Don't Miss!
- Finance
ಅದಾನಿ ಕಳೆದುಕೊಂಡಿದ್ದು ಎಷ್ಟು ಲಕ್ಷ ಕೋಟಿ? ಕುಸಿಯುತ್ತಿವೆ ಷೇರುಗಳು- ಭಾರತದ ಶ್ರೀಮಂತನಿಗೆ ಮಂದೇನು ಕಾದಿದೆ?
- News
Namma Metro:ರೈಲ್ವೆ ಹಳಿಗೆ ಅಡ್ಡಲಾಗಿ ವೆಬ್ ಗರ್ಡರ್ ನಿರ್ಮಿಸಿ BMRCL, ಏನಿದು?
- Automobiles
ಇವಿಗಳ ಅಬ್ಬರ... 2023 ಜನವರಿಯಲ್ಲಿ ಅತಿ ಹೆಚ್ಚು ಮಾರಾಟ ಕಂಡ ಎಲೆಕ್ಟ್ರಿಕ್ ಸ್ಕೂಟರ್ಗಳಿವು!
- Sports
Border-Gavaskar Trophy: ಭಾರತ ವಿರುದ್ಧ ಮೊದಲ ಪಂದ್ಯದಲ್ಲಿ ಈ ವೇಗಿ ಬೌಲಿಂಗ್ ಮಾಡಲ್ಲ; ಪ್ಯಾಟ್ ಕಮ್ಮಿನ್ಸ್
- Lifestyle
ಗಂಡ-ಹೆಂಡತಿ ಜಗಳವಾಡಿದರೆ ಈ ಪ್ರಯೋಜನಗಳೂ ಇವೆ!
- Technology
ಕ್ಯಾನನ್ ಕಂಪೆನಿಯಿಂದ ಹೊಸ ಪ್ರಿಂಟರ್ ಬಿಡುಗಡೆ! ಏನೆಲ್ಲಾ ಸೌಲಭ್ಯವಿದೆ ಗೊತ್ತಾ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Hitler Kalyana: ಏಜೆಗೆ ಪ್ರಪೋಸ್ ಮಾಡಲು ಲೀಲಾ ಪ್ಲಾನ್!
ಪೂಜೆಗೆ ಹೊತ್ತಾದರೂ ಲೀಲಾ ಕಾಣದ್ದನ್ನು ನೋಡಿದ ಅಜ್ಜಿ 'ಸರು ಲೀಲಾ ಎಲ್ಲಿ ಅವರನ್ನು ಕರೆದುಕೊಂಡು ಬರುತ್ತೇನೆ ಎಂದು ನೀನು ಹೋದೆ ನಿನ್ನ ಹುಡುಕಿಕೊಂಡು ದುರ್ಗಾ ಹೋದಳು ನೀವಿಬ್ಬರೂ ಹೋಗಿ ವಾಪಸ್ ಬಂದ್ರಿ ಆದರೆ ಲೀಲಾ ಎಲ್ಲಿ ಎಂದು ಕೇಳಿದಾಗ ಸರು 'ಅವರು ನೀವು ಹೋಗಿ ನಾನು ಆಮೇಲೆ ಬರುತ್ತೇನೆ ಎಂದು ಹೇಳಿದರು. ಅದಕ್ಕೆ ನಾನು ವಾಪಸ್ ಬಂದು ಬಿಟ್ಟೆ' ಎಂದು ಹೇಳುತ್ತಾಳೆ.
ಟೆನ್ಶನ್ ಮಾಡಿಕೊಳ್ಳ ಬೇಡಿ ಅಜ್ಜಿ ಅವರು ಬರೋದೇ ಇಲ್ಲ ಎಂದು ಸರು ಮನಸ್ಸಿನಲ್ಲೇ ಮಾತನಾಡಿಕೊಂಡಾಗ ದುರ್ಗಾ ಕೋಪದಿಂದ 'ಸರೂ .. ಚೀಪ್ ಆಗಿ ಪ್ಲಾನ್ ಮಾಡೋದನ್ನು ಬಿಡು' ಎಂದಾಗ ಸರು ದುರ್ಗಾ ಬಳಿ ಗುಟ್ಟಾಗಿ ಪೂಜೆ ತಪ್ಪಿಸಲು ನನ್ನ ಕೈಯಿಂದ ಏನೆಲ್ಲ ಮಾಡಲು ಸಾಧ್ಯವೋ ಅದೆಲ್ಲ ಮಾಡುತ್ತಾ ಇದ್ದೇನೆ ನೀವು ಆರಾಮವಾಗಿ ಇರಿ ಎಂದು ಹೇಳುತ್ತಾಳೆ. ಈ ಸಮಯಕ್ಕೆ ಏಜೆ ಪಿಎ ಅಜ್ಜಿ ಪೂಜೆಗೆ ಸಮಯ ಆಗುತ್ತಾ ಬಂದಿದೆ. ಇನ್ನೂ ಎರಡೇ ನಿಮಿಷ ಇರುವುದು ಕೂಡ. ಬಾಸ್ ಬಂದಿಲ್ಲ.ಹಾಗೆಯೇ ಮೇಡಂ ಕೂಡ ಬಂದಿಲ್ಲ ಎಂದಾಗ ಕೋಪಗೊಂಡ ಅಜ್ಜಿ ಏನು ನಡೆಯುತ್ತಾ ಇದೆ ಇಲ್ಲಿ ಯಾರಿಗೂ ಪೂಜೆ ಮಾಡುವುದು ಇಷ್ಟ ಇಲ್ಲವೇ, ನಾನೇ ನೋಡಿಕೊಂಡು ಬರುತ್ತೇನೆ ಎಂದು ಹೇಳಿ ಎದ್ದೇಳುತ್ತಾಳೆ. ಈ ವೇಳೆ ದುರ್ಗಾ ಅಜ್ಜಿಯನ್ನು ತಡೆಯುತ್ತಾಳೆ.
