For Quick Alerts
  ALLOW NOTIFICATIONS  
  For Daily Alerts

  ಏಜೆ ಸೊಸೆಯಂದಿರ ಕೆಂಗಣ್ಣಿಗೆ ಗುರಿಯಾದ ಕೌಸಲ್ಯ

  By ಪೂರ್ವ
  |

  'ಹಿಟ್ಲರ್ ಕಲ್ಯಾಣ' ಧಾರವಾಹಿಯಲ್ಲಿ ಸೊಸೆಯಂದಿರ ಅಹಂಕಾರ ಮುರಿಯಲು ಲೀಲಾಳ ಮಾಡಿದ ಕೆಲಸದ ಬಗ್ಗೆ ವೀಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಇದೀಗ ತನ್ನ ಸೊಸೆಯಂದಿರು ಮನೆಯಲ್ಲಿ ಎನು ಮಾಡುತ್ತಿದ್ದಾರೆ. ಇವತ್ತಿನ ದಿನಚರಿ ಹೇಗಿತ್ತು ಎಂದೆಲ್ಲ ಯೋಚನೆ ಮಾಡುತ್ತಾ ಲೀಲಾ ಅವರಿಗೊಂದು ಫೋನ್ ಮಾಡಿ ಈ ಬಗ್ಗೆ ವಿಚಾರಿಸೋಣ ಎಂದು ಕರೆ ಮಾಡುತ್ತಾಳೆ.

  ಈ ವೇಳೆ ದುರ್ಗಾ, ಸರು, ಲಕ್ಷ್ಮಿ ಎಲ್ಲಾ ಕೆಲಸಗಳನ್ನು ಮುಗಿಸಿಕೊಂಡು ಕುಳಿತಿರುತ್ತಾರೆ. ಸೊಳ್ಳೆ ಕಾಟದಿಂದ ಮಲಗಲು ಸಾಧ್ಯವಾಗದೆ ಸುಮ್ಮನೆ ಕುಳಿತು ಕೌಸಲ್ಯಾಳ ಈ ರೀತಿಯ ವರ್ತನೆಯಿಂದ ಕುಪಿತಗೊಂಡ ದುರ್ಗಾ ಇದಕ್ಕೆ ಏನಾದರು ಮಾಸ್ಟರ್ ಪ್ಲಾನ್ ಮಾಡಬೇಕು ಎಂದು ಯೋಚಿಸುತ್ತಾ ಇರುತ್ತಾಳೆ. ಇನ್ನೂ ಲೀಲಾ ಕರೆ ಮಾಡಿರುವುದನ್ನು ನೋಡಿ ಮೂವರು ಸೊಸೆಯಂದಿರು ಕೋಪದಿಂದ ಕಿಡಿ ಕಾರುತ್ತಾರೆ. ಬಳಿಕ ಕಾಲ್ ರಿಸೀವ್ ಮಾಡಿ ಲೀಲಾಗೆ ಬಯ್ಯೋಣ ಎಂದು ಕೊಂಡ ವೇಳೆ ಲೀಲಾ ಹೇಳುತ್ತಾಳೆ ಏಜೆ ಪಕ್ಕದಲ್ಲಿ ಇದ್ದಾರೆ. ಇವತ್ತಿನ ದಿನ ಹೇಗಿತ್ತು ಎಂದು ಕೇಳಲು ಹೇಳಿದರು ಎಂದು ಸುಳ್ಳು ಹೇಳುತ್ತಾಳೆ.

  ಲೀಲಾ ಮಾತು ನಂಬಿದ ದುರ್ಗಾ, ಇವತ್ತಿನ ದಿನ ಬಹಳ ಚೆನ್ನಾಗಿತ್ತು ಏಜೆ. ಎಲ್ಲಾ ಕೆಲಸ ಕಾರ್ಯಗಳನ್ನು ಮಾಡಿದೆವು ಯಾವುದೇ ತೊಂದರೆ ಇಲ್ಲ ನಾವು ಆರಾಮವಾಗಿ ಇದ್ದೇವೆ ಎಂದು ಹೇಳಿದಾಗ ಲೀಲಾ ಗೆ ನಗು ತಡೆದುಕೊಳ್ಳಲು ಆಗುವುದಿಲ್ಲ. ಬಳಿಕ ಲೀಲಾ ಹೇಳುತ್ತಾಳೆ ಏಜೆ ಇಲ್ಲಿ ಇಲ್ಲ ನಾನು ಸುಳ್ಳು ಹೇಳಿದೆ ಎಂದು ನಗುತ್ತಾಳೆ. ಇದನ್ನು ಕೇಳಿಸಿಕೊಂಡ ದುರ್ಗಾ ಚೆನ್ನಾಗಿ ಬಯ್ಯುತ್ತಾಳೆ ಆದರೆ ಇದನ್ನು ಯಾವುದನ್ನು ಕೇಳಿಸಿಕೊಳ್ಳದೆ ಕರೆ ಕಟ್ ಮಾಡುತ್ತಾಳೆ ಲೀಲಾ. ಅದೇ ಸಮಯಕ್ಕೆ ಅಲ್ಲಿಗೆ ಬಂದ ಕೌಸಲ್ಯ, ಏನು ಇಲ್ಲಿ ಕುಳಿತಿದ್ದಿರಾ ಅಟ್ಟದ ಮೇಲಿರುವ ಪಾತ್ರೆಗಳನ್ನು ಒರೆಸಿ ಇಡಿ ತಾಕೀತು ಮಾಡುತ್ತಾಳೆ.

