ಹಿಟ್ಲರ್ ಕಲ್ಯಾಣ: ದೇವ್ ಅಟ್ಟಹಾಸ ಮಟ್ಟ ಹಾಕುವುದಕ್ಕೆ ಎಜೆ ಫ್ಲ್ಯಾನ್?

By ಎಸ್ ಸುಮಂತ್

ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ದೇವ್ ಅಟ್ಟಹಾಸ ಮಿತಿಮೀರುತ್ತಿದೆ. ಲೀಲಾಳಿಗೆ ಇದೆ ಸಂಕಟವಾಗಿದೆ. ಏನೆ ಮಾಡಿದರೂ ದೇವ್ ನ ಅಪರಾಧವನ್ನು ಪ್ರೂವ್ ಮಾಡುವುದಕ್ಕೆ ಆಗುತ್ತಿಲ್ಲ.

ದೇವ್, ಲೀಲಾಳ ಎಡವಟ್ಟನ್ನು ಚೆನ್ನಾಗಿಯೇ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾನೆ. ಲೀಲಾಳ ಮಾತನ್ನು ಎಜೆ ನಂಬುತ್ತಿಲ್ಲ ಎಂಬ ಕಾರಣಕ್ಕೆ ದೇವ್ ಇದನ್ನೇ ಬಂಡವಾಳ ಮಾಡಿಕೊಂಡಿದ್ದಾನೆ. ಆದರೆ ಲೀಲಾ ಮಾತನ್ನು ಎಜೆ ಯಾಕೆ ನಂಬುತ್ತಿಲ್ಲ, ಏನಾದರೂ ಫ್ಲ್ಯಾನ್ ಮಾಡುತ್ತಿದ್ದಾರಾ ಎಂಬ ಅನುಮಾನ ನೋಡುಗರಿಗೆ ಶುರುವಾಗಿದೆ.

ದೇವ್ ಇದೀಗ ಧೈರ್ಯವಾಗಿ ಲೀಲಾಳ ಬಳಿ ನಾನು ಮಾಡುತ್ತಿರುವುದೆಲ್ಲಾ ನಾಟಕ ಎಂದೇ ಹೇಳಿದ್ದಾನೆ. ನಾನು ಪವಿತ್ರಾಳನ್ನು ಪ್ರೀತಿಸುತ್ತಿಲ್ಲ. ನಾನು ಕೈ ಕೋಯ್ದುಕೊಂಡು ಮಾಡಿದ್ದೆಲ್ಲಾ ನಾಟಕ, ಇದೆಲ್ಲವನ್ನು ನಿನ್ನೊಬ್ಬಳ ಬಳಿ ಮಾತ್ರ ಹೇಳುತ್ತಿದ್ದೇನೆ. ಯಾಕೆಂದ್ರೆ ನಿನ್ನಿಂದ ಏನು ಮಾಡುವುದಕ್ಕೆ ಆಗುವುದಿಲ್ಲ ಅನ್ನೋದಾ!

