Hitler Kalyana: ಏಜೆಗೆ ಪ್ರಪೋಸ್ ಮಾಡಿಯೇ ಬಿಟ್ಟ ಲೀಲಾ?
ಹಿಟ್ಲರ್ ಕಲ್ಯಾಣ ಧಾರಾವಾಹಿ ಅದ್ಭುತವಾಗಿ ಮೂಡಿ ಬರುತ್ತಿದ್ದು ನೋಡುಗರ ಮನ ಸೆಳೆಯುವ ಹಾಗೆ ಮಾಡುತ್ತಿದೆ. ಇದೀಗ ವಿಕ್ರಂ ಹಾಗೂ ಛಾಯಾ ಇಬ್ಬರ ಆಟಕ್ಕೆ ತೆರೆಬಿದ್ದಿದೆ. ರೇವತಿಯನ್ನು ಮದುವೆ ಆಗಲು ಬಂದಾತ ಕುಟುಂಬ ಸಮೇತವಾಗಿ ಬಂದು ಏಜೆ ಕಾಲಿಗೆ ಬಿದ್ದು ಕಾಪಾಡಿ ಎಂದು ಹೇಳುತ್ತಾನೆ. ಇನ್ನು ಏಜೆ ಮಾತ್ರ ಕೋಪದಿಂದ ಸುಮ್ಮನೆ ಇರುತ್ತಾನೆ. ಬಳಿಕ ಜೈಲು ಪಾಲಾದದ್ದಕ್ಕೆ ನೇರವಾಗಿ ಇಬ್ಬರು ಕಾರಣ ಅವರ ಹೆಸರು ನನಗೆ ಮಾತ್ರ ತಿಳಿದಿದೆ ನೀವು ನಮಗೆ ರಕ್ಷಣೆ ನೀಡುವುದು ಆದರೆ ನಾವು ನಿಮಗೆ ಯಾರು ಎಂದು ಹೇಳುತ್ತೇವೆ ಎಂದು ಹೇಳುತ್ತಾರೆ.. ಇದನ್ನು ಕೇಳಿದ ಏಜೆ ಸರಿ ರಕ್ಷಣೆ ಕೊಡುತ್ತೇನೆ ಎಂದು ಹೇಳುತ್ತಾರೆ..
ಆ ವೇಳೆ ಆ ಗಂಡ ಹೆಂಡತಿಯರು ಇಬ್ಬರು ಇದಕ್ಕೆಲ್ಲ ಛಾಯಾ ಹಾಗೂ ವಿಕ್ರಂ ಕಾರಣ ಎಂದು ಹೇಳುತ್ತಾರೆ. ಇದನ್ನು ಕೇಳಿದ ಏಜೇಗೆ ಶಾಕ್ ಆಗುತ್ತದೆ. ಬಳಿಕ ಮನೆಗೆ ಬಂದ ಏಜೇ ನೇರವಾಗಿ ಛಾಯ ಇರುವ ಬಳಿ ಬರುತ್ತಾನೆ.. ವಿಕ್ರಂ ಬಗ್ಗೆಯೂ ವಿಚಾರಣೆ ಮಾಡುತ್ತಾನೆ ಈ ವೇಳೆ ಛಾಯಾ ಕೊಂಚ ಗಾಬರಿಯಿಂದ ಎಲ್ಲದಕ್ಕೂ ಸರಿಯಾದ ಉತ್ತರ ಕೊಡದೆ ಏನು ಹೇಳಬೇಕು ಎಂದು ತಿಳಿಯದೇ ಸುಮ್ಮನೆ ಆಗುತ್ತಾಳೆ . ಈ ವೇಳೆ ಏಜೇಗೆ ಕಾಲ್ ಪಿಎ ಕರೆ ಬರುತ್ತದೆ. ಏಜೇ ನಿಮ್ಮನ್ನು ಜೈಲಿಗೆ ಕಳುಹಿಸಿದ್ದು ಬೇರೆ ಯಾರೂ ಅಲ್ಲ ಅದು ಛಾಯಾ ಹಾಗೂ ವಿಕ್ರಂ ಎಂದು ಹೇಳಿದಾಗ ಏಜೇ ಅನುಮಾನ ನಿಜ ಆಗುತ್ತದೆ
ಏಜೇ ಕರೆಯಲ್ಲಿ ಮಾತನಾಡುತ್ತಾ ಇರುವಾಗ ಛಾಯ ಅಲ್ಲಿಂದ ಎಸ್ಕೇಪ್ ಆಗಲು ನೋಡುತ್ತಾಳೆ. ಕರೆ ಕಟ್ ಮಾಡಿ ಛಾಯಾ ಬಳಿ ಮಾತನಾಡಬೇಕು ತಂದು ಏಜೇ ವೇಗವಾಗಿ ಬರುತ್ತಾನೆ. ಆದರೆ ಮಧ್ಯ ದುರ್ಗಾ ಏಜೆಯನ್ನು ತಡೆದು ನಿಲ್ಲಿಸಿ ಏಜೇ ಬಳಿ ಎಲ್ಲಾ ವಿಚಾರ ಹೇಳುತ್ತಾಳೆ. ಜೈಲು ಪಾಲಾಗಲು ವಿಕ್ರಂ ಹಾಗೂ ಛಾಯಾ ಕಾರಣ ಆದರೆ ಅವರ ಹಿಂದಿನ ಸೂತ್ರ ಧಾರಿ ಲೀಲಾ ಎಂದು ಹೇಳಿದಾಗ ಏಜೇಗೆ ಇನ್ನೂ ಶಾಕ್ ಆಗುತ್ತದೆ.

ಲೀಲಾ ಬಗ್ಗೆ ಆರೋಪಿಸಿದ ದುರ್ಗಾ
ಇನ್ನು ಛಾಯಾ ಓಡಿಕೊಂಡು ಮನೆಯಿಂದ ಹೊರಗೆ ಹೋಗಬೇಕಾದರೆ ಲೀಲಾ ಸಿಗುತ್ತಾಳೆ.. ಆಕೆ ಅವಳದ್ದೇ ಕಲ್ಪನೆಯಲ್ಲಿ ತೇಲಾಡುತ್ತ ಇರುತ್ತಾಳೆ. ಏಜೆಗೆ ಪ್ರಪೋಸ್ ಮಾಡಬೇಕು ಎಂದೆಲ್ಲ ಎಂದುಕೊಂಡದ್ದನ್ನು ಛಾಯಾ ಬಳಿ ಹೇಳುತ್ತಾಳೆ. ಏಜೇ ಹುಟ್ಟುಹಬ್ಬದ ದಿನ ಏಜೇಗೆ ಪ್ರಪೋಸ್ ಮಾಡುತ್ತೇನೆ, ಅವರ ಜೊತೆ ಜೀವನ ಹಂಚಿಕೊಂಡು ಬಾಳಬೇಕು ಎಂದು ಅನ್ನಿಸಿದೆ ಎಂದೆಲ್ಲ ಹೇಳುತ್ತ ಇರುವಾಗ ಛಾಯಾ ಕೊಂಚ ನಿಟ್ಟುಸಿರು ಬಿಡುತ್ತಾಳೆ. ಲೀಲಾ ಗೆ ಇನ್ನೂ ವಿಚಾರ ತಿಳಿದಿಲ್ಲ ಎಂದುಕೊಳ್ಳುತ್ತಾಳೆ.

