Don't Miss!
- Automobiles
ಬಾಕ್ಸ್ ಆಫೀಸ್ನಲ್ಲಿ 'ಪಠಾಣ್' ಅಬ್ಬರ: ಈ ಚಿತ್ರದಲ್ಲಿ ಕಾಣಿಸಿಕೊಂಡ ಆಕರ್ಷಕ ಕಾರುಗಳಿವು...
- News
ಪ್ರಾದೇಶಿಕ ಪಕ್ಷದಿಂದ ಮಾತ್ರ ರಾಜ್ಯಕ್ಕೆ ಅನುಕೂಲ: ಹೆಚ್.ಡಿ. ಕುಮಾರಸ್ವಾಮಿ
- Finance
ವಿಶ್ವದ ಶ್ರೀಮಂತ ವ್ಯಕ್ತಿ: 3ರಿಂದ 7ನೇ ಸ್ಥಾನಕ್ಕೆ ಇಳಿದ ಅದಾನಿ, ಹೂಡಿಕೆದಾರರ ನಂಬಿಕೆ ಗಳಿಸುವಲ್ಲಿ ಸೋತರೇ?
- Technology
ಜಿಯೋಗೆ ಸೆಡ್ಡು ಹೊಡೆಯುತ್ತಿದೆಯಾ ಏರ್ಟೆಲ್; ಜಿಯೋ ಸೇವೆ ಬೇಡ ಎಂದವರ ಸಂಖ್ಯೆ ಎಷ್ಟು ಗೊತ್ತಾ!?
- Sports
ನಾವು ಆಡುವುದನ್ನು ನೋಡಲು ಜನ ಬಂದಿಲ್ಲ: ಆತನಿಗಾಗಿ ಜನ ಬಂದಿದ್ದಾರೆ ಎಂದ ನ್ಯೂಜಿಲೆಂಡ್ ಕ್ರಿಕೆಟಿಗ
- Lifestyle
ಬೆಳ್ಳಿಯ ಆಭರಣಗಳು ಹೊಳಪಿನಿಂದ ಕೂಡಿರಲು ಈ ಟ್ರಿಕ್ಸ್ ಬಳಸಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಏಜೆ ಅರೆಸ್ಟ್ ಆಗಿರುವ ವಿಚಾರ ಅಜ್ಜಿಗೆ ತಿಳಿದೇ ಬಿಟ್ಟಿತಾ? ಮುಂದೇನು ಮಾಡ್ತಾಳೆ ಲೀಲಾ?
ಲೀಲಾ ತರಾತುರಿಯಲ್ಲಿ ಏಜೆಯನ್ನು ಮಾತನಾಡಿಸಿಕೊಂಡು ಬರಬೇಕು ಎಂದು ಜೈಲಿಗೆ ಹೋಗಲು ಅನುವಾಗುತ್ತಾಳೆ. ಈ ವೇಳೆ ದುರ್ಗಾ ಏನು ಮಾಡುವುದು ಎಂದು ಯೋಚನೆ ಮಾಡುತ್ತಾ ಇರುವಾಗ ಲೀಲಾ ಎಲ್ಲೋ ಹೋಗುತ್ತಾ ಇರುವುದನ್ನು ನೋಡಿದ ದುರ್ಗಾ ತಡೆದು ನಿಲ್ಲಿಸುತ್ತಾಳೆ. ಜೊತೆಗೆ ಎಲ್ಲಿಗೆ ಹೋಗುತ್ತಾ ಇರುವುದು ಎಂದು ಕೇಳುತ್ತಾಳೆ ಇದನ್ನು ನೋಡಿದ ಲೀಲಾ, ನಾನು ಏಜೆ ನಾ ನೋಡಲೇ ಬೇಕು ಅದಕ್ಕಾಗಿ ಹೋಗುತ್ತಿದ್ದೇನೆ ಎಂದು ಹೇಳುತ್ತಾಳೆ.
ಇದನ್ನು ಕೇಳಿದ ದುರ್ಗಾ, ನೀವು ಹೋಗೋದು ಬೇಡ ಎಂದು ಹೇಳುತ್ತಾ ಇದ್ದಾಳೆ ಇದನ್ನು ಕೇಳಿದ ಲೀಲಾ ಮಾತ್ರ ತನ್ನ ಗಂಡ ಯಾವುದೇ ತಪ್ಪು ಮಾಡಿಲ್ಲ. ನಿರಾಪರಾಧಿ ಇದ್ದುಕೊಂಡು ಅಪರಾಧಿ ಸ್ಥಾನದಲ್ಲಿ ನಿಲ್ಲೋದು ಎಷ್ಟು ಸರಿ ನನಗೆ ಇದು ಸರಿ ಕಾಣುತ್ತಿಲ್ಲ. ಏಜೆ ಸ್ಥಿತಿ ಅಲ್ಲಿ ಏನಾಗಿದೆಯೋ ಗೊತ್ತಿಲ್ಲ ಎಂದಾಗ ದುರ್ಗಾ ಗೆ ಲೀಲಾ ಒದ್ದಾಟ ತಿಳಿಯುತ್ತದೆ. ಆಕೆ ಹೇಳುತ್ತಾಳೆ ಒಂದು ಸಲ ಎಫ್.ಐ.ಆರ್ ಆದ ಬಳಿಕ ಅದನ್ನು ತೀರ್ಮಾನ ಮಾಡುವುದು ಕೋರ್ಟ್. ಏಜೆ ಅರೆಸ್ಟ್ ಆಗಿರುವುದು ಶುಕ್ರವಾರ. ಸೋಮವಾರ ಕೋರ್ಟ್ ಓಪನ್ ಆಗುವವರೆಗೆ ಏನೂ ಮಾಡಲು ಆಗುವುದಿಲ್ಲ ಎನ್ನುತ್ತಾಳೆ.