ಲೀಲಾಳ ಮಾತು ನಂಬುತ್ತಿಲ್ಲ ಎಜೆ

ಲೀಲಾಳ ಮಾತು ನಂಬುತ್ತಿಲ್ಲ ಎಜೆ

ದೇವ್ ಎಲ್ಲಾ ಸತ್ಯವನ್ನು ಲೀಲಾ ಮುಂದೆ ಒಪ್ಪಿಕೊಂಡಾಗಿದೆ. ಅದೇ ಭರದಲ್ಲಿ ಎಲ್ಲದನ್ನು ಎಜೆ ಹತ್ತಿರ ಹೇಳಲೇಬೇಕೆಂದು ಓಡಿ ಬಂದಿದ್ದಾಳೆ. ಆದರೆ ಅದಕ್ಕೂ ಮುನ್ನ ದೇವ್ ಎಜೆ ಮುಂದೆ ಹಾಜರಾಗಿದ್ದಾನೆ. ಲೀಲಾ ಯಾವ ರೀತಿ ಹೇಳಬೇಕು ಎಂದು ಬಂದಿದ್ದಳೋ ಅದೇ ರೀತಿ ಲೀಲಾ ಕೂಡ ಹೇಳಿದ್ದಾಳೆ. ಇದು ಎಜೆಗೆ ನಂಬುವುದಕ್ಕೆ ಸಾಧ್ಯವಾಗಲಿಲ್ಲ. ಲೀಲಾಳಿಗೆ ಬುದ್ದಿ ಮಾತು ಹೇಳಿ‌ ಕಳುಹಿಸಿದ್ದಾನೆ. ಇದು ದೇವ್ ಗೆ ಮತ್ತಷ್ಟು ಬಲ ಬಂದಂತಾಗಿದೆ.

ಎಜೆ ಬದಲಾವಣೆ ಲೀಲಾಳಿಗೆ ಸಂಕಟ

ಎಜೆ ಬದಲಾವಣೆ ಲೀಲಾಳಿಗೆ ಸಂಕಟ

ಎಜೆ ಎಂದರೆ ಪರ್ಫೆಕ್ಟ್. ಎಲ್ಲದರಲ್ಲೂ ಆ ಪರ್ಫೆಕ್ಟ್ ಅನ್ನೋದನ್ನೆ ನೋಡುತ್ತಾರೆ. ಇದು ಲೀಲಾಗೆ ಅಲ್ಲ ಎಲ್ಲರಿಗೂ ಗೊತ್ತಿರುವ ವಿಚಾರ ಆದರೆ ದೇವ್ ವಿಚಾರದಲ್ಲಿ ಈ ರೀತಿ ನಡೆದುಕೊಳ್ಳುವುದರಲ್ಲಿ ಲೀಲಾಗೆ ಗೊಂದಲವಾಗಿದೆ. ಇದನ್ನೇ ಲೀಲಾ ಪ್ರಶ್ನಿಸುತ್ತಿದ್ದಾಳೆ. ಎಜೆಯನ್ನು ಮೋಸ ಮಾಡುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ. ಎಜೆ ಯೋಚನೆ ಮಾಡುವ ರೀತಿಯೇ ಬೇರೆ ರೀತಿಯಾಗಿರುತ್ತದೆ. ಆದರೆ ಎಜೆ ಈ ರೀತಿ ನಡೆದುಕೊಳ್ಳುವುದಕ್ಕೆ ಹೇಗೆ ಸಾಧ್ಯ ಎಂಬುದು ಲೀಲಾಳ ಪ್ರಶ್ನೆಯಾಗಿದೆ.

