ಎಜೆ ನಡವಳಿ ಹೀಗೇಕೆ? ಮನೆ ಬಿಟ್ಟು ಹೋಗ್ತಾಳಾ ಲೀಲಾ?

By ಪೂರ್ವ

ಹಿಟ್ಲರ್ ಕಲ್ಯಾಣ ಧಾರವಾಹಿಯಲ್ಲಿ ಇದೀಗ ಮಹಾ ದುರಂತ ನಡೆದು ಹೋಗಿದೆ. ಎಜೆ ನಡವಳಿಕೆಗೆ ಅಭಿಮಾನಿಗಳು ಬೇಸರಗೊಂಡಿದ್ದಾರೆ. ಎಜೆಗೆ ಸತ್ಯ ಮನವರಿಕೆ ಮಾಡಲು ಆಗದೇ ಲೀಲಾ ಮನೆ ಬಿಟ್ಟೆ ತೆರಳಬೇಕಾದ ಅನಿವಾರ್ಯ ಪರಿಸ್ಥಿತಿ ಬಂದೊದಗಿದೆ.

ತನ್ನ ತಂದೆಯ ಮೇಲಿನ ಆರೋಪಕ್ಕೆ ಲೀಲಾ ಮನದಲ್ಲಿ ಅದೆಷ್ಟೋ ನೋವುಗಳನ್ನು ತುಂಬಿಕೊಂಡು ಕಣ್ಣೀರು ಇಡುತ್ತಿದ್ದಾಳೆ. ಲೀಲಾ ಕುಟುಂಬಕ್ಕೆ ಇರುವ ಆಧಾರ ಸ್ತಂಭ ಎಂದರೆ ಅದು ಆಕೆಯ ತಂದೆ. ಅಂಥಹ ತಂದೆಯ ಮೇಲೆ ಆರೋಪ ಮಾಡಿದಾಗ ಲೀಲಾ ಕುಟುಂಬಕ್ಕೆ ಬಲವಾದ ಪೆಟ್ಟುಕೊಟ್ಟಂತಾಗಿದೆ.

ಇದನ್ನೆಲ್ಲಾ ಸಹಿಸಿಕೊಳ್ಳದ ಲೀಲಾಳ ತಂದೆ ಮಮ್ಮಲ ಮರುಗಿದ್ದಾರೆ. ತಂದೆಯನ್ನು ರೂಮಿನಲ್ಲಿ ಬಿಟ್ಟು ಮಕ್ಕಳು ಹಾಗೆಯೇ ಹೆಂಡತಿ ಕುಳಿತುಕೊಂಡಿರುವ ವೇಳೆ ಲೀಲಾ ಕೇಳುತ್ತಾಳೆ ಅಪ್ಪ ಎಲ್ಲಿ ಎಂದು. ಅಪ್ಪ ರೂಮ್‌ನಲ್ಲಿ ಇದ್ದಾರೆ ಎಂದು ಲೀಲಾ ತಂಗಿ ಚುಕ್ಕಿ ಹೇಳುತ್ತಾಳೆ. ಈ ವೇಳೆ ಭಯಗೊಂಡ ಲೀಲಾ, ಅಪ್ಪ ತುಂಬಾ ಸೂಕ್ಷ್ಮ ಏನಾದರು ಹೆಚ್ಚು ಕಮ್ಮಿ ಮಾಡಿಕೊಂಡರೆ ಎಂದು ಭಯ ಬೀಳುತ್ತಾಳೆ. ಇದರಿಂದ ಅಪ್ಪನನ್ನು ಹುಡುಕಲು ರೂಮ್‌ಗೆ ತೆರಳಿದಾಗ ಅಲ್ಲಿ ಇರದ್ದನ್ನು ಕಂಡು ಲೀಲಾಗೆ ಇನ್ನೂ ಆತಂಕ ಹೆಚ್ಚಾಗುತ್ತದೆ. ಅಪ್ಪನನ್ನು ಹುಡುಕಿಕೊಂಡು ಹೋದ ಲೀಲಾಗೆ ಅಪ್ಪ ಮಹಡಿ ಮೇಲೆ ಸ್ಟೆಪ್ ನ ಬಳಿ ಕುಳಿತಿರುವುದನ್ನು ಕಂಡು ನಿಟ್ಟುಸಿರು ಬಿಡುತ್ತಾಳೆ. ಅಪ್ಪನ ಬಳಿ ಮಾತನಾಡಬೇಕು ಎನ್ನುವಷ್ಟರಲ್ಲಿ ತಂದೆ ಅವಳ ಕೈಗೆ ಹಾಗೆಯೇ ಮನೆಯವರ ಕೈಗೆ ಸಿಗದೇ ರೂಮಿಗೆ ಹೋಗಿ ಬಾಗಿಲು ಹಾಕಿಕೊಳ್ಳುತ್ತಾರೆ.

