twitter
    For Quick Alerts
    ALLOW NOTIFICATIONS  
    For Daily Alerts

    ಹಿಟ್ಲರ್ ಕಲ್ಯಾಣ: ಎಜೆಯೊಳಗೊಬ್ಬ ಮಗನನ್ನು ಕಂಡಾಗ ಲೀಲಾ ಭಾವುಕ!

    By ಎಸ್ ಸುಮಂತ್
    |

    ಈ ಹಿಂದೆಲ್ಲ ಒಂದು ಮನೆಗೆ ಗಂಡು ಮಗುವಿನ ಜನನವಾಗಲೇಬೇಕೆಂಬ ನಿಯಮವಿತ್ತು. ನಮ್ಮ ಅಜ್ಜ ಅಜ್ಜಿ ಕಾಲದಲ್ಲಿ ಎಷ್ಟು ಜನ ಹೆಣ್ಣು ಮಕ್ಕಳೇ ಹುಟ್ಟಿದರು ಗಂಡು ಮಗುವಿಗಾಗಿ ಕಾಯುತ್ತಿದ್ದರು. ಆದರೆ ಕಾಲ ಬದಲಾಗಿದೆ. ಹೆಣ್ಣಾಗಲಿ, ಗಂಡಾಗಲಿ ಒಂದೋ ಎರಡೋ ಸಾಕು ಎಂಬ ಕಾಲವಿದು.

    ಕೆಲವೊಂದು ಶಾಸ್ತ್ರ ಮಾಡುವುದಕ್ಕೆ, ಅಪ್ಪ ಅಮ್ಮನನ್ನು ಸಾಕಿ ಸಲಹುವುದಕ್ಕೆ, ಆಸ್ತಿ ಪಾಸ್ತಿಗೆ ವಾರಸುದಾರನಾಗಲು ಗಂಡು ಮಗು ಬೇಕು ಎನ್ನುತ್ತಿದ್ದರು. ಈಗ ಹೆಣ್ಣು‌ಮಕ್ಕಳೇ ಎಲ್ಲಾ ಜವಾಬ್ದಾರಿಯನ್ನು ಹೊರುವ ಸಾಮರ್ಥ್ಯ ಇರುವಾಗ ಯಾವ ಮಗುವಾದರೇನು ಎಂಬ ಭಾವನೆ ಇದೆ. ಅದರ ಜೊತೆಗೆ ಗಂಡು ಮಗನಿಲ್ಲದೆ ಹೋದರೇನು ಮನೆಗೆ ಬರುವ ಅಳಿಯನೇ ಮಗನಿದ್ದಂತೆ ಎಂದು ಭಾವಿಸುತ್ತಾರೆ. ಇದೆಲ್ಲಾ ಹೇಳುವುದಕ್ಕೆ ಕಾರಣ ಎಜೆ ನಡೆದುಕೊಂಡ ರೀತಿ.

    ಲೀಲಾಗೆ ತನಗಾಗಿ ಏನನ್ನು ಬೇಡುವ ಬುದ್ದಿ ಇಲ್ಲ. ಯಡವಟ್ಟೇ ಆದರೂ ಸದಾ ಎಲ್ಲರಿಗೂ ಒಳ್ಳೆಯದ್ದನ್ನೇ ಬಯಸುತ್ತಾಳೆ. ಇದೀಗ ಗಂಡನ ಮನೆಯ ಸರದಿಯ ಬಳಿಕ ಅಮ್ಮನ ಮನೆಗೆ ಒಳ್ಳೆಯದಾಗಲಿ ಎಂದು ದೇವರ ಬಳಿ ಮನವಿ ಇಡುತ್ತಿದ್ದಾಳೆ. ತವರು ಮನೆಗೆ ಒಳ್ಳೆಯದ್ದಾಗಬೇಕೆಂದರೆ ಮಗ ಮಾಡವೇಕಾದ ವ್ರತವೊಂದಿದೆ. ಆದರೆ ಮಗನಿಲ್ಲದ ಮನೆಗೆ ಅಳಿಯನೇ ಮಗನಾಗಬಹುದು ಎಂಬುವುದನ್ನು ಎಜೆ ಪ್ರೂವ್ ಮಾಡಿದ್ದಾರೆ.

