ಏಜೆಯನ್ನು ಮುದ್ದಾಗಿ ಕಾಡಿದ ಲೀಲಾಳನ್ನು ಕಂಡು ಹಲ್ಲು ಮಸೆಯುತ್ತಿರುವ ದುರ್ಗಾ!

By Poorva

ಏಜೆಯನ್ನು ಲೀಲಾ ಮುದ್ದಾಗಿ ಕಾಡುತ್ತಾ ಇದ್ದಾಳೆ. ಏಜೆಯನ್ನು ಹೇಗಾದರೂ ಪಡೆಯಲೇ ಬೇಕು ಎನ್ನುವುದು ಲೀಲಾ ಆಸೆ. ತಾನು ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸಿದ ಲೀಲಾಳನ್ನು ಕಂಡರೆ ಏಜೆಗೆ ಮೈ ಎಲ್ಲ ಉರಿ. ಲೀಲಾ ಇದೀಗ ಏಜೆ ಜೊತೆ ಒಂದೇ ಕೋಣೆಯಲ್ಲಿ ಮಲಗಲು ಬಂದಿದ್ದಾಳೆ. ಇದೀಗ ಏಜೆಯನ್ನು ಮಲಗಲು ಬಿಡದೆ ಮುದ್ದಾಗಿ ಕಾಟ ಕೊಡುತ್ತಾ ಇದ್ದಾಳೆ. ಲೀಲಾ ಕಾಟ ತಡೆಯಲು ಆಗದ ಏಜೆ ಸಿಡಿ ಸಿಡಿ ಸಿಡುಕಿದರೂ ಲೀಲಾ ಅದ್ಯಾವುದನ್ನೂ ಗಣನೆಗೆ ತೆಗೆದುಕೊಳ್ಳದೆ ಆಕೆ ಹಾಡಿದ್ದೇ ರಾಗ ಎನ್ನುವ ಹಾಗೆ ಹಾಡನ್ನು ಹಾಡುತ್ತಾ ಇದ್ದಾಳೆ. ಆದರೆ ಏಜೆಗೆ ಏನು ಮಾಡಬೇಕೆಂದು ತಿಳಿಯದೇ ಸುಮ್ಮನೆ ಇರುತ್ತಾನೆ.

ಮಲಗಿದ್ದ ಏಜೆಯನ್ನು ಎದ್ದೇಳಿಸಿ ಮಾತನಾಡುತ್ತಾಳೆ. ಯಾಕೆ ಮಾವ ಎದ್ದೇಳಲ್ವಾ ಎಂದಾಗ ರೊಚ್ಚಿಗೆದ್ದ ಏಜೆ ಲೀಲಾ ಬಳಿ ಯಾಕೆ ಲೀಲಾ ನಿನಗೆ ಸುಮ್ಮನೆ ಮಲಗಲು ಆಗುವುದಿಲ್ವಾ, ಯಾಕೆ ನನ್ನ ತಲೆ ತಿನ್ನುತ್ತಿಯಾ, ಹೀಗೆ ಅರಚುತ್ತಿಯಾ ಎಂದು ಕೋಪದಿಂದ ಹೇಳುತ್ತಾನೆ. ಆದರೆ ಲೀಲಾ ಅತಿಯಾದ ರೆಸ್ಪೆಕ್ಟ್ ಕೊಡುತ್ತಾಳೆ. ಅದಕ್ಕೆ ಏಜೆ ಸಿಡಿಮಿಡಿಗೊಳ್ಳುತ್ರಾನೆ. ಲೀಲಾ ಮಾತ್ರ ಗಂಡನನ್ನು ಹೀಗೆಲ್ಲ ಕರೆಯಬಾರದು ರಿ ಬನ್ರಿ ಹೋಗ್ರಿ ಎಂದು ಕರೆಯಬೇಕು ಎಂದು ಹೇಳುತ್ತಾಳೆ.

