ಲೀಲಾ ಮೇಲೆ ಏಜೆಗೆ ಪ್ರೀತಿ ಆಗಿದೆಯಾ?

By ಪೂರ್ವ

ಏಜೆಗೆ ಇದೀಗ ತನ್ನ ತಪ್ಪಿನ ಅರಿವಾಗಿದೆ. ಅಂತರ ಸಿಗುತ್ತಾಳೆ ಎಂದು ಖುಷಿಯಲ್ಲಿ ಜೊತೆಗೆ ಇದ್ದವರ ಕಷ್ಟವನ್ನು ಅರಿಯದಾದೆನಲ್ಲಾ ಎಂದು ಬೇಸರ ವ್ಯಕ್ತಪಡಿಸುತ್ತಾನೆ. ಲೀಲಾ ತನಗೋಸ್ಕರ ತನ್ನ ಕುಟುಂಬಕ್ಕೊಸ್ಕರ ಅದೆಷ್ಟು ಕಷ್ಟ ಅನುಭವಿಸುತ್ತಾ ಇದ್ದಾಳೆ ಆದರೆ ಅದನ್ನೆಲ್ಲ ನಾನು ಪರಿಗಣಿಸದೆ ಒಂದು ತುತ್ತು ಊಟ ಮಾಡಲು ಬಿಡದೆ ಎಷ್ಟೊಂದು ಕಾಟ ಕೊಟ್ಟು ಬಿಟ್ಟೆನಲ್ಲ ಎಂದು ಬೇಸರ ಮಾಡಿಕೊಳ್ಳುತ್ತಾನೆ.

ಇನ್ನು ಲೀಲಾ ಏನು ಮಾಡುತ್ತಿದ್ದಾಳೆ. ಆಕೆ ಬಿದ್ದು ನೋವು ಮಾಡಿಕೊಂಡಿದ್ದಾಳೆ ನೋವಿಗೆ ಔಷಧ ಏನಾದರೂ ಹಚ್ಚಿಕೊಂಡು ಇರಬಹುದಾ ಅಥವಾ ಹಾಗೆಯೇ ಹೋಗಿ ಮಲಗಿರಬಹುದಾ ಏನು ಮಾಡುತ್ತಾ ಇರಬಹುದು ಆಕೆ ಎಂದು ಯೋಚನೆಯಲ್ಲಿ ಮುಳುಗುತ್ತಾನೆ. ಬಳಿಕ ಲೀಲಾಳನ್ನು ಸಮಾಧಾನ ಮಾಡಲು ಅಲ್ಲಿಂದ ತೆರಳುತ್ತಾನೆ. ಲೀಲಾ ಆ ವೇಳೆ ಮನದಲ್ಲಿ ತನಗಾಗಿ ಒಂದು ಜೀವ ಈ ಮನೆಯಲ್ಲಿ ಇದ್ದಿದ್ದರೆ ಎಷ್ಟು ಒಳ್ಳೆಯದಿತ್ತು. ಈ ಮನೆಯಲ್ಲಿ ನನ್ನ ಕ್ಷೇಮ ಸಮಾಚಾರ ವಿಚಾರಣೆ ಮಾಡಲು ಯಾರು ಇಲ್ಲ. ಎಲ್ಲಾ ಅವರವರ ಪಾಡಿಗೆ ಇರುತ್ತಾರೆ. ನನಗಾಗಿ ಒಂದು ಜೀವ ಕೂಡ ಇಲ್ಲ. ಇದು ಈಗ ಮಾತ್ರ ಅಲ್ಲ ಲೈಫ್ ಲಾಂಗ್ ನನಗೆ ಹೀಗೆಯೇ ಅನ್ನಿಸುತ್ತದೆ. ಏನು ಮಾಡೋಣ ಇದೆಲ್ಲ ನನ್ನ ಹಣೆ ಬರಹ ಎಂದು ಬೇಸರ ಮಾಡಿಕೊಳ್ಳುತ್ತಾ ಇರುತ್ತಾಳೆ.

