಈ ಮನೆಗೆ ಏನಾಗಬೇಕು ಎಂದು ಪ್ರಶ್ನೆ ಕೇಳಿದಾಗ ಅಲ್ಲೋಲ ಕಲ್ಲೋಲ ಆಗುತ್ತದೆ. ಬಳಿಕ ಆಕೆ ಅಂತರ ಬಳಿ ತನ್ನ ಮತ್ತು ಈ ಮನೆಯ ಒಡನಾಟದ ಬಗ್ಗೆ ಹೇಳಿದಳೇ ವಿನಃ ಆಕೆಯ ಗಂಡನ ಮನೆ ನನ್ನ ಮನೆ ಎಂಬ ವಿಚಾರ ಹೇಳದೆ ಮುಚ್ಚಿಡುತ್ತಾಳೆ.

More from Filmibeat

English summary
zee kannada serial Hitler kalyana Written Update on April 7th episode.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X