Hitler Kalyana: ಲೀಲಾಳನ್ನು ಮುದ್ದಾಡುತ್ತಾ ಇರುವ ಏಜೆ; ಅಂತರಳ ಭಯದಲ್ಲಿ ಇರುವ ಅಜ್ಜಿ ಮುಂದೇನು ಮಾಡುತ್ತಾರೆ?
ಹಿಟ್ಲರ್ ಕಲ್ಯಾಣ ಧಾರವಾಹಿ ನೋಡುಗರ ಮನಸೆಳೆಯುವ ಹಾಗೆ ಮಾಡುತ್ತಿದೆ. ಏಜೆ ಮೇಲೆ ಲೀಲಾಗೆ ಇದೀಗ ಮನಸಾಗಿದೆ. ಏಜೆ ತನ್ನ ಪ್ರೀತಿಯನ್ನು ಲೀಲಾ ಬಳಿ ಹೇಳಿಕೊಳ್ಳುತ್ತಾನೆ. ಇನ್ನು ಲೀಲಾ ನಿದ್ದೆಯಿಂದ ಎದ್ದು ಕುಳಿತುಕೊಳ್ಳುತ್ತಾಳೆ. ಲೀಲಾಗಿಂತ ಮುಂಚೆ ಏಜೆ ಎದ್ದು ಕುಳಿತುಕೊಳ್ಳುತ್ತಾನೆ. ಬಳಿಕ ಆಕೆ ಏಳುವ ಮುಂಚೆಯೇ ಆಕೆಗೆ ಬೆಳಗ್ಗಿನ ಉಪಹಾರ ಎಲ್ಲಾ ಕೆಲಸವನ್ನು ಮಾಡಿಸುತ್ತಾನೆ.
ಇನ್ನು ಲೀಲಾ ಬಹಳ ಖುಷಿಯಿಂದ ಎದ್ದು ಕುಳಿತುಕೊಳ್ಳುತ್ತಾಳೆ. ಏಜೆ ಇಲ್ಲದನ್ನು ಕಂಡ ಲೀಲಾ ಒಮ್ಮೆ ಬೇಸರಗೊಂಡರ ಏಜೆ ಮಾಡಿಕೊಟ್ಟ ಕಾಫಿಯನ್ನು ಕುಡಿಯುತ್ತಾ ಬಹಳ ಖುಷಿ ಪಡುತ್ತಾ ಇರುತ್ತಾಳೆ. ಅಂತಹ ಅದ್ಭುತ ಕಾಫಿ ಕುಡಿಯುವ ವೇಳೆ ಆಕೆಗೆ ತನ್ನ ಗಂಡನ ಪ್ರೀತಿಯನ್ನು ನೋಡಿ ಬಹಳ ಖುಷಿ ಪಡುತ್ತಾಳೆ. ಬಳಿಕ ಬರೆದಿರುವ ಚೀಟಿ ನೋಡಲು ಸಿಗುತ್ತದೆ. ಅದನ್ನು ನೋಡಿ ಆಕೆಗೆ ಬಹಳ ಖುಷಿ ಆಗುತ್ತದೆ. ಬಳಿಕ ಪ್ರೆಶ್ ಆಗಿ ಮನೆಯ ಅಡುಗೆ ರೂಮ್ ಬಳಿ ಬರುತ್ತಾಳೆ.