ಕೌಸಲ್ಯ ಸತ್ಯ ಹೇಳಿದ್ದರೆ ದೇವ್ ಕಥೆ ಅಷ್ಟೇ

ಕೌಸಲ್ಯ ಸತ್ಯ ಹೇಳಿದ್ದರೆ ದೇವ್ ಕಥೆ ಅಷ್ಟೇ

ಚುಕ್ಕಿಯನ್ನು ಹೇಗಾದರೂ ಮಾಡಿ‌ ಮದುವೆಯಾಗಬೇಕೆಂದು ದೇವ್ ಸ್ಕೆಚ್ ಹಾಕುತ್ತಿದ್ದಾನೆ. ಇದು ಕೌಸಲ್ಯಗೆ ಗೊತ್ತಾದ ಮೇಲೆ ಮೊದಲು ಹೆಂಡತಿಯಿಂದ ಡಿವೋರ್ಸ್ ತೆಗೆದುಕೊಂಡು ಬಾ ಎಂದಿದ್ದಾಳೆ. ಚುಕ್ಕಿಯನ್ನು ಅದಕ್ಕೆ ಫಿಕ್ಸ್ ಮಾಡಿಸಿದ್ದಾಳೆ. ಇದೀಗ ಮಗಳನ್ನು ನೋಡಲು ಮನೆಗೆ ಬಂದಾಗ ದೇವ್ ಎದುರಿಗೇನೆ ಸಿಕ್ಕಿದ್ದಾನೆ. ಡಿವೋರ್ಸ್ ವಿಚಾರ ಏನಾಯ್ತು ಎಂದು ಜೋರಾಗಿ ಕೇಳುತ್ತಿದ್ದಾಗ ದೇವ್ ಹೆದರಿದ್ದಾನೆ. ಅದೇ ಕ್ಷಣಕ್ಕೆ ಎಜೆ ಬಂದಿದ್ದು, ಕೌಸಲ್ಯ ಇನ್ನು ಜೋರು ಮಾಡಿದ್ದಾಳೆ. ಇನ್ನೇನು ಸಿಕ್ಕಿಬೀಳಬೇಕು ಅಷ್ಟರಲ್ಲಿ ಪವಿತ್ರಾಳ ವಿಚಾರವನ್ನೆ ಹೇಳಿ ಅಲ್ಲಿಂದ ಎಜೆಯನ್ನು ಕಳುಹಿಸಿದ್ದಾನೆ.

ಎಜೆಯ ನಡವಳಿಕೆ ಹಿಂದೆ ಇದೆಯಾ ಫ್ಲ್ಯಾನ್

ಎಜೆಯ ನಡವಳಿಕೆ ಹಿಂದೆ ಇದೆಯಾ ಫ್ಲ್ಯಾನ್

ಎಜೆ ಯಾವುದನ್ನು ಅಷ್ಟು ಸುಲಭದಲ್ಲಿ ನಂಬುವುದಿಲ್ಲ. ಯಾರು ಏನೇ ಹೇಳಿದರೂ ಅದನ್ನು ಕೂಲಂಕುಷವಾಗಿ ಪರಿಶೀಲನೆ ಮಾಡಿ ಬಳಿಕ ನಂಬುತ್ತಾರೆ. ಆದರೆ ದೇವ್ ಮಾಡಿದ ಆತ್ಮಹತ್ಯೆ ನಾಟಕದಿಂದಾಗಿ ದೇವ್ ನ ಸಂಪೂರ್ಣವಾಗಿ ನಂಬುವುದಕ್ಕೆ ಶುರು ಮಾಡಿದ್ದಾರೆ. ಆದರೆ ಎಜೆ ಬೇರೆ ಏನಾದರೂ ಫ್ಯ್ಲಾನ್ ಮಾಡುತ್ತಿದ್ದಾರಾ ಎಂಬ ಅನುಮಾನ ಶುರುವಾಗಿದೆ. ಯಾಕೆಂದರೆ ಎಜೆ ಈ ಹಿಂದೆ ದೇವ್ ನ ವಿರುದ್ಧ ಸಾಕ್ಷಿಗಳನ್ನು ಕಲೆ ಹಾಕುವಾಗ ಫೇಲ್ ಆಗಿದ್ದಾನೆ. ಹೀಗಾಗಿ ಎಜೆ ಒಳ್ಳೆಯ ಫ್ಲ್ಯಾನ್ ಮಾಡಿರಬಹುದು ಎನ್ನಲಾಗಿದೆ. ದೇವ್ ಒಳ್ಳೆಯವನು ಎಂದು ನಂಬಿರುವಂತೆ ನಾಟಕವಾಡುತ್ತಿರಬಹುದಾ..? ನಾಟಕದ ಮೂಲಕವೇ ದೇವ್ ನನ್ನು ಕಟ್ಟಿ ಹಾಕಬಹುದಾ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ.

Recommended Video

ನಿರೂಪ್ ಬಂಡಾರಿ ನೀತ ಅಶೋಕ್ ಪ್ರಕಾರ ವಿಕ್ರಾಂತ್ ರೋಣ ಯಾಕೆ ನೋಡಬೇಕು *Interview

More from Filmibeat

English summary
Zee Kannada serial Hitler Kalyana Written Update on July 21Th Here is the detail about Leela fails in telling the truth.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X