Hitler Kalyana: ಅಂತರಳನ್ನು ನೋಡಿದ ಅಜ್ಜಿ ಏಜೆ ಬಳಿ ಸತ್ಯ ಹೇಳುತ್ತಾರ?
ಲೀಲಾ ಹಾಗೂ ಏಜೆ ಇದೀಗ ಮನೆ ದೇವರ ದರ್ಶನಕ್ಕೆ ಬೈಕ್ ನಲ್ಲಿ ತೆರಳಿದ್ದಾರೆ. ಇದನ್ನು ನೋಡಿದ ದುರ್ಗಾಗೆ ಹೊಟ್ಟೆ ಉರಿಯುತ್ತೆ. ಇನ್ನು ಅಜ್ಜಿ, ಲಕ್ಷ್ಮಿ, ದುರ್ಗಾ ಎಲ್ಲರೂ ಕಾರಿನಲ್ಲಿ ಹೋಗುತ್ತಾರೆ. ದೇವಾಲಯದಲ್ಲಿ ಲೀಲಾ ತಲೆಗೆ ಇಟ್ಟಿದ್ದ ಹೂ ಬಿದ್ದು ಹೋಗುತ್ತದೆ. ಈ ವೇಳೆ ಅಲ್ಲಿಗೆ ಬಂದ ಏಜೆ ಅದನ್ನು ಎತ್ತಿಕೊಂಡು ಲೀಲಾಳನ್ನು ಕರೆದು ಹೇಳುತ್ತಾನೆ.
ಆಗ ಲೀಲಾ ಅಯ್ಯಯ್ಯೋ ನನ್ನ ತಲೆಯಲ್ಲಿ ಇದ್ದ ಹೂ ಬಿದ್ದು ಹೋಯಿತಾ, ತಲೆಯಿಂದ ಬಿದ್ದು ಹೋದ ಹೂವನ್ನು ನಾವು ಎತ್ತಿಕೊಳ್ಳಬಾರದಂತೆ, ಅದು ಒಳ್ಳೆಯದಲ್ಲ, ಅದನ್ನು ನಾವಾಗಿ ನಾವು ಮುಡಿದುಕೊಳ್ಳಬಾರದು, ಬೇರೆಯವರು ಮುಡಿಸಬಹುದು ಎಂದು ಹೇಳುತ್ತಾಳೆ. ಆಗ ಏಜೆಗೆ ಕೊಂಚ ನಾಚಿಕೆ ಆಗುತ್ತದೆ. ಆದರೂ ಹಿಂಜರಿಕೆಯಿಂದಲೇ ಲೀಲಾಗೆ ಹೂ ಮುಡಿಸುತ್ತಾನೆ.
ಈ ವೇಳೆ ಲೀಲಾ ಮನದಲ್ಲಿ ಏಜೆಗೆ ಇದೀಗ ನನ್ನ ಮೇಲೆ ಪ್ರೀತಿ ಆಗಿದೆ, ಅವರು ತನ್ನ ಮೇಲೆ ಇರುವ ಪ್ರೀತಿಯನ್ನು ಹೇಳಿಕೊಳ್ಳುವ ಹಾಗೆ ಮಾಡಲೇಬೇಕು ಎಂದು ಕೊಳ್ಳುತ್ತಾ ಇರುತ್ತಾಳೆ.

ಕುಪಿತಗೊಂಡ ದುರ್ಗಾ
ಇದನ್ನೆಲ್ಲ ನೋಡುತ್ತಿದ್ದ ಲಕ್ಷ್ಮೀ ಹಾಗೂ ಏಜೆ ಪಿಎ ಖುಷಿ ಪಡುತ್ತಾರೆ. ಏಜೆ ಹಾಗೂ ಲೀಲಾ ಇನ್ನೇನು ಸ್ವಲ್ಪ ದಿನದಲ್ಲೇ ಒಂದಾಗುವ ಕಾಲ ಹತ್ತಿರದಲ್ಲಿಯೇ ಇದೆ ಎಂದು ಹೇಳಿಕೊಳ್ಳುತ್ತಾ ಇರುವಾಗ ಅಲ್ಲಿಗೆ ದುರ್ಗಾ ಬರುತ್ತಾಳೆ. ದುರ್ಗಾ ಏಜೆ ಲೀಲಾಗೆ ಹೂ ಮುಡಿಸುತ್ತಾ ಇರುವುದನ್ನು ನೋಡಿ ಕುಪಿತಗೊಂಡು ಮನದಲ್ಲಿ ನಾನು ಇರುವವರೆಗೂ ನೀವಿಬ್ಬರೂ ಒಂದಾಗಲು ಸಾಧ್ಯ ಇಲ್ಲ, ಹಾಗೆ ಆಗುವುದನ್ನು ನಾನು ತಡೆದೆ ತಡೆಯುತ್ತೇನೆ ಎಂದು ಹೇಳುತ್ತಾಳೆ.