Zee Kannada Serial Hitler kalyana Written Update on May 18th episode

ಮಕ್ಕಳು, ಹೆಂಡತಿ ತನ್ನನ್ನು ತಪ್ಪಾಗಿ ತಿಳಿದುಕೊಂಡರೆ ನಾನೇನು ಮಾಡಲಿ ಎಂದು ಕೊರಗುತ್ತಿದ್ದಾರೆ ಲೀಲಾ ತಂದೆ. ಲೀಲಾ ತಂದೆ ಒಂಟಿಯಾಗಿ ಕುಳಿತು ಆಲೋಚಿಸುತ್ತಿರುತ್ತಾರೆ. ಹಾಗೆಯೇ ತನಗಾದ ಅಪಮಾನಕ್ಕೆ ಹೇಗೆ ಬದುಕಲಿ ಎಂದು ಯೊಚಿಸುತ್ತಿದ್ದಾರೆ. ತಾನು ಬದುಕಿದ್ದರೆ ನನಗೆ ಇಂಥಹ ಕಷ್ಟಗಳು, ನನ್ನ ಹೆಂಡತಿ ಮಕ್ಕಳು ನನ್ನನ್ನು ಪ್ರಶ್ನೆ ಕೇಳಿದರೆ ನಾನೇನು ಮಾಡಲಿ ಎಂದು ಚೂರಿಯಿಂದ ಕೈ ಕುಯ್ದುಕೊಳ್ಳಲು ಹೋದರು ಲೀಲಾ ತಂದೆ.

ಲೀಲಾ ಅದೆಷ್ಟೇ ಬಾಗಿಲು ಬಡಿದರು ಲೀಲಾ ತಂದೆ ಮಾತ್ರ ಇದಕ್ಕೆ ಉತ್ತರಿಸಲೇ ಇಲ್ಲ. ಮಕ್ಕಳು ಎಷ್ಟೇ ಗೋಗರೆದರು ನಾನು ಹೊರ ಬರಲ್ಲ ನನ್ನಿಂದ ಆಗಲ್ಲ ಎಂದು ಹೇಳುತ್ತಾರೆ. ಆದರೆ ಇನ್ನೂ ಕಾದರೆ ಅಪ್ಪ ಏನಾದರೂ ಮಾಡಿಕೊಳ್ಳುತ್ತಾರೆ ಎಂದು ಭಯ ಬಿದ್ದು ಅಮ್ಮನ ಬಳಿ ಸೀಮೆಎಣ್ಣೆ ತರಲು ಹೇಳುತ್ತಾಳೆ. ಅಲ್ಲಿ ಅಪ್ಪ ಸಾಯಲಿ ಇಲ್ಲಿ ನಾವು ಸಾಯುವ, ಯಾರ ಹೆಣ ಯಾರು ಎತ್ತುತ್ತಾರೆ ನೋಡೋಣ ಎಂದು ಹೇಳುವ ವೇಳೆಗೆ ಲೀಲಾ ತಂದೆ ರೂಮಿನಿಂದ ಹೊರ ಬಂದು ಮಕ್ಕಳನ್ನು ಹೆಂಡತಿಯನ್ನು ಬಾಚಿ ತಬ್ಬಿಕೊಂಡು ಅಳುತ್ತಾರೆ. ಲೀಲಾ ಅಪ್ಪನಿಗೆ ಸಮಾಧಾನ ಮಾಡುತ್ತಾ, ನೀನೇ ಎಲ್ಲಾ ನಮ್ಗೆ ನೀನು ನಮ್ಮನ್ನು ಬಿಟ್ಟು ಹೋದರೆ ನಾವು ಬದುಕಲ್ಲ, ಹೇಗೆ ನಿನಗೆ ಮನಸ್ಸು ಬಂತು ಹೀಗೆ ಮಾಡಲು ಎಂದು ಕೇಳುತ್ತಾಳೆ. ಲೀಲಾ ಅಪ್ಪನಿಗೆ ದುಃಖ ಉಮ್ಮಳಿಸಿ ಬಂತು.

ಇನ್ನು ಮದುವೆ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಲೀಲಾ ತಂದೆಯ ಮೇಲೆ ಅತ್ಯಾಚಾರದ ಆರೋಪ ಹೊರಿಸಿದ ಮಹಿಳೆ ಎಜೆ ಮನೆಯ ಬಳಿ ಪ್ರತ್ಯಕ್ಷವಾಗಿದ್ದಾಳೆ. ಇದ್ದನ್ನು ಕಂಡ ಎಜೆ ಚಿಕ್ಕ ಸೊಸೆ ಸರಸ್ವತಿ ದುರ್ಗಾ ಬಳಿ ಹೇಳಿದಾಗ ದುರ್ಗಾಗೆ ಶಾಕ್ ಆಗುತ್ತದೆ. ಲೀಲಾಳ ವಿರುದ್ಧ ಸೇಡು ತೀರಿಸಿಕೊಂಡ ದುರ್ಗಾ ಇದೀಗ ಸಿಕ್ಕಿ ಹಾಕಿಕೊಳ್ಳುತ್ತಾಳಾ ಎಂಬುವುದನ್ನು ತಿಳಿಯಬೇಕಿದೆ. ಕಾರ್ಯಕ್ರಮದಲ್ಲಿ ನಡೆದ ಘಟನೆಯ ಬಗ್ಗೆ ಸತ್ಯಾಸತ್ಯತೆಯನ್ನು ಇನ್ನಾದರೂ ಎಜೆ ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಾರಾ? ಲೀಲಾಳನ್ನು ಮನೆಗೆ ಕರೆತರಲು ಹೋಗುತ್ತಾನಾ? ಕಾದು ನೋಡಬೇಕಿದೆ.

English summary
Zee Kannada Serial Hitler kalyana Written Update on May 18th episode. Hear is more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X