ಹಿಟ್ಲರ್ ಕಲ್ಯಾಣ: ಲೀಲಾಳನ್ನ ಯಾಮಾರಿಸಲು ಆಗಲ್ಲ, ದೇವ್ ಆಸೆ ಈಡೇರಲ್ಲ!
'ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ ಕಳೆದ ಕೆಲವು ದಿನಗಳಿಂದ ದೇವ್ ಎಂಬ ಪಾತ್ರ ಎಲ್ಲರನ್ನು ಕಾಡುತ್ತಿದೆ. ಪವಿತ್ರಾಳನ್ನು ಅದ್ಯಾವಾಗ ಕೊಲ್ಲಲು ಹೋದನೋ ಅಲ್ಲಿಂದ ದೇವ್ ಹೆಸರು ರಾರಾಜಿಸುತ್ತಲೇ ಇದೆ. ಪಾಪಿ ಚಿರಾಯು ಎಂಬಂತೆ ದೇವ್ ಏನೇ ತಪ್ಪು ಮಾಡಿದರೂ ಆ ತಪ್ಪಿನಲ್ಲಿ ದೇವ್ ಸಿಕ್ಕಿ ಬೀಳುತ್ತಲೇ ಇಲ್ಲ. ಹೇಗಾದರೂ ಮಾಡಿ ತಪ್ಪಿಸಿಕೊಳ್ಳುತ್ತಲೇ ಇದ್ದಾನೆ. ಆದರೆ ಇಷ್ಟೆಲ್ಲಾ ತಪ್ಪುಗಳಿಗೆ ಮುಕ್ತಿ ಯಾವಾಗ ಎಂಬ ಪ್ರಶ್ನೆ ಎದುರಾಗಿದೆ.
ದೇವ್ ಗೆ ಬೆಂಬಲಕ್ಕೆ ನಿಂತಿರುವುದು ಒಬ್ಬರಾ, ಇಬ್ಬರಾ..? ಮನೆ ಮಂದಿಯೆಲ್ಲಾ ದೇವ್ ಪರವಾಗಿಯೇ ನಿಂತಿದ್ದಾರೆ. ಆದರೆ ಲೀಲಾ ಮಾತ್ರ ದೇವ್ ಬಣ್ಣ ಬಯಲು ಮಾಡಲು ಸಜ್ಜಾಗಿ ನಿಂತಿದ್ದಾಳೆ. ಸಾಕ್ಷಿಗಳು ಸಿಗದೆ ಒದ್ದಾಡುತ್ತಿದ್ದಾಳೆ. ದೇವ್ ಅದನ್ನೇ ಬಂಡವಾಳ ಮಾಡಿಕೊಂಡು ಆಟವಾಡುತ್ತಿದ್ದಾನೆ. ಆದರೆ ಲೀಲಾ ಇರುವ ತನಕ ದೇವ್ ಆಟ ನಡೆಯುವುದಿಲ್ಲ. ಲೀಲಾ ಪವಿತ್ರಾಳ ಕಾವಲಿಗೆ ನಿಲ್ಲುತ್ತಾಳೆ.

ಸೊಸೆಯಂದಿರೆಲ್ಲಾ ದೇವ್ ಪರವೇ
ದೇವ್‌ಗೆ ಈಗ ಆನೆ ಬಲ ಬಂದಂತಾಗಿದೆ. ಯಾಕೆಂದರೆ ಎಜೆಯ ಬೆಂಬಲದ ಜೊತೆಗೆ ಎಜೆ ಸೊಸೆಯಂದಿರು ದೇವ್ ಪರವಾಗಿಯೇ ನಿಂತಿದ್ದಾರೆ. ದೇವ್ ಮಾಡುವ ಎಲ್ಲಾ ಕೆಟ್ಟ ಕೆಲಸಗಳಿಗೂ ಸಪೋರ್ಟ್ ಮಾಡುತ್ತಿದ್ದಾರೆ. ಲೀಲಾಳನ್ನು ನಿಂದಿಸುತ್ತಲೇ ಇರುತ್ತಾರೆ. ಇಷ್ಟು ದಿನ ಅಣ್ಣನ ಪರವಾಗಿ ಸರು ಮಾತ್ರ ನಿಂತಿದ್ದಳು. ಆದರೆ ಈಗ ದುರ್ಗಾ ಕೂಡ ದೇವ್ ಪರವಾಗಿಯೇ ಮಾತನಾಡುತ್ತಿದ್ದಾಳೆ. ಲೀಲಾ ಏನಾದರೂ ಅವಮಾನ ಮಾಡಿದರೆ ಲೀಲಾಳನ್ನೇ ದುರ್ಗಾ ಬೈಯ್ಯುವ ಹಂತಕ್ಕೆ ತಲುಪಿದ್ದಾಳೆ.

