ವಿಕ್ರಂ ವಿರುದ್ದ ಧ್ವನಿ ಎತ್ತಿದ ಛಾಯಾ: ಮೋಸದ ಬಲೆಗೆ ಬಿದ್ದ ಲೀಲಾ?

By ಪೂರ್ವ

'ಹಿಟ್ಲರ್ ಕಲ್ಯಾಣ' ಧಾರವಾಹಿ ಚೆನ್ನಾಗಿ ಮೂಡಿ ಬರುತ್ತಿದ್ದು ನೋಡುಗರ ಮನ ಗೆದ್ದಿದೆ. ಇದೀಗ ಏಜೆ ದುಷ್ಮನ್‌ಗಳನ್ನು ಮನೆಯಲ್ಲೇ ಇಟ್ಟುಕೊಂಡು ಇನ್ನೂ ಬೇರೆ ಕಡೆ ನನ್ನ ಜೀವಕ್ಕೆ ಅಪಾಯ ಇದೆ ಅನ್ನೋ ಹಾಗೆ ನಡೆದುಕೊಳ್ಳುತ್ತಾ ಇರುತ್ತಾರೆ. ಛಾಯಾ, ಎದುರಿಗೆ ಒಳ್ಳೆಯವಳ ಹಾಗೆ ನಡೆದುಕೊಳ್ಳುತ್ತಾ ಇದ್ದರೂ ಒಳಗೊಳಗೇ ದ್ವೇಷ ಕಾರುತ್ತಾ ಇದ್ದಾಳೆ. ತಾನು ಅಂದುಕೊಂಡ ಹಾಗೆ ಆಗಬೇಕು ಏಜೆ ಮೇಲೆ ಹೇಗಾದರೂ ಸೇಡು ತೀರಿಸಿಕೊಳ್ಳಬೇಕು ಎಂದೆಲ್ಲ ಯೋಚನೆ ಮಾಡುತ್ತಾ ಇದ್ದಾಳೆ.

ಇತ್ತ ಲೀಲಾ ಬಳಿ ಬಂದ ವಿಕ್ರಂ ನನ್ನನ್ನು ಎದುರು ಹಾಕಿಕೊಂಡರೆ ಏನೆಲ್ಲಾ ಆಗಬಹುದು ಎಂಬುವುದನ್ನು ಎಳೆ ಎಳೆಯಾಗಿ ಬಿಡಿಸಿ ಹೇಳುತ್ತಾ ಇರುತ್ತಾನೆ. ಲೀಲಾಳ ಸ್ಥಾನ ಎಲ್ಲಿ ಎಂಬುವುದನ್ನು ತೋರಿಸಲು ಅಂತರ ಎನ್ನುವ ಹೆಸರನ್ನು ಇಟ್ಟುಕೊಂಡು ಆಟ ಆಡಿಸುವ ಪ್ರಯತ್ನ ಮಾಡುತ್ತಾ ಇದ್ದಾನೆ ಇದನ್ನು ಮಾಡುತ್ತಿರುವುದು ಬೇರೆ ಯಾರೂ ಅಲ್ಲ ವಿಕ್ರಂ ಎನ್ನುವುದು ಲೀಲಾಗೆ ಇದೀಗ ಅರಿವಾಗಿದೆ. ವಿಕ್ರಂ ಕುತಂತ್ರಕ್ಕೆ ಸರಿಯಾದ ಪೆಟ್ಟು ನೀಡುವುದು ಹೇಗೆ? ಇದನ್ನೆಲ್ಲ ಏಜೆಗೆ ತಿಳಿಸುವುದು ಹೇಗೆ ಎನ್ನುವುದು ಲೀಲಾ ಯೋಚನೆ ಕೂಡ.

ಇತ್ತ ಏಜೆ, ಕರೆ ಎಲ್ಲಿಂದ ಬಂತು ಎಂದು ಸುತ್ತಾಟ ನಡೆಸಿ ಹುಡುಕಾಟ ನಡೆಸಿದ್ದಾನೆ. ಮೊದಲೇ ಹೇಳಿದ ಹಾಗೆ ಲೀಲಾ ಬಳಿ ಹೇಳಿರುತ್ತಾನೆ ವಿಕ್ರಂ ಹಾಗೂ ಛಾಯಾ ನನಗೆ ತುಂಬಾ ಹತ್ತಿರ ಆದವರು ಅವರಿಗೆ ಏನಾದರು ಯಾರಾದರೂ ಏನಾದರೂ ಮಾಡಿದರೆ ಅವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಹೇಳಿರುತ್ತಾನೆ. ಇದೀಗ ಸಡನ್ ಆಗಿ ಅಂತರ ಬದುಕಿದ್ದಾಳೆ ಬಾ ಲೀಲಾ ಆಕೆ ಇದ್ದಲ್ಲಿಗೆ ಹೋಗೋಣ ಎಂದೆಲ್ಲ ಹೇಳುತ್ತಾರೆ ಇದನ್ನು ಕೇಳಿದ ಲೀಲಾ, ಏಜೆ ಯೊಂದಿಗೆ ಹೊರ ನಡೆಯುತ್ತಾಳೆ. ಅನಾಮಿಕ ಕರೆಯಲ್ಲಿ ತಿಳಿಸಿದ ಹಾಗೆಯೇ ಎಲ್ಲಾ ಕಡೆ ಅಂತರ ಅನ್ನು ಹುಡುಕುತ್ತಾರೆ ಆದರೆ ಅಂತರ ಮಾತ್ರ ಏಜೆ ಕೈ ಗೆ ಸಿಗುವುದಿಲ್ಲ. ಇದನ್ನು ಕಂಡ ಏಜೆಗೆ ಬಹಳ ಬೇಸರ ಆಗುತ್ತದೆ. ಬಳಿಕ ತನ್ನನ್ನು ಯಾರೋ ಆಟ ಆಡಿಸುತ್ತಾ ಇದ್ದಾರೆ ಎಂಬುವುದು ತಿಳಿಯುತ್ತದೆ.

