ಜೋಡಿ ನಂ1: ಎಜೆ ಎರಡನೇ ಸೊಸೆ ಲಕ್ಷ್ಮೀ ಗಂಡನ ಬಗ್ಗೆ ಅಯ್ಯೋ ಪಾಪಾ ಅಂತಿದ್ದಾರೆ ನೆಟ್ಟಿಗರು..!
ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ಮೂವರು ಸೊಸೆಯಂದಿರೇ ಹೈಲೇಟ್. ದುರ್ಗಾ, ಲಕ್ಷ್ಮೀ, ಸರಸ್ವತಿ ಮೂವರು ವಿಭಿನ್ನ ಮನಸ್ಥಿತಿಯವರು. ಅದರಲ್ಲೂ ದುರ್ಗಾಳಿಗೆ ತನ್ನದೇ ಅಧಿಕಾರ ನಡೆಯಬೇಕೆಂಬ ಅಹಂ. ಹೀಗಾಗಿಯೇ ನನಗೆ ಬುದ್ಧಿ ಹೆಚ್ಚು, ಉಳಿದವರೆಲ್ಲಾ ಡಮ್ಮಿ ಎಂಬಂತೆ ಲಕ್ಷ್ಮೀ ಮತ್ತು ಸರೂನಾ ಬಿಂಬಿಸಿದ್ದಾಳೆ. ಲಕ್ಷ್ಮೀ ಸೊಸೆ ಎಂಬುದಕ್ಕಿಂತ ಬ್ಯೂಟಿ, ಡ್ರೆಸ್ಸಿಂಗ್ ಸ್ಟೈಲ್ ಗೆ ಅಭಿಮಾನಿಗಳು ಹೆಚ್ಚಾಗಿದ್ದಾರೆ. ಆದರೆ ಇದೀಗ ಹೊಸ ಹೊಸ ವಿಚಾರಗಳು ತೆರೆ ಮೇಲೆ ಅನಾವರಣಗೊಂಡಿದೆ.
ಹಿಟ್ಲರ್ ಕಲ್ಯಾಣದಲ್ಲಿ ಎಜೆ ಸೊಸೆಯಾಗಿರುವ ಲಕ್ಷ್ಮೀ ಅವರ ಎರಡನೇ ಮಗನನ್ನು ಮದುವೆಯಾಗಿದ್ದಾರೆ. ಧಾರಾವಾಹಿಯಲ್ಲಿ ನೀವೂ ನೋಡಿಯೇ ಇದ್ದೀರಾ ಗಂಡನನ್ನು ಯಾವಾಗಲೂ ಗೋಳಾಡಿಸುತ್ತಲೇ ಇರುತ್ತಾರೆ. ಇವರು ಹೇಳಿದ ಮಾತೇ ನಡೆಯಬೇಕು ಆ ರೀತಿ ನಡೆದುಕೊಳ್ಳುತ್ತಾರೆ. ಹಾಗಂತ ರಿಯಲ್ ಲೈಫ್ ನಲ್ಲಿ ಗಂಡನ ಜೊತೆ ಹೀಗೆಲ್ಲಾ ಇಲ್ಲ ಎಂದುಕೊಂಡರೆ ಅಪ್ಪಟ ಸುಳ್ಳು. ರಿಯಲ್ ಲೈಫ್ ಇನ್ನು ಇಂಟ್ರೆಸ್ಟಿಂಗ್ ಆಗಿದೆ. ಆ ವಿಶೇಷ ಮಾಹಿತಿ ಇಲ್ಲಿದೆ ನೋಡಿ.

ಹುಬ್ಬಳ್ಳಿ ಹುಡುಗಿ ಬೆಂಗಳೂರು ಹುಡುಗನ ಜೋಡಿ
ಎಜೆ ಸೊಸೆ ಅಲಿಯಾಸ್ ಲಕ್ಷ್ಮೀ ಅಲಿಯಾಸ್ ನೇಹಾ ಪಟೇಲ್ ಸದ್ಯ ಜೋಡಿ ನಂಬರ್ ಒನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ತೆರೆ ಮೇಲಿನ ಅಲ್ಲ ರಿಯಲ್ ಪತಿ ಪ್ರಣವ್ ಜೊತೆ ಸ್ಪರ್ಧೆಗೆ ಬಂದಿದ್ದಾರೆ. ಎಂಟ್ರಿಯಾಗುತ್ತಲೆ ಒಂದೊಳ್ಳೆ ಹಾಡಿಗೆ ಹೆಜ್ಜೆ ಕೂಡ ಹಾಕಿದ್ದಾರೆ. ಸ್ವಲ್ಪ ಅಂಜಿಕೆ ಸ್ವಭಾವವಾಗಿರುವ ಕಾರಣ ಪ್ರಣವ್ ಹೆಚ್ಚು ಡ್ಯಾನ್ಸ್ ಮಾಡಿಲ್ಲ. ಪ್ರಣವ್ ಮೂಲತಃ ಬೆಂಗಳೂರಿನವರು. ಆದ್ರೆ ಹುಬ್ಬಳ್ಳಿ ಮೂಲದ ನೇಹಾ ಪಟೇಲ್ ಜೊತೆ ಮದುವೆಯಾಗಿ ಸುಖ ಸಂಸಾರದ ಸಾಗರದಲ್ಲಿ ತೇಲುತ್ತಿದ್ದಾರೆ. ಸದ್ಯ ಜೋಡಿ ನಂಬರ್ ಒನ್ ರಿಯಾಲಿಟಿ ಶೋ ಮೂಲಕ ಒಂದಷ್ಟು ಮನರಂಜನೆ ನೀಡಲು ಬಂದಿದ್ದಾರೆ. ಈ ವೇಳೆ ಸ್ವಾರಸ್ಯಕರ ವಿಚಾರವನ್ನು ತಿಳಸಿದ್ದಾರೆ.

