ಹಿಟ್ಲರ್ ಕಲ್ಯಾಣ: ಲೀಲಾ ತಂದೆ ತಲೆ ತಿರುಗಿ ಬೀಳಲು ಕಾರಣವೇನು?
'ಹಿಟ್ಲರ್ ಕಲ್ಯಾಣ' ಧಾರವಾಹಿಯ ಎಜೆ ತುಂಬಾ ಶಿಸ್ತಿನ ಮನುಷ್ಯ ಇನ್ನೂ ಲೀಲಾ ಎಡವಟ್ಟು ರಾಣಿ, ಆದ್ರೆ ಲೀಲಾ ಏನೇ ಎಡವಟ್ಟು ಮಾಡಿಕೊಂಡರು ತನ್ನ ತಂದೆಯ ವಿಚಾರದಲ್ಲಿ ಮಾತ್ರ ಲೀಲಾ ಯೋಚಿಸಿ ಉತ್ತರಿಸುತ್ತಾಳೆ ನಿರ್ಧಾರ ತೆಗೆದುಕೊಳ್ಲುತ್ತಾಳೆ. ಇದೀಗ ಎಜೆ ಮೇಲೆ ಲೀಲಾ ಕೋಪಿಸಿಕೊಂಡಿದ್ದಾಳೆ. ಕಾರಣ ಎಲ್ಲರಿಗೂ ತಿಳಿದೇ ಇದೆ ತನ್ನ ತಂದೆಯ ಮೇಲೆ ಹೊರಿಸಲಾಗಿರುವ ಸುಳ್ಳು ಅಪವಾದ.
ಇದೀಗ ತಂದೆಯ ಮೇಲಿನ ಅಪವಾದ ಹೇಗೆ ಹೋಗಲಾಡಿಸುವುದು ಎಂಬುವುದನ್ನು ಲೀಲಾ ಯೋಚಿಸುತ್ತಿರುವಾಗಲೇ ಒಂದು ಲೆಟರ್‌ನ ತೆಗೆದುಕೊಂಡು ಬರುತ್ತಾರೆ ಲೀಲಾ ತಂದೆ. ಅದನ್ನು ತೆರೆದು ಓದಬೇಕು ಎನ್ನುವಷ್ಟರಲ್ಲಿ ಲೀಲಾ ತಂದೆ ತಲೆತಿರುಗಿ ಬೀಳುತ್ತಾರೆ ಬಳಿಕ ಸ್ವಲ್ಪ ಸುಧಾರಿಸಿಕೊಂಡು ಅಳುತ್ತಾರೆ. ತಮ್ಮ ಕೆಲಸ ಹೋಗಿರುವ ವಿಚಾರವನ್ನು ಮನೆಯವರೆಲ್ಲರ ಮುಂದೆ ಹೇಳಿದಾಗ ಎಲ್ಲರು ಶಾಕ್ ಆಗುತ್ತಾರೆ, ಬಹಳ ಬೇಸರಿಸಿಕೊಳ್ಳುತ್ತಾರೆ.
ಇದಕ್ಕೆಲ್ಲಾ ಎಜೆನೇ ಕಾರಣ ಎಂದು ಲೀಲಾ ಹಿಡಿಶಾಪ ಹಾಕುತ್ತಾಳೆ. ಇನ್ನು ಎಂದಿಗೂ ಎಜೆ ಮನೆಗೆ ತೆರಳುವುದಿಲ್ಲ, ಅಲ್ಲಿಗೂ ಇಲ್ಲಿಗೂ ಯಾವುದೇ ಸಂಬಂಧ ಇಲ್ಲ, ಇಂದಿಗೆ ಆ ಸಂಬಂಧ ಮುಗಿದು ಹೋಯಿತು ಎಂದು ಗಟ್ಟಿಯಾಗಿ ಹೇಳುತ್ತಾಳೆ ಲೀಲಾ. ಮಗಳ ಈ ಕೋಪಕ್ಕೆ ಮನೆಯವರೆಲ್ಲರೂ ದಂಗಾಗುತ್ತಾರೆ.

