Hitler Kalyan: ಮೂವರು ಸೊಸೆಯರನ್ನು ಎದುರು ಹಾಕಿ ಕೊಂಡು ಏಜೆ ಮನ ಗೆಲ್ಲುತ್ತಾಳ ಲೀಲಾ?

By ಪೂರ್ವ

ಲೀಲಾಗೆ ರೇವತಿ ಕರೆ ಮಾಡುತ್ತಾಳೆ. ಈ ವೇಳೆ ಲೀಲಾ ಜೋರಾಗಿ ಫೋನ್ ನಲ್ಲಿ ಮಾತನಾಡುತ್ತಾಳೆ. ಇದನ್ನು ಕೇಳಿಸಿಕೊಂಡ ರೇವತಿ ಅಕ್ಕನ ಬಳಿ ಮೆತ್ತಗೆ ಮಾತನಾಡುವಂತೆ ಹೇಳುತ್ತಾಳೆ ಆದರೆ ಲೀಲಾ ಮಾತ್ರ ಮೆತ್ತಗೆ ಮಾತನಾಡದೆ ನಾನೇನು ಕಾಡಲ್ಲಿ ಇದ್ದೇನ. ನಾನು ನನ್ನ ಗಂಡನ ಮನೆಯಲ್ಲಿ ತಾನೇ ಇದ್ದೇನೆ. ನಾನು ಯಾಕೆ ಹೆದರಿಕೊಳ್ಳಬೇಕು ಎಂದು ಎಲ್ಲರ ಮುಂದೆ ಜೋರಾಗಿ ಮಾತನಾಡುತ್ತಾಳೆ.

ಲೀಲಾ ಫೋನ್‌ನಲ್ಲಿ ಮಾತನಾಡುತ್ತಾ ಇರುವ ವೇಳೆ ಎಲ್ಲರೂ ಆಕೆಯನ್ನು ದುರುಗುಟ್ಟಿ ನೋಡಿದರೆ ಅಜ್ಜಿ ಮಾತ್ರ ನಗುತ್ತಾ ಇರುತ್ತಾರೆ. ರೇವತಿ, ಭಯಗೊಂಡು ಅಕ್ಕ ಯಾಕೆ ನೀನು ಕೂಗಾಡುತ್ತಾ ಇದ್ದಿ ಸ್ವಲ್ಪ ಮೆತ್ತಗೆ ಮಾತನಾಡಬಾರದ. ಬಾವ ಕೇಳಿಸಿಕೊಂಡರೆ ಎಂದು ಹೇಳುತ್ತಾಳೆ. ಅದಕ್ಕೆ ಲೀಲಾ, ಕೇಳಿಸಿಕೊಂಡರೆ ಅಂದರೆ ಏನೇ ಅವರು ನನ್ನ ಎದುರುಗಡೆ ಇದ್ದಾರೆ. ಎಂದಾಗ ರೇವತಿಗೆ ಶಾಕ್ ಆಗುತ್ತದೆ. ಏಜೆ ಊಟ ಮಾಡುತ್ತಾ ಇರುವ ವೇಳೆ ಲೀಲಾ ಆತನ ಹತ್ತಿರ ಬಂದು ಮಾತನಾಡುತ್ತಾ ಇರುತ್ತಾಳೆ.

ಏಜೆಗೆ ಆಕೆಯ ಕೈಗೆ ಸುತ್ತಿಕೊಂಡ ತಾಳಿಯನ್ನು ತೋರಿಸುತ್ತಾ ಹೇಳುತ್ತಾಳೆ ಅವರು ನನ್ನ ತಾಳಿಯನ್ನು ಕಿತ್ತು ಹಾಕಿ ಇರಬಹುದು ಆದರೆ ತಾಳಿ ಕಟ್ಟಿದ ದಿನವನ್ನು ನೆನಪಿನಿಂದ ಕಿತ್ತು ಹಾಕಲು ಆಗುತ್ತದಾ? ಅವರು ಹೇಗೆ ಇರಲಿ ಅವರು ನನ್ನ ಗಂಡನೇ ಎಂದು ಹೇಳುತ್ತಾಳೆ. ಇದನ್ನು ಕೇಳಿದ ದುರ್ಗಾಗೆ ಬಹಳ ಕೋಪ ಬರುತ್ತದೆ. ಅಜ್ಜಿ ಮಾತ್ರ ಲೀಲಾ ಏಜೆ ಮುಂದೆ ಭಯ ಇಲ್ಲದೆ ಮಾತನಾಡುವುದನ್ನು ನೋಡಿ ಬಹಳ ಖುಷಿ ಪಡುತ್ತಾರೆ.