ದುರ್ಗಾ ಹೊಟ್ಟೆ ಉರಿಸಿದ ಲಕ್ಷ್ಮೀ
ಅಷ್ಟರಲ್ಲಿ ಅಲ್ಲಿಗೆ ಬಂದ ಲಕ್ಷ್ಮಿ ದುರ್ಗಾ ಬಳಿ ಉರಿಯುತ್ತ ಇದೆಯಾ, ಉರಿಯ ಬೇಕು ಎಂದು ಹೇಳಿದಾಗ ಕೋಪ ಗೊಂಡ ದುರ್ಗಾ ಲಕ್ಷ್ಮಿಯನ್ನು ಕೆಕ್ಕರಿಸಿ ನೋಡುತ್ತಾಳೆ. ಆದರೂ ಲಕ್ಷ್ಮಿ ಮಾತ್ರ ಕ್ಯಾರೇ ಎನ್ನದೇ ಅಲ್ಲಿಂದ ಹೋಗುತ್ತಾಳೆ. ಇನ್ನು ಅಜ್ಜಿ ಮಾತ್ರ ತನ್ನ ಮಗ ಹಾಗೂ ಲೀಲಾ ಒಟ್ಟಾಗಿ ಜೀವನ ನಡೆಸಬೇಕು, ಅವರಿಬ್ಬರ ಜೀವನಕ್ಕೆ ಯಾರ ಅಡ್ಡಿಯೂ ಆಗಬಾರದು, ಹಾಗೇನಾದರೂ ಇದ್ದರೆ ನನಗೆ ತಿಳಿಸು ಎಂದು ಹೇಳಿ ಹೇಳಿ ಬೇಡಿಕೊಳ್ಳುತ್ತಾಳೆ.

ಚೆಲ್ಲಿದ ಅರಿಶಿನ ಕುಂಕುಮ
ಇನ್ನು ಲೀಲಾ ಅರಶಿನ ಕುಂಕುಮವನ್ನು ಹಿಡಿದುಕೊಂಡು ಮೆಟ್ಟಿಲ ಹತ್ತುವಾಗ ಕಾಲು ಜಾರಿ ಬೀಳುತ್ತಾಳೆ. ಆ ವೇಳೆ ಅಜ್ಜಿ ಲೀಲಾ ಹಾಗೂ ಏಜೆ ಒಂದಾಗಲು ಏನಾದರು ವಿಘ್ನ ಎದುರಾಗಿದೆಯ ಎಂದುಕೊಳ್ಳುತ್ತಾ ಇರುತ್ತಾರೆ. ಅಷ್ಟರಲ್ಲಿ ಅಜ್ಜಿಗೆ ಅಂತರಳನ್ನು ನೋಡಿದ ಹಾಗೆ ಆಗುತ್ತದೆ. ಅಂತರ ಮುಖ ನೋಡಿ ಅಜ್ಜಿಗೆ ಶಾಕ್ ಆಗುತ್ತದೆ. ಅಂತರಳನ್ನ ಕರೆಯಬೇಕು ಎಂದು ಆಕೆಯನ್ನು ಹಿಂಬಾಲಿಸಿಕೊಂಡು ಹೋದಾಗ ಆಕೆ ಮರೆ ಆಗುತ್ತಾಳೆ. ಅಷ್ಟರಲ್ಲಿ ಅಲ್ಲಿಗೆ ಲೀಲಾ ಓಡಿಕೊಂಡು ಬಂದು ಅಜ್ಜಿಯನ್ನು ತಬ್ಬಿಕೊಳ್ಳುತ್ತಾಳೆ.

ಅಜ್ಜಿ ಮನದಲ್ಲಿ ಮನೆ ಮಾಡಿದ ಆತಂಕ
ಅಯ್ಯೋ ಇದೀಗ ಎನು ಮಾಡುತ್ತಾ ಇದ್ದೆ ನಾನು ಅಂತರಳನ್ನು ಕರೆದು ಬಿಡುತ್ತಿದ್ದರೆ ಲೀಲಾ ಗತಿ ಏನಾಗುತ್ತ ಇತ್ತು, ಛೇ ನಾನು ಈ ಮಗು ಬಗ್ಗೆ ಯೋಚನೆ ಮಾಡಲೇ ಇಲ್ಲ ಅಲ್ವಾ, ಅಂತರ ಕಾಣ ಸಿಕ್ಕಳು ಎಂದು ನಾನು ಯಾರ ಬಳಿಯೂ ಹೇಳುವುದಿಲ್ಲ ಎಂದು ಮನದಲ್ಲಿ ಹೇಳುತ್ತಾರೆ. ಇನ್ನು ಲೀಲಾ ಬಹಳ ಖುಷಿಪಡುತ್ತಾ ಇರುತ್ತಾಳೆ. ಏಜೆ ಹೂ ಮೂಡಿಸಿದ್ದು ಹಾಗೆಯೇ ಕುಂಕುಮ ಸರಿ ಮಾಡಿದ್ದು, ಹಣೆಗೆ ಕುಂಕುಮ ಇಟ್ಟಿದ್ದು ಇದೆಲ್ಲವನ್ನೂ ಅಜ್ಜಿ ಜೊತೆ ಲೀಲಾ ಹೇಳುತ್ತ ಇರುತ್ತಾಳೆ. ಮುಂದೇನು ಕಾದು ನೋಡಬೇಕಿದೆ.


Click it and Unblock the Notifications











