Hitler Kalyana Serial: ಏಜೆಗೆ ತಾನು ಮಾಡಿದ ತಪ್ಪಿನ ಅರಿವು ಆಗುತ್ತಾ?
ಹಿಟ್ಲರ್ ಕಲ್ಯಾಣ ಧಾರವಾಹಿ ಅದ್ಭುತವಾಗಿ ಮೂಡಿ ಬರುತ್ತಿದ್ದು ನೋಡುಗರ ಮನ ಸೆಳೆಯುವ ಹಾಗೆ ಮಾಡುತ್ತಿದೆ. ಇದೀಗ ಲೀಲಾ ಮನೆಯವರಿಗೆಲ್ಲಾ ಸಿಹಿ ಮಾಡಿ ಬಡಿಸುತ್ತ ಇರುತ್ತಾಳೆ. ಇದನ್ನು ನೋಡಿದ ಏಜೆ ಎದ್ದೇಳಲು ಪ್ರಯತ್ನ ಪಡುತ್ತಾನೆ. ಆ ಸಮಯದಲ್ಲಿ ಲೀಲಾ ನನ್ನ ಜೊತೆ ಇದ್ದರೆ ನಾನು ಅಡುಗೆ ಮಾಡುವುದನ್ನು ತಿಂದರೆ ನಿಮಗೆ ನನ್ನ ಮೇಲೆ ಪ್ರೀತಿ ಆಗುತ್ತದೆ ಎಂದು ಭಯನ ಎಂದು ಕೇಳುತ್ತಾಳೆ.
ಇದಕ್ಕುತ್ತರಿಸುವ ಏಜೆ ಮತ್ತೆ ಕುಳಿತುಕೊಳ್ಳುತ್ತಾನೆ. ಬಳಿಕ ಲೀಲಾ ಉಣಬಡಿಸಿದ ಸಿಹಿಯನ್ನು ತಿನ್ನುತ್ತಾನೆ. ಇದನ್ನೆಲ್ಲ ನೋಡಿದ ದುರ್ಗಾ ಹಾಗೂ ಲಕ್ಷ್ಮಿಗೆ ಹೊಟ್ಟಕಿಚ್ಚಿಗೆ ಒಳಗಾಗುತ್ತಾರೆ. ಲಕ್ಷ್ಮಿ ದುರ್ಗಾ ಬಳಿ ನೋಡಿ ಅಕ್ಕ ಏನೇನೋ ಮಾಟ ಮಂತ್ರ ಮಾಡಿ ಈ ರೀತಿ ಸಿಕ್ಕಿ ಹಾಕಿ ಕೊಳ್ಳುವ ಹಾಗೆ ಮಾಡುತ್ತಾ ಇದ್ದಾಳೆ ಇದು ಸರಿ ಅಲ್ಲ ಏಜೆ ಖಂಡಿತ ಒಂದಲ್ಲ ಒಂದು ದಿನ ಲೀಲಾ ಪ್ರೀತಿಯಲ್ಲಿ ಬಿದ್ದೆ ಬೀಳುತ್ತಾರೆ ಎಂದು ಹೇಳುತ್ತಾಳೆ
ಇದನ್ನು ಕೇಳಿದ ದುರ್ಗಾಗೆ ಲೀಲಾ ಮೇಲೆ ಇನ್ನೂ ಸಿಟ್ಟು ಉಕ್ಕಿ ಹರಿಯುತ್ತದೆ . ಇನ್ನು ದುರ್ಗಾಗೆ ಸಿಹಿ ಬಡಿಸಲು ಬಂದಾಗ ಬೇಡ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಲೀಲಾ ಮೆತ್ತಗೆ ನಿಮಗೆ ಶುಗರ್ ಏನು ಇಲ್ಲ ಎಂದು ನನಗೆ ಗೊತ್ತು ಎಂದಾಗ ದುರ್ಗಾ ಸಿಹಿ ಹಾಕಿಕೊಂಡು ತಿನ್ನುತ್ತಾಳೆ. ಇತ್ತ ಅಜ್ಜಿ ಮಾತ್ರ ಲೀಲಾ ಮಾಡಿದ ಅಡುಗೆಯನ್ನು ಹೊಗಳುತ್ತಾರೆ. ಅಮೃತದ ಹಾಗೆ ಇದೆ ಎಂದು ಹೇಳಿದಾಗ ಬೇರೆ ಎಲ್ಲಾ ಸುಮ್ಮನೆ ಇರುತ್ತಾರೆ.

