Don't Miss!
- News
ವಿಧಾನಸಭಾ ಚುನಾವಣೆ: ಹೆಬ್ಬಾಳ ಕ್ಷೇತ್ರದಲ್ಲಿ 40,000 ಸ್ಮಾರ್ಟ್ ಟಿವಿ ಉಡುಗೊರೆ ನೀಡಿದ ಕಾಂಗ್ರೆಸ್ ಶಾಸಕ
- Sports
IND vs NZ 3rd T20: ಪ್ರಮುಖ ವೇಗಿಯನ್ನು ತಂಡದಿಂದ ಬಿಡುಗಡೆ ಮಾಡಿದ ಟೀಂ ಇಂಡಿಯಾ
- Automobiles
ಜನಪ್ರಿಯ ನಟನ ಮನೆಗೆ ಕಥೆ ಹೇಳಲು ಹೋಗಿ ಆತನ ದುಬಾರಿ ಕಾರ್ ಓಡಿಸಿಬಂದ ನಿರ್ದೇಶಕ...
- Technology
ಭಾರತದಲ್ಲಿ ಇನ್ಫಿನಿಕ್ಸ್ ಝೀರೋ ಬುಕ್ ಅಲ್ಟ್ರಾ ಲ್ಯಾಪ್ಟಾಪ್ ಲಾಂಚ್; ಏನೆಲ್ಲಾ ಫೀಚರ್ಸ್ ಇವೆ ಗೊತ್ತಾ!?
- Lifestyle
ಫೆ.1ಕ್ಕೆ ಜಯ ಏಕಾದಶಿ: ಈ ರೀತಿ ಮಾಡಿದರೆ ದಾರಿದ್ರ್ಯ ಹೋಗಿ ಸಂಪತ್ತು ವೃದ್ಧಿಸುವುದು
- Finance
Economic Survey: ಶೇ.6-6.8 ಜಿಡಿಪಿ ಬೆಳವಣಿಗೆ, 3 ವರ್ಷದಲ್ಲೇ ಮಂದಗತಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Hitler Kalyana: ಆತ್ಮಹತ್ಯೆ ಮಾಡಿಕೊಳ್ಳಲು ಕೆರೆಯ ಬಳಿ ಹೋದ ಲೀಲಾ?
ಲೀಲಾ ಮನೆ ಬಿಟ್ಟು ಹೋಗಿದ್ದಾಳೆ. ಆಕೆ ಹೋದ ಬಳಿಕ ಆಕೆ ಬರೆದಿಟ್ಟ ಪತ್ರ ಅಜ್ಜಿ ಕೈಗೆ ಸಿಗುತ್ತದೆ. ಇದನ್ನು ಓದಿದ ಅಜ್ಜಿಗೆ ಸತ್ಯ ಮನವರಿಕೆ ಆಗುತ್ತದೆ. ಅಯ್ಯೋ ನಾನು ಮಾಡಿದ್ದು ತಪ್ಪಾಯಿತಲ್ಲ ಎಂದು ಅಜ್ಜಿ ಬೇಸರ ಪಟ್ಟುಕೊಂಡು ಲೀಲಾ ಬಳಿ ಕ್ಷಮೆ ಕೇಳಲು ಬಂದಾಗ ಲೀಲಾ ಮನೆ ಬಿಟ್ಟು ಹೋಗಿರುತ್ತಾಳೆ. ಇದನ್ನು ಕಂಡ ಅಜ್ಜಿ ವಿಶ್ವರೂಪರನ್ನು ಕರೆದು ಲೀಲಾಳನ್ನು ಹುಡುಕಿ ಕರೆದುಕೊಂಡು ಬರಲು ಹೇಳುತ್ತಾಳೆ.
ಆದರೆ ವಿಶ್ವರೂಪ ಅದೆಷ್ಟೇ ಹುಡುಕಿದರೂ ಲೀಲಾ ಸಿಗದೆ ಹಿಂದುರುಗಿ ಅಜ್ಜಿ ಬಳಿ ಎಲ್ಲಾ ವಿಚಾರ ಹೇಳುತ್ತಾನೆ. ಇದನ್ನು ಕೇಳಿದ ಅಜ್ಜಿಗೆ ಇನ್ನೂ ಆತಂಕ ಹೆಚ್ಚಾಗಿ ಆಕೆಯ ತಂದೆಗೆ ಕರೆ ಮಾಡುತ್ತಾರೆ . ಅಜ್ಜಿ ಕರೆ ಮಾಡಿ ಚಂದ್ರ ಶೇಖರ್ ಅವರ ಬಳಿ ಲೀಲಾ ಮನೆಗೆ ಬಂದಿದ್ದಾಳ ಎಂದೆಲ್ಲ ವಿಚಾರಣೆ ಮಾಡುತ್ತಾರೆ. ಇದನ್ನು ಕೇಳಿದ ಚಂದ್ರಶೇಖರ್ ಗೆ ಬಹಳ ಭಯ ಆಗುತ್ತದೆ ಇಷ್ಟು ರಾತ್ರಿ ಎಲ್ಲಿ ಹೋದಳು ನನ್ನ ಮಗಳು ನನ್ನ ಮಗಳನ್ನು ಹೇಗೆ ಹುಡುಕಲಿ ನಾನು ಎಲ್ಲಿ ಎಂದು ಹೇಳಿ ರೇವತಿಗೆ ಕರೆ ಮಾಡುತ್ತಾನೆ.
