ಒಳ್ಳೆಯ ಗೆಳೆಯರಾದ ಏಜೆ-ಲೀಲಾ: ಮುಂದಾಗುವುದೇನು?
'ಹಿಟ್ಲರ್ ಕಲ್ಯಾಣ' ಧಾರವಾಹಿಯ ಏಜೆ, ಶಿಸ್ತು ಇಲ್ಲದೆ ಕೆಲಸ ಮಾಡುವುದನ್ನು ಎಂದಿಗೂ ಇಷ್ಟ ಪಡುವುದಿಲ್ಲ. ಅಂತಹದರಲ್ಲಿ ಇದೀಗ ಏಜೆ ಮನಸ್ಸು ಕೊಂಚ ಮಟ್ಟಿಗೆ ಬದಲಾಗುತ್ತಿದೆ. ಲೀಲಾ ಏಜೆಯನ್ನು ತಪ್ಪಾಗಿ ಅರ್ಥೈಸಿ ಕೊಂಡಿದ್ದಳು ಹಾಗೆಯೇ ಏಜೆ ಕೂಡ ಲೀಲಾಳನ್ನು ತಪ್ಪಾಗಿ ಅರ್ಥ ಮಾಡಿಕೊಂಡಿದ್ದ. ಆದರೆ ಇದೀಗ ಇಬ್ಬರಿಗೂ ತಾನು ಅರ್ಥ ಮಾಡಿಕೊಂಡಿರುವುದು ತಪ್ಪು ಎಂದು ಅರ್ಥವಾಗಿದೆ.
ಅದನ್ನು ಇಬ್ಬರು ಒಬ್ಬರಿಗೊಬ್ಬರು ಹೇಳಿಕೊಂಡು ಮನಸ್ಸು ನಿರಾಳತೆ ಭಾವ ಇಬ್ಬರಲ್ಲೂ ಮೂಡಿದೆ. ಇದೀಗ ಲೀಲಾ-ಏಜೆ ಇಬ್ಬರು ಗೆಳೆಯರಾಗಿ ಇರಲು ನಿರ್ಧರಿಸಿದ್ದಾರೆ ಹಾವು ಮುಂಗುಸಿ ಯಂತೆ ಆಡುತ್ತಿದ್ದ ಇವರು ಇದೀಗ ಶಾಂತ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಇದೀಗ ಇಬ್ಬರು ಸ್ನೇಹಿತರಾಗಿದ್ದಾರೆ. ಇವರ ಸ್ನೇಹ ಪ್ರೀತಿಗೆ ತಿರುಗುತ್ತಾ? ಎಂಬುವುದು ವೀಕ್ಷಕರ ಬಹುದೊಡ್ಡ ಪ್ರಶ್ನೆ.

ವಿಶ್ವರೂಪನ ಪ್ಲಾನ್ ಪ್ಲಾಪ್ ಆಗುತ್ತಾ
ಇದೀಗ ಲೀಲಾ-ಏಜೆ ಮೂವರು ಸೊಸೆಯರನ್ನು ಮನೆಯಿಂದ ಕೊಂಚ ದೂರ ಉಳಿಸಿ ಅಹಂಕಾರ ಎಂಬುವುದನ್ನು ತೊಡೆದು ಹಾಕಲು ನಿರ್ಧರಿಸಿದ್ದಾರೆ. ಈ ಬಗ್ಗೆ ಅಮ್ಮನ ಬಳಿ ಮಾತನಾಡಿದ ಲೀಲಾ ಅಮ್ಮ ಈ ಮನೆಗೆ ಮೂವರು ನನ್ನ ಸೊಸೆಯಂದಿರು ಬಂದರೆ ನಿನಗೆ ಏನಾದರು ಕಷ್ಟ ಇದೆಯಾ ಎಂದು ಕೇಳುತ್ತಾಳೆ. ಅದಕ್ಕೆ ಕೌಸಲ್ಯ ಬಹಳ ಖುಷಿ ಪಡುತ್ತಾಳೆ. ಸೊಸೆಯಂದಿಗೆ ಇರುವ ಅಹಂಕಾರವನ್ನು ತೊಡೆದು ಹಾಕಲು ಅಮ್ಮನೇ ಸರಿ ಎಂದು ಯೋಚಿಸಿ ಅಮ್ಮನ ಬಳಿ ಚರ್ಚೆ ಮಾಡುತ್ತಾಳೆ.

