ಒಂದಾದ ಲೀಲಾ , ಲಕ್ಷ್ಮೀ; ದುರ್ಗಾ ಮಾಡಿದ ಪ್ಲಾನ್ ಉಲ್ಟಾ ಹೊಡೆಯುತ್ತಾ?

By Poorva

ದುರ್ಗಾ ಲೀಲಾಳನ್ನು ಕಿಡ್ನಾಪ್ ಮಾಡಲು ರೌಡಿಗಳ ಬಳಿ ಹೇಳುತ್ತಾಳೆ. ಆದರೆ ಆ ರೌಡಿಗಳು ಇಬ್ಬರನ್ನೂ ಕಿಡ್ನಾಪ್ ಮಾಡುತ್ತಾರೆ. ಅವರು ಬೇರೆ ಯಾರೂ ಅಲ್ಲ ಲಕ್ಷ್ಮಿ ಹಾಗೂ ಲೀಲಾ. ಅವರನ್ನು ಕಾಪಾಡಲು ಇದೀಗ ಏಜೆ ಆಗಮಿಸಿದ್ದಾನೆ. ಏಜೆ ಲೀಲಾ ಹಾಗೂ ಲಕ್ಷ್ಮಿ ಕಾಣೆಯಾಗಿರುವ ವಿಚಾರ ತಿಳಿದು ರೌಡಿಗಳು ಎಲ್ಲಿ ಕಿಡ್ನಾಪ್ ಮಾಡಿಟ್ಟಿರುತ್ತಾರೋ ಅಲ್ಲಿಗೆ ಬರುತ್ತಾನೆ. ಏಜೆಯನ್ನು ನೋಡಿದ ಆ ರೌಡಿಗಳು ಆವರ ಬಗ್ಗೆ ಏನೇನೋ ಹೇಳುತ್ತಾರೆ. ಆದರೆ ಏಜೆ ಮಾತ್ರ ಅದಾವುದನ್ನು ಲೆಕ್ಕಿಸದೆ ನಾನು ಅವಳಿಗೆ ಅಗ್ನಿಸಾಕ್ಷಿಯಾಗಿ ತಾಳಿ ಕಟ್ಟಿರುವ ಆಕೆಯ ಗಂಡ. ಆಕೆಯ ಕೊರಳಲ್ಲಿ ತಾಳಿ ಇರಲಿ ಇಲ್ಲದೆ ಇರಲಿ ಅವಳು ನನ್ನ ಹೆಂಡತಿ. ನಾನು ಅವಳ ಗಂಡ ಎಂದು ಹೇಳುತ್ತಾನೆ. ಇದನ್ನು ಕೇಳಿದ ಲೀಲಾಗೆ ಬಹಳ ಖುಷಿ ಆಗುತ್ತದೆ.

ಬಳಿಕ ರೌಡಿಗಳ ಜೊತೆ ಸೆಣಸಾಡಿ ಇಬ್ಬರನ್ನೂ ರಕ್ಷಣೆ ಮಾಡುತ್ತಾನೆ. ಇನ್ನು ಸತ್ಯ ಎಲ್ಲಾ ತಿಳಿದ ಏಜೆ ಪುನಃ ಲೀಲಾ ಕುತ್ತಿಗೆಗೆ ತಾಳಿ ಕಟ್ಟಲು ಬರುತ್ತಾನೆ. ಆದರೆ ಅದನ್ನು ನೋಡಿದ ಲೀಲಾ ನಿಲ್ಲಿ ಎಂದು ಹೇಳುತ್ತಾಳೆ. ಅಲ್ಲಿದ್ದವರಿಗೆ ಶಾಕ್ ಆಗುತ್ತದೆ. ಲೀಲಾ ಏಜೆ ಬಳಿ ಸಮಾಜ ನಮ್ಮ ಬಗ್ಗೆ ತಪ್ಪಾಗಿ ಮಾತನಾಡುತ್ತದೆ ಎಂಬ ಕಾರಣಕ್ಕೆ ಪ್ರಪಂಚದ ಮುಂದೆ ನಾವಿಬ್ಬರು ಚೆನ್ನಾಗಿದ್ದೇವೆ ಎಂದು ತೋರಿಸುವುದಕ್ಕೆ ಅಥವಾ ನೋಡುವವರ ಕಣ್ಣಿಗೆ ತಪ್ಪು ತಿದ್ದಿಕೊಳ್ಳುತ್ತಾರೆ ಎಂದು ಭಾವನೆ ಬರಿಸಲು ನೀವು ನನಗೆ ತಾಳಿ ಕಟ್ಟುವುದಾದರೆ ಅಂತಹ ತಾಳಿ ನನಗೆ ಬೇಡ ಎಂದಾಗ ಅಜ್ಜಿಗೆ ಕೂಡ ಬೇಸರ ಆಗುತ್ತದೆ.