ವಿಕ್ರಂ ಆಟಕ್ಕೆ ತಿರುಗೇಟು ನೀಡುತ್ತಾಳ ಲೀಲಾ?

ವಿಕ್ರಂ ಆಟಕ್ಕೆ ತಿರುಗೇಟು ನೀಡುತ್ತಾಳ ಲೀಲಾ?

ಮರಳಿ ಬಂದ ಏಜೆ, ಲೀಲಾ ಬಗ್ಗೆ ಚೂರು ತಲೆ ಕೆಡಿಸಿಕೊಳ್ಳದೆ ತನ್ನ ಪಾಡಿಗೆ ಹೋಗುತ್ತಾನೆ ಇದನ್ನು ಕಂಡ ವಿಕ್ರಂ, ಲೀಲಾ ಬಳಿ ಬಂದು, 'ಏಜೆಗೆ ನಾನೇ ಇಂಪಾರ್ಟೆಂಟ್ ನನ್ನ ಬಿಟ್ಟು ಯಾರು ಇಂಪಾರ್ಟೆಂಟ್ ಅಲ್ಲ ಎಂದು ಹೇಳಿದಿರಿ. ಏಜೆ ಗೆ ಯಾರು ಇಂಪಾರ್ಟೆಂಟ್ ಎಂದು ತೋರಿಸಬೇಕಿತ್ತು. ಅದಕ್ಕೆ ಒಂದು ಸಣ್ಣ ಚಮಕ್ ಕೊಟ್ಟೆ. ಫೋನ್ ಕಾಲ್ ಬಂದಿರಬೇಕು ಅಲ್ವಾ. ಕ್ಲು ಸಿಕ್ಕಿರಬೇಕು ಅಲ್ವಾ. ಫೋನ್ ನಂಬರ್ ಗೋಸ್ಕರ ಬಹಳ ಒದ್ದಾಟ ಮಾಡಿ ಇರಬೇಕು ಅಲ್ವಾ. ಎಂದು ಹೇಳಿದಾಗ ಲೀಲಾ ಶಾಕ್ ಆಗಿ ಎದ್ದು ನಿಲ್ಲುತ್ತಾಳೆ.

ವಿಕ್ರಂ ಅಸಲಿ ಆಟಕ್ಕೆ ಅಂತ್ಯ ಹಾಡುತ್ತಾಳ ಲೀಲಾ

ವಿಕ್ರಂ ಅಸಲಿ ಆಟಕ್ಕೆ ಅಂತ್ಯ ಹಾಡುತ್ತಾಳ ಲೀಲಾ

ಇದನ್ನು ನೋಡಿದ ವಿಕ್ರಂ ಮಾತು ಮುಂದುವರಿಸುತ್ತಾನೆ, ಇದೆಲ್ಲ ನನಗೆ ಹೇಗೆ ಗೊತ್ತಾಯಿತು ಎಂದು ಅಂದುಕೊಳ್ಳುತ್ತಾ ಇದ್ದೀರಿ ಅಲ್ವಾ. ಇದ್ದೆಲ್ಲ ಮಾಡಿಸಿದ್ದು ನಾನೇ. ಜಸ್ಟ್ ಅಂತರ ಅನ್ನೋ ಹೆಸರು ಕಿವಿಗೆ ಬಿತ್ತು ಅಷ್ಟೇ. ಕೋಟ್ಯಂತರ ರೂಪಾಯಿ ಬ್ಯುಸಿನೆಸ್ ಮೀಟಿಂಗ್ ಬಿಟ್ಟು. ಏಜೆ ತಾನು ಎಲ್ಲಿದ್ದಿನಿ ಏನು ಮಾಡುತ್ತಾ ಇದ್ದೀನಿ. ಸೊಸೈಟಿಯಲ್ಲಿ ತನ್ನ ವ್ಯಾಲ್ಯೂ ಏನೆಂದು ಮರೆತು ಬೀದಿ ಬೀದಿ ಅಲೆದಾಡಿದ. ಇದಕ್ಕೆಲ್ಲ ಕಾರಣ ಅಂತರ ಅನ್ನೋ ಹೆಸರು. ಜೊತೆಯಲ್ಲಿ ಇರುವವರಿಗೆ ನೋವು ಆಗುತ್ತಾ ಇದೆಯಾ ಅವರು ಸರಿಯಾಗಿ ಇದ್ದಾರಾ ಎನ್ನುವುದನ್ನು ನೋಡದ ಏಜೆ ತಿಂದ್ರ ಎಂದು ಸಹ ಕೇಳಲಿಲ್ಲ ಎನ್ನುತ್ತಾನೆ.

