ಹಿಟ್ಲರ್ ಮನೆಗೆ ಆಗಮಿಸಿದ ಲೀಲಾ? ಅಜ್ಜಿ ನಡೆಗೆ ಮನೆ ಮಂದಿ ಗೊಂದಲ

By Poorva

ಹಿಟ್ಲರ್ ಕಲ್ಯಾಣ ಧಾರವಾಹಿ ಅದ್ಧೂರಿಯಾಗಿ ಮೂಡಿ ಬರುತ್ತಿದೆ. ನೋಡುಗರ ಮನ ಸೆಳೆಯುತ್ತದೆ. ಇದೀಗ ಅಜ್ಜಿ ಲೀಲಾ ಪರ ವಹಿಸಿಕೊಂಡಿದ್ದಾರೆ. ತನ್ನ ಸೊಸೆ ಏನು ತಪ್ಪೇ ಮಾಡದೇ ಶಿಕ್ಷೆ ಅನುಭವಿಸುವಂತೆ ಆಯಿತಲ್ಲ ಎಂದು ನೊಂದುಕೊಂಡಿದ್ದಾರೆ. ಏಜೆ ಮನೆಗೆ ದೇವರ ಅರ್ಚಕರು ಬರುತ್ತಾರೆ. ಈ ಮನೆಯ ಎಲ್ಲರ ಹೆಸರಲ್ಲಿ ಅರ್ಚನೆ ಮಾಡಬೇಕು ಎನ್ನುತ್ತಾರೆ.

ಈ ವೇಳೆ ನಮ್ಮ ಮನೆಯ ಹಿರಿಯ ಸೊಸೆ ದುರ್ಗಾ ಎಂದು ಲಕ್ಷ್ಮಿ ಹೇಳಿದಾಗ ಅಲ್ಲಿಗೆ ಅಜ್ಜಿ ಬರುತ್ತಾರೆ. ಅಜ್ಜಿ ಅರ್ಚಕರ ಬಳಿ ಕೊಂಚ ಏರು ಧ್ವನಿಯಲ್ಲಿ ಮಾತನಾಡುತ್ತಾರೆ. ನಮ್ಮ ಮನೆಯ ಹಿರಿಯ ಸೊಸೆ ಹಾಗೂ ಈ ಮನೆಯ ಯಜಮಾನಿ ಲೀಲಾ ಮಾತ್ರ ಮೊದಲು ಆಕೆಯ ಹೆಸರಲ್ಲಿ ಅರ್ಚನೆ ಆಗಲಿ ಎಂದು ಹೇಳುತ್ತಾರೆ. ಇದನ್ನು ಕೇಳಿದ ಏಜೆ ಮನೆಯ ಸೊಸೆಯಂದಿರು ಶಾಕ್ ಆಗುತ್ತಾರೆ. ಲೀಲಾಳನ್ನು ಅಷ್ಟು ದ್ವೇಷ ಮಾಡಿದ ಅಜ್ಜಿ ಇದೀಗ ಲೀಲಾ ಪರ ಬ್ಯಾಟಿಂಗ್ ಕೊಂಚ ಜೋರಾಗಿ ಮಾಡುತ್ತಾ ಇದ್ದಾರಲ್ಲ ಎಂದು ದುರ್ಗಾ ಶಾಕ್ ಆಗುತ್ತಾಳೆ.

