ಏಜೆ ಸೊಸೆಯಂದಿರಿಗೆ ತಕ್ಕ ಪಾಠ ಕಲಿಸುತ್ತಾಳ ಲೀಲಾ ತಾಯಿ ಕೌಸಲ್ಯ?

By ಪೂರ್ವ

'ಹಿಟ್ಲರ್ ಕಲ್ಯಾಣ' ಧಾರವಾಹಿ ನೋಡುಗರ ಗಮನ ಸೆಳೆಯುತ್ತಿದೆ. ಮೂವರು ಸೊಸೆಯಂದಿರು ಅಹಂಕಾರವನ್ನು ಮುರಿಯಬೇಕು ಎಂಬುವುದು ಅತ್ತೆಯ ಗುರಿ ಹಾಗೆ ಏಜೆ ಬಳಿ ಇದನ್ನು ಪ್ರಸ್ತಾಪ ಮಾಡಿದಾಗ ಏಜೆ ಇದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಮುದ್ದಿನ ಸೊಸೆಯಂದಿರನ್ನು ಮಾವ ಬೇರೆಡೆಗೆ ಕಳುಹಿಸುತ್ತಿರುವುದು ಲೀಲಾಗೆ ಖುಷಿ ತಂದಿದೆ.

ಲೀಲಾ, ಏಜೆ ಬಳಿ ಏನೇ ಕೇಳಿದರು ಇಲ್ಲ ಎನ್ನದೆ ತನ್ನ ಆಸೆಗಳನ್ನು ಪೂರೈಸುತ್ತಾರೆ ಎಂಬ ಭರವಸೆ ಲೀಲಾಳದ್ದು. ಲೀಲಾ ತನ್ನ ತಾಯಿಗೆ ಈ ಮೊದಲೇ ಹೇಳಿರುತ್ತಾಳೆ. ನನ್ನ ಸೊಸೆಯಂದಿರು ಈ ಮನೆಗೆ ಬಂದರೆ ನಿನಗೆ ಏನೂ ತೊಂದರೆ ಇಲ್ಲ ಅಲ್ವಾ ಎಂದೆಲ್ಲಾ ಹೇಳಿದಾಗ ಕೌಸಲ್ಯಗೆ ಬಹಳ ಖುಷಿ ಆಗುತ್ತದೆ. ಅವರಿಂದ ಆದ ಅವಮಾನಗಳಿಗೆ ಸೇಡು ತೀರಿಸಿಕೊಳ್ಳಲು ಇದೆ ಸರಿಯಾದ ಸಂದರ್ಭ ಎಂದು ಮನದಲ್ಲೆ ಖುಷಿ ಪಡುತ್ತಾಳೆ.

ಇತ್ತ ಏಜೆ ತನ್ನ ಮೂವರು ಸೊಸೆಯಂದಿರಿಗೆ ಔಟಿಂಗ್ ಹೋಗಲು ಹೇಳುತ್ತಾನೆ ಯಾರು ಹೇಳಿದಾಗಲೂ ಒಪ್ಪದ ದುರ್ಗಾ, ಏಜೆ ಮಾತಿಗೆ ಮಾತ್ರ ಇಲ್ಲ ಎಂದು ಹೇಳದೆ ಒಪ್ಪಿಕೊಳ್ಳುತ್ತಾಳೆ. ಇದನ್ನು ನೋಡಿದ ಲಕ್ಷ್ಮಿ, ಸರು ಶಾಕ್ ಆಗುತ್ತಾರೆ. ಇನ್ನು ವಿಶ್ವ ರೂಪ್ ಮನದಲ್ಲಿ ನಗುತ್ತಿರುತ್ತಾನೆ. ಏನೇ ಆಗಲಿ ನನ್ನ ಪ್ಲಾನ್ ಸಕ್ಸಸ್ ಆಯ್ತು ಎಂದೆಲ್ಲ ಹೇಳುತ್ತಾನೆ. ಬಳಿಕ ಮೂವರು ಸೊಸೆಯಂದಿರು ತಮ್ಮ ತಮ್ಮ ಲಗೇಜ್ ಪ್ಯಾಕ್ ಮಾಡಿಕೊಂಡು ಹೊರಡಲು ಅನುವಾಗುತ್ತಾರೆ. ಆ ವೇಳೆ ಸರು ತನ್ನ ಪಾಸ್ ಪೋರ್ಟ್ ಇಲ್ಲ ಎಂದು ಹೇಳಿ ಅದನ್ನು ತರಲು ವಾಪಸ್ ಹೋಗುತ್ತಾಳೆ ಇದನ್ನು ನೋಡಿದ ವಿಶ್ವರೂಪಗೆ ನಗು ತಡೆದುಕೊಳ್ಳಲು ಆಗುವುದಿಲ್ಲ.

ವಿಶ್ವ ರೂಪ್ ನಗುವಿಗೆ ಕಾರಣ ಕೇಳಿದ ದುರ್ಗಾ?