    ಎಜೆ ಒಳ್ಳೆಯತನಕ್ಕೆ ಲೀಲಾ ಫಿದಾ

    ಎಜೆ ಒಳ್ಳೆಯತನಕ್ಕೆ ಲೀಲಾ ಫಿದಾ

    ಎಜೆ ಅಂದರೆ ಪರ್ಫೆಕ್ಟ್. ಅನ್ಯಾಯ ಆದರೆ ಅದನ್ನು ಸಹಿಸುವುದಿಲ್ಲ. ಎಜೆ ಕಂಡರೆ ಮನೆ ಮಂದಿಯೆಲ್ಲಾ ಭಯ ಪಡುತ್ತಾರೆ. ಅದರಂತೆ ಲೀಲಾ ಕೂಡ. ಏನನ್ನು ಎಜೆ ಮುಂದೆ ಸಲೀಸಾಗಿ ಹೇಳುವುದೇ ಇಲ್ಲ. ಆದರೂ ಎಜೆ ಅದನ್ನು ಅರ್ಥ ಮಾಡಿಕೊಂಡು ಮಾಡಿರುವ ಕೆಲಸದಿಂದ ಈಗ ಲೀಲಾ ನೋವಲ್ಲೂ ಹೆಮ್ಮೆ ಪಡುತ್ತಿದ್ದಾಳೆ. ಎಜೆ ಬಗ್ಗೆ ನಾನೇ ತಪ್ಪಾಗಿ ತಿಳಿದುಬಿಟ್ಟೆನಾ ಎಂದು ಬೇಸರ ಮಾಡಿಕೊಳ್ಳುತ್ತಿದ್ದಾಳೆ.

    ಬಿಸಿ ಪಾತ್ರೆಯಲ್ಲಿ ಕೈ ಹಾಕಿದ ಎಜೆ

    ಬಿಸಿ ಪಾತ್ರೆಯಲ್ಲಿ ಕೈ ಹಾಕಿದ ಎಜೆ

    ಲೀಲಾಳ ತವರು ಮನೆಗೆ ಒಳ್ಳೆಯದಾಗಬೇಕೆಂದರೆ ಮಗನಾಗಿ ಒಂದು ವ್ರತ ಮಾಡಬೇಕಾಗುತ್ತದೆ. ಅದು ಹನ್ನೆರೆಡು ವರ್ಷಕ್ಕೊಮ್ಮೆ ಬರುವ ವ್ರತ. ಮಗ ಇಲ್ಲದ ಮನೆಯಲ್ಲಿ ಅಳಿಯ ಮಾಡಬಹುದು. ಇದನ್ನು ಕೇಳಿಸಿಕೊಂಡ ಎಜೆ ಲೀಲಾಳ ಮನೆಯವರಿಗೆ ಒಳ್ಳೆಯದಾಗಲಿ ಎಂದು ವ್ರತ ಮಾಡಿದ್ದಾರೆ. ಬಿಸಿ ಪಾತ್ರೆಯಿಂದ ಅನ್ನ ತೆಗೆದು ಬಾಣಲೆಯಲ್ಲಿ ಹಾಕಬೇಕು. ಪೂಜೆಯಾದ ಮೇಲೆ ಎಜೆ ಭಕ್ತಿಯಿಂದಲೇ ಇದನ್ನು ಮಾಡಿದ್ದಾರೆ. ಲೀಲಾಳ ಮನೆಯವರ ಪಾಲಿಗೆ ಅಳಿಯನು ನಾನೇ ಮಗನು ನಾನೇ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

    ಎಜೆ ಮೇಲಿನ ಮನಸ್ತಾಪ ಕಡಿಮೆಯಾಗುತ್ತಾ?

