Hitler Kalyana: ಏಜೆಯನ್ನು ಗೋಳು ಹೊಯ್ದುಕೊಳ್ಳುತ್ತಿರುವ ಲೀಲಾ

By Poorva

ಹಿಟ್ಲರ್ ಕಲ್ಯಾಣ ಧಾರಾವಾಹಿ ಅದ್ಭುತವಾಗಿ ಮೂಡಿ ಬರುತ್ತಿದ್ದು ನೋಡುಗರ ಮನ ಸೆಳೆಯುವ ಹಾಗೆ ಮಾಡುತ್ತಿದೆ. ಇದೀಗ ಲಕ್ಷ್ಮೀ ಬಳಿ ಲೀಲಾ ಬಗ್ಗೆ ಬಹಳ ತುಚ್ಛವಾಗಿ ಮಾತನಾಡುತ್ತಾಳೆ. ಲೀಲಾ ಏನು ಎಂಬುವುದು ನನಗೆ ಗೊತ್ತಿದೆ, ಆಕೆಯನ್ನು ಹೇಗೆ ದಾರಿಗೆ ತರಬೇಕು ಎಂಬುವುದು ಗೊತ್ತಿದೆ, ನನಗೆ ಯಾರ ಸಲಹೆ ಸೂಚನೆ ಆಗತ್ಯ ಇಲ್ಲ ನಾನು ಎಲ್ಲಾ ರೀತಿಯಲ್ಲಿ, ಹೇಗೆ ಬೇಕಾದರೂ ಹಾಗೆ ನಾನು ಬದುಕುತ್ತೇನೆ ಎಂದು ದುರ್ಗಾ ಹೇಳುತ್ತಾಳೆ. ಇದನ್ನು ಮರೆಯಲ್ಲಿ ಇದ್ದ ದುರ್ಗಾ ಕೇಳಿಸಿಕೊಳ್ಳುತ್ತಾಳೆ.

ಬಳಿಕ ದುರ್ಗಾ ಎಂದು ಜೋರಾಗಿ ಹೇಳುತ್ತಾಳೆ. ಲೀಲಾ ಧ್ವನಿ ಕೇಳಿ ದುರ್ಗಾ ಒಮ್ಮೆ ನಡುಗುತ್ತಾಳೆ. ಆದರೂ ಏನೂ ಆಗಿಯೇ ಇಲ್ಲ ಎನ್ನುವ ಹಾಗೆ ಸುಮ್ಮನೆ ಇರುತ್ತಾಳೆ. ಇದನ್ನು ನೋಡಿದ ಲೀಲಾ ರೆಸ್ಪೆಕ್ಟ್ ಕೊಟ್ಟು ಮಾತನಾಡಬೇಕು, ನೀನು ನನ್ನ ತಂದೆ ತಾಯಿ ಬಂದ ವೇಳೆ ಕೂಡ ಬಹಳ ಹೀನಾಯವಾಗಿ ಮಾತನಾಡಿದ್ದು ನನಗೆ ಗೊತ್ತಿಲ್ಲ ಎಂದುಕೊಂಡೆಯಾ, ನನಗೆ ಎಲ್ಲವೂ ತಿಳಿದಿದೆ ಎಂದು ಹೇಳುತ್ತಾಳೆ. ಇದನ್ನೆಲ್ಲ ಕೇಳಿ ದುರ್ಗಾ ಭಯಕ್ಕೆ ಒಳಗಾಗುತ್ತಾಳೆ. ಇತ್ತ ಸರು ಕೂಡ ಸುಮ್ಮನೆ ಆಗುತ್ತಾಳೆ. ಕೊನೆಗೆ ಲೀಲಾಳನ್ನ ಅವರಿಬ್ಬರೂ ಅತ್ತೆ ಎಂದು ಕರೆಯುತ್ತಾರೆ. ಆ ವೇಳೆ ಲೀಲಾಗೆ ಬಹಳ ಸಂತಸ ಆಗುತ್ತದೆ.