ಮರ್ಯಾದಿ ಕಾಪಾಡಿದ್‌ನಾ ದೇವ್?
ಲೀಲಾ ಮನೆಯವರ ಮನಸ್ಸಿನ ಮೇಲೆ ಒಂದಲ್ಲ ಒಂದು ಬಲವಾದ ಹೊಡೆತ ಬೀಳುತ್ತಲೇ ಇದೆ. ಇನ್ನು ಇದೆಲ್ಲದರ ಮುಂಚೆ ಲೀಲಾ ತಂದೆ ಲವಲವಿಕೆಯಿಂದ ಮಾರ್ಕೆಟಿಗೆ ತೆರಳುತ್ತಿದ್ದ ವೇಳೆ ಅರೆಸ್ಟ್ ಮಾಡಲೆಂದು ಪೊಲೀಸರು ಲೀಲಾ ಮನೆ ಮುಂದೆ ಹಾಜರಾಗುತ್ತಾರೆ. ಲೀಲಾ ತಂದೆ ಇದರಿಂದ ಭಯಗೊಂಡು ಲೀಲಾಳನ್ನು ಕರೆಯುತ್ತಾರೆ, ಹೊರಗಡೆ ಬಂದ ಲೀಲಾಗೆ ಪೊಲೀಸರನ್ನು ಕಂಡು ಶಾಕ್ ಆಗಿದೆ. ತಂದೆಯನ್ನು ಅರೆಸ್ಟ್ ಮಾಡಲು ವಾರೆಂಟ್ ಎಲ್ಲಿ ಎಂದು ಪೊಲೀಸರ ಕೇಳಿದಾಗಲೂ ಪೊಲೀಸ್ ಹೇಳುತ್ತಾರೆ ಏನಮ್ಮ ಧಾರವಾಹಿ, ಸಿನಿಮಾ ಜಾಸ್ತಿ ನೋಡ್ತೀಯಾ, ಇದೆಲ್ಲಾ ಇಲ್ಲಿ ನಡೆಯಲ್ಲ ಎಂದು ಹೇಳಿ ಲೀಲಾ ತಂದೆಯ ಕೈಗೆ ಬೇಡಿ ಹಾಕುತ್ತಾರೆ. ಇದನ್ನೆಲ್ಲ ನೋಡುತ್ತಿದ್ದ ಅಕ್ಕಪಕ್ಕ ಮನೆಯವರು ಬಾಯಿಗೆ ಬಂದ ಹಾಗೆ ಮಾತನಾಡುತ್ತಿರುತ್ತಾರೆ.

ಎಜೆಗೆ ಕಾಲ್ ಮಾಡಿದ ಲೀಲಾ
ಇನ್ನೂ ಲೀಲಾ ಇದೇ ಸಂದರ್ಭ ಮನೆಯವರ ಒತ್ತಾಯಕ್ಕೆ ಎಜೆಗೆ ಕಾಲ್ ಮಾಡುವ ವೇಳೆ ಎಜೆ ಮೊಬೈಲನ್ನು ಸೈಲೆಂಟ್ ಅಲ್ಲಿ ಇಟ್ಟಿರುವುದರಿಂದ ಗಮನಕ್ಕೆ ಬರುವುದಿಲ್ಲ ಈ ವೇಳೆ ದುರ್ಗಾ ಬಳಿ ಮಾತನಾಡುತ್ತಿರುತ್ತಾನೆ. ಅದೇ ವೇಳೆ ಲೀಲಾಳ ಮನೆಗೆ ಪೊಲೀಸನ್ನು ಕರೆಸಿ ದೂರದಲ್ಲಿ ಕುಳಿತು ಸಂತೋಷಪಡುತ್ತಿದ್ದ ದೇವ್ ಆಗಮಿಸುತ್ತಾನೆ, ದೇವ್‌ನನ್ನು ನೋಡಿದ ಚುಕ್ಕಿ ಖುಷಿ ಪಡುತ್ತಾಳೆ. ಲೀಲಾಳ ಅಪ್ಪನನ್ನು ಪೊಲೀಸರು ಅರೆಸ್ಟ್ ಮಾಡಿದಂತೆ ತಡೆಯುತ್ತಾನೆ.

