ಹಿಟ್ಲರ್ ಕಲ್ಯಾಣದ ಎಜೆ ಮೇಲೆ ಲೀಲಾಗೆ ಲವ್ವಾಗ್ತಿದೆ: ಅಜ್ಜಿಗೆ ಗೊತ್ತಾದ್ರೆ ಹಬ್ಬ ಗ್ಯಾರಂಟಿ?
ಅನಿವಾರ್ಯ ಕಾರಣದಿಂದ ಲೀಲಾ ಮತ್ತು ಎಜೆ ಮದುವೆಯಾಗಿದೆ. ಆದರೆ ಅದು ವಿಧಿ ಲಿಖಿತವೂ ಹೌದು, ಅಂತರ ಇಷ್ಟಪಟ್ಟ ಹುಡುಗಿಯೂ ಹೌದು. ದೇವ್ ಮಾಡಿದ ಬ್ಲಾಕ್ ಮೇಲ್‌ನಿಂದಾಗಿ ಲೀಲಾ ಮದುವೆಯೇನೋ ಆಗಿ ಬಂದಳು. ಆದರೆ ಎಜೆ ಮತ್ತು ಲೀಲಾ ನಡುವೆ ಪ್ರೀತಿಯೇ ಬೆಳೆದಿಲ್ಲ. ಲೀಲಾ ಅತಿಯಾದ ಮಾತುಗಾರ್ತಿ. ಎಜೆ ಸಿಕ್ಕಾಪಟ್ಟೆ ಸೈಲೆಂಟ್ ಇರುವ ಮನುಷ್ಯ. ಏನೇನೋ ರಾದ್ಧಾಂತವಾದರೂ ಇಬ್ಬರನ್ನು ದೂರು ಮಾಡಲು ಸಾಧ್ಯವಾಗಿಲ್ಲ. ಆದರೆ ಲೀಲಾಗೆ ಎಜೆ ಮೇಲೆ ಪ್ರೀತಿ ಹುಟ್ಟುವ ಕಾಲ ಸನಿಹವಾದಂತಿದೆ.
ಎಜೆ ಮೂವರು ಸೊಸೆಯಂದಿರು ಯಾವಾಗಲೂ ಲೀಲಾಳನ್ನು ಕೆಣಕುತ್ತಲೆ ಇರುತ್ತಾರೆ. ಲೀಲಾಗೆ ತೊಂದರೆಯಾಗಬೇಕು ಎಂಬುದನ್ನೇ ಬಯಸುತ್ತಿರುತ್ತಾರೆ. ಅದಕ್ಕೆಂದೇ ಸಾಕಷ್ಟು ಫ್ಲ್ಯಾನ್‌ಗಳನ್ನು ಹಾಕಿಕೊಂಡಿರುತ್ತಾರೆ. ಅದರಲ್ಲಿ ಇತ್ತೀಚೆಗೆ ನಡೆದ ಲೀಲಾ ತಂದೆಯ ವಿರುದ್ಧದ ಅತ್ಯಾಚಾರ ಆರೋಪ. ಆದರೆ ಎಜೆ ತನ್ನ ಮಾವನನ್ನು ಅಲ್ಲಿಯೂ ಬಿಟ್ಟುಕೊಟ್ಟಿಲ್ಲ. ಮರ್ಯಾದೆ ಕಾಪಾಡಿಕೊಂಡು, ಲೀಲಾಳನ್ನು ಮನೆಗೆ ಕರೆತಂದಿದ್ದಾರೆ.

ಲೀಲಾ ನಟಿಸುವುದಕ್ಕೂ ಅವಕಾಶ ಕೊಡ್ತಾರಾ ಎಜೆ?