ಇನ್ನೂ ಏಜೆ ರೂಮ್ ನಲ್ಲಿ ಮಲಗಿರುತ್ತಾನೆ. ಏಜೆ ಲೀಲಾಗೆ ಪ್ರಪೋಸ್ ಮಾಡಿದ ಹಾಗೆ ಆಗುತ್ತದೆ. ಲೀಲಾಳನ್ನು ನೋಡಿದ ಏಜೆ ದೇವಾಲಯದಲ್ಲಿ ಆಕೆಯ ಸೌಂದರ್ಯಕ್ಕೆ ಮನಸೋಲುತ್ತಾನೆ. ಏಳೇಳು ಜನ್ಮಕೂ ನೀನೇ ನನ್ನ ಬಾಳ ಸಂಗಾತಿ ಆಗಿ ಬರಬೇಕು ಎಂದು ದೇವರ ಬಳಿ ಪ್ರಾರ್ಥನೆ ಮಾಡಿಕೊಂಡಿರುತ್ತಾನೆ. ಇನ್ನು ಲೀಲಾ ತನಗೆ ಪ್ರಪೋಸ್ ಮಾಡಿದಾಗ ನಾನು ನಿನ್ನ ಅರ್ಥ ಮಾಡಿಕೊಳ್ಳದೇ ನಿನ್ನ ಪ್ರೀತಿಗೆ ಅಪಮಾನ ಮಾಡಿದೆ, ಆದರೆ ತನಗೆ ನಿನ್ನ ಮೇಲೆ ಇದೀಗ ನಂಬಿಕೆ ಹುಟ್ಟಿಕೊಂಡಿದೆ ಅಂತರ ನಮ್ಮಿಬ್ಬರನ್ನು ಯಾಕೆ ಹತ್ತಿರ ಮಾಡಿದಳು ಎಂದು ನನಗೆ ಈಗ ತಿಳಿಯುತ್ತಿದೆ ಎಂದೆಲ್ಲ ಹೇಳಿ ಆಕೆಗೆ ತನ್ನ ಪ್ರೀತಿಯನ್ನು ವ್ಯಕ್ತಪಡಿಸುತ್ತಾನೆ.

ಅಂತರಾಳ ನೆನಪಾಗಿ ಮರುಗಿದ ಏಜೆ

ಅಂತರಾಳ ನೆನಪಾಗಿ ಮರುಗಿದ ಏಜೆ

ಆ ವೇಳೆ ಏಜೆ ತನ್ನ ಮೊದಲಿನ ಹೆಂಡತಿ ಅಂತರಳನ್ನು ನೋಡಿದ ಹಾಗೆ ಆಗುತ್ತದೆ. ಆದರೆ ಅಂತರ ಲೀಲಾ ರೂಪದಲ್ಲಿ ಇದ್ದಾಳೆ ಎನ್ನುವ ಅರಿವು ನನಗಾಗಿದೆ, ಆಕೆ ಏಳೇಳು ಜನ್ಮದಲ್ಲೂ ನನ್ನವಳೇ ಎಂದು ಹೇಳುತ್ತಾನೆ. ಆ ಕೂಡಲೇ ಆತನಿಗೆ ನಿದ್ದೆಯಿಂದ ಎಚ್ಚರ ಆಗಿ ಎಲ್ಲೆಡೆ ನೋಡುತ್ತಾನೆ. ಲೀಲಾಗೆ ಹೇಗಾದರೂ ಪ್ರಪೋಸ್ ಮಾಡಲೇಬೇಕು ಎಂದು ಮನದಲ್ಲಿ ಎಂದುಕೊಂಡು ಮಲಗುತ್ತಾನೆ. ಇನ್ನು ಲೀಲಾಗೆ ಪ್ರಪೋಸ್ ಮಾಡಲೇಬೇಕು ಎಂದುಕೊಂಡು ಬೆಳಗ್ಗೆ ಪಿಂಕ್ ಸೂಟ್ ಧರಿಸಿ ಲೀಲಾ ಮುಂದೆ ನಿಲ್ಲುತ್ತಾನೆ. ಆದರೆ ಲೀಲಾ ರೇವತಿ ಬಳಿ ಫೋನ್ ನಲ್ಲಿ ಮಾತನಾಡುತ್ತಾ ಇರುವ ಹಾಗೆ ನಟನೆ ಮಾಡುತ್ತಾಳೆ.