ನೇಹಾಗಾಗಿ ಪ್ರಣವ್ ಮಾಡಿದ ತ್ಯಾಗ ಅಷ್ಟಿಷ್ಟಲ್ಲ
ಪ್ರಣವ್ ಮತ್ತು ನೇಹಾ ಮದುವೆಯಾಗಿ ಮೂರು ವರ್ಷ ತುಂಬಿದೆ. ಈ ಮೂರೂ ವರ್ಷದ ದಾಂಪತ್ಯ ಹೇಗಿತ್ತು ಎಂಬುದನ್ನು ಪ್ರೇಕ್ಷಕರ ಮುಂದೆ ಇಡಲಿದ್ದಾರೆ. ಅದರ ಜೊತೆಗೆ ಮದುವೆಯಾಗುವುದಕ್ಕಾಗಿ ಪ್ರಣವ್ ಮಾಡಿದ ತ್ಯಾಗವನ್ನು ಎಲ್ಲರ ಮುಂದೆ ಹೇಳಿದ್ದಾರೆ. ಅದರಲ್ಲೂ ನೇಹಾಗೋಸ್ಕರ ಹೊಸತನ್ನು ಕಲಿತಿದ್ದಾರೆ, ದೇಹದ ತೂಕವನ್ನು ಕಳೆದುಕೊಂಡಿದ್ದಾರೆ. ಪ್ರಣವ್ ಮದುವೆಗೂ ಮುನ್ನ 110 ಕೆಜಿ ತೂವಿದ್ದರಂತೆ. ನಿಮ್ಮನ್ನು ಮದುವೆಯಾಗಬೇಕೆಂದರೆ ನೀವೂ ತೂಕ ಕಡಿಮೆ ಮಾಡಿಕೊಳ್ಳಲೇಬೇಕು ಎಂದಾಗ ಸುಮಾರು 45 ಕೆಜಿ ತೂಕ ಕಡಿಮೆ ಮಾಡಿಕೊಂಡಿದ್ದರಂತೆ. ಅದು ಡಯೆಟ್ ಇಲ್ಲದೆ, ಜಿಮ್ ಇಲ್ಲದೆ. ಆದರೆ ಆ ಸೀಕ್ರೆಟ್ ಕೇಳಿದರೆ ಮಾತ್ರ ಪ್ರಣವ್ ಹೇಳುವುದಕ್ಕೆ ರೆಡಿ ಇಲ್ಲ. ಅಷ್ಟೇ ಅಲ್ಲ ಬೈಕ್ ಎಂದರೆ ಸಿಕ್ಕಾಪಟ್ಟೆ ಕ್ರೇಜ್ ಇರುವ ಪ್ರಣವ್ ಗೆ ಕಾರಿನ ಮೇಲೆ ಆಸೆಯೂ ಇಲ್ಲ, ಆಸಕ್ತಿಯೂ ಇರಲಿಲ್ಲ. ಹೀಗಾಗಿಯೇ ಕಾರಿನ ಡ್ರೈವಿಂಗ್ ಬರುತ್ತಾ ಇರಲಿಲ್ಲವಂತೆ. ಆದರೆ ಕಾರನ್ನು ಇಷ್ಟಪಡುವ ಲಕ್ಷ್ಮೀ ಕಾರ್ ಡ್ರೈವಿಂಗ್ ಕಲಿತರೆ ಮಾತ್ರ ಮದುವೆ ಎಂದಿದ್ದಕ್ಕೆ ಅದನ್ನು ಕಲಿತಿದ್ದಾರೆ. ಇಷ್ಟೆಲ್ಲಾ ಕಾಂಪ್ರೂಮೈಸ್ ಮಾಡಿಕೊಂಡು ಪ್ರವಣ್ ನೇಹಾರನ್ನು ಮದುವೆಯಾಗಿದ್ದಾರೆ. ಈ ತ್ಯಾಗದ ಹಿಂದಿನ ಮಧುರ ಬಂಧ ಮೂರನೇ ವರ್ಷ ದಾಟಿ ಮುಂದೆ ಸಾಗುತ್ತಿದೆ.