ಲೀಲಾಗೆ ಮದುವೆಗಿಂತ ಮುಂಚೆ ನಟಿಯಾಗಬೇಕೆಂಬ ಬಯಕೆ ತುಂಬಾನೆ ಇತ್ತು. ಅದಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಳ್ಳುತ್ತಿದ್ದಳು. ಆ ಆಸೆಯಿಂದಾನೆ ಆಡಿಷನ್ ಎಂದು ಹೋಗಿ ಮದುವೆಯ ಬಂಧನದಲ್ಲಿ ಬಿದ್ದಳು. ಆದರೆ ಅನಿವಾರ್ಯತೆಗೆ ಕಟ್ಟು ಬಿದ್ದು ಮದುವೆಯಾದ ಬಳಿಕ ನಟನೆ ಬಗ್ಗೆ ಆಸೆ ಇದ್ದರೂ, ಅದಕ್ಕೆ ಅವಕಾಶವಿಲ್ಲವೆಂದುಕೊಂಡು ಸುಮ್ಮನಾಗಿಬಿಟ್ಟಳು. ಆದರೆ ಒಮ್ಮೆ ಸಿಕ್ಕ ಅವಕಾಶದಿಂದ ಪವಿತ್ರಾಳ ಜೀವಕ್ಕೆ ಅಪಾಯ ಬಂದಿದ್ದ ಕಾರಣಕ್ಕೆ ಅದು ಕೂಡ ಕ್ಯಾನ್ಸಲ್ ಆಗಿತ್ತು. ನಟನೆ ಬಗ್ಗೆ ಆಸೆಯನ್ನೇ ಕಳೆದುಕೊಂಡಿದ್ದ ಲೀಲಾಗೆ ನಟಿಸುವ ಅವಕಾಶ ಎಜೆಯಿಂದಲೇ ಒದಗಿ ಬರಬಹುದು ಎಂಬ ಆಶಾಭಾವನೆ ವ್ಯಕ್ತವಾಗಿದೆ.

ಎಜೆ ಸರ್ಪೈಸ್‌ನಿಂದ ಲೀಲಾ ಫುಲ್ ಖುಷ್
ಲೀಲಾ ಸದ್ಯ ಶ್ರೀಮಂತರ ಮನೆಯ ಸೊಸೆಯಾಗಿದ್ದಾಳೆ. ಎಜೆ ಹೆಂಡತಿ. ಎಷ್ಟು ಒಡವೆ ಬೇಕಾದರೂ ಹಾಕಿಕೊಳ್ಳಬಹುದು, ದುಬಾರಿ ಗಿಫ್ಟ್ ಬೇಕಾದರೂ ತೆಗೆದುಕೊಳ್ಳಬಹುದು. ಆದರೆ ಲೀಲಾಗೆ ಅದರ ಯಾವ ಪರಿವೆಯೂ ಇಲ್ಲ. ಆಸೆಯೂ ಇಲ್ಲ. ಆದರೆ ಲೀಲಾ ತುಂಬಾ ಇಷ್ಟಪಡುವಂತ ಯಾವತ್ತೂ ಮರೆಯುವುದಕ್ಕೆ ಸಾಧ್ಯವಿರದಂತಹ ಗಿಫ್ಟ್ ಎಜೆ ಕಡೆಯಿಂದ ಸಿಕ್ಕಿದೆ. ಅದು ಸೆಲೆಬ್ರೆಟಿಗಳ ಭೇಟಿ. ಲೀಲಾಗೆ ಟಿವಿಯಲ್ಲಿ ಬರುವ ಗೀತಾ ಮತ್ತು ಗುರುಮೂರ್ತಿಯನ್ನು ಸಿಕ್ಕಾಪಟ್ಟೆ ಇಷ್ಟಪಡುತ್ತಿದ್ದಳು. ಅದನ್ನು ತಿಳಿದಿದ್ದ ಎಜೆ ಡಿನ್ನರ್ ಫ್ಲ್ಯಾನ್ ಅಂತ ಹೇಳಿ ಲೀಲಾಳನ್ನು ಕರೆದುಕೊಂಡು ಬಂದು ಮರೆಯಲಾರದ ಸರ್ಪೈಸ್ ಕೊಟ್ಟಿದ್ದಾರೆ. ಗೀತಾ ಮತ್ತು ಗುರುಮೂರ್ತಿಯನ್ನು ಕಂಡು ಲೀಲಾಳ ಸಂತೋಷ, ಆಶ್ಚರ್ಯ ಎಲ್ಲವೂ ಹೆಚ್ಚಾಗಿದೆ. ಸೆಲೆಬ್ರೆಟಿಗಳನ್ನು ನೋಡಿ ಲೀಲಾ ಕುಣಿದು ಕುಪ್ಪಳಿಸಿದ್ದಾಳೆ. ಅದರಲ್ಲೂ ನಿಮಗೋಸ್ಕರವೇ ನಾವು ಬಂದಿದ್ದು ಎಂಬುದನ್ನು ಕೇಳಿದ ಮೇಲಂತೂ ಲೀಲಾಳ ಕಾಲು ನೆಲದ ಮೇಲೆ ನಿಂತಿರಲಿಲ್ಲ.

