ಹಿಟ್ಲರ್ ಕಲ್ಯಾಣ: ಪೊಲೀಸರು ಎಜೆ ಮನೆಗೆ ಬಂದು ದುರ್ಗಾಳನ್ನು ಅರೆಸ್ಟ್ ಮಾಡುತ್ತಾರಾ..?

By ಪ್ರಿಯಾ ದೊರೆ

'ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ ದೇವಸ್ಥಾನಕ್ಕೆ ದಾನ ಮಾಡಬೇಕು ಎಂದು ತಂದಿದ್ದ ಒಡವೆಯನ್ನು ಲೀಲಾ ಪೊರೋಹಿತರ ಹೆಸರಲ್ಲಿ ಬಂದವರಿಗೆ ಕೊಟ್ಟಿರುತ್ತಾಳೆ. ಈ ವಿಚಾರವನ್ನು ಎಜೆ ಮನೆಯವರು ನಿರ್ಲಕ್ಷ್ಯ ಮಾಡಿ ಬಿಟ್ಟರು. ಆದರೆ ಇದನ್ನು ಇಷ್ಟಕ್ಕೆ ಸುಮ್ಮನೆ ಬಿಡದ ಲೀಲಾ ತಾಯಿ ಹೊಸ ಪ್ಲಾನ್ ಮಾಡಿದ್ದಾಳೆ.

ಎಜೆ ಮನೆಗೆ ಕೌಸಲ್ಯ ಬಂದಿದ್ದು, ಲೀಲಾಗೆ ಎಲ್ಲವನ್ನು ಹೇಳಿಕೊಟ್ಟಿದ್ದಾಳೆ. ಆದರೆ, ಇದ್ಯಾವುದೂ ದುರ್ಗಾಂಬಾಗೆ ಗೊತ್ತಿಲ್ಲ. ಕೌಸಲ್ಯ ಹಾಕಿದ ಕನ್ನಡಕವನ್ನು ನೋಡಿ ಜಾತ್ರೆ ಕನ್ನಡ ಎಂದು ಗೇಲಿ ಮಾಡುತ್ತಾರೆ. ನಿಮ್ಮ ಮಗಳು ಮಾಡಿರುವ ಅಡುಗೆಯನ್ನು ತಿಂದು ಹೋಗಿ ಎಂದು ವ್ಯಂಗ್ಯವಾಡುತ್ತಾರೆ.

ಆದರೆ ಇದಕ್ಕೆಲ್ಲಾ ಜಗ್ಗದ ಕೌಸಲ್ಯ. ನನ್ನ ಮಗಳಿಗೆ ಅಡುಗೆ ಮಾಡುವುದನ್ನು, ಖಾರ ಅರೆಯುವುದನ್ನು ಹೇಳಿಕೊಟ್ಟಿದ್ದೀನಿ. ಕೊಬ್ಬು ಕರಗಿಸುತ್ತಾಳೆ ಎಂದು ಗೇಲಿ ಮಾಡುತ್ತಾಳೆ. ಆಗ ಪದ್ಮ ಹಾಗೂ ದುರ್ಗಾ ಶಾಕ್ ಆಗುತ್ತಾರೆ, ಕೌಸಲ್ಯಾ ಯಾಕೆ ಹೀಗೆ ಮಾತನಾಡುತ್ತಿದ್ದಾಳೆ ಎಂದು ಆಗ ಗೊತ್ತಾಗುವುದಿಲ್ಲ.