ವಿಶ್ವ ರೂಪ್ ನಗುವಿಗೆ ಕಾರಣ ಕೇಳಿದ ದುರ್ಗಾ?

ಇದನ್ನು ಗಮನಿಸಿದ ದುರ್ಗಾ ಯಾಕೆ ವಿಶ್ವರೂಪ ನಗುತ್ತಿದ್ದಿರಿ ಎಂದಾಗ ಏನಿಲ್ಲ ಮೇಡಂ ಅನ್ನುತ್ತಾನೆ. ಬಳಿಕ ಮನದಲ್ಲಿ ಇವರು ಹೋಗುತ್ತಿರುವುದು ಲೀಲಾ ತವರು ಮನೆಗೆ ಎಂದು ಗೊತ್ತಾದರೆ ಮಾತ್ರ ಇವರ ಪರಿಸ್ಥಿತಿ ಗೋವಿಂದ ಎಂದುಕೊಳ್ಳುತ್ತಾನೆ. ವಿಶ್ವರೂಪ ಕಣ್ಣಿಗೆ ಪಟ್ಟಿ ಕಟ್ಟಿ ವಿಶ್ವರೂಪ್ ಲೀಲಾ ತವರು ಮನೆಗೆ ಬಿಡುತ್ತಾನೆ. ಬಳಿಕ ಅಲ್ಲಿ ಮೂರು ಮಂದಿ ಏಜೆ ಸೊಸೆಯರ ಕಣ್ಣಿಗೆ ಕಟ್ಟಿದ್ದ ಪಟ್ಟಿಯನ್ನು ಬಿಚ್ಚುತ್ತಾರೆ.

ಮುಂದೇನು ಪ್ಲಾನ್ ಮಾಡುತ್ತಾಳೆ ದುರ್ಗಾ

ಮುಂದೇನು ಪ್ಲಾನ್ ಮಾಡುತ್ತಾಳೆ ದುರ್ಗಾ

ಕಣ್ಣಿನ ಪಟ್ಟಿ ಬಿಚ್ಚಿದಾಗ ಸರು ದುರ್ಗಾ ಲಕ್ಷ್ಮಿ ಗೆ ಅಚ್ಚರಿ ಶಾಕ್ ಎಲ್ಲವೂ ಆಗುತ್ತದೆ. ಎಲ್ಲೋ ವಿದೇಶಕ್ಕೆ ಹೋಗುತ್ತೀವಿ ಎಂದುಕೊಂಡವರು ಬಂದು ನಿಂತಿದ್ದು ಲೀಲಾ ಮನೆ ಮುಂದೆ. ಎಂದೂ ಕೌಸಲ್ಯ ಮನೆಗೆ ಹೋಗೋದೇ ಇಲ್ಲ ಎಂದು ಕೊಂಡಿದ್ದ ಏಜೆ ಸೊಸೆಯಂದಿರಿಗೆ ಶಾಕ್ ಆಗುತ್ತದೆ. ಎದುರಿಗೆ ಆರತಿ ತೆಗೆದುಕೊಂಡು ಕೌಸಲ್ಯ ಹಾಗೂ ಆಕೆಯ ಗೆಳೆತಿಯೊಂದಿಗೆ ಬರುತ್ತಾಳೆ. ನಾನು ಕರ್ಪೂರದ ಆರತಿಯನ್ನು ಬೇಳಗಿಸುತ್ತಿದ್ದೇನೆ ನಮ್ಮ ಬಳಿ ಬೇರೆ ಯಾವುದು ಇಲ್ಲ ಎಂದೆಲ್ಲ ಹೇಳುತ್ತಾಳೆ. ಇದನ್ನು ಕೇಳಿಸಿ ಕೊಂಡ ಸೊಸೆಯಂದಿರಿಗೆ ಮೈ ಎಲ್ಲ ಉರಿದು ಹೋಗುತ್ತದೆ. ಇನ್ನೂ ಆರತಿ ಎತ್ತಬೇಕಾದರೆ ಆರತಿ ಎತ್ತಿರೆ ಕಳ್ಮಂಜನಿಗೆ ಸುಳ್ಳು ಮಂಜನಿಗೆ ಎಂದು ಹೇಳಿ ಆರತಿ ಎತ್ತುತ್ತಾರೆ. ಇದನ್ನೆಲ್ಲ ಗಮನಿಸಿದ ದುರ್ಗಾ ಸುಮ್ಮನೆ ಕುಳಿತಿದ್ದರೆ ಮತ್ತಿಬ್ಬರು ಕೌಸಲ್ಯಳನ್ನು ತಿಂದುಬಿಡುವಂತೆ ನೋಡುತ್ತಾ ನಿಂತರು. ಇದನ್ನು ನೋಡಿದ ಮೂವರು ಸೊಸೆಯಂದಿರು ಕುಪಿತಗೊಳ್ಳುತ್ತಾರೆ.