ಲೀಲಾಳ ಕಷ್ಟ-ಸುಖ ವಿಚಾರಿಸಿದ ಏಜೆ

ಲೀಲಾಳ ಕಷ್ಟ-ಸುಖ ವಿಚಾರಿಸಿದ ಏಜೆ

ಆ ವೇಳೆ ಅಲ್ಲಿಗೆ ಏಜೆ ಬಂದು ಲೀಲಾ ಎಂದು ಕರೆಯುತ್ತಾನೆ. ಆ ವೇಳೆ ಲೀಲಾಗೆ ಏಜೆ ಕಂಡು ಕೊಂಚ ಗಾಬರಿ ಆಗುತ್ತದೆ. ಆದರೂ ಅದನ್ನೆಲ್ಲ ಯೋಚಿಸದೆ ಏನು ಏಜೆ ಎಂದು ಕೇಳಿದಾಗ ಏಜೆ, ಲೀಲಾ ನಾನು ಅಂತರ ಸಿಗುತ್ತಾಳೆ ಎಂಬ ಖುಷಿಯಲ್ಲಿ ನಿನ್ನ ಬಗ್ಗೆ ಮರೆತು ಬಿಟ್ಟೆ. ನೀನು ಬಿದ್ದರು ಊಟ ಮಾಡದಿದ್ದರು ಇದ್ಯಾವುದೂ ಆ ವೇಳೆ ನನ್ನ ಗಮನಕ್ಕೆ ಬಂದಿರಲಿಲ್ಲ. ಆದರೆ ಇಲ್ಲಿ ಬಂದು ಯೋಚನೆ ಮಾಡಿದಾಗ ನಾನು ಮಾಡಿರುವುದು ದೊಡ್ಡ ಪ್ರಮಾದ ಎಂದು ನನಗೆ ಅರಿವಾಗುತ್ತಿದೆ ಎನ್ನುತ್ತಾನೆ.

ಲೀಲಾಗೆ ಸೇವೆ ಮಾಡಿದ ಏಜೆ

ಲೀಲಾಗೆ ಸೇವೆ ಮಾಡಿದ ಏಜೆ

ನೀನು ಕೈಗೆ ಪೆಟ್ಟು ಮಾಡಿಕೊಂಡೆ ಹೇಗಿದೆ ಈಗ ನಿನ್ನ ಕೈ? ಗಾಯಕ್ಕೆ ಏನಾದರು ಹಚ್ಚಿದ್ದೀಯ ಎಂದು ಕೇಳಿದಾಗ ಲೀಲಾ, ಗಾಯಕ್ಕೆ ಅರಿಶಿಣ ಹಚ್ಚಿದರೆ ಗಾಯ ಪಟಾ ಫಟ್ ಅಂತ ಗುಣ ಆಗುತ್ತದೆ ಎಂದು ಹೇಳಿದಾಗ ಏಜೆ ಲೀಲಾ ತುಟಿ ಪಕ್ಕಾ ಕೈ ಇಟ್ಟು ಮಾತನಾಡದಂತೆ ಸನ್ನೆ ಮಾಡುತ್ತಾರೆ. ಬಳಿಕ ಲೀಲಾ ಕೈಯಲ್ಲಿ ಎಲ್ಲಿ ಪೆಟ್ಟು ಆಗಿದೆಯೋ ಅಲ್ಲಿಗೆ ಮದ್ದನ್ನು ಹಾಕುತ್ತಾನೆ. ಇದನ್ನು ನೋಡಿದ ಲೀಲಾಗೆ ಮನದಲ್ಲಿ ಆಶ್ಚರ್ಯ ಜೊತೆಗೆ ಖುಷಿಯೂ ಆಗುತ್ತದೆ.