Zee Kannada Serial Hitler Kalyana Written Update On Durga Arrest Episode

ತಪ್ಪು ಮಾಡಿದವರಿಗೆ ಶಿಕ್ಷೆ ಗ್ಯಾರಂಟಿ

ಇತ್ತ ಲೀಲಾ ಹಾಗೂ ಅಜ್ಜಿ ಇಬ್ಬರೂ ತಪ್ಪು, ಸರಿ, ಶಿಕ್ಷೆಯ ಬಗ್ಗೆ ಮಾತನಾಡುತ್ತಿರುತ್ತಾರೆ. ಆಗ ಲೀಲಾ ತಪ್ಪು ಮಾಡಿದವರಿಗೆ ಶಿಕ್ಷೆ ಕೊಡಬೇಕಾ ಇಲ್ಲ, ಮನೆಯವರು ಎಂದು ಹಾಗೆ ಸುಮ್ಮನಿರಬೇಕಾ ಎಂದು ಕೇಳುತ್ತಾಳೆ. ಆಗ ಅಜ್ಜಿ, ತಪ್ಪು ಮಾಡಿದವರಿಗೆ ಚಿಕ್ಕದಾಗಿದ್ದಾಲೇ ಬುದ್ಧಿ ಹೇಳಬೇಕು. ಇಲ್ಲ ಅಂದರೆ, ನಾಳೆ ದೊಡ್ಡ ದೊಡ್ಡ ತಪ್ಪುಗಳನ್ನು ಮಾಡುತ್ತಾರೆ ಎಂದು ಅಜ್ಜಿ ಹೇಳಿದ್ದಾರೆ. ಲೀಲಾ ಸರಿ ನಾನು ಏನು ಮಾಡಬೇಕೋ ಅದನ್ನು ಮಾಡುತ್ತೇನೆ ಎಂದು ಹೇಳುತ್ತಾಳೆ. ಆದರೆ ಲೀಲಾ ಮಾತು ಅಜ್ಜಿಗೆ ಅರ್ಥವಾಗಲಿಲ್ಲ.

ಇನ್ನು ದುರ್ಗಾಗೆ ಕ್ಲಬ್ ವತಿಯಿಂದ ಸನ್ಮಾನ ಮಾಡಲು ಕರೆದಿದ್ದು, ರೆಡಿಯಾಗಿರುವಾಗ ಕೌಸಲ್ಯ ಫೋನ್ ಮಾಡುತ್ತಾಳೆ. ದುರ್ಗಾಂಬಾ ರೆಡಿನಾ, ಸನ್ಮಾನ ಮಾಡಿಸಿಕೊಳ್ಳುವುದಕ್ಕೆ ಎಂದು ಕೇಳುತ್ತಾಳೆ. ಆಗ ದುರ್ಗಾಂಬಳಿಗೆ ನನಗೆ ಸನ್ಮಾನ ಮಾಡುತ್ತಿರುವುದು ಇವರಿಗೆ ಹೇಗೆ ಗೊತ್ತಾಯ್ತು ಎಂದು ಶಾಕ್ ಆಗುತ್ತಾಳೆ. ಹೊರಗಡೆ ಹೋಗಿ ನೋಡಿ ನಿಮ್ಮ ಮಾವ ಬಂದಿದ್ದಾರೆ ಎಂದು ರೇಗಿಸುತ್ತಾಳೆ. ಅಲ್ಲಿ ನೋಡಿದರೆ ಪೊಲೀಸರು.