ಅಜ್ಜಿಯ ಮಾತುಗಳನ್ನು ಕೇಳಿ ಖುಷಿ ಪಟ್ಟ ಲೀಲಾ
ಈ ಸಂದರ್ಭದಲ್ಲಿ ಮಾತನಾಡುವ ಲೀಲಾ ಅಡುಗೆ ಹೊಗಳಲು ಪದ ಸಾಲುತ್ತಿಲ್ಲ ಅನ್ನಿಸುತ್ತದೆ ಅಜ್ಜಿ ಅದಕ್ಕೆ ಎಲ್ಲರೂ ಸುಮ್ಮನೆ ಇದ್ದಾರೆ ಎಂದಾಗ ಎಲ್ಲರೂ ಸುಮ್ಮನೆ ಇರುತ್ತಾರೆ. ಇನ್ನು ಊಟದಿಂದ ಎಲ್ಲರೂ ಎದ್ದು ಒಳಗೆ ಹೋಗುತ್ತಾರೆ. ಆದರೆ ದುರ್ಗಾ ಲಕ್ಷ್ಮಿಯನ್ನು ಬಿಟ್ಟು ಎಲ್ಲರ ಪ್ಲೇಟ್ ಕ್ಲೀನ್ ಮಾಡಲು ಮನೆಯ ಕೆಲಸದಾಕೆಯ ಬಳಿ ಹೇಳುತ್ತಾಳೆ. ಇದನ್ನು ಕೇಳಿಸಿಕೊಂಡ ಲೀಲಾ ಇದನ್ನು ಒಂದನ್ನು ಬಿಟ್ಟು ಬೇರೆ ಎಲ್ಲಾ ಕ್ಲೀನ್ ಮಾಡಿ ಎಂದು ಹೇಳುತ್ತಾಳೆ. ಬಳಿಕ ಏಜೆ ಊಟ ಮಾಡಿದ ತಟ್ಟೆಯಲ್ಲಿ ಊಟ ಮಾಡುತ್ತಾಳೆ.

ಸೊಸೆಯಂದಿರ ಮಾತಿಗೆ ತಿರುಗೇಟು ಕೊಟ್ಟ ಲೀಲಾ
ಇದನ್ನು ನೋಡಿದ ಲಕ್ಷ್ಮಿ ಹಾಗೂ ದುರ್ಗಾಗೆ ಹೇಸಿಗೆ ಆಗುತ್ತದೆ. ಲಕ್ಷ್ಮಿ ಇದೆನಕ್ಕ ಇವಳು ಎಂಜಲು ತಟ್ಟೆಯಲ್ಲಿ ತಿನ್ನುತ್ತಾ ಇದ್ದಾಳೆ, ಛೀ ಎಂದು ಹೇಳಿದಾಗ ದುರ್ಗಾ ಕೊಂಕು ಮಾತಿನಿಂದ ಎಲ್ಲಿ ಹೋಗುತ್ತೆ ತಿರ್ಪೆ ಬುದ್ದಿ ಎನ್ನುತ್ತಾಳೆ. ಲೀಲಾ ಬೆಂಕಂತಲೆ ಹಲೋ ಮೈ ಡಿಯರ್ ಆಂಟಿಸ್ ಇದು ತೀರ್ಪೆ ಬುದ್ದಿ ಅಲ್ಲ, ಭಾರತೀಯ ನಾರಿ ಮಾಡಬೇಕಾದ ಕೆಲಸ ಗಂಡ ಬಿಟ್ಟ ತಟ್ಟೆಯಲ್ಲಿ ಊಟ ಮಾಡಿದರೆ ಗಂಡನಿಗೆ ಶ್ರೇಯಸ್ ಜಾಸ್ತಿ ಇದೆಲ್ಲ ನಿಮಗೆ ಹೇಗೆ ಅರ್ಥ ಆಗಬೇಕು ಎನ್ನುತ್ತಾಳೆ. ಇದನ್ನೆಲ್ಲ ಕೇಳಿಸಿಕೊಂಡ ದುರ್ಗಾ ಅಲ್ಲಿಂದ ಹೋಗುತ್ತಾಳೆ. ಇನ್ನು ರೂಮ್ ಒಳಗೆ ಮಲಗಲು ಬಂದ ಲೀಲಾಳನ್ನು ನೋಡಿದ ಏಜೆಗೆ ಕಿರಿ ಕಿರಿ ಆಗುತ್ತದೆ. ಬಳಿಕ ಜೋರಾಗಿ ಮಲಗು ಲೀಲಾ ಎಂದು ಏಜೆ ಪುಸ್ತಕ ಓದುತ್ತಾ ಇರುತ್ತಾನೆ.