    ಎಜೆ ಮೇಲಿನ ಮನಸ್ತಾಪ ಕಡಿಮೆಯಾಗುತ್ತಾ?

    ಲೀಲಾಗೆ ಎಜೆ ಎಂದರೆ ಏನು ಎಂಬುದು ಇನ್ನು ಅರ್ಥವಾಗಬೇಕಿದೆ. ಎಜೆ ಬಿಸಿನೆಸ್, ಶಿಸ್ತಿನ ವಿಚಾರದಲ್ಲಿ ಎಷ್ಟು ಪರ್ಫೆಕ್ಟ್ ಮತ್ತು ಶ್ರದ್ಧೆ ಇದೆಯೋ ಅವರ ಮುಖದಲ್ಲಿ ಮಗುವಿನ ಮುಗ್ಧತೆಯೂ ಕಾಣುತ್ತದೆ. ಎಜೆಯನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ಲೀಲಾ ಮೊದಲಿನಿಂದಲೂ ಎಡವುತ್ತಿದ್ದಾಳೆ. ಈಗ ನನ್ನ ಮನೆಯವರಿಗಾಗಿ ಎಜೆ ವ್ರತ ಮಾಡುವುದು ಎಂದರೆ ನಂಬಲು ಅಸಾಧ್ಯ. ಅದು ಸಾಧ್ಯವೂ ಇಲ್ಲ ಎಂದು ನಂಬಿದ್ದಳು. ಆದರೆ ಇದನ್ನು ಕೇಳಿಸಿಕೊಂಡ ಎಜೆ ಲೀಲಾಳ ಆಸೆ ಪೂರೈಸಿದ್ದಾರೆ. ಲೀಲಾ ಎಷ್ಟೇ ಬೇಡವೆಂದರು ಅಷ್ಟು ಕಷ್ಟದ ವ್ರತವನ್ನು ಮಾಡಿ ಮುಗಿಸಿದ್ದಾರೆ. ಇದನ್ನು ಕಂಡ ಲೀಲಾಗೆ ಒಮ್ಮೆಲೆ ಶಾಕ್ ಆಗಿದೆ.

    ಎಜೆ ಮಾತಿಗೆ ಲೀಲಾ ಭಾವುಕ

    ವ್ರತ ಎಲ್ಲಾ ಮುಗಿದ ಮೇಲೆ ಲೀಲಾಳ ಪ್ರಶ್ನೆಗೆ ಎಜೆ ಉತ್ತರ ಎಲ್ಲರನ್ನು ಒಂದು ಕ್ಷಣ ಸಂತಸಕ್ಕೆ ದೂಡಿತ್ತು. ಬೇಕಾಗಿಯೋ ಬೇಡದೆಯೋ ನೀನು ನಮ್ಮ ಮನೆ ಸೊಸೆಯಾಗಿ ಬಂದಿದ್ದೀಯ. ನನ್ನಮ್ಮನಿಗೆ ಮಗಳಾಗಿದ್ದೀಯ. ನಾನು ನಿಮ್ಮ ಮನೆಗೆ ಅಳಿಯನಾಗಿದ್ದೀನಿ. ಈಗ ಮಗನಾಗಿ ಈ ವ್ರತ ಪೂರೈಸಿದ್ದೀನಿ. ಇದರಲ್ಲಿ ಬೇರೆ ಏನು ಇಲ್ಲ ಜವಾಬ್ದಾರಿಗಳಷ್ಟೇ ಎಂದು ಹೇಳಿದಾಗ ಲೀಲಾ ಭಾವುಕಳಾಗಿದ್ದಾಳೆ.

    English summary
    Zee Kannada Serial Hitler Kalyana Written Update On July 15th Episode. Here Is The Detail.
    Saturday, July 16, 2022, 19:43
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X