ಈ ವೇಳೆ ರೇವತಿ ಮನೆಗೆ ಅಕ್ಕ ಬಾರದೆ ಇರುವ ವಿಚಾರವನ್ನು ಹೇಳುತ್ತಾರೆ. ಇದನ್ನು ಕೇಳಿದ ಚಂದ್ರ ಶೇಖರ್ ವಿಚಾರವನ್ನೆಲ್ಲ ಮಗಳ ಬಳಿ ಹೇಳಿ ಅಳುತ್ತಾರೆ. ರೇವತಿ ಕೊಂಚ ಭಯ ಪಟ್ಟರು ಅಪ್ಪನನ್ನು ಸಮಾಧಾನ ಮಾಡುತ್ತಾಳೆ.. ಬಳಿಕ ಚಂದ್ರ ಶೇಖರ್ ಎಲ್ಲಾ ಕಡೆ ಹುಡುಕುತ್ತಾರೆ ಸಿಕ್ಕ ಸಿಕ್ಕವರ ಬಳಿ ಕೇಳಿಕೊಂಡು ಹೋಗುತ್ತಾರೆ. ಇನ್ನು ಅಳುತ್ತಾ ಲೀಲಾ ದೇವರ ಬಳಿ ಬಂದು ಬೇಡಿಕೊಳ್ಳುತ್ತ ಇರುತ್ತಾಳೆ. ನನ್ನ ಜೀವನದಲ್ಲಿ ಎಲ್ಲವನ್ನೂ ಕಳೆದುಕೊಂಡಿದ್ದೇನೆ ನನಗೆ ಯಾರು ದಿಕ್ಕು ಇಲ್ಲ, ನನಗೆ ನೀನೆ ದಿಕ್ಕು ಎಂದು ಅಳುತ್ತಾ ಕುಳಿತುಕೊಳ್ಳುತ್ತಾಳೆ.

ದೇವಾಲಯದಲ್ಲಿ ಅಳುತ್ತಿದ್ದ ಲೀಲಾ
ಅರ್ಚಕರು ಇಲ್ಲಿ ಇರಬಾರದು ನಾವು ದೇವಾಲಯ ಶುದ್ದಿ ಮಾಡುತ್ತೇವೆ ನೀವು ಇಲ್ಲಿಂದ ಹೋಗಿ ಎಂದು ಹೇಳುತ್ತಾರೆ. ಇದನ್ನು ಕೇಳಿದ ಲೀಲಾ ಮೊಬೈಲ್ ಬಿಟ್ಟು ಅಲ್ಲಿಂದ ಹೋಗುತ್ತಾಳೆ. ಇನ್ನು ರಾತ್ರಿ ಆದರೂ ಚಂದ್ರ ಶೇಖರ್ ತನ್ನ ಮಗಳು ಸಿಗುತ್ತಾಳೆ ಎಂದು ಹುಡುಕುತ್ತಾ ಇರುತ್ತಾರೆ. ಈ ವೇಳೆ ರೇವತಿ ಕರೆ ಮಾಡಲು ಯತ್ನಿಸುತ್ತಾಳೆ. ಆದರೆ ಅಲ್ಲಿಗೆ ಬಂದ ಕೌಸಲ್ಯ ಫೋನ್ ಕಿತ್ತುಕೊಂಡು ಕರೆ ಮಾಡದಂತೆ ತಡೆಯುತ್ತಾರೆ .