ನಿಜ ವಿಚಾರ ಲೀಲಾ ಮುಂದೆ ತೆರೆದಿಟ್ಟ ದುರ್ಗಾ
''ಲೀಲಾ ನಿನಗೆ ಯಾಕೆ ಅರ್ಥ ಆಗುತ್ತಿಲ್ಲ? ಬೇಸರ ಮಾಡಿಕೊಳ್ಳಬೇಡ ಆ ಎಸ್‌ಐ ಕೂಡ ಸರಿ ಇಲ್ಲ ಎಂದು ಹೇಳುತ್ತಾ ಇದ್ದೀಯ ಆದರೆ ಇದೀಗ ನೀನು ಅಲ್ಲಿಗೆ ಹೋಗುವುದು ನನಗೆ ಸರಿ ಕಾಣುತ್ತಾ ಇಲ್ಲ. ನೀನು ಅಲ್ಲಿಗೆ ಹೋದರೆ ನಿನ್ನ ಬಳಿ ಅವರು ಸರಿಯಾಗಿ ನಡೆದುಕೊಳ್ಳುವುದು ಇಲ್ಲ ಎಂದು ಹೇಳುತ್ತಾಳೆ. ಬಳಿಕ ಸಮಾಧಾನ ಮಾಡಿಕೊಂಡ ಲೀಲಾ, ಸರಿ ನಾನು ಸೋಮವಾರದ ತನಕ ಎಲ್ಲಾ ತಡೆದುಕೊಂಡು ಇರುತ್ತೇನೆ. ಆದರೆ ಒಂದು ವಿಚಾರ, ಅಜ್ಜಿಗೆ ಏಜೆ ಅರೆಸ್ಟ್ ಆಗಿರುವ ವಿಚಾರ ಇನ್ನೂ ತಿಳಿದಿರದ ಕಾರಣ ಅವರಿಗೆ ಗೊತ್ತಾಗದ ಹಾಗೆ ನಡೆದುಕೊಳ್ಳುವುದು ಉತ್ತಮ ಎಂದು ಹೇಳುತ್ತಾಳೆ.

ಛಾಯಾಗೆ ಎಚ್ಚರಿಕೆ ನೀಡುವ ಲೀಲಾ
ಇನ್ನು ಲೀಲಾ ಬಳಿ ಮಾತನಾಡಲು ಛಾಯಾ ಬರುತ್ತಾಳೆ. ಕೋಪದಲ್ಲಿ ಇರುವ ಲೀಲಾ ಮುಂದೆ ಬಂದಾಗ ಲೀಲಾ, ಏಜೆ ಬೋನ್‌ನಲ್ಲಿ ಇರಬಹುದು ಆದರೆ ಬೋನಿನಿಂದ ಹೊರ ಬರುತ್ತಾರೆ. ಆ ಬಳಿಕ ಅವರಿಗೆ ಈ ಪರಿಸ್ಥಿತಿ ತಂದವರನ್ನು ಅವರು ಸುಮ್ಮನೆ ಬಿಡುವುದು ಇಲ್ಲ ಎನ್ನುತ್ತಾಳೆ. ಇದನ್ನು ಕೇಳಿದ ಛಾಯಾ, ಲೀಲಾ ಮೇಲೆಯೇ ಆರೋಪ ಮಾಡುತ್ತಾಳೆ. ಛಾಯಾ, ಏಜೆಗೆ ಈ ಸ್ಥಿತಿಗೆ ಬರಲು ನೀನೇ ಕಾರಣ ಎಂದೆಲ್ಲ ಆರೋಪ ಮಾಡುತ್ತಾಳೆ ಆದರೆ ಲೀಲಾ ಮಾತ್ರ ಅದಾವುದನ್ನು ತಲೆಗೆ ಹಚ್ಚಿಕೊಳ್ಳುವುದಿಲ್ಲ. ಇನ್ನು ಅಜ್ಜಿಯನ್ನು ಬಿಟ್ಟು ಉಳಿದ ಮನೆ ಮಂದಿಯನ್ನು ಕರೆದು ಅಜ್ಜಿಗೆ ಈ ವಿಚಾರ ಗೊತ್ತಾಗದ ಹಾಗೆಯೇ ಇರಲು ತಾಕೀತು ಮಾಡಿದಾಗ ಲಕ್ಷ್ಮಿ ಮಾತ್ರ ಚಕಾರ ಎತ್ತುತ್ತಾಳೆ.