ಮನದಲ್ಲಿ ದುರ್ಗಾ ಮಾಸ್ಟರ್ ಪ್ಲಾನ್ ಮಾಡಿಕೊಂಡು ಇರುತ್ತಾಳೆ. ಆ ಪ್ಲಾನ್ ಫ್ಲಾಪ್ ಮಾಡುತ್ತಾರೆ ಅಜ್ಜಿ. ಮನೆಯ ಸೊಸೆಯಂದಿರ ಮುಂದೆ ಅಜ್ಜಿ ನಾನು ಇವತ್ತು ಈ ಮನೆಯ ಯಜಮಾನಿಯನ್ನ ಮನೆಗೆ ಕರೆದುಕೊಂಡು ಬರಲು ಹೋಗುತ್ತಾ ಇದ್ದೇನೆ ಯಾರು ಅಡ್ಡ ಬರಬಾರದು ಎಂದು ಜೋರಾಗಿ ಹೇಳುತ್ತಾಳೆ ಬಳಿಕ ಅಲ್ಲಿಂದ ತೆರಳುತ್ತಾರೆ. ಏನು ಎತ್ತ ಎಂದು ತಿಳಿದುಕೊಳ್ಳುವ ವೇಳೆಯೇ ಈ ರೀತಿ ವಿಚಾರ ನಡೆದದ್ದನ್ನು ನೋಡಿ ಮನೆ ಮಂದಿ ಶಾಕ್ ಆದರೆ ಏಜೆ ಪಿಎಗೆ ಬಹಳ ಖುಷಿ ಆಗುತ್ತದೆ.

ಲೀಲಾ ಮನೆಗೆ ತೆರಳಿದ ಅಜ್ಜಿ

ಲೀಲಾ ಮನೆಗೆ ತೆರಳಿದ ಅಜ್ಜಿ

ಲೀಲಾ ಮನೆಗೆ ತೆರಳಿದ ಅಜ್ಜಿ ಜೋರಾಗಿ ಲೀಲಾಳನ್ನು ಕರೆಯುತ್ತಾರೆ. ಬಳಿಕ ಆಕೆಯ ಜೊತೆ ಮಾತನಾಡುತ್ತಾರೆ. ವಿಸ್ತೃತವಾಗಿ ಎಲ್ಲವನ್ನೂ ವಿವರವಾಗಿ ಹೇಳಿ ಲೀಲಾ ಮನವೊಲಿಸುತ್ತಾರೆ. ಲೀಲಾ ಬಹಳ ಬೇಸರದಿಂದ ಅಳುತ್ತಾಳೆ. ಆಕೆಗೆ ದಿಕ್ಕೇ ತೋಚದಂತಾಗಿದೆ. ಮನೆಯಲ್ಲಿ ಅಮ್ಮನ ಕಿರಿ ಕಿರಿ ಗಂಡನ ಮನೆಯಲ್ಲಿ ನೋಡಿದರೆ ಬೇರೆಯೇ ಕಥೆ ಏನು ಮಾಡುವುದು ಎಂದು ತಿಳಿಯದ ಲೀಲಾಗೆ ಬಹಳ ನೋವಾಗುತ್ತದೆ. ಅಜ್ಜಿಯನ್ನು ನೋಡಿದ ಕ್ಷಣ ಆಕೆಗೆ ದುಃಖ ತಡೆದುಕೊಳ್ಳಲು ಆಗದೆ ಅಜ್ಜಿಯನ್ನು ಬಿಗಿದಪ್ಪಿ ಅಳುತ್ತಾಳೆ.

ಲೀಲಾ ಮನವೊಲಿಸಿದ ಅಜ್ಜಿ

ಲೀಲಾ ಮನವೊಲಿಸಿದ ಅಜ್ಜಿ

ಲೀಲಾ ಗಂಡನ ಮನೆಗೆ ಹೋಗುವುದನ್ನು ಕಾಯುತ್ತಾ ಇರುವ ಕೌಸಲ್ಯ ಲೀಲಾ ಮಾತ್ರ ಈ ಮನೆಯಿಂದ ಹೋಗಲಿ ಅನ್ನುವ ಹಾಗೆ ಮಾತನಾಡುತ್ತಾ ಇರುತ್ತಾಳೆ. ಲೀಲಾ ಮನೆಯಲ್ಲಿ ಇದ್ದರೆ ತನ್ನ ಮಗಳ ಮದುವೆ ಕೂಡ ಆಗುವುದು ಇಲ್ಲ ಎಂದುಕೊಂಡು ಅಜ್ಜಿ ಬಳಿ ಹೇಳುತ್ತ ಇದ್ದರೂ ಇದನ್ನು ಕೇಳಿದ ಅಜ್ಜಿ ಲೀಲಾಳನ್ನು ಅಲ್ಲಿಯೇ ಬಿಡಲು ಒಪ್ಪದೇ ಮನೆಗೆ ಕರೆದುಕೊಂಡು ಬರುತ್ತಾರೆ. ಮನೆಗೆ ಬರುವ ವೇಳೆ ಮನೆಯ ಹೊರಗಡೆ ಎಲ್ಲರೂ ನಿಂತಿರುವುದನ್ನು ನೋಡಿದ ಅಜ್ಜಿ ಹಾಗೂ ಲೀಲಾ ಶಾಕ್ ಆಗುತ್ತಾರೆ.