ಲೀಲಾ ರೇವತಿ ಬಳಿ ಮಾತನಾಡುತ್ತಾ ಹೇಳುತ್ತಾಳೆ ನಾನು ಈ ಮನೆಯ ಯಜಮಾನಿ ಕಣೆ ಯಜಮಾನಿ ಎಂದು ಹೇಳಿದಾಗ ಕಿರಿ ಕಿರಿ ಗೊಂಡ ಏಜೆ ತಟ್ಟೆಗೆ ಕೈ ತೊಳೆದು ಅರ್ಧದಲ್ಲೇ ಊಟ ಬಿಟ್ಟು ಹೋಗುತ್ತಾರೆ. ಇದನ್ನು ನೋಡಿದ ಲೀಲಾಗೆ ಕೊಂಚ ಬೇಸರ ಆದರೂ ಲೀಲಾ ಮಾತ್ರ ಸುಮ್ಮನೆ ಮಾತನಾಡುತ್ತಲೇ ಇರುತ್ತಾಳೆ. ಏಜೆ ಹೋದ ಬಳಿಕ ದುರ್ಗಾ ಕೊಂಚ ಜೋರಾಗಿಯೇ ಲೀಲಾ ಬಳಿ, ಲೀಲಾ ಹೀಗಾ ಕಿರಿ-ಕಿರಿ ಮಾಡುವುದು, ಎಲ್ಲದಕ್ಕೂ ಒಂದು ಮಿತಿ ಇರುತ್ತದೆ ಎನ್ನುತ್ತಾಳೆ.

ದುರ್ಗಾ ಮಾತಿಗೆ ಕೋಪಗೊಂಡ ಲೀಲಾ

ದುರ್ಗಾ ಮಾತಿಗೆ ಕೋಪಗೊಂಡ ಲೀಲಾ

ಯಾವತ್ತೂ ಮಿತಿ ಮೀರಿ ವರ್ತಿಸಬಾರದು. ಎಂದಾಗ ಲೀಲಾ ಕರೆ ಕಟ್ ಮಾಡುತ್ತಾಳೆ. ಅಕ್ಕ ಕರೆ ಕಟ್ ಮಾಡಿದ್ದನ್ನು ನೋಡಿ ರೇವತಿಗೆ ಬೇಸರ ಆದರೂ, ಏನೋ ಒಟ್ಟಿನಲ್ಲಿ ಅಕ್ಕ ಬಾವ ಖುಷಿ ಆಗಿ ಇರಬೇಕು. ಎಂದುಕೊಳ್ಳುತ್ತಾ ತನ್ನನ್ನು ತಾನು ಸಮಾಧಾನ ಮಾಡಿಕೊಳ್ಳುತ್ತಾಳೆ. ಇನ್ನು ಲೀಲಾ ಒಂದು ಕಡೆ ಮಲಗಿ ಯೋಚನೆ ಮಾಡುತ್ತಾ ಮುಳುಗಿರುತ್ತಾಳೆ.

ಹೊಸ ಐಡಿಯಾ ಮಾಡಿದ ಲೀಲಾ

ಹೊಸ ಐಡಿಯಾ ಮಾಡಿದ ಲೀಲಾ

ಏಜೆ ತನ್ನ ರೂಮ್‌ನಲ್ಲಿ ಮಲಗು ಎಂದು ಹೇಳಿ ಇರುವುದು ಲೀಲಾಗೆ ನೆನಪು ಆಗಿ ಎದ್ದೇಳುತ್ತಾಳೆ ಬಳಿಕ ಅವಳಿಗೆ ಅವಳೇ ಹೇಳಿಕೊಳ್ಳುತ್ತಾ ಇರುತ್ತಾಳೆ ಇದಲ್ಲ ನಿನ್ನ ಜಾಗ ರೂಮ್ ನಲ್ಲಿ ಇರುವುದು ನಿನ್ನ ಜಾಗ ಎಂದು ಹೇಳಿದ್ದು ಆಯಿತು. ಇಷ್ಟೆಲ್ಲ ಆದ ಮೇಲೆ ಒಂಟಿ ಪಿಶಾಚಿ ತರ ಯಾಕೆ ಇಲ್ಲಿ ಮಲಗಬೇಕು ಎಂದುಕೊಂಡು ಏಜೆ ರೂಮ್ ಗೆ ಹೋಗಲು ರೆಡಿಯಾಗುತ್ತಾಳೆ.