  ಅದ್ದೂರಿಯಾಗಿ ನಡೆದ ಗಣೇಶ ಹಬ್ಬ

  ಅದ್ದೂರಿಯಾಗಿ ನಡೆದ ಗಣೇಶ ಹಬ್ಬ

  ನಾಳೆ ಹಬ್ಬ ಇದೆ ಎಲ್ಲ ಬೇಗ ತಯಾರು ಮಾಡಿ ಎಂದೆಲ್ಲ ಹೇಳುತ್ತಾಳೆ ಇದನ್ನು ಕೇಳಿದ ಮೂವರು ಸೊಸೆಯರು ಶಾಕ್ ಆಗುತ್ತಾರೆ. ಕೆಲಸದ ಮೇಲೆ ಕೆಲಸ ಕಂಡು ಸಿಟ್ಟು ಬಂದರು ಏನೂ ಮಾಡಲಾಗದ ಸ್ಥಿತಿಯಲ್ಲಿ ಇದ್ದಾರೆ ಸೊಸೆಯಂದಿರು. ಬಳಿಕ ಕೌಸಲ್ಯ ಹೇಳುತ್ತಾಳೆ ಬೆಳಗ್ಗೆ ನಾಲ್ಕು ಗಂಟೆಗೆ ಏಳಬೇಕು ಎಂದೆಲ್ಲ ನೆನಪು ಮಾಡಿಸುತ್ತಾಳೆ. ಇನ್ನು ಆಕೆ ಹೋದ ಬಳಿಕ ಎಲ್ಲಾ ಕೆಲಸ ಮಾಡಿ ಮುಗಿಸುತ್ತಾರೆ. ಮರುದಿನ ಬೆಳಗ್ಗೆ ಹಬ್ಬಕ್ಕೆ ಜೋರಾಗಿ ಎಲ್ಲರೂ ರೆಡಿಯಾಗುತ್ತಾರೆ.

  ಗಣೇಶನ ಬಳಿ ಕಷ್ಟ ಹೇಳಿಕೊಂಡ ಸರು

  ಗಣೇಶನ ಬಳಿ ಕಷ್ಟ ಹೇಳಿಕೊಂಡ ಸರು

  ಆದರೆ ಏಜೆ ಸೊಸೆಯಂದಿರು ಮಾತ್ರ ಗಣಪತಿ ದೇವರ ಬಳಿ ತನ್ನ ಅಳಲನ್ನು ತೋಡಿಕೊಂಡು ಇದ್ದರೂ. ಗಣೇಶ ಹೇಗಾದರೂ ನಮ್ಮನ್ನು ಕಾಪಾಡು ಎಂದೆಲ್ಲ ಅಳುತ್ತಾ ಹೇಳುವಾಗ ಕೌಸಲ್ಯ ಬರುತ್ತಾಳೆ ಏನು ಅಳುತ್ತಾ ದೇವರ ಬಳಿ ಪ್ರಾರ್ಥನೆ ಮಾಡುತ್ತಾರಾ ಯಾರಾದ್ರೂ. ಅತ್ತರೆ ಅವರು ಜೀವನ ಪೂರ್ತಿ ಅಳುವ ರೀತಿ ದೇವರು ನೋಡಿಕೊಳ್ಳುತ್ತಾನೆ ಎಂದು ಹೇಳುತ್ತಾಳೆ. ಬಳಿಕ ಎಲ್ಲರೂ ದೇವರ ಪ್ರಾರ್ಥನೆಯಲ್ಲಿ ತೊಡಗುತ್ತಾರೆ. ಇತ್ತ ಲೀಲಾ ಏಜೆ ಗಣಪತಿ ಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡುತ್ತಿದ್ದಾರೆ. ಏಜೆ ಬಳಿ ಲೀಲಾ ಕೇಳುತ್ತಾಳೆ ಯಾರೋ ಬರುತ್ತಾರೆ ಎಂದು ಹೇಳಿದಿರಿ ಯಾರು ಬಂದಿಲ್ಲ ಎಂದಾಗ ಒಬ್ಬ ಒಬ್ಬರಾಗಿ ಮುತೈದೆಯರು ಬರುತ್ತಾರೆ.