ಏಜೆ ಮುಂದೆ ಕನವರಿಸಿದ ಲೀಲಾ
ಈ ವೇಳೆ ಲೀಲಾ ಗಾಢ ನಿದ್ದೆಗೆ ಜಾರುತ್ತಾಳೆ. ಇದನ್ನು ನೋಡಿದ ಏ ಜೆ ಸುಮ್ಮನೆ ಇರುತ್ತಾನೆ. ಗಾಢ ನಿದ್ರೆಯಲ್ಲಿ ಇರಬೇಕಾದರೆ ಲೀಲಾ ಮೆತ್ತಗೆ ನಾನು ಏನು ತಪ್ಪು ಮಾಡಿಲ್ಲ ಎಂದು ನಾಲ್ಕಾರು ಬಾರಿ ಹೇಳುತ್ತಾಳೆ. ಇದನ್ನು ಕೇಳಿಸಿಕೊಂಡ ಏಜೇ ಯಾಕೆ ಇವಳು ಹೀಗೆ ಮಾಡುತ್ತಾ ಇದ್ದಾಳೆ ಇವಳು ನಿಜವಾಗಿಯೂ ತಪ್ಪು ಮಾಡಿಯೇ ಇಲ್ವಾ ಎಂದೆಲ್ಲ ಅನುಮಾನ ಶುರು ಆಗುತ್ತದೆ. ಇತ್ತ ವಿಶ್ವರೂಪ ಹಾಗೂ ಅಜ್ಜಿ ಲೀಲಾ ಹಾಗೂ ಏಜೆಯನ್ನು ಹೇಗಾದರೂ ಒಂದು ಮಾಡಲೇ ಬೇಕು ಎಂದು ಮಾಸ್ಟರ್ ಪ್ಲಾನ್ ಮಾಡುತ್ತಾ ಇರುತ್ತಾರೆ.

ಮೂವರು ಸೊಸೆಯಂದಿರನ್ನೂ ಎದುರು ಹಾಕಿಕೊಂಡ ಲೀಲಾ
ಆದರೆ ಲೀಲಾ ಮಾತ್ರ ಮೂವರು ಸೊಸೆಯರನ್ನು ಎದುರು ಹಾಕಿಕೊಂಡು ಪಡಬಾರದ ಕಷ್ಟ ಪಡುತ್ತ, ಇಷ್ಟ ಪಟ್ಟು ಎಲ್ಲರ ಜೊತೆ ಇರುತ್ತಾಳೆ. ಹಾಗೆಯೇ ಸೊಸೆಯಂದಿರಿಗೆ ಕೂಡ ಒಳ್ಳೆಯ ಪಾಠವನ್ನು ಕಲಿಸಿ ಸರಿ ದಾರಿಗೆ ಕರೆದುಕೊಂಡು ಬರಬೇಕು ಎನ್ನುವುದು ಅವಳ ಉದ್ದೇಶ ಕೂಡ . ಮುಂದೇನು ಕಾದು ನೋಡಬೇಕಿದೆ.


Click it and Unblock the Notifications