ವಿಕ್ರಂ ಮುಖವಾಡ ಏಜೆ ಎದುರು ಬಯಲಾಗುತ್ತಾ?

ವಿಕ್ರಂ ಮುಖವಾಡ ಏಜೆ ಎದುರು ಬಯಲಾಗುತ್ತಾ?

ಬಳಿಕ ಮಾತು ಮುಂದುವರಿಸಿದ ವಿಕ್ರಂ, ಗಾಯ ಆಗಿ ರಕ್ತ ಬರುತ್ತಿದ್ದರು ಹೇಗೆ ಇದ್ದೀಯಾ ಎಂದು ಕೇಳಲಿಲ್ಲ. ಕಡೆ ಪಕ್ಷ ಒಂದು ತೊಟ್ಟು ನೀರು ಕುಡಿಯಲು ಬಿಡಲಿಲ್ಲ. ಇದಕ್ಕೆಲ್ಲ ಕಾರಣ ಅಂತರ ಅನ್ನೋ ಹೆಸರು. ಈ ಮನೆಗೆ ಅಂತರ ಒಂದೇ ಸಾಕು ನೀನು ಏನೇ ಮಾಡಿದರೂ ನಿನ್ನ ಜಾಗ ಯಾವುದು ಎಂಬುವುದು ನಿನಗೆ ಗೊತ್ತಾಗಿ ಇರಬೇಕು ಅಲ್ವಾ ಎಂದಾಗ ಲೀಲಾ ಕೋಪ ನೆತ್ತಿಗೇರುತ್ತದೆ. ಆ ವೇಳೆ ಅಲ್ಲಿಗೆ ಬಂದ ಛಾಯಾ, ವಿಕ್ರಂ ಎಂದು ಜೋರಾಗಿ ಕರೆಯುತ್ತಾಳೆ ಬಳಿಕ, 'ಇದೆಲ್ಲ ನೀವೇ ಮಾಡಿದ್ದ ಎಂದು ಕೇಳುತ್ತಾಳೆ. ಇದಕ್ಕೆ ವಿಕ್ರಂ, ನೋಡು ಇದನ್ನೆಲ್ಲ ಒಳಗೆ ಮಾತನಾಡೋಣ ಇದೀಗ ಹೋಗು ಎಂದು ಹೇಳುತ್ತಾನೆ.

ಛಾಯಾ ಕೋಪ ಕಂಡು ಲೀಲಾಗೆ ಆಶ್ಚರ್ಯ

ಛಾಯಾ ಕೋಪ ಕಂಡು ಲೀಲಾಗೆ ಆಶ್ಚರ್ಯ

ಆದರೆ ಛಾಯಾ ಮಾತ್ರ ವಿಕ್ರಂ ಮಾತು ಕೇಳದೆ, ವಿಕ್ರಂ ಈಗಲೇ ನನಗೆ ಎಲ್ಲಾ ವಿಚಾರ ತಿಳಿಯ ಬೇಕು. ಎಂದು ಹೇಳಿದಾಗ ವಿಕ್ರಂ, ಲೀಲಾ ಎದುರು ಮಾತನಾಡಲು ನಿರಾಕರಿಸುತ್ತಾನೆ. ಬಳಿಕ ಛಾಯಾ ನನ್ನು ಒಳಗೆ ಕರೆದುಕೊಂಡು ಹೋಗುತ್ತಾನೆ ಆ ವೇಳೆ ಛಾಯಾ ದ್ವೇಷ ದಿಂದ ಹೇಳುತ್ತಾಳೆ. ಈ ಥರ ಮಾಡಿದ್ದೇನೆ ಎಂದು ಒಂದು ಮಾತು ನನ್ನ ಬಳಿ ಹೇಳಬಾರದಿತ್ತ ಎಂದು. ಇನ್ನೂ ಏಜೆ ವಿರುದ್ದ ಕತ್ತಿ ಮಸೆಯುತ್ತಿರುವವರನ್ನು ಸುಮ್ಮನೆ ಬಿಡುತ್ತಾಳ ಲೀಲಾ ಎಂಬುವುದನ್ನು ಕಾದು ನೋಡಬೇಕಿದೆ.

More from Filmibeat

English summary
Zee Kannada serial Hitler kalyana Written Update on November 14th episode. Know more about it.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X