  ಲೀಲಾ ಮನೆಗೆ ಆಗಮಿಸಿದ ಮುತೈದೆಯರು

  ಲೀಲಾ ಮನೆಗೆ ಆಗಮಿಸಿದ ಮುತೈದೆಯರು

  ಇವರನ್ನು ಕಂಡು ಇವರು ನಮ್ಮ ವಾಚ್ ಮ್ಯಾನ್ ಹೆಂಡತಿ ಅಲ್ವಾ. ಇವರು ನಮ್ಮ ಮನೆ ಕೆಲಸದವರಲ್ಲ ಎಂದು ಹೇಳುತ್ತಾಳೆ ಲೀಲಾ. ಅವರಿಗೆ ಲೀಲಾ ಅರಶಿನ ಕುಂಕುಮ ಕೊಡುತ್ತಾಳೆ. ಇದನ್ನು ಕಂಡ ಆ ಮೂವರು ಮುತೈದೆಯರು ಹೇಳುತ್ತಾರೆ ನಮ್ಮನ್ನು ಈ ದಿನ ಕೆಲಸ ಮಾಡಲು ಕರೆಯುತ್ತಾರೆ ಆದರೆ ನೀವು ಈ ದಿನ ಹಾಗೆ ಮಾಡಲಿಲ್ಲ. ನಮ್ಮನ್ನು ಈ ಕಾರ್ಯಕ್ರಮಕ್ಕೆ ಕರೆದಿದ್ದು ನಮಗೆ ತುಂಬಾ ಖುಷಿ ಆಯ್ತು ಎಂದು ಹೇಳುತ್ತಾರೆ. ಇದನ್ನು ಕಂಡ ಏಜೆ ಲೀಲಾಗೆ ಬಹಳ ಖುಷಿ ಆಯಿತು.

  ಮನೆ ಕೆಲಸ ಮಾಡಿ ಬಸವಳಿದ ಏಜೆ ಸೊಸೆಯಂದಿರು

  ಮನೆ ಕೆಲಸ ಮಾಡಿ ಬಸವಳಿದ ಏಜೆ ಸೊಸೆಯಂದಿರು

  ಗಣೇಶನ ಹಬ್ಬವು ಅದ್ದೂರಿಯಾಗಿ ನೆರವೇರಿತು. ಇತ್ತ ದುರ್ಗಾ, ಸರು, ಲಕ್ಷ್ಮಿ ಮಾತ್ರ ಕೌಸಲ್ಯ ಮನೆಯಲ್ಲಿ ಸೊಳ್ಳೆ ಕಾಟ ಸಹಿಸಲಾಗದೆ, ನಿದ್ದೆ ಕೂಡ ಬಂದಿರುವುದಿಲ್ಲ. ಏನೇ ಕೆಲಸ ಮಾಡದೆ ಹೋದರೆ ಕೌಸಲ್ಯ ಮೂವರಿಗೂ ಬ್ಲಾಕ್ ಮೇಲ್ ಮಾಡುತ್ತಾಳೆ ಏಜೆ ಬಳಿ ಹೇಳುತ್ತೇನೆ ಎಂದಾಗ ದುರ್ಗಾ ಮಾತ್ರ ಏನು ಮಾಡಲಾಗದೆ ಸುಮ್ಮನಿರುತ್ತಾರೆ. ಸರೂಗೆ ಶೀತ ಆದರೂ ವಿನಾಯಿತಿ ಕೊಡದ ಕೌಸಲ್ಯ ಮನೆ ಕೆಲಸ ಎಲ್ಲ ಮಾಡಬೇಕು ಎಂದು ತಾಕೀತು ಮಾಡುತ್ತಾಳೆ. ಮನೆಯ ಕೆಲಸಗಳನ್ನು ಮಾಡಿ ಬಸವಳಿದು ಹೋಗಿದ್ದ ಏಜೆ ಸೊಸೆಯಂದಿರಿಗೆ ಶಿಕ್ಷೆ ನೀಡಿದ ಹಾಗೆ ಆಗಿದೆ. ಇದನ್ನೆಲ್ಲ ನುಂಗಲು ಆಗದೆ ಉಗಿಯಲು ಆಗದೆ ಮೂವರು ಸುಮ್ಮನಿದ್ದಾರೆ. ತಮ್ಮ ಪರಿಸ್ಥಿತಿಯನ್ನು ಮಾವನ ಬಳಿ ಕೂಡ ಹೇಳಲು ಆಗದೆ ಒದ್ದಾಡುತ್ತಿದ್ದಾರೆ. ಕೌಸಲ್ಯಳ ಆಟಕ್ಕೆ ಬ್ರೇಕ್ ಹಾಕಲು ಇನ್ನೂ ಕೆಲವು ದಿನ ಅಷ್ಟೇ ಬಾಕಿ ಎಂದು ಈಗಾಗಲೇ ಮುನ್ಸೂಚನೆಯನ್ನು ನೀಡಿದ್ದಾಳೆ. ಮುಂದೇನು ಎಂಬುವುದನ್ನು ಕಾದು ನೋಡಬೇಕಿದೆ.

  English summary
  Zee Kannada serial Hitler Kalyana Written Update on August 31th episode. Know more. '

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X