ಬಳಿಕ ಏಜೆ ನೀನು ನನ್ನ ಹೆಂಡತಿ ಅಲ್ಲ ನಾನು ನಿನ್ನ ಗಂಡನೂ ಅಲ್ಲ, ನನಗೆ ನಿನ್ನ ರೆಸ್ಪೆಕ್ಟ್ ಕೂಡ ಬೇಡ ಎಂದು ಎಜೆ ಖಡಕ್ ಆಗಿ ಹೇಳಿದರೆ, ಲೀಲಾ ಮಾತ್ರ ಏಜೆ ಮುಖ ನೋಡಿ ಆಯ್ತು ನಾನು ಅದನ್ನು ನಿಲ್ಲಿಸುತ್ತೇನೆ, ಆದರೆ ಒಂದು ಕಂಡೀಷನ್ ಇದೆ, ಅದೇನೆಂದರೆ ನೀವು ಪ್ರೀತಿಯಿಂದ ಗುಡ್ ನೈಟ್ ಎಂದು ಹೇಳಬೇಕು ಎಂದು ಹೇಳುತ್ತಾಳೆ. ಇದನ್ನು ಕೇಳಿದ ಏಜೆ ಚಾನ್ಸ್ ಇಲ್ಲ ಎಂದು ಹೇಳಿದಾಗ ಅಜ್ಜಿಯನ್ನು ಕರೆಯುತ್ತೇನೆ ಎಂದು ಲೀಲಾ ಹೇಳಿದಾಗ ಮತ್ತೆ ಮೆತ್ತಗೆ ಏಜೆ ಗುಡ್ ನೈಟ್ ಹೇಳ್ತಾನೆ.

ಏಜೆಗೆ ಕಾಫಿ ಮಾಡಲು ಬಂದ ಲೀಲಾ

ಏಜೆಗೆ ಕಾಫಿ ಮಾಡಲು ಬಂದ ಲೀಲಾ

ಮರುದಿನ ಬೇಗ ಎದ್ದ ಲೀಲಾ ಅವಳದ್ದೇ ಆದ ಲೋಕದಲಿ ತೇಲಾಡುತ್ತ ಏಜೆಗೆ ಕಾಫಿ ಮಾಡುತ್ತಾ ಇರುತ್ತಾಳೆ. ಆ ವೇಳೆ ಅಲ್ಲಿಗೆ ದುರ್ಗಾ ಬಂದು ಲೀಲಾ ಮೇಲೆ ಸಿಡುಕುತ್ತಾಳೆ. ಲೀಲಾ ಮಾತ್ರ ಫ್ರೆಂಡ್ ಫ್ರೆಂಡ್ ಎಂದು ಕೊಂಕು ಮಾತನಾಡಿದರು ಆಕೆ ಮಾತ್ರ ಏನು ಹೇಳದೆ ಸುಮ್ಮನೆ ಇರುತ್ತಾಳೆ. ಇನ್ನು ದುರ್ಗಾ ಲೀಲಾ ಬಳಿ ನಾನು ಏಜೆಗೆ ಕಾಫಿ ಕೊಡುತ್ತೇನೆ ಎಂದೆಲ್ಲ ಹೇಳುತ್ತಾಳೆ.

ಲೀಲಾ ಮುಂದೆ ನಡೆಯಲ್ಲ ದುರ್ಗಾ ಕರಾಮತ್ತು

ಲೀಲಾ ಮುಂದೆ ನಡೆಯಲ್ಲ ದುರ್ಗಾ ಕರಾಮತ್ತು

ಇದಕ್ಕುತ್ತಿರಿಸುವ ಲೀಲಾ ಆತ ನನ್ನ ಗಂಡ ಅದಕ್ಕಾಗಿ ನಾನು ಹೇಳುತ್ತ ಇದ್ದೇನೆ ನಾನೇ ಅವರಿಗೆ ಕಾಫಿ ಕೊಡುತ್ತೇನೆ ಎಂದು ತೆಗೆದುಕೊಂಡು ಹೋಗುತ್ತಾಳೆ. ಇದನ್ನು ನೋಡಿದ ದುರ್ಗಾ ಬೇಗ ಬೇಗ ಏಜೆಗಾಗಿ ಕಾಫಿ ಮಾಡುತ್ತಾಳೆ. ಈ ವೇಳೆ ಲೀಲಾಳನ್ನು ನೋಡಿದ ಲಕ್ಷ್ಮಿ ಲೀಲಾ ಮೇಲೆ ಬೇಕಂತಲೇ ಕಿಡಿ ಕಾರುತ್ತಾಳೆ. ಇದನ್ನೆಲ್ಲ ಬೇಕಂತಲೇ ಮಾಡುತ್ತಾ ಇರುವುದು ಎಂದು ಅಜ್ಜಿಗೆ ತಿಳಿಯುತ್ತದೆ.