ಅಮ್ಮನ ಒಪ್ಪಿಗೆಗೆ ಕಾಯುತ್ತಿದ್ದ ಲೀಲಾ
ಅಮ್ಮನ ಒಪ್ಪಿಗೆ ಸಿಕ್ಕ ಬಳಿಕ ಲೀಲಾಗೆ ಖುಷಿ ಆಗುತ್ತದೆ. ಇನ್ನೂ ಮೂವರು ಸೊಸೆಯಂದಿರು ಮಾತನಾಡುತ್ತಾ ಇರುತ್ತಾರೆ. ಏಜೆ-ಲೀಲಾ ಖಂಡಿತ ಒಂದಾಗುತ್ತಾರೆ ಎಂದು ಲಕ್ಷ್ಮಿ ಸರು ಆತಂಕ ವ್ಯಕ್ತಪಡಿಸಿದರೆ ದುರ್ಗಾ ಮಾತ್ರ ಅವರಿಬ್ಬರೂ ಕ್ಲೋಸ್ ಆದ ಮೇಲೆ ಅವರಿಬ್ಬರಿಗೂ ಇದೆ ಮಾರಿ ಹಬ್ಬ ಎನ್ನುವ ಹಾಗೆ ಯಾವುದೇ ಆತಂಕ ಇಲ್ಲದೆ ಸುಮ್ಮನಿರುತ್ತಾರೆ. ಸೊಸೆಯಂದಿರ ಬಳಿ ಬಂದ ಏಜೆ ಪಿಎ ವಿಶ್ವ ರೂಪ್ ಹೇಳುತ್ತಾನೆ ಏನು ಮೇಡಂ ಏನೋ ಆಳವಾಗಿ ಯೋಚಿಸುತ್ತಿರುವ ಹಾಗಿದೆ ಎಂದಾಗ ಮೂವರು ಸೊಸೆಯಂದಿರು ಏಜೆ ಲೀಲಾ ಬಗ್ಗೆ ಮಾತನಾಡುವುದನ್ನು ಅರ್ಧದಲ್ಲೀ ನಿಲ್ಲಿಸುತ್ತಾರೆ.

ಜಪ್ಪಯ್ಯ ಎಂದರೂ ಮನೆ ಬಿಟ್ಟು ಹೋಗದ ದುರ್ಗಾ
ಇತ್ತ ವಿಶ್ವರೂಪ್ ಏನು ಹೇಳಿದರು ಜಪ್ಪಯ್ಯ ಎಂದರೂ ಮನೆ ಬಿಟ್ಟು ಹೋಗಲ್ಲ ಎಂದು ದುರ್ಗಾ ಹೇಳುತ್ತಿರುತ್ತಾಳೆ. ಬಳಿಕ ವಿಶ್ವರೂಪ ಬಂದ ದಾರಿಗೆ ಸುಂಕ ಇಲ್ಲ ಎಂದು ಅಲ್ಲಿಂದ ತೆರಳುತ್ತಾನೆ. ಇತ್ತ ಲಕ್ಷ್ಮಿ ಮತ್ತು ಸರುಗೆ ನಾವು ಯಾಕೆ ಒಂದು ತಿಂಗಳು ಎಲ್ಲಾದರೂ ಹೋಗಿ ಬರಬಾರದು ಮನೆಯಲ್ಲಿ ಇದ್ದು ಇದ್ದು ಬೋರಾಗಿದೆ ಎಂದಾಗ ದುರ್ಗಾ ಮಾತ್ರ ಕೋಪದಿಂದ ಗುಡುಗುತ್ತಾಳೆ ಔಟಿಂಗ್ ಬೇಡ ಏನು ಬೇಡ ಮನೆಯಲ್ಲಿ ಇರಿ ಎಂದು ಜೋರಾಗಿ ಹೇಳಿ ಅಲ್ಲಿಂದ ತೆರಳುತ್ತಾಳೆ.