ಬರೀ ಮೂರು ಗಂಟಲ್ಲಿ ಏಳೇಳು ಜನುಮ ಇವರ ಜೊತೆ ಬಾಳಬೇಕು ಎಂದು ಕನಸು ಕಾಣುತ್ತೇವೆ ಅಲ್ವಾ, ಅದು ತಾಳಿಗೆ ಇರುವ ಬೆಲೆ ಎಂದೆಲ್ಲ ಏಜೆ ಬಳಿ ಹೇಳುತ್ತಾಳೆ. ತನ್ನ ಗಂಡ ಹೊಡಿಲಿ ಬಡಿಲಿ ಕುಡುಕ ಆಗಿರಲಿ ಜವಾಬ್ದಾರಿ ಇಲ್ಲದವನು ಆಗಲಿ, ಏನೇ ಆಗಿರಲಿ ಆದರೆ ಎದ್ದ ಕೂಡಲೇ ತಾಳಿಯನ್ನು ಕಣ್ಣಿಗೆ ಒತ್ತಿಕೊಂಡು ದಿನ ಶುರು ಮಾಡುತ್ತಾರೆ ಅಲ್ವಾ, ಅದು ತಾಳಿಗೆ ಇರುವ ಬೆಲೆ, ಹಾಗಿದ್ದರೆ ಮಾತ್ರ ತನಗೆ ತಾಳಿ ಕಟ್ಟಿ ಎಂದು ಹೇಳಿದಾಗ ಏಜೆ ಸ್ತಬ್ದನಾಗಿ ನಿಂತುಬಿಡುತ್ತಾನೆ.

ಲಕ್ಷ್ಮಿಗೆ ತಪ್ಪಿನ ಅರಿವು

ಲಕ್ಷ್ಮಿಗೆ ತಪ್ಪಿನ ಅರಿವು

ಇನ್ನು ಲಕ್ಷ್ಮಿಗೆ ತಾನು ಮಾಡಿರುವ ತಪ್ಪು ಅರಿವಾಗುತ್ತದೆ. ಲೀಲಾಗೆ ಎಷ್ಟೆಲ್ಲ ಕಷ್ಟ ಕೊಟ್ಟಿದ್ದೇವೆ ಆದರೆ ಅದಾವುದನ್ನೂ ಮನದಲ್ಲಿ ಇಟ್ಟುಕೊಳ್ಳದೆ ಆ ಕಷ್ಟದ ಪರಿಸ್ಥಿತಿಯಲ್ಲಿ ನನ್ನ ಜೊತೆ ಇದ್ದು ಸಾಥ್ ನೀಡಿದ್ದಾಳೆ ನನಗೆ ಅದಕ್ಕಿಂತ ಭಾಗ್ಯ ಯಾವುದು ಇಲ್ಲ ಎಂದೆಲ್ಲ ಬಹಳ ಬೇಸರ ವ್ಯಕ್ತಪಡಿಸುತ್ತಾಳೆ. ಲೀಲಾ ಬಗ್ಗೆ ಏನೇನೆಲ್ಲ ಮಾತುಗಳನ್ನು ಆಡಿ ಬಿಟ್ಟಿದ್ದೆನಲ್ಲ ಎಂದು ಚಡಪಡಿಸುತ್ತಾ ಇರುತ್ತಾಳೆ. ಇನ್ನು ಲೀಲಾ ಹತ್ತಿರ ಬಂದ ಲಕ್ಷ್ಮಿ ಲೀಲಾಳನ್ನು ತಬ್ಬಿಕೊಳ್ಳುತ್ತಾಳೆ.