ದುರ್ಗಳನ್ನು ತಡೆದ ಅಜ್ಜಿ

ದುರ್ಗಳನ್ನು ತಡೆದ ಅಜ್ಜಿ

ದುರ್ಗಾ ಏಜೆಗೆ ಕಾಫಿ ಕೊಡಲು ಓಡೋಡಿ ಬರುತ್ತಾಳೆ. ಇದನ್ನು ನೋಡಿದ ಅಜ್ಜಿ ಅಲ್ಲಿಗೆ ಬಂದು ಲೀಲಾ ಹಾಗೂ ದುರ್ಗಳನ್ನ ತಡೆಯುತ್ತಾರೆ. ಬಳಿಕ ದುರ್ಗಾ ತಂದ ಕಾಫಿಯನ್ನು ಏಜೆಗೆ ಕೊಡುತ್ತಾರೆ. ಅದನ್ನು ಕುಡಿದ ಏಜೆ ಕಾಫಿ ಚೆನ್ನಾಗಿಲ್ಲ ಎಂದು ಹೇಳುತ್ತಾನೆ . ಇದನ್ನು ಕೇಳಿದ ದುರ್ಗಾಗೆ ಶಾಕ್ ಆಗುತ್ತದೆ. ಆದರೆ ಎನು ಮಾತನಾಡದ ಸ್ಥಿತಿಯಲ್ಲಿ ಇರುತ್ತಾಳೆ.

ದುರ್ಗಾ ಕೈಯಲ್ಲಿದ್ದ ಕಾಫಿ ಸವಿದು ಹೊಗಳಿದ ಏಜೆ

ದುರ್ಗಾ ಕೈಯಲ್ಲಿದ್ದ ಕಾಫಿ ಸವಿದು ಹೊಗಳಿದ ಏಜೆ

ಇನ್ನು ದುರ್ಗಾ ಕೈನಲ್ಲಿ ಲೀಲಾ ಮಾಡಿದ ಕಾಫಿ ಇರುತ್ತೆ. ಇದನ್ನು ಕಂಡ ಎಜೆ ದುರ್ಗಾ ನನಗೆ ಕಾಫಿ ತಂದೆಯ ಎಂದು ಕೇಳಿ ಆಕೆ ಕೈಯಲ್ಲಿದ್ದ ಕಾಫಿಯನ್ನು ಕುಡಿದು ಹಾಡಿ ಹೊಗಳುತ್ತಾನೆ. ಇದನ್ನು ನೋಡಿದ ಲೀಲಾ ಬಹಳ ಖುಷಿ ಪಡುತ್ತಾಳೆ. ಏಜೆ ಮಾತಿಗೆ ಬಹಳ ಸಂತಸ ವ್ಯಕ್ತ ಪಡಿಸುತ್ತಾಳೆ. ಇನ್ನು ಲೀಲಾ ಮಾತ್ರ ದುರ್ಗಾ ಮುಖ ನೋಡಿ ನಗುತ್ತಾಳೆ. ಇನ್ನು ಅಜ್ಜಿ ಚಂದ್ರಶೇಖರ್ ಗೆ ಕರೆ ಮಾಡಿ ಲೀಲಾ ಇಲ್ಲಿ ಆರಾಮವಾಗಿ ಇದ್ದಾಳೆ ನೀವು ಏನು ತಲೆ ಕೆಡಿಸಿಕೊಳ್ಳಬೇಡಿ ಎಂದೆಲ್ಲ ಹೇಳಿ ಸಮಾಧಾನ ಹೇಳುತ್ತಾಳೆ. ಇದನ್ನು ಕೇಳಿದ ಚಂದ್ರ ಶೇಖರ್ ಗೆ ಬಹಳ ಖುಷಿ ಆಗುತ್ತದೆ. ಮುಂದೆ ಏನೆಂದು ಕಾದು ನೋಡಬೇಕಿದೆ .

More from Filmibeat

English summary
zee kannada serial Hitler kalyana Written Update on January 30th episode.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X