ಏಜೆ-ಲೀಲಾ ಮಧ್ಯೆ ಪ್ರೀತಿ ಚಿಗುರೊಡೆಯಿತಾ?
'ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ ಇದೀಗ ಅಕ್ಕ ತಂಗಿಯರ ಭಾಂದವ್ಯದ ಕಥೆ ಶುರುವಾದಂತೆ ಕಾಣುತ್ತಿದೆ. ಹಾಗೆಯೆ ಏಜೆ ಮೇಲೆ ಲೀಲಾಗೆ ಪ್ರೀತಿ ಹುಟ್ಟಿರುವ ಹಾಗೆ ಕಾಣುತ್ತಿದೆ. ಸುಳ್ಳಿನ ಗೋಪುರ ಕಟ್ಟಿ ದೇವ್ ಅದೆಷ್ಟೆ ಮೆರೆದರು ಆತನ ಪಾಡು ಇದೀಗ ನಾಯಿ ಪಾಡು. ಆದರೆ ಸತ್ಯದ ಹಾದಿಯಲ್ಲಿದ್ದ ಲೀಲಾಗೆ ಗೆಲುವಿನ ಮೆಟ್ಟಿಲು ಒಂದೊಂದಾಗಿ ತೆರೆದುಕೊಳ್ಳುತ್ತಿದೆ. ಇದೀಗ ಸರಸ್ವತಿ ಬಹಳ ಬೇಸರಗೊಂಡಿದ್ದಾಳೆ.
ಲೀಲಾ ಬಳಿ ಕ್ಷಮೆ ಯಾಚಿಸಿದ್ದಕ್ಕೊ ಅಥವಾ ನಂಬಿದ್ದ ಅಣ್ಣನಿಂದಲೆ ಮೋಸ ಆಯಿತಲ್ಲ ಎಂದು ಕೊರಗುತ್ತಾ ಇದ್ದಾಳೆ ಸರಸ್ವತಿ. ಇದನ್ನು ಕಂಡ ಏಜೆ ಪಿಎ ಯಾವತ್ತೂ ಅವರ ಇವರ ಬಗ್ಗೆ ಮಾತನಾಡುತ್ತ ಇರುವ ಸರೂ ಎಂದು ಯಾಕೆ ತೆಪ್ಪಗೆ ಇದ್ದಾಳೆ ಎಂದು ಯೋಚಿಸುತ್ತಾ ಇರುತ್ತಾನೆ. ಸರಸ್ವತಿ ತಲೆಗೆ ಹುಳ ಬಿಡುತ್ತಾನೆ. ಏಜೆ ಲೀಲಾ ಭಾಂದವ್ಯ ಕೊಂಚ ಗಟ್ಟಿಯಾಗಿದೆ ಎಂದೆಲ್ಲಾ ಹೇಳಿ ಸರಸ್ವತಿ ತಲೆ ಕೆಡಿಸುತ್ತಾನೆ.
ಇತ್ತ ಲೀಲಾ ಹಾಗೂ ಏಜೆ, ಲೀಲಾಳ ತವರು ಮನೆಯತ್ತ ಹೊರಟಿದ್ದಾರೆ. ಲೀಲಾಳ ತಂದೆ ಬ್ಯಾಂಕಿಗೆ ಕೆಲಸಕ್ಕೆ ತೆರಳುವ ಸಮಯದಲ್ಲಿ ಮನೆಗೆ ಅಳಿಯಂದಿರು ಹಾಗೂ ಲೀಲಾಳನ್ನು ನೋಡಿ ಖುಷಿ ಪಡುತ್ತಾರೆ. ಅವರಿಬ್ಬರೂ ಮನೆಗೆ ಬಂದರಲ್ಲ ಎಂಬ ಖುಷಿಯಲ್ಲಿ ಚಂದ್ರಶೇಖರ್ ಮನೆಯಲ್ಲಿಯೇ ಉಳಿಯುತ್ತಾರೆ. ಲೀಲಾ ಹಾಗೂ ಅಳಿಯನನ್ನು ನೋಡಿದ ಕೌಸಲ್ಯ ಹೇಳಿ ಬಿಟ್ಟು ಮನೆಗೆ ಬರಬಹುದು ಇತ್ತಲ್ಲ ಎಂದು ಹೇಳುತ್ತಾಳೆ. ಅದಕ್ಕೆ ತಕ್ಕುದಾದ ಸಮಜಾಯಿಷಿ ನೀಡುತ್ತಾಳೆ ಲೀಲಾ.

ರೇವತಿ ಲೀಲಾಳನ್ನು ಒಂದು ಮಾಡಿಸಿದ ಏಜೆ
ಲೀಲಾ ತಂದೆ ತಾಯಿ ಬಳಿ ಮಾತನಾಡುತ್ತಾ ಇದ್ದರೂ ಆಕೆಯ ಕಂಗಳು ಮಾತ್ರ ರೇವತಿಯನ್ನು ಹುಡುಕುತ್ತಿತ್ತು. ಆಕೆ ಮಾತ್ರ ಎಲ್ಲೂ ಕಾಣಿಸುತ್ತಾ ಇರಲಿಲ್ಲ. ಬಳಿಕ ಲೀಲಾ ಅದೇನೋ ಸುಳ್ಳು ಹೇಳಿ ರೇವತಿಯನ್ನು ನೋಡಲು ಹೋಗುತ್ತಾಳೆ. ಆದರೆ ಲೀಲಾಳನ್ನು ನೋಡಿದ ರೇವತಿ ತಾನು ಮಾಡಿದ ತಪ್ಪಿನಿಂದಾಗಿ ಅಕ್ಕನ ಬಳಿ ಮಾತನಾಡಲು ಆಗದೆ ಕಣ್ಣೀರು ಹಾಕುತ್ತಾ ನಿಂತಿರುತ್ತಾಳೆ.