ಮೂರು ಜನರಿಗೆ ಕರ್ಪೂರದ ಆರತಿ ಎತ್ತಿದ ಕೌಸಲ್ಯ

ಮೂರು ಜನರಿಗೆ ಕರ್ಪೂರದ ಆರತಿ ಎತ್ತಿದ ಕೌಸಲ್ಯ

ಕರ್ಪೂರದ ಆರತಿ ಮಾಡಿ ಮೂವರನ್ನು ಒಳಗೆ ಕರೆದುಕೊಂಡು ಹೋಗುತ್ತಾಳೆ ಕೌಸಲ್ಯ. ಈ ಹಾಳು ಕೊಂಪೆಯಲ್ಲಿ ಬದುಕಲು ಸಾಧ್ಯವೇ ಇಲ್ಲ ಎನ್ನುವ ಏಜೆ ಸೊಸೆಯಂದಿರು ಕೌಸಲ್ಯ ಮನೆ ಒಳಗೆ ಬಂದೆ ಬಿಟ್ಟರು ಮೊದ ಮೊದಲು ಶಾಕ್ ಆಗಿದ್ದ ದುರ್ಗಾ ಬಳಿಕ ವಾಸ್ತವ ಸ್ಥಿತಿಗೆ ಬರುತ್ತಾಳೆ. ಮನದಲ್ಲಿ ಏನೋ ಆಲೋಚನೆ ಹೊಳೆದು ಬಳಿಕ ಸಣ್ಣನೆ ನಗೆ ಬೀರುತ್ತಾ ಇರುತ್ತಾಳೆ. ಇದನ್ನು ನೋಡಿದ ಲಕ್ಷ್ಮಿ, ಸರು ಮಾತನಾಡದೆ ಸುಮ್ಮನೆ ಇರುತ್ತಾರೆ. ಕೌಸಲ್ಯಾ ಗೆ ಮನೆಯಲ್ಲಿ ಇದ್ದು ಕೊಂಡೆ ಪಾಠ ಕಲಿಸುವ ನಿರ್ಧಾರವನ್ನು ನಿಧಾನವಾಗಿ ಆಲೋಚನೆ ಮಾಡುತ್ತಾಳೆ ಬಳಿಕ ಇದನ್ನು ತನ್ನ ತಂಗಿಯರ ಬಳಿ ಮೆತ್ತಗೆ ಹೇಳುತ್ತಾಳೆ.

ಕೌಸಲ್ಯಳನ್ನು ಮಟ್ಟ ಹಾಕಲು ದುರ್ಗಾ ಪ್ಲಾನ್

ಕೌಸಲ್ಯಳನ್ನು ಮಟ್ಟ ಹಾಕಲು ದುರ್ಗಾ ಪ್ಲಾನ್

ಇನ್ನು ಕೌಸಲ್ಯ ಮಾತ್ರ ಎಲ್ಲರಿಗೂ ಗೊತ್ತಿರುವ ಹಾಗೆ ಬಾಯಿ ಬಡಿಕಿ ಹಾಗೆಯೇ ಈ ಸೊಸೆಯಂದಿರನ್ನು ಹೇಗೆ ಬೆಂಡೆತ್ತಬೇಕು ಎಂಬುವುದನ್ನು ಆಲೋಚನೆ ಮಾಡುತ್ತಿರುತ್ತಾಳೆ. ಏಜೆ ಮೂವರು ಸೊಸೆಯಂದಿರು ಮಾತ್ರ ಕೌಸಲ್ಯ ಮನೆಯಲ್ಲಿದ್ದು ಪಾಠ ಕಲಿಯುತ್ತಾರಯೆ ಇಲ್ಲ ಕೌಸಲ್ಯಾ ಗೆ ಪಾಠ ಮಾಡುತ್ತಾರೆಯೇ ಎಂಬುವುದನ್ನು ಕಾದುನೋಡಬೇಕಿದೆ. ಮೂವರು ಇತ್ತ ವಿಶ್ವರೂಪ ಏಜೆಯನ್ನ ಮನೆಯಿಂದ ಹೊರಗೆ ಹೋಗದ ಹಾಗೆ ನೋಡಿ ಕೊಳ್ಳುವುದಾಗಿದೆ. ಅಜ್ಜಿ ಸಲಹೆಯಂತೆ ವಿಶ್ವ ರೂಪ್ ಮಾಡಲು ಹೊರಟಿದ್ದಾರೆ. ಇದರಿಂದ ಏಜೆ ಕೈ ಯಿಂದ ಕಪಾಳ ಮೋಕ್ಷ ಮಾಡಿದ್ದು ಆಯಿತು. ಏಜೆ ಲೀಲಾ ಒಂದಾಗಲು ಮುಂದೇನು ಮಾಡುತ್ತಾನೆ ವಿಶ್ವ ರೂಪ್ ಕಾದು ನೋಡಬೇಕಿದೆ.

More from Filmibeat

English summary
Zee Kannada serial Hitler Kalyana Written Update on August 26th episode. Know more about the episode.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X