ಕ್ಷಮಿಸಿ ದೊಡ್ಡವಳಾದ ಅತ್ತೆ

ಕ್ಷಮಿಸಿ ದೊಡ್ಡವಳಾದ ಅತ್ತೆ

ಬಳಿಕ ಅಳುತ್ತಾ ಲೀಲಾ ಬಳಿ ನನ್ನಿಂದ ತಪ್ಪಾಗಿದೆ, ದಯಮಾಡಿ ನನ್ನನ್ನು ಕ್ಷಮಿಸಿ ಬಿಡಿ ಎಂದೆಲ್ಲ ಹೇಳಿ ಜೋರಾಗಿ ಅಳುತ್ತಾಳೆ. ಆಗ ಲಕ್ಷ್ಮಿ ಕೈಹಿಡಿದು ಲೀಲಾ ಸಮಾಧಾನ ಮಾಡುತ್ತಾಳೆ. ಲೀಲಾ ತನ್ನ ಬಗ್ಗೆ ಎಷ್ಟೆಲ್ಲ ಕೇರ್ ತೆಗೆದುಕೊಳ್ಳುತ್ತಾ ಇರುತ್ತಾಳಲ್ವ ಎಂದುಕೊಂಡು ಲಕ್ಷ್ಮಿಗೆ ಬಹಳ ಖುಷಿ ಆಗುತ್ತದೆ. ಆಕೆ ಕೊನೆಗೂ ಲೀಲಾಳನ್ನು ಅತ್ತೆ ಎಂದು ಒಪ್ಪಿಕೊಂಡೆ ಬಿಡುತ್ತಾಳೆ. ಲೀಲಾಗೆ ಕೂಡ ಬಹಳ ಖುಷಿ ಆಗುತ್ತದೆ.

ಅತ್ತೆ ಸೊಸೆ ಒಂದಾಗಿರುವುದನ್ನು ನೋಡಿದ ಅಜ್ಜಿ ಫುಲ್ ಖುಷ್

ಅತ್ತೆ ಸೊಸೆ ಒಂದಾಗಿರುವುದನ್ನು ನೋಡಿದ ಅಜ್ಜಿ ಫುಲ್ ಖುಷ್

ಲಕ್ಷ್ಮಿ ಲೀಲಾ ಬಳಿ ನಾನು ನಿಮ್ಮ ಜೊತೆ ಇರುತ್ತೇನೆ ನಾನು ನಿಮ್ಮ ಜೊತೆ ನಿಲ್ಲುತ್ತೇನೆ, ನಾನು ಮಾಡಿರುವ ತಪ್ಪಿಗೆ ನಾನು ನಿಮ್ಮ ಜೊತೆ ಇದ್ದು ಪಾಪನೆಲ್ಲ ಕಳೆದುಕೊಳ್ಳುತ್ತೇವೆ ಎಂದು ಹೇಳುತ್ತಾಳೆ. ಇದನ್ನು ಕೇಳಿ ಅಜ್ಜಿಗೆ ಬಹಳ ಖುಷಿ ಆಗುತ್ತದೆ. ಈಗಲಾದರೂ ಇಬ್ಬರು ಒಂದಾಗಿದ್ದೀರಿ ಅಲ್ವಾ ಎಂದು ಖುಷಿ ಪಡುತ್ತಾರೆ.

More from Filmibeat

English summary
zee kannada serial Hitler kalyana Written Update on February 7th episode.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X