ಆಗ ಅಲ್ಲಿ ಲೀಲಾಗೆ ಇಷ್ಟ ಆಗಿರುವ ಎಲ್ಲಾ ಐಟಂ ರೆಡಿ ಆಗು ಇರುತ್ತದೆ. ದೋಸೆ ಹಾಗೂ ಇನ್ನಿತರ ತಿಂಡಿ ತಿನಿಸುಗಳನ್ನು ತಿಂದು ಬಹಳ ಖುಷಿ ಪಡುತ್ತಾಳೆ. ಏಜೆ ಪ್ರೀತಿಯನ್ನು ಕಂಡು ಬಹಳ ಖುಷಿ ಪಡುತ್ತಾಳೆ. ಬಳಿಕ ಏಜೆ ಬಳಿ ತನ್ನ ಪ್ರೀತಿಯನ್ನು ಹೇಳಿಕೊಳ್ಳುತ್ತಾಳೆ. ಆಗ ಏಜೆ ತನ್ನ ಪ್ರೀತಿಯನ್ನು ಲೀಲಾ ಮುಂದೆ ನಿವೇದನೆ ಮಾಡಿಕೊಳ್ಳುತ್ತಾ ಇರುತ್ತಾನೆ. ಇದನ್ನು ಕಂಡ ಲೀಲಾ ಖುಷಿ ಪಡುತ್ತಾಳೆ. ಬಳಿಕ ಯಾರ ಬಳಿಯೂ ಮಾತನಾಡದೆ ಸುಮ್ಮನೆ ಆಗುತ್ತಾಳೆ.
ಇದನ್ನೆಲ್ಲ ನೋಡಿದ ದುರ್ಗಾಗೆ ಬಹಳ ಕೋಪ ಬರುತ್ತದೆ. ಏಜೇಗೆ ಏನಾಗಿದೆ ಲೀಲಾ ಜೊತೆ ಹೀಗೆ ಯಾಕೆ ಆಡುತ್ತಿದ್ದಾರೆ ಎಂದೆಲ್ಲ ಕೋಪ ಮಾಡಿಕೊಂಡು ಇರಬೇಕಾದರೆ ದುರ್ಗಾಳನ್ನು ನೋಡಿದ ಲಕ್ಷ್ಮಿ ದುರ್ಗಾ ಕಾಲು ಎಳೆಯುತ್ತಾಳೆ. ಯಾರ ಏಳಿಗೆಯನ್ನು ನಾವು ಸಹಿಸಲು ಆಗದವರು ಯಾವತ್ತೂ ಉದ್ದಾರ ಆಗುವುದು ಇಲ್ಲ ಎಂದೆಲ್ಲ ಹೇಳುವಾಗ ದುರ್ಗಾಗೆ ಇನ್ನೂ ಸಿಟ್ಟು ಬರುತ್ತದೆ. ಆಕೆ ಮಾತನಾಡದೆ ಸುಮ್ಮನೆ ಆಗುತ್ತಾಳೆ. ಕೊನೆಗೆ ಲೀಲಾ ಏಜೆಯ ಪ್ರೀತಿಗೆ ಸಿಕ್ಕಿ ನಲುಗಿ ಹೋಗಿರುತ್ತಾಳೆ. ತನಗೋಸ್ಕರ ತನ್ನ ಗಂಡ ಇಷ್ಟೆಲ್ಲ ಮಾಡಿದ್ರಾ ಎನ್ನುವ ಆಸೆ ಆಗುತ್ತಾ ಇರುತ್ತದೆ. ತನಗೆ ಇಂತಹ ಗಂಡ ಸಿಕ್ಕಿರುವುದು ನನ್ನ ಅದೃಷ್ಟ ಎಂದು ಹೇಳುತ್ತಾಳೆ. ಮನದಲ್ಲಿ ಖುಷಿ ಪಡುತ್ತಾ ಇರುತ್ತಾಳೆ. ಆದರೆ ಅಜ್ಜಿ ಬಳಿ ಯಾರೇ ಮಾತನಾಡಿದರೂ ಈಗ ರೆಗಾಡುತ್ತಾರೆ. ಯಾಕೆ ಏನಾಯಿತು ಎಂದೆಲ್ಲ ಯೋಚನೆ ಮಾಡುತ್ತಾ ಇರುತ್ತಾಳೆ.

ಅಜ್ಜಿ ಅಂತರಳನ್ನು ನೋಡಿದ ಬಳಿಕ ದೇವರ ಬಳಿ ಯಾಕೆ ದೇವರೇ ಈ ತರ ಮಾಡಿ ಬಿಟ್ಟೆ ತನ್ನ ಮಗನ ಮೇಲೆ ಇಂತಹ ಕೆಟ್ಟ ದೃಷ್ಟಿ ಯಾಕೆ ಬೀರಿದೆ ಅವರಿಬ್ಬರೂ ಈಗ ತಾನೇ ತನ್ನ ಹೋದ ಜೀವನ ಕಟ್ಟಿಕೊಳ್ಳುತ್ತಾ ಇದ್ದಾರೆ ಆದರೆ ಇದಕ್ಕಿಂತ ಮುಂಚೆ ನಡೆದಿದ್ದರೆ ಬಹಳ ಒಳ್ಳೆಯದು ಆಗುತ್ತಿತ್ತು ಆದರೆ ಇದೀಗ ನನಗೆ ಬಹಳ ಕಷ್ಟ ಆಗುತ್ತಿದೆ ಯಾಕೆ ಹೀಗೆ ಆಯಿತು ಎಂದೆಲ್ಲ ಯೋಚನೆ ಮಾಡುತ್ತಾ ಇರುತ್ತಾರೆ. ಅಂತರಳನ್ನ ನೋಡಿ ಬಹಳ ಶಾಕ್ ನಲ್ಲಿ ಇರುವ ಅಜ್ಜಿಯನ್ನು ಕಂಡ ದುರ್ಗಾ ಮನದಲ್ಲಿ ಅಜ್ಜಿ ಯಾಕೆ ಹೀಗೆ ಆಡುತ್ತಿದ್ದಾರೆ ಎನ್ನುವ ಪ್ರಶ್ನೆಗಳು ಹಲವಾರು ಮೂಡುತ್ತಿದೆ. ಅಂತರ ಜೀವಂತ ಇರುವುದನ್ನು ದುರ್ಗಾ ಕಂಡು ಹಿಡಿಯುತ್ತಾಳಾ ನೋಡಬೇಕಿದೆ.


Click it and Unblock the Notifications