ಕ್ಷಮೆ ಕೇಳು ಎನ್ನುವ ಏಜೆ
ಇನ್ನೂ ಇತ್ತ ಎಜೆ ಅತ್ಯಾಚಾರ ಆರೋಪ ಹೊರಿಸಿದಾಕೆಯನ್ನು ವಿಚಾರಣೆ ಮಾಡುತ್ತಿದ್ದಾರೆ, ಆದರೆ ಆಕೆ ಮಾತ್ರ ದುರ್ಗಾ ಹೆಸರನ್ನು ಎಲ್ಲೂ ಪ್ರಸ್ತಾಪ ಮಾಡಿಲ್ಲ, ಹೆಣ್ಣು ಎಂಬ ಕಾರಣಕ್ಕೆ ಎಜೆ ಆಕೆಯನ್ನು ಸುಮ್ಮನೆ ಬಿಟ್ಟಿದ್ದಾನೆ, ಇತ್ತ ದುರ್ಗಾಳನ್ನು ಎಜೆ ಕರೆಯುವಾಗ ದುರ್ಗಾ ಭಯಗೊಳ್ಳುತ್ತಾಳೆ, ಎಜೆ ಬಳಿ ದುರ್ಗಾ ತಪ್ಪು ಒಪ್ಪಿಕೊಳ್ಳಬೇಕು ಎನ್ನುವಷ್ಟರಲ್ಲಿ ಎಜೆ ಹೇಳುತ್ತಾನೆ ನಾಳೆ ಲೀಲಾ ತಂದೆ ಕಾಲಿಗೆ ಬಿದ್ದು ತಪ್ಪಾಯಿತು ಎಂದು ಕೇಳಿಕೊಳ್ಳಬೇಕು ಎಂದು ಹೇಳಿ ಆಕೆಯನ್ನು ಹೊರಕಳುಹಿಸುತ್ತಾನೆ.

ಮನೆಗೆ ಬರ್ತಾಳ ಲೀಲಾ?
ಎಜೆ ಅಮ್ಮ ಲೀಲಾಳ ಜಪ ಮಾಡುತ್ತಾ ಹಾಸಿಗೆ ಹಿಡಿದಿದ್ದಾರೆ. ಎಲ್ಲಾ ಕೆಲಸವನ್ನು ರಾಮ್ ಚಾಚು ತಪ್ಪದೇ ಮಾಡುತ್ತಾನೆ, ಆದರೆ ಈ ಕೆಲಸವನ್ನು ಯಾಕೆ ರಾಮ್ ಇಷ್ಟು ತಡ ಮಾಡುತ್ತಿದ್ದಾನೆ ಎಂದು ದುರ್ಗಾ ಬಳಿ ಹೇಳಿಕೊಳ್ಳುತ್ತಿರುತ್ತಾರೆ. ಲೀಲಾ ಆದಷ್ಟೂ ಬೇಗ ಮನೆಗೆ ಬರಲಿ ಎಂಬುವುದು ಅವರ ಆಶಯ ಕೂಡ, ಆದರೆ ದುರ್ಗಾ ಮಾತ್ರ ಲೀಲಾಳನ್ನು ಮನೆಗೆ ಬರಲು ಬಿಡುತ್ತಾಳ? ಎಂಬುವುದೇ ಬಹುದೊಡ್ಡ ಪ್ರಶ್ನೆಯಾಗಿದೆ.


Click it and Unblock the Notifications