ಆಗ ಏಜೆ ಕೂಡ ಬರುತ್ತಾರೆ. ಏಜೆಯನ್ನ ಕಂಡು ಅಜ್ಜಿಗೆ ಖುಷಿ ಆಗುತ್ತದೆ ಹಾಗೆಯೇ ಲೀಲಾಳನ್ನೂ ಕಂಡು ಶಾಕ್ ಕೂಡ ಆಗುತ್ತದೆ. ಬಳಿಕ ಮೆತ್ತಗೆ ದುರ್ಗಾ ಸರುಗೆ ನೀವು ಮಾಡುವ ಚಿಲ್ಲರೆ ಪ್ಲಾನ್ ನಿಂದಾ ನಿಮಗೆ ನೋವು ಜಾಸ್ತಿ ಆಗುವುದು, ಅವರು ಸೋಲಲ್ಲ, ಅದಕ್ಕೆ ಹೇಳುವುದು ಹೊಡೆದರೆ ಆನೆಯನ್ನೆ ಹೊಡೆಯಬೇಕು ಎಂದು ಹೇಳಿದಾಗ ಸರುಗೆ ಏನು ಹೇಳಬೇಕು ಎಂದು ತಿಳಿಯದೇ ಹಣೆ ಚಚ್ಚಿಕೊಳ್ಳುತ್ತ ಇರುತ್ತಾಳೆ. ಈ ವೇಳೆ ಅಲ್ಲಿಗೆ ಬಂದ ಅಜ್ಜಿ ಬಹಳ ಖುಷಿ ಪಡುತ್ತಾರೆ..

ನಿರ್ವಿಘ್ನವಾಗಿ ಪೂಜೆ ಮಾಡಿದ ಏಜೆ, ಲೀಲಾ
ನಿರ್ವಿಘ್ನವಾಗಿ ಪೂಜೆ ಮಾಡುತ್ತಾರೆ. ಪೂಜೆ ಆದ ಬಳಿಕ ಪೂಜಾರಿ ನಿಮ್ಮದು ಏನಾದರು ಸಂಕಲ್ಪ ಇದ್ದರೆ ಅದನ್ನು ಬೇಡಿಕೊಳ್ಳಿ ಎಂದಾಗ ಲೀಲಾ ಮನದಲ್ಲಿ ಜೊತೆಯಲ್ಲಿ ಮಾಣಿಕ್ಯ ಇದ್ದಾಗ ನನಗೆ ತಿಳಿಯಲೇ ಇಲ್ಲ, ಈಗಲಾದರು ನನಗೆ ಅದು ಗೊತ್ತಾಯಿತು ಅಲ್ವಾ, ಪ್ರೀತಿ ಹೇಳಿಕೊಂಡ ಮೇಲೆ ಏಜೆ ನನ್ನ ಹೆಂಡತಿ ಆಗಿ ಒಪ್ಪಿಕೊಳ್ಳಬೇಕು, ಹಾಗೆ ಮಾಡು ಪ್ಲೀಸ್ ಎಂದು ದೇವರ ಬಳಿ ಕೇಳಿಕೊಳ್ಳುತ್ತಾಳೆ. ಅಜ್ಜಿ ಕೋರಿಕೆ ಇದೇ ಆಗಿರುತ್ತದೆ. ಆದರೆ ಏಜೆ ಮಾತ್ರ ಜೈಲಿಗೆ ಹೋಗಲು ಯಾರು ಕಾರಣ ಅವರಿಗೆ ನಾನು ಶಿಕ್ಷೆ ಕೂಡಲೇಬೇಕು ಎಂದು ಯೋಚಿಸುತ್ತಾ ಇರುತ್ತಾನೆ. ಪೂಜೆ ಎಲ್ಲಾ ಮುಗಿದ ಬಳಿಕ ಅಂತರ ಬಳಿ ಬಂದ ಲೀಲಾ ತನ್ನ ಖುಷಿ ವ್ಯಕ್ತ ಪಡಿಸುತ್ತಾ ಇರುತ್ತಾಳೆ.