ಏಜೇ ಮನೆಯಿಂದ ಎಸ್ಕೇಪ್ ಆದ ಛಾಯಾ
ಬಳಿಕ ಅಲ್ಲಿಂದ ಎಸ್ಕೇಪ್ ಆಗುತ್ತಿರುವ ವೇಳೆ ವಿಕ್ರಂ ಕರೆ ಮಾಡಿ ಹೇಗಾದರೂ ತಪ್ಪಿಸಿಕೊ ಛಾಯಾ ಏಜೆ ಕೈಗೆ ಸಿಕ್ಕಿ ಹಾಕಿಕೊಳ್ಳಬೇಡ, ಅವರಿಗೆ ನಿಜ ವಿಚಾರ ತಿಳಿಯಿತು ಎಂದೆಲ್ಲ ಹೇಳುತ್ತಾನೆ.. ಇದನ್ನು ಕೇಳಿದ ಲೀಲಾ ಅದಕ್ಕ ಏಜೇ ನನ್ನ ಬಳಿ ವಿಚಾರಣೆ ನಡೆಸುತ್ತಾ ಇದ್ದಿದ್ದು ಎಂದು ಹೇಳುತ್ತಾಳೆ. ಬಳಿಕ ಅಲ್ಲಿಂದ ಹೇಗೋ ಹೊರಗೆ ಹೋಗುತ್ತಾಳೆ . ಇನ್ನು ದುರ್ಗಾ ಏಜೇಗೆ ಬಾಯಿ ಮಾತಿನಲ್ಲಿ ಹೇಳಿದರೆ ಅದನ್ನು ನಂಬುತ್ತಿರಲಿಲ್ಲ. ಆದರೆ ಲೀಲಾ ವಿಕ್ರಂ ಬಳಿ ಮಾತನಾಡುತ್ತಾ ಇರುವ ವಿಡಿಯೋ ಹಾಗೆಯೇ ಗೋಡೌನ್‌ಗೆ ಹೋಗುತ್ತಿರುವ ವಿಡಿಯೋ ಇದೆಲ್ಲವನ್ನೂ ಏಜೇಗೆ ತೋರಿಸುತ್ತಾಳೆ. ಇದನ್ನು ನೋಡಿದ ಏಜೇಗೆ ಶಾಕ್ ಆಗುತ್ತದೆ.

ಖುಷಿಯಾಗಿ ಇರುವ ಲೀಲಾ
ಅಜ್ಜಿ ಹಾಗೂ ಲೀಲಾ ಇಬ್ಬರು ಬಹಳ ಖುಷಿ ಆಗಿ ಇರುತ್ತಾರೆ. ಅಜ್ಜಿ ಬಳಿ ಏಜೇಗೆ ಬರ್ತ್ ಡೇ ದಿನ ಲವ್ ಪ್ರಪೋಸ್ ಮಾಡುವುದಾಗಿ ಅಜ್ಜಿ ಬಳಿ ಹೇಳುತ್ತಾಳೆ ಲೀಲಾ . ಇನ್ನು ಹೇಗೆ ಪ್ರಪೋಸ್ ಮಾಡುವುದು ಎಂಬುವುದನ್ನು ಪ್ರಾಕ್ಟೀಸ್ ಮಾಡುತ್ತಾ ಇರುತ್ತಾಳೆ. ಏಜೇ ಹುಟ್ಟಿದ ದಿನ ಬಂದೇ ಬಿಟ್ಟಿತು, ಲೀಲಾಳ ಪ್ರೇಮ ಪತ್ರ ರೆಡಿ ಆಗಿ ಬಿಟ್ಟಿತು. ಕೋಪದಲ್ಲಿ ಸರ್ಪ್ರೈಸ್ ಆಗಿ ಬರ್ತ್ ಡೇ ಪಾರ್ಟಗೆ ಏಜೇ ಬರುತ್ತಾನೆ. ಲೀಲಾ ಎಲ್ಲರ ಮುಂದೆ ಪ್ರೇಮ ನಿವೇದನೆಯನ್ನು ಮಾಡಿಕೊಳ್ಳುತ್ತಾಳೆ. ಆದರೆ ಏಜೇ ಪ್ರತಿಕ್ರಿಯೆ ಎನು ಎಂಬುವುದನ್ನು ಕಾದು ನೋಡಬೇಕಿದೆ.


Click it and Unblock the Notifications