ಏಜೆ ಬಳಿ ಮನದ ಮಾತು ಹೇಳುತ್ತಾಳ?
ಇತ್ತ ಲೀಲಾ ಹಾಗೂ ಏಜೆ ತವರು ಮನೆಯಿಂದ ಹೊರಡಲು ಅನುವಾಗುತ್ತಾರೇ. ಲೀಲಾಗೆ ಅರಶಿನ ಕುಂಕುಮ ಕೊಡುವಾಗ ಈ ಬಾರಿ ಆದರೂ ಸಾರಿ ಕೊಡಬೇಕು ಅಂದುಕೊಂಡಿದ್ದೆ ಎಂದು ಬೇಸರ ವ್ಯಕ್ತ ಪಡಿಸುತ್ತಾರೆ ಚಂದ್ರಶೇಖರ್. ಈ ಬಗ್ಗೆ ಚಂದ್ರಶೇಖರ್ ಹಾಗೂ ಲೀಲಾ ತಾಯಿ ಕೌಸಲ್ಯ ಯೋಚನೆ ಮಾಡುತ್ತಾ ಇರುತ್ತಾರೆ. ಅಲ್ಲಿಗೆ ಬಂದ ರೇವತಿ ಸೀರೆ ಹಿಡಿದು ಬರುತ್ತಾಳೆ. ಅಕ್ಕನಿಗೆ ಈ ಸೀರೆ ಕೊಡಿ ಅಂದಾಗ ಮನೆ ಮಂದಿಗೆ ಬೇಸರವಾಗುತ್ತದೆ. ಏಜೆ ರೇವತಿ ಜವಾಬ್ದಾರಿ ನಮ್ಮದು ಎಂದು ಹೇಳಿರುವ ಕಾರಣ ಅಪ್ಪ ಅಮ್ಮನಲ್ಲಿ ತನ್ನ ಬಗ್ಗೆ ಎನು ಯೋಚನೆ ಮಾಡದೆ ಇರಲು ಹೇಳುತ್ತಾಳೆ ರೇವತಿ. ಬಳಿಕ ಅರಿಶಿನ ಕುಂಕುಮವನ್ನು ಲೀಲಾಗೆ ನೀಡುತ್ತಾರೆ. ಬಳಿಕ ಸೀರೆಯನ್ನು ಕೊಡುತ್ತಾರೆ. ಅಲ್ಲಿಂದ ಏಜೆ ಹಾಗೂ ಲೀಲಾ ಅಲ್ಲಿಂದ ತೆರಳುತ್ತಾರೆ. ಇನ್ನೂ ಕಾರಿನಲ್ಲಿ ಏಜೆ-ಲೀಲಾ ಹೋದಾಗ ಏಜೆ ನಿಮ್ಮ ಬಳಿ ಮಾತನಾಡಬೇಕು ಎಂದಾಗ ಏಜೆ ಕಾರನ್ನು ನಿಲ್ಲಿಸುತ್ತಾರೆ. ಬಳಿಕ ಮಾತನಾಡುತ್ತಾರೆ. ನಿಮ್ಮನ್ನು ತಪ್ಪಾಗಿ ಅರ್ಥ ಮಾಡಿಕೊಂಡಿದ್ದೆ ನಾನು ನೀವು ತುಂಬಾ ಒಳ್ಳೆಯವರು ಎಂದು ಹೇಳುತ್ತಾಳೆ. ಅದಕ್ಕೆ ಏಜೆ ಹೇಳುತ್ತಾರೆ ನೀನು ದುಡ್ಡಿಗಾಗಿ ಮದುವೆಯಾದೆ ಎಂದುಕೊಂಡೆ ಎಂದೆಲ್ಲ ಹೇಳುತ್ತಾನೆ. ಬಳಿಕ ಇಬ್ಬರೂ ಉತ್ತಮ ಗೆಳೆಯರಾಗಿರುವ ಎನ್ನುತ್ತಾರೆ ಏಜೆ. ಮುಂದೇನಾಗುತ್ತದೆ ಕಾದು ನೋಡಬೇಕಿದೆ.


Click it and Unblock the Notifications