ಲೀಲಾ ಮೇಲೆ ಎಗರಾಡಿದ ದುರ್ಗಾ

ಲೀಲಾ ಮೇಲೆ ಎಗರಾಡಿದ ದುರ್ಗಾ

ಏನು ಮಾಡಬೇಕು ಎಂದು ತಿಳಿಯದೇ ಲೀಲಾ ಕೊಂಚ ಧೈರ್ಯ ಮಾಡಿ ಎದುರು ಬಂದು ನಿಲ್ಲುತ್ತಾಳೆ. ಇದನ್ನು ನೋಡಿದ ದುರ್ಗಾ ಲೀಲಾ ಮೇಲೆ ಕೊಂಚ ಎಗರಾಡುತ್ತ ಇರುತ್ತಾಳೆ. ಆದರೆ ಲೀಲಾ ಆಕೆಯನ್ನು ಕ್ಯಾರೇ ಎನ್ನದೆ ಸುಮ್ಮನೆ ಇರುತ್ತಾಳೆ. ಯಾವಾಗ ದುರ್ಗಾ ಮಿತಿ ಮೀರಿ ಮಾತು ಆಡುತ್ತ ಇರುತ್ತಾಳೋ ಆಗ ಕೊಂಚ ಕೋಪಗೊಂಡ ಲೀಲಾ ಇದು ನನ್ನ ಗಂಡನ ಮನೆ ಇಲ್ಲಿಗೆ ಯಾರಿಗೂ ಬರಬೇಡ ಎನ್ನುವ ರೈಟ್ಸ್ ಇಲ್ಲ ಎಂದು ಹೇಳಿದಾಗ ಎಲ್ಲರೂ ಸುಮ್ಮನೆ ಆಗುತ್ತಾರೆ.

ಅಜ್ಜಿಯನ್ನು ಕರೆದುಕೊಂಡು ಮನೆಗೆ ಹೋದ ಲೀಲಾ

ಅಜ್ಜಿಯನ್ನು ಕರೆದುಕೊಂಡು ಮನೆಗೆ ಹೋದ ಲೀಲಾ

ಆದರೆ ಏಜೆಗೆ ಒಂದು ಅರ್ಥ ಆಗಲಿಲ್ಲ. ಲೀಲಾಳನ್ನು ಅಷ್ಟು ದ್ವೇಷ ಮಾಡುತ್ತಾ ಇರುವ ಅಮ್ಮ ಅದು ಹೇಗೆ ಲೀಲಾ ಜೊತೆ ಸೇರಿಕೊಂಡಿದ್ದಾಳೆ ಎಂದು ಅಮ್ಮನ ನಡೆ ಏಜೆಗೆ ಕೊಂಚ ಆಶ್ಚರ್ಯ ಎನಿಸುತ್ತದೆ. ಬಳಿಕ ಲೀಲಾ ಅಜ್ಜಿಯನ್ನು ಕರೆದುಕೊಂಡು ಏಜೆ ಮನೆಯ ಹೊಸಿಲು ತುಳಿಯುತ್ತಾಳೆ. ಸಂಪೂರ್ಣವಾಗಿ ಕುಸಿದು ಹೋಗಿದ್ದ ಲೀಲಾ ಯಾರ ಮಾತನ್ನೂ ಲೆಕ್ಕಿಸದೆ ಮನೆ ಒಳಗೆ ಪ್ರವೇಶ ಮಾಡಿರುವುದು ಎಲ್ಲರ ಕೆಂಗಣ್ಣಿಗೆ ಗುರಿ ಆಗಿದೆ.

More from Filmibeat

English summary
zee kannada serial Hitler kalyana Written Update on January 23th episode.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X