Zee Kannada Serial Hitler Kalyana Written Update On Durga Arrest Episode

ಕಳ್ಳ ಪಾರ್ಲಿಮೆಂಟ್‌ನಲ್ಲಿ ಇದ್ದರೂ ಬಿಡಲ್ಲ

ಇನ್ಸ್ ಪೆಕ್ಟರ್ ಹಾಗೂ ಕಾನ್‌ಸ್ಟೇಬಲ್ ಎಜೆ ಮನೆಗೆ ಬರುತ್ತಾರೆ. ದುರ್ಗಾ ಬಂದು ಪೊಲೀಸರ ಮೇಲೆ ಕೂಗಾಡುತ್ತಾಳೆ. ಆಗ ಪೊಲೀಸರು ಯಾಕೆ ಮೇಡಂ ಕಳ್ಳ ಸಿಕ್ಕಾಕಿಕೊಂಡು ಬಿಡುತ್ತಾನೆ ಅಂತ ಭಯನಾ? ಕಳ್ಳ ಮನೆಯೊಳಗಲ್ಲ, ಪಾರ್ಲಿಮೆಂಟ್‌ನಲ್ಲಿ ಇದ್ದರೂ ಬಿಡಲ್ಲ ಎಂದು ಹೇಳುತ್ತಾಳೆ. ಆಗ ದುರ್ಗಾ ಪಾರ್ಲಿಮೆಂಟ್ ಒಳಗೆ ಹೋಗುವುದಕ್ಕೆ ಪರ್ಮಿಷನ್ ಇರಬಹುದು. ಆದರೆ ಎಜೆ ಮನೆಗೆ ಬರೋದಕ್ಕೆ ಪರ್ಮಿಷನ್ ಇಲ್ಲ. ಮೊದಲು ಫೋನ್ ಮಾಡಿ ಆಮೇಲೆ ಬರಬೇಕಿತ್ತು. ಎಜೆ ಮನೆ ಅಂದರೆ ಏನು? ಅವರ ಮರ್ಯಾದೆ, ಘನತೆ ಏನಾಗಬೇಡ ಎಂದು ಹೇಳುತ್ತಾಳೆ.

ದುರ್ಗಾ ಮಾತನಾಡುವ ಮಾತುಗಳಿಗೆ ಕಾನ್‌ಸ್ಟೇಬಲ್ ಮಂಜುಳ ಕೋಪಗೊಂಡು ಏಯ್ ಎಂದು ಕಿರುಚುತ್ತಾಳೆ. ಆಗ ಪೊಲೀಸರು ನಾವು ಮನೆಯಿಂದ ಹೋಗುತ್ತೇವೆ. ಹೋಗುವ ಮುನ್ನ ನಿಮ್ಮನ್ನ ಅರೆಸ್ಟ್ ಮಾಡಿ ಕರೆದುಕೊಂಡು ಹೋಗುತ್ತೇವೆ ಎಂದು ಹೇಳುತ್ತಾರೆ. ನಿಮ್ಮ ಮೇಲೆ ಕಳ್ಳತನ ಮಾಡಿಸಿದ್ದೀರಾ ಅನ್ನೋ ದೂರು ಬಂದಿದೆ. ಹಾಗಾಗಿ ಕರೆದುಕೊಂಡು ಹೋಗಿ ವಿಚಾರಣೆ ನಡೆಸಬೇಕು ಎಂದು ಪೊಲೀಸರು ಹೇಳುತ್ತಾರೆ. ಆಗ ದುರ್ಗಾ ಶಾಕ್ ಆಗುತ್ತಾಳೆ. ಮತ್ತೆ ಪೊಲೀಸರ ಮೇಲೆ ಕೂಗಾಡುತ್ತಾಳೆ. ನಾನು ಎಜೆ ಸೊಸೆ ನಾನು ಜೀಪ್ ಹತ್ತೊಲ್ಲ ಅಂತ ಹೇಳುತ್ತಾಳೆ. ಒಡವೆ ಕೊಟ್ಟಿದ್ದು, ಲೀಲಾ, ತೆಗೆದುಕೊಂಡು ಹೋಗಿದ್ದು ಯಾರೋ ವ್ಯಕ್ತಿ. ಇದರಲ್ಲಿ ನನ್ನ ಹೆಸರು ಯಾಕೆ ಬರುತ್ತಿದೆ ಎಂದು ಗೊತ್ತಿಲ್ಲ ಅಂತ ಹೇಳುತ್ತಾಳೆ. ಈಗ ಮುಂದಿನ ಸಂಚಿಕೆಯಲ್ಲಿ ಹಿಟ್ಲರ್ ಕಲ್ಯಾಣ ಯಾವ ರೂಪ ಪಡೆಯುತ್ತೆ ಅನ್ನೋದು ಕಾದುನೋಡಬೇಕಿದೆ.

More from Filmibeat

English summary
Zee Kannada Serial Hitler Kalyana Written Update On Durga Arrest Episode. Durga Is a culprit in jewelry case.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X