ಎಜೆ ನೋಡಲು ಸೆಲೆಬ್ರೆಟಿಗಳೇ ಕ್ಯೂನಲ್ಲಿರ್ತಾರೆ
ಅಂಗೈನಲ್ಲಿ ಬೆಣ್ಣೆ ಇಟ್ಟುಕೊಂಡು ತುಪ್ಪಕ್ಕಾಗಿ ಹುಡುಕಾಡಿದರಂತೆ. ಈ ಗಾದೆ ಮಾತು ಲೀಲಾಗೆ ಅಪ್ಪಟ ಹೋಲಿಕೆ ಆಗುತ್ತೆ. ಯಾಕೆಂದರೆ ಟಿವಿ ಪರದೆ ಮೇಲೆ ನಟಿಸುವವರನ್ನು ಕಾಣುವ ಲೀಲಾ ಅವರನ್ನೇ ನಿಜವಾದ ಸೆಲೆಬ್ರೆಟಿ ಎಂದುಕೊಂಡು ಬಿಟ್ಟಿದ್ದಾಳೆ. ಆದರೆ ಜೊತೆಯಲ್ಲಿಯೇ ಇರುವ ಎಜೆಯನ್ನೇ ಲೀಲಾ ಸೆಲೆಬ್ರೆಟಿಯಾಗಿ ಕಂಡೆ ಇಲ್ಲ. ಹೊರಗಡೆಯವರು ಎಜೆಗಾಗಿ ಅದೆಷ್ಡು ಕಾಯುತ್ತಾರೆ ಎಂಬುದು ತಿಳಿದ ಮೇಲೆ ಅದು ಅರಿವಿಗೆ ಬಂದಿದ್ದು. ಸೆಲೆಬ್ರೆಟಿಗಳಾದವರು ಕೂಡ ಎಜೆ ನೋಡುವುದಕ್ಕೆ, ಮಾತನಾಡಿಸುವುದಕ್ಕೆ ತುದಿಗಾಲಿನಲ್ಲಿ ಕಾಯುತ್ತಿರುತ್ತಾರೆ. ಈ ಸತ್ಯ ತಿಳಿದ ಬಳಿಕ ಎಜೆ ಬೆಲೆ ಲೀಲಾಗೆ ಗೊತ್ತಾಗಿದೆ. ಅದಕ್ಕೆ ಗಂಡನನ್ನು ಹುಡುಕಿಕೊಂಡು ಓಡಿ ಬಂದಿದ್ದಾಳೆ.
ಎಜೆ ಮೇಲೆ ಲೀಲಾಗೆ ಲವ್ವಾಗುವ ಸಮಯ
ಲೀಲಾ ಮಾಡುವ ಎಡವಟ್ಟಿಗೆ, ಲೀಲಾಳ ನಾನ್ ಸ್ಟಾಪ್ ಮಾತಿಗೆ ಫುಲ್ ಸ್ಟಾಪ್ ಹಾಕೋದು ಎಜೆ. ಲೀಲಾ ಯಾರಿಗೆ ಹೆದರುತ್ತಾಳೋ.. ಬಿಡುತ್ತಾಳೋ ಆದರೆ ಎಜೆ ಕಂಡರೆ ಇನ್ನಿಲ್ಲದ ಭಯ, ಭಕ್ತಿ ತೋರಿಸುತ್ತಾಳೆ. ಎಜೆ ಜೊತೆ ಹೊರಗೋಗುವುದಕ್ಕೆ ಭಯ ಪಡುತ್ತಾಳೆ. ಯಾವಾಗಲೂ ಬೈತಾನೇ ಇರ್ತಾರೆ ಅಂತ ಭಯ ಪಟ್ಟಿದ್ದಾಳೆ. ಯಾವಾಗಲೂ ಸ್ಟ್ರಿಕ್ಟ್ ಆಗಿರುವ ಎಜೆ ಅಮ್ಮನ ಜೊತೆ ಮಾತಾಡುವಾಗ ಥೇಟ್ ಮಗುನೇ. ಕಾರಿನಲ್ಲಿ ಕುಳಿತು ಅಮ್ಮನ ಜೊತೆ ಮಾತನಾಡುತ್ತಾ, ಮಗುವಿನಂತೆ ನಗುತ್ತಿರುವುದು ಲೀಲಾ ಕಣ್ಣಿಗೆ ಬಿದ್ದಿದೆ. ಅಲ್ಲಿಯೇ ಕಳೆದು ಹೋಗುತ್ತಿದ್ದಾಳೆ. ಎಜೆ ನಗುವನ್ನೇ ನೋಡುತ್ತಾ ನಿಂತಿದ್ದಾಳೆ. ಮುಂದೆ ಎಜೆ ಜೊತೆಗೆ ಪ್ರೀತಿಯಲ್ಲಿ ಬೀಳುವುದರಲ್ಲಿ ನೋ ಡೌಟ್.


Click it and Unblock the Notifications