ಲೀಲಾ ಪರ ನಿಂತ ದುರ್ಗಾ

ಲೀಲಾ ಪರ ನಿಂತ ದುರ್ಗಾ

ಇನ್ನೂ ದುರ್ಗಾ ಜೊತೆ ಸರು ಹಾಗೂ ಲಕ್ಷ್ಮಿ ಕೊಂಕಿನಿಂದ ಮಾತನಾಡುತ್ತಾ ಇರುತ್ತಾರೆ. ಮುಂಚೆಯೆಲ್ಲಾ ಲೀಲಾನ ಕಂಡ್ರೆ ಆಗದವರು ಇದೀಗ ಲೀಲಾ ಎಂದರೆ ಎಷ್ಟೆಲ್ಲ ಖುಷಿ ಪಡುತ್ತಿರಾ ಆಕೆಯನ್ನು ಎಷ್ಟು ಸಂತೈಸುತ್ತಿರ. ಆಕೆಯ ಜೊತೆ ಬೆರೆಯುತ್ತಿರಾ ಎಂದೆಲ್ಲ ಹೇಳುತ್ತಾರೆ. ಇದನ್ನು ಕೇಳಿದ ದುರ್ಗಾ ಹೇಳುತ್ತಾಳೆ. ನಾನು ಬದಲಾಗಿದ್ದೇನೆ ನೀವು ಬದಲಾಗಿ ನಮ್ಮ ಮನೆಯ ಮೇಲೆ ಬೇರೆಯವರು ಆಕ್ರಮಣ ಮಾಡುವ ಮುಂಚೆ ನಾವು ಎಚ್ಚೆತ್ತುಕೊಳ್ಳಬೇಕು. ಲೀಲಾ ಹಾಗೂ ಏಜೆ ಗಂಡ ಹೆಂಡತಿ ಅವರಿಬ್ಬರನ್ನು ದೂರ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಒಂದು ವೇಳೆ ಯಾರಾದರೂ ದೂರ ಮಾಡಿದರು ಎಂದುಕೊಳ್ಳಿ ಅವರನ್ನು ನಾನು ಸುಮ್ಮನೆ ಬಿಡುವುದಿಲ್ಲ ಎಂದು ಕೋಪದಿಂದ ಹೇಳುತ್ತಾಳೆ. ಇದನ್ನು ಕೇಳಿದ ಲಕ್ಷ್ಮಿ ಸರು ಸುಮ್ಮನಾಗುತ್ತಾರೆ.

ಕೌಸಲ್ಯಾ ಗೆ ದುರಾಸೆ, ಚಂದ್ರಶೇಖರ್ ಗೆ ಪ್ರಾಣ ಸಂಕಟ

ಕೌಸಲ್ಯಾ ಗೆ ದುರಾಸೆ, ಚಂದ್ರಶೇಖರ್ ಗೆ ಪ್ರಾಣ ಸಂಕಟ

ಇನ್ನು ಕೌಸಲ್ಯ ಮಗಳ ಮನೆಯಿಂದ ರೇವತಿಗೆ ಏನು ಕೊಟ್ಟಿರಬಹುದು ಎಂದು ಯೋಚನೆ ಮಾಡುತ್ತಾ ಇರುತ್ತಾಳೆ ಹಾಗೆಯೇ ರೇವತಿ ಜೊತೇನೆ ಕೇಳುತ್ತಾಳೆ ಆದರೆ ಅದಕ್ಕೆ ರೇವತಿ ತೊದಲುತ್ತಾ ಇರುತ್ತಾಳೆ. ಈ ವೇಳೆ ಲೀಲಾ ತಂದೆ ಹೇಳುತ್ತಾರೆ ಯಾಕೆ ಕೌಸಲ್ಯ ನಿನಗೆ ಇಷ್ಟು ದುರಾಸೆ. ನಮಗೆ ಯಾಕೆ ಬೇರೆಯವರ ದುಡ್ಡು. ನಾನೆಷ್