ರೇವತಿಗೆ ಬೈದ ಕೌಸಲ್ಯ
ಇದನ್ನು ನೋಡಿದ ರೇವತಿ ಅಮ್ಮನಿಗೆ ಬಾಯಿಗೆ ಬಂದ ಹಾಗೆ ಬೈದು ಅಲ್ಲಿಂದ ಹೋಗುತ್ತಾಳೆ. ಚಂದ್ರ ಶೇಖರ್ ಲೀಲಾ ಮೊಬೈಲ್ ಗೆ ಕರೆ ಮಾಡಿದಾಗ ದೇವಾಲಯದ ಬಳಿ ಮೊಬೈಲ್ ಇರುವುದನ್ನು ಕಂಡು ತಬ್ಬಿಬ್ಬಾಗುತ್ತಾನೆ. ಇನ್ನೂ ವಿಶ್ವರೂಪ ದುರ್ಗಾ ಬಳಿ ಬಂದು ನೀವು ಮಾಡುತ್ತಿರುವ ಎಲ್ಲಾ ಕೆಲಸಗಳನ್ನೂ ನಾಟಕಗಳನ್ನು ನೋಡುತ್ತಾ ಇದ್ದೇನೆ ಇದೆಲ್ಲವನ್ನೂ ಬಾಸ್ ಬಳಿ ಹೇಳಿಲ್ಲ, ನೀವು ಇನ್ನೂ ಕೂಡ ಲೀಲಾ ಅವರನ್ನು ಆಟ ಆಡುದುವುದನ್ನು ಬಿಟ್ಟಿಲ, ನೀವು ಮಾಡುತ್ತಿರುವುದು ಸ್ವಲ್ಪ ಕೂಡ ಸರಿ ಇಲ್ಲ, ನಿಮ್ಮ ತಲೆಗೆ ಇಂತಹ ದುರ್ಬುದ್ದಿ ಯಾಕೆ ಬಂತು ಗೊತ್ತಿಲ್ಲ ಲೀಲಾ ಮೇಡಂಗೆ ಏನಾದರು ಆದರೆ ಸರಿ ಇರುವುದು ಇಲ್ಲ ನಾನು ಎನು ಮಾಡುತ್ತೇನೆ ಎಂದು ನನಗೆ ತಿಳಿದು ಇರುವುದಿಲ್ಲ ಎಂದು ಖಡಕ್ ಆಗಿ ಹೇಳಿ ಹೋಗುತ್ತಾನೆ.

ವಿಶ್ವರೂಪ ಮಾತಿಗೆ ದುರ್ಗಾ ಅಚ್ಚರಿ
ಇದನ್ನು ಕೇಳಿದ ದುರ್ಗ ಶಾಕ್ ಆಗುತ್ತಾಳೆ.. ಬಳಿಕ ಮನದಲ್ಲಿ ವಿಶ್ವರೂಪ ನೀವು ಹೇಳಿದ್ದು ಒಳ್ಳೆಯದೇ ಆಯಿತು ಇಲ್ಲದೆ ಇದ್ದರೆ ಬಹಳ ಕಷ್ಟ ಆಗುತ್ತಿತ್ತು, ನೀನು ಯಾವತ್ತೂ ಇದ್ದರೂ ಡೇಂಜರಸ್ ನಾನು ಎಲ್ಲದಕ್ಕೂ ಪ್ರಿಪೇರ್ ಆಗಿ ಇರುತ್ತೇನೆ ಎಂದು ಹೇಳುತ್ತ ಇರುತ್ತಾಳೆ. ಇನ್ನೂ ಅಜ್ಜಿ ಏಜೆಗಾಗಿ ಕಾದು ಕುಳಿತಿದ್ದಾರೆ..

ಕ್ಯಾರೇ ಎನ್ನದ ಎಜೆ
ಏಜೆ ಬಂದ ಕೂಡಲೇ ಅಜ್ಜಿ ಲೀಲಾ ಮನೆಯಲ್ಲಿ ಇಲ್ಲದೆ ಇರುವುದನ್ನು ಹೇಳುತ್ತಾಳೆ.. ಆದರೆ ಏಜೆ ಮಾತ್ರ ಅದಕ್ಕೆಲ್ಲ ತಲೆಕೆಡಿಸಿಕೊಳ್ಳದೆ ಅಮ್ಮ ಹೋದರೆ ಹೋಗಲಿ ಎನ್ನುವ ರೀತಿ ಮಾತನಾಡುತ್ತಾನೆ. ಆದರೆ ಅಜ್ಜಿ ನಿಜ ವಿಚಾರ ಹೇಳಲು ಹೊರಟರೆ ಅದನ್ನೆಲ್ಲ ಚೂರು ಕಿವಿಗೆ ಹಾಕಿಕೊಳ್ಳಲಿಲ್ಲ.. ಆದರೆ ಅಜ್ಜಿ ಮುಂದೇನು ಮಾಡುತ್ತಾರೆ? ಇನ್ನು ಚಂದ್ರ ಶೇಖರ್ ತನ್ನ ಮಗಳ ಹುಡುಕಾಟ ಮಾತ್ರ ನಿಲ್ಲಿಸುವುದಿಲ್ಲ.. ಲೀಲಾ ತನಗೆ ಜೀವನನೇ ಬೇಡ ಎನ್ನುವ ಮಟ್ಟಿಗೆ ಇರುತ್ತಾಳೆ..ಕೆರೆಯ ಬಳಿ ಬಂದು ನಿಂತುಕೊಂಡು ಇರುತ್ತಾಳೆ ಮುಂದೇನು ಕಾದು ನೋಡಬೇಕಿದೆ.