ಏಜೆ ಕಾಲೆಳೆದ ಲೀಲಾ

ಏಜೆ ಕಾಲೆಳೆದ ಲೀಲಾ

ಗಂಡಸರಿಗೆ ಬೇಬಿ ಪಿಂಕ್ ಸೂಟ್ ಆಗಲ್ಲ ಎಂದು ಹೇಳುತ್ತಾಳೆ. ಅದನ್ನು ಕೇಳಿದ ಏಜೆ ಹೋ ಲೀಲಗೆ ಬೇಬಿ ಪಿಂಕ್ ಕಲರ್ ಇಷ್ಟ ಆಗಿಲ್ಲ ಅನ್ನಿಸುತ್ತದೆ, ಆಕೆಗೆ ಯಾವ ಕಲರ್ ಇಷ್ಟ ಆಗುತ್ತೆ ಎಂದು ಹೇಳಿದರೆ ಅದೇ ಬಣ್ಣ ಹಾಕುತ್ತ ಇದ್ದೆ ಎಂದು ಮನದಲ್ಲಿ ಅಂದುಕೊಂಡು ಅಲ್ಲಿಯೇ ನಿಲ್ಲುತ್ತಾನೆ. ಬಳಿಕ ಲೀಲಾ ನನಗೆ ಗ್ರೇ ಬಣ್ಣ ತುಂಬಾ ಇಷ್ಟ ಎಂದಾಗ ಏಜೆ ಬಟ್ಟೆ ಬದಲಾಯಿಸಲು ಹೋಗುತ್ತಾನೆ. ಇದನ್ನು ನೋಡಿದ ಲೀಲಾ ಮೆತ್ತಗೆ ಹೋ ಬಟ್ಟೆ ಬದಲಾಯಿಸಲು ಹೋದ್ರ ನಿಮ್ಮನ್ನು ಗೋಳು ಹೊಯ್ದುಕೊಳ್ಳುವುದು ನನಗೆ ಬಹಳ ಇಷ್ಟ ಎಂದೆಲ್ಲ ಮನದಲ್ಲಿ ಅಂದುಕೊಳ್ಳುತ್ತಾ ನಗುತ್ತಾಳೆ.

ದುರ್ಗಾಗೆ ಕರೆ ಮಾಡಿದ ದುರ್ಗಾ ಗಂಡ

ದುರ್ಗಾಗೆ ಕರೆ ಮಾಡಿದ ದುರ್ಗಾ ಗಂಡ

ಏಜೆ ಲೀಲಾಳನ್ನು ಮೆಚ್ಚಿಸಲು ಅದೆಷ್ಟು ಕಸರತ್ತು ಮಾಡುತ್ತಿದ್ದಾನೆ ಎಂದರೆ ಅದನ್ನು ಯೋಚನೆ ಮಾಡಿದ ಲೀಲಾ ಏಜೆಯನ್ನು ಗೋಳು ಹೊಯ್ದುಕೊಳ್ಳುವುದನ್ನು ಬಿಡಲಿಲ್ಲ. ಇನ್ನು ದುರ್ಗಾ ಗಂಡ ದುರ್ಗಾಗೆ ಕರೆ ಮಾಡಿ ಕ್ಷೇಮ ಸಮಾಚಾರ ವಿಚಾರಣೆ ಮಾಡುತ್ತಾನೆ. ಏಜೇ ಅಜ್ಜಿಯನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಸೂಚನೆಯನ್ನು ನೀಡಿ ಕರೆ ಕಟ್ ಮಾಡುತ್ತಾನೆ.

More from Filmibeat

English summary
zee kannada serial Hitler kalyana Written Update on February 20th episode.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X