ಎಲ್ಲರಿಂದಲೂ ಪ್ರಮಾಣ ಮಾಡಿಸಿಕೊಂಡ ಲೀಲಾ
ಸುಳ್ಳು ಹೇಳುವುದು ತಪ್ಪು ಅಲ್ವಾ ಎಂದು ಲಕ್ಷ್ಮಿ ಹೇಳಿದಾಗ, ದುರ್ಗಾ, ಒಬ್ಬರಿಗೇ ನೋವು ಕೊಡಬಾರದು ಎಂದರೆ ನಾವು ಸುಳ್ಳು ಹೇಳಲೇ ಬೇಕು ಎಂದಾಗ ಅಜ್ಜಿಗಾಗಿ ಸುಳ್ಳು ಹೇಳುತ್ತೇವೆ ಎಂದು ಹೇಳುತ್ತಾರೆ. ಇದನ್ನು ಕೇಳಿದ ಲೀಲಾ ಆಣೆ ಮಾಡಲು ಕೈ ಮುಂದೆ ಮಾಡುತ್ತಾಳೆ. ಆಗ ಎಲ್ಲರೂ ಲೀಲಾ ಕೈ ಮೇಲೆ ಕೈ ಇಟ್ಟು ಪ್ರಮಾಣ ಮಾಡುತ್ತಾರೆ ಅದರಲ್ಲಿ ಛಾಯಾ ಕೂಡ ಹೊರತಾಗಿಲ್ಲ.

ಅಜ್ಜಿಗೆ ವಿಷಯ ಗೊತ್ತಾಗದಂತೆ ತಡೆದ ಲೀಲಾ
ಮುಖವಾಡ ಹಾಕಿರುವ ಛಾಯಾ ಮುಖವಾಡ ಕಳಚುವ ದಿನ ಬಂದಾಗ ಮಾತ್ರ ಲೀಲಾ ಮಾತ್ರ ರುದ್ರ ತಾಂಡವ ಆಡುವುದು ಸತ್ಯ. ಇದೀಗ ಅಜ್ಜಿ, ಲೀಲಾನ ಕರೆಯುತ್ತಾ ಇರುತ್ತಾರೆ. ಆ ವೇಳೆ ಅಲ್ಲಿಗೆ ಬಂದ ಛಾಯಾ ಏನು ಅಜ್ಜಿ ಎಂದು ಕೇಳಿದಾಗ ಮೊಬೈನ್‌ನಲ್ಲಿ ನ್ಯೂಸ್ ತೋರಿಸಲು ಅಜ್ಜಿ ಹೇಳುತ್ತಾರೆ. ಅಜ್ಜಿ ಬಳಿ ಮೊಬೈಲ್ ಕೊಡಬೇಕು ಎಂದಾಗ ಅಲ್ಲಿಗೆ ಬಂದ ಲೀಲಾ ಮೊಬೈಲ್ ಅನ್ನು ಕೆಳಗೆ ಬೀಳಿಸುತ್ತಾಳೆ. ಇದನ್ನು ನೋಡಿದ ಛಾಯಾಗೆ ಕೊಂಚ ಶಾಕ್ ಆಗುತ್ತದೆ. ಬಳಿಕ ಅಜ್ಜಿ ಬಳಿ ಅದೇನೋ ಸಬೂಬು ಹೇಳಿ ಮೆತ್ತಗೆ ತಪ್ಪಿಸಿಕೊಂಡು ಬಿಡುತ್ತಾಳೆ. ಬಳಿಕ ಹಾಲ್‌ಗೆ ಬಂದ ಅಜ್ಜಿಯನ್ನು ನೋಡಿದ ಛಾಯಾ ಆ ದಿನದ ಪೇಪರ್ ಅನ್ನು ಓದಲು ಟೇಬಲ್ ಮುಂದೆ ಇಡುತ್ತಾಳೆ. ಇದನ್ನು ನೋಡಿದ ಅಜ್ಜಿ ಪೇಪರ್ ಓದಲು ಮುಂದಾದಾಗ ಅಲ್ಲಿಗೆ ಲೀಲಾ ಹಾಗೂ ವಿಶ್ವರೂಪ ಬರುತ್ತಾರೆ. ಇನ್ನೇನು ಲೀಲಾ ಹೆಸರು ಕೂಗಿದ ಅಜ್ಜಿ ಧ್ವನಿ ಕೇಳಿ ಲೀಲಾ ನಡುಗುತ್ತಾಳೆ ಮುಂದೇನು ಕಾದು ನೋಡಬೇಕಿದೆ.