ಅಕ್ಕನನ್ನು ತಬ್ಬಿ ಬಿಕ್ಕಿ ಬಿಕ್ಕಿ ಅತ್ತ ತಂಗಿ
ಬಳಿಕ ರೇವತಿಯನ್ನೂ ನೋಡಿದ ಲೀಲಾ ಬಹಳ ಬೇಸರ ಮಾಡಿಕೊಳ್ಳಲು ಮನದಲ್ಲಿ ಹೇಳುತ್ತಾಳೆ ಬಾರೆ ಮಾತನಾಡು ಅಕ್ಕ ಎಂದು ಒಮ್ಮೆ ಕರಿಯೆ ಎಂದು ಹೇಳುತ್ತಲೆ ಇರುತ್ತಾಳೆ ಆದರೆ ರೇವತಿ ಅಕ್ಕನನ್ನು ನೋಡುತ್ತಾ ಸುಮ್ಮನೆ ಆಗುತ್ತಾಳೆ. ಚಂದ್ರಶೇಖರ್ ಬಳಿ ಮಾತನಾಡುತ್ತಾ ಇರುವಾಗ ಏಜೆ ರೇವತಿ ಎಲ್ಲಿ ಎಂದು ವಿಚಾರಿಸುತ್ತಾರೆ. ಅದಕ್ಕೆ ಮಹಡಿ ಮೇಲಿದ್ದಾಳೆ ಎಂದು ತಿಳಿದು ರೇವತಿಯನ್ನು ಮಾತನಾಡಿಸಲು ಬರುತ್ತಾನೆ. ಇದನ್ನು ನೋಡಿದ ಚಂದ್ರಶೇಖರ್ ಭಯ ಗೊಳ್ಳುತ್ತಾರೆ ಏನಾಯ್ತು ಎಂದು ಗಲಿಬಿಲಿ ಗೊಳ್ಳುತ್ತಾರೇ.

ಮಗಳು ತಪ್ಪು ಮಾಡಿದರೆ ಮನ್ನಿಸಿ ಎಂದ ಲೀಲಾ ತಂದೆ
ಏಜೆ ಲೀಲಾ ಮತ್ತು ರೇವತಿ ಮುಖ ಮುಖ ನೋಡುತ್ತಿರುವುದನ್ನು ನೋಡಿ ರೇವತಿ ಬಳಿ ಲೀಲಾಳ ಹತ್ತಿರ ಮಾತನಾಡುವಂತೆ ಸೂಚಿಸುತ್ತಾನೆ. ಅದನ್ನು ಅರ್ಥ ಮಾಡಿಕೊಂಡ ರೇವತಿ. ಅಕ್ಕ ನಾನು ಪಾಪಿ ನಿನಗೆ ಬಹಳ ಮೋಸ ಮಾಡಿದೆ ನನ್ನ ಕ್ಷಮಿಸಕ್ಕ ಎಂದು ಜೋರಾಗಿ ಅಳುತ್ತಾಳೆ. ಆಕೆ ಅಳುವುದನ್ನು ನೋಡಿದ ಲೀಲಾ ರೆವತಿಯನ್ನು ತಬ್ಬಿಕೊಳ್ಳುತ್ತಾಳೆ. ಸಮಾಧಾನ ಮಾಡುತ್ತಾಳೆ. ಬಳಿಕ ಏಜೆ ಹೇಳುತ್ತಾನೆ ಕೆಲವೊಂದು ಬಾರಿ ನಮಗೆ ರೈಟ್ ಪರ್ಸನ್ ಸಿಗುತ್ತಾರೆ ಎಂದೆಲ್ಲ ಹೇಳುವಾಗ ಲೀಲಾ ಮಾತ್ರ ಏಜೆ ಮಾತನ್ನು ಕೇಳುತ್ತಾ ಅವರ ಮುಖವನ್ನೇ ನೋಡಿ ಉಳಿದು ಬಿಡುತ್ತಾಳೆ.

ಚಂದ್ರಶೇಖರರನ್ನು ಸಂತೈಸಿದ ಅಳಿಯ
ಇತ್ತ ಚಂದ್ರಶೇಖರ್ ಏಜೆ ಬಳಿ ಹೇಳುತ್ತಾರೆ. ನೀವು ದಿಢೀರ್ ಆಗಿ ಯಾವತ್ತೂ ಮನೆಗೆ ಬಂದವರಲ್ಲ. ಇವತ್ತು ರೇವತಿಯನ್ನು ಮಾತನಾಡಿಸುತ್ತಾ ಇದ್ರೀ. ರೇವತಿ ಏನಾದರು ತಿಳಿಯದೇ ತಪ್ಪು ಮಾಡಿದರೆ ಕ್ಷಮಿಸಿಬಿಡಿ ಅಳಿಯಂದಿರೆ ಎಂದು ಹೇಳುತ್ತಾರೆ. ಇನ್ನೂ ಮುಂದೆ ಏನಾಗುತ್ತದೆ ಎಂದು ಕಾದು ನೋಡಬೇಕಿದೆ.


Click it and Unblock the Notifications