ಏಜೆ ರೂಮ್‌ಗೆ ಎಂಟ್ರಿ ಕೊಟ್ಟ ಲೀಲಾ

ಏಜೆ ರೂಮ್‌ಗೆ ಎಂಟ್ರಿ ಕೊಟ್ಟ ಲೀಲಾ

ಇನ್ನು ಲೀಲಾ ರೂಮ್ ಗೆ ಬಂದಾಗ ಏಜೆ ಮುಖ್ಯವಾದ ಕೆಲಸ ಮಾಡುತ್ತಾ ಇರುತ್ತಾರೆ. ಇನ್ನು ಏಜೆಯನ್ನು ನೋಡಿ ಕೊಂಚ ಭಯಾಗೊಳ್ಳುತ್ತ ಇರುತ್ತಾಳೆ. ನೇರವಾಗಿ ಬೆಡ್ ಬಳಿ ಹೋಗಬೇಕಾದರೆ ಏಜೆ ಲಿಲಾಳನ್ನು ನಿಂತುಕೊಳ್ಳಲು ಹೇಳುತ್ತಾರೆ. ಇದನ್ನು ಕೇಳಿದ ಲೀಲಾ ಮಾತ್ರ ಕೊಂಚ ಭಯಪಟ್ಟುಕೊಂಡರು ಆ ಬಳಿಕ ಏಜೆಯನ್ನು ನೋಡುತ್ತಾಳೆ. ಏಜೆ ಲೀಲಾಳ ಬಳಿ ಕೇಳುತ್ತಾನೆ ಯಾರನ್ನು ಕೇಳಿ ಒಳಗೆ ಬರುತ್ತಾ ಇದ್ದೀಯಾ ಎಂದು ಕೇಳುತ್ತಾನೆ ಏಜೆ.

ಲೀಲಾಗೆ ಅಜ್ಜಿ ಬೆಂಬಲ

ಲೀಲಾಗೆ ಅಜ್ಜಿ ಬೆಂಬಲ

ನೀವು ಯಾರನ್ನು ಕೇಳಿ ನನ್ನ ಹಾರ್ಟ್ ಒಳಗೆ ಬಂದ್ರೋ ಅವರನ್ನು ಕೇಳಿ ನಾನು ರೂಮ್ ಒಳಗೆ ಬಂದೆ. ಏಜೆ ಕೋಪದಿಂದ ಔಟ್ ಎಂದು ಹೇಳುತ್ತಾರೆ ಆದರೆ ಲೀಲಾ ಮಾತ್ರ ಗಟ್ಟಿಯಾಗಿ ಹೇಳುತ್ತಾಳೆ ನೀವು ನನ್ನ ಪ್ರೀತಿ ಮಾಡಲಿಲ್ಲ ಎಂದು ಹೇಳಿದರೆ ಗಟ್ಟಿಯಾಗಿ ತಬ್ಬಿಕೊಂಡು ಮುತ್ತುಕೊಡುತ್ತೇನೆ ಎಂದು ಹೇಳಿದಾಗ ಏಜೆ ಜೋರಾಗಿ ಕಿರುಚಿದಾಗ ಮನೆ ಮಂದಿ ಎಲ್ಲಾ ರೂಮ್‌ಗೆ ಬರುತ್ತಾರೆ ಲೀಲಾಳನ್ನೂ ರೂಮ್ ನಲ್ಲಿ ನೋಡಿ ಕೊಂಚ ಶಾಕ್ ಆಗುತ್ತಾರೆ. ಬಳಿಕ ಅಜ್ಜಿ ಏನು ಎತ್ತ ವಿಚಾರಣೆ ಮಾಡಿದಾಗ ಲೀಲಾ, ಗಂಡ ಹೆಂಡತಿ ಜಗಳ ಉಂಡು ಮಲಗುವವರೆಗೆ ಯಾರು ಈ ಬಗ್ಗೆ ಯೋಚನೆ ಮಾಡಬೇಡಿ ನಾವು ನಾವೇ ಪರಿಹಾರ ಮಾಡುತ್ತೇವೆ ಎಂದು ಹೇಳಿದಾಗ ಅಲ್ಲಿಂದ ಎಲ್ಲರೂ ಹೋಗುತ್ತಾರೆ. ಇನ್ನು ಅಜ್ಜಿ ಲೀಲಾ ಮಾತನಾಡಿಕೊಳ್ಳುತ್ತ ಇರುತ್ತಾರೆ. ಏನು ಲೀಲಾ ನಿನಗೆ ಎಷ್ಟೆಲ್ಲ ಧೈರ್ಯ ಬಂದಿದೆ. ಏಜೆ ಮುಂದೆ ಎಷ್ಟು ಧೈರ್ಯದಿಂದ ಮಾತನಾಡುತ್ತಾ ಇರುತ್ತಿಯಾ ಎಂದೆಲ್ಲ ಹೇಳಿ ಖುಷಿ ಪಡುತ್ತಾರೆ.

More from Filmibeat

English summary
tv,serial,poorva,kannada,ಟಿವಿ,ಕಿರುತೆರೆ,ಕನ್ನಡ,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X