ಅಂತರ ಬಳಿ ಮನದ ಮಾತನ್ನು ಹಂಚಿಕೊಂಡ ಲೀಲಾ
ಬಳಿಕ ಅಂತರ ಬಳಿ ನಿಮ್ಮ ಸ್ಥಾನವನ್ನು ನಾನು ಮುಂದುವರೆಸಿಕೊಂಡು ಹೋಗುತ್ತೇನೋ ಅಥವಾ ಇಲ್ಲವೋ ಎಂಬುವುದು ಅನುಮಾನ ಆಗಿ ಬಿಟ್ಟಿದೆ, ನನಗೆ ಅಂತಹ ಯೋಗ್ಯತೆ ಇದೆಯಾ ಎಂದು ಅಂತರ ಫೋಟೋ ಮುಂದೆ ನಿಂತು ಲೀಲಾ ಹೇಳುತ್ತ ಇರುತ್ತಾಳೆ. ಅಜ್ಜಿ ಕೊಟ್ಟ ಸೀರೆ ಹಾಳಾಗಿ ಹೋಯಿತು ಎಂದು ಬೇಸರ ಪಟ್ಟುಕೊಂಡ ವೇಳೆ ನಿಮ್ಮ ಸೀರೆ ಕೊಡಲು ಏಜೆ ಮನದಲ್ಲಿ ಇಂತಹ ಭಾವನೆ ಬರಿಸಲು ಕಾರಣ ನೀವೇ ಅನ್ನಿಸುತ್ತೆ ಎನ್ನುತ್ತಾಳೆ.

ಏಜೆಯನ್ನೂ ಬದಲಾಯಿಸಲು ಪಣ ತೊಟ್ಟ ಲೀಲಾ
ಮಾತು ಮುಂದುವರಿಸುವ ಲೀಲಾ ನಾನು ಏಜೆಯನ್ನು ಅಭಿರಾಮ್ ಜಯಶಂಕರ್ ಆಗಿ ಬದಲು ಮಾಡಿಯೇ ಮಾಡುತ್ತೇನೆ. ಇದನ್ನೆಲ್ಲ ನಾನು ನಿಮಗೆ ಹೇಳಬೇಕು ಅನ್ನಿಸಿತು ಅದಕ್ಕೆ ಹೇಳುತ್ತ ಇದ್ದೇನೆ ಎಂದು ಮನ ಬಿಚ್ಚಿ ಹೇಳುತ್ತ ಇರುತ್ತಾಳೆ. ಇನ್ನು ಖುಷಿಯಲ್ಲಿ ಲೀಲಾ ಅತ್ತಿಂದಿತ್ತ ಒಡಾಡಬೇಕಾದರೆ ದುರ್ಗಾ ಸಿಗುತ್ತಾಳೆ.

ಲೀಲಾನನ್ನು ನೋಡಿ ಕುಪಿತಗೊಂಡ ದುರ್ಗಾ
ದುರ್ಗಾ ಅವರೇ ನಾನು ಏಜೆಗೆ ಅವರ ಹುಟ್ಟು ಹಬ್ಬದ ದಿನ ಒಳ್ಳೆಯ ಸರ್ಪ್ರೈಸ್ ಕೊಡಬೇಕು ಅಂದುಕೊಂಡು ಇದ್ದೇನೆ, ಅದಕ್ಕಾಗಿ ಒಂದು ದೊಡ್ಡ ಪ್ಲಾನ್ ಕೂಡ ಮಾಡಿದ್ದೇನೆ ಎಂದು ಹೇಳಿದಾಗ ದುರ್ಗಾ ಕ್ಯೂರಿಯಾಸಿಟಿಯಿಂದ ಏನು ಪ್ಲಾನ್ ಮಾಡಿದ್ದೀಯಾ ಲೀಲಾ ಎಂದು ಕೇಳುತ್ತಾಳೆ. ಇದನ್ನು ಕೇಳಿದ ಲೀಲಾ ನಾಚಿಕೊಳ್ಳುತ್ತ ಇರುತ್ತಾಳೆ. ಲೀಲಾ ನಾಚಿಕೊಳ್ಳುವುದನ್ನು ನೋಡಿದ ದುರ್ಗಾಗೆ ಬಹಳ ಕೋಪ ಉಕ್ಕಿ ಬರುತ್ತದೆ. ಈ ವೇಳೆ ದುರ್ಗಾ ಸರಿ ಬಿಡು ಎಂದು ಹೇಳಿ ಅಲ್ಲಿಂದ ಹೊರಡಲು ಅನುವಾದಗ ಲೀಲಾ ಅವಳನ್ನು ತಡೆದು ನಿಲ್ಲಿಸಿ ನಾನು ಬರ್ತಡೇ ದಿನ ನಾನು ಏಜೇಗೆ ಪ್ರಪೋಸ್ ಮಾಡಬೇಕು ಅಂದುಕೊಂಡು ಇದ್ದೇನೆ ಎಂದಾಗ ದುರ್ಗಾಗೆ ಬಹಳ ಖುಷಿ ಆಗುತ್ತದೆ.