ದೇವ್ ಗೆ ಮತ್ತೆ ಮಿಸ್ಸಾಯ್ತು ಅವಕಾಶ
ದೇವ್ ಸೈಕಲ್ ಗ್ಯಾಪ್ ಸಿಕ್ಕಿದರೆ ಸಾಕು ಪವಿತ್ರಾಳನ್ನು ಕೊಲ್ಲುವ ದಾರಿ ಹುಡುಕುತ್ತಾ ಇರುತ್ತಾನೆ. ಮನೆಯಲ್ಲಿ ಯಾರು ಇಲ್ಲದನ್ನು ಕಂಡು ಪವಿತ್ರಾಳ ಜೀವಕ್ಕೆ ಆಪತ್ತು ತರಲು ಹೊರಡುತ್ತಾನೆ. ಇದೇ ಅವಕಾಶ ಮತ್ತೆ ಒದಗಿ ಬಂದಿತ್ತು. ಮನೆಯಲ್ಲಿ ಯಾರು ಇಲ್ಲದೆ ಇದ್ದಾಗ, ಎಜೆ ಪವಿತ್ರಾಳನ್ನು ವಾಕ್ ಗೆ ಅಂತ ಕರೆ ತಂದಿದ್ದರು, ಆಗ ಅಲ್ಲಿಗೆ ಬಂದ ದೇವ್ ನಾನೇ ಪವಿತ್ರಾಳನ್ನು ವಾಕ್ ಕರೆದುಕೊಂಡು ಹೋಗುತ್ತೇನೆ ಎಂದ. ಅದೇ ಸಮಯಕ್ಕೆ ಎಜೆಗೆ ಮೀಟಿಂಗ್ ಬಂದಿದ್ದರಿಂದ ದೇವ್ ಕೈಗೆ ಪವಿತ್ರಾಳನ್ನು ಒಪ್ಪಿಸಿ ಹೊರಟೆ ಬಿಟ್ಟ. ಈಗ ದೇವ್ ಗೆ ಅದೃಷ್ಟ ತನ್ನ ಬಾಗಿಲನ್ನೇ ತಟ್ಟಿದಷ್ಟಯ ಖುಷಿಯಾಗಿ ಸಾಯಿಸಲು ರೆಡಿಯಾಗುತ್ತಿದ್ದಾಗ ಲೀಲಾ ಅಡ್ಡ ಹಾಕಿದಳು.

ದುರ್ಗಾಗೂ ಡೋಂಟ್ ಕೇರ್ ಎಂದ ಲೀಲಾ
ಎಜೆ ಅಂದ್ರೆ ಮನೆ ಮಂದಿಗೆಲ್ಲಾ ಎಲ್ಲಿಲ್ಲದ ಭಯ. ದೇವ್ ಅಂತು ನಿಂತಲ್ಲೇ ಗಢ-ಗಢ ಅಂತ ನಡುಗಿ ಹೋಗುತ್ತಾನೆ. ಲೀಲಾ ಕೂಡ ಎಜೆ ಮುಂದೆ ತಪ್ಪು ಮಾಡುವುದಕ್ಕೆ ಹೆದರುತ್ತಾಳೆ. ಆದರೆ ದುರ್ಗಾ, ಎಜೆಗೆ ಕಂಪ್ಲೆಂಟ್ ಮಾಡ್ತೀನಿ ಎಂದಾಗಲು ಲೀಲಾ ಮಾಡಿ ಎಂದಿದ್ದಾಳೆ. ಇದೆಲ್ಲದಕ್ಕೂ ಕಾರಣ ಪವಿತ್ರಾ. ಲೀಲಾಗೆ ದೇವ್ ಮೇಲೆ ನಂಬಿಕೆ ಇಲ್ಲ. ಅದನ್ನ ಹೇಳಿದ್ರು ಮನೆಯವರು ನಂಬಲ್ಲ. ಹೀಗಾಗಿ ಪವಿತ್ರಾಳ ಸುರಕ್ಷತೆಯೇ ನನ್ನ ಮೊದಲ ಧ್ಯೇಯ ಎಂದಿದ್ದಾಳೆ.

ಪವಿತ್ರಾ ಸತ್ತು-ಸತ್ತು ಬದುಕುತ್ತಿದ್ದಾಳೆ
ದೇವರು ಎಷ್ಟು ಕ್ರೂರಿಯಾಗಿದ್ದಾನೆ ಎಂದರೆ ಒಮ್ಮೆ ಪವಿತ್ರಾಳನ್ನು ಈಗಾಗಲೇ ಸಾಯಿಸಲು ಹೋಗಿ ಜೀವಂತ ಶವ ಮಾಡಿದ್ದಾನೆ. ಆದರೆ ಈಗ ಪವಿತ್ರಾ ಕೊಂಚ ಸುಧಾರಿಸಿಕೊಳ್ಳುತ್ತಿರುವಾಗಲೇ ಮತ್ತೆ ಮತ್ತೆ ಭಯ ಹುಟ್ಟಿಸುತ್ತಿದ್ದಾನೆ. ಇವತ್ತು ನಿನ್ನ ಡೆತ್ ಡೇ ಅಂತ ಹೇಳಿ ಹೇಳಿ ಪವಿತ್ರಾ ಮನದಲ್ಲಿ ಮತ್ತಷ್ಟು ಆತಂಕ ಹೆಚ್ಚು ಮಾಡುತ್ತಿದ್ದಾನೆ. ಸ್ವಲ್ಪ ಚೇತರಿಕೆ ಕಂಡಿರುವ ಪವಿತ್ರಾ ದೇವ್ ನ ಈ ಭಯದ ನಡವಳಿಕೆಯಿಂದಲೇ ಪೂರ್ತಿ ಗುಣಮುಖಳಾಗ್ತಾಳೆ ಎನಿಸುತ್ತದೆ.


Click it and Unblock the Notifications