ಪ್ರಣವ್ ಪಾಡು ಕಂಡು ಮರುಗಿದ ಮನಸ್ಸುಗಳು
ಜೋಡಿ ನಂಬರ್ ಒನ್ ನಲ್ಲಿ ಭಾಗವಾಹಿಸಿರುವ ಪ್ರಣವ್ ಆಂಡ್ ನೇಹಾ ಟೀಂ ಸದ್ಯ ತಮ್ಮ ಮದುವೆಯಾದ ಸುಂದರ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ನೇಹಾ ಸ್ವಲ್ಪ ಕುಳ್ಳಿ ಇದ್ದರೆ ಪ್ರಣವ್ ಸಿಕ್ಕಾಪಟ್ಟೆ ಉದ್ಧ ಇದ್ದಾರೆ. ಇದು ಬೇಸರದ ವಿಚಾರವೇನು ಅಲ್ಲ, ನೇಹಾ ಬಯಸಿದ ರೂಪವದು, ಗುಣವದು. ನೇಹಾಗೆ ಹೆಚ್ಚು ಎತ್ತರವಿರುವಂತ ಹುಡುಗನನ್ನು ಮದುವೆಯಾಗಬೇಕೆಂಬ ಬಯಕೆಯೇ ಇತ್ತಂತೆ. ಕಾತರ ಗಂಡ ಯಾವಾಗಲೂ ತಲೆ ತಗ್ಗಿಸಿ ನೋಡಿದರೆ, ಹೆಣ್ಣು ತಲೆ ಎತ್ತಿ ನೋಡಬೇಕೆಂಬ ಕಾನ್ಸೆಪ್ಟ್. ಇದೆಲ್ಲ ಕೇಳಿದವರಿಗೆ ಪ್ರಣವ್ ಮೇಲೆ ಸಿಂಪತಿ ಹುಟ್ಟಿದೆ. ಪಾಪಾ ಹುಡುಗ ಸುಮ್ಮನೆ ಬಲಿಯಾಗಿಬಿಟ್ಟನಲ್ಲಾ ಎಂಬ ಗೋಳನ್ನು ವ್ಯಕ್ತಪಡಿಸುತ್ತಿದ್ದಾರೆ. ಹುಡುಗನ ಪಾಡು ಪಾಪ ಎಂದೆಲ್ಲಾ ಕಮೆಂಟ್ ಹಾಕುತ್ತಿದ್ದಾರೆ. ಲಕ್ಷ್ಮೀ ಅಲಿಯಾಸ್ ನೇಹಾ ಪಟೇಲ್ ಪ್ರಣವ್ ನನ್ನು ಗೋಳಾಡಿಸಿರುವುದಕ್ಕೆ ಸಿಂಪತಿ ತೋರಿಸುತ್ತಿದ್ದಾರೆ.

ಲಕ್ಷ್ಮೀ ಆಂಡ್ ಪ್ರಣವ್ ಗೆ ಎಜೆ ಬೆಂಬಲ
ಇನ್ನು ಜೋಡಿ ನಂಬರ್ ಒನ್ ಶೋ ನಿನ್ನೆಯಿಂದಷ್ಟೇ (ಜೂ.11) ಆರಂಭವಾಗಿದೆ. ಜೋಡಿಗಳನ್ನು ಅದ್ದೂರಿಯಾಗಿ ಸ್ವಾಗತಿಸಿದೆ ಜೀ ಕನ್ನಡ ವೇದಿಕೆ. ಈ ವೇಳೆ ಆಯಾ ಧಾರಾವಾಹಿ ತಂಡ ಕೂಡ ಸ್ಪರ್ಧಿಗಳ ಬೆಂಬಲಕ್ಕಾಗಿ ನಿಂತಿದ್ದರು. ಅದರಂತೆ ಲಕ್ಷ್ಮೀ ಮತ್ತು ಪ್ರಣವ್ ಗಾಗಿ ಎಜೆ ಕುಟುಂಬಸ್ಥರು ಬಂದಿದ್ದರು. ಸರೋಜಿನಿ (ಎಜೆ ಅಮ್ಮ), ಎಜೆ, ದುರ್ಗಾ, ಸರಸ್ವತಿ ಕಾರ್ಯಕ್ರಮಕ್ಕೆ ಬಂದು ಹರಸಿ, ಹಾರೈಸಿದ್ದಾರೆ.


Click it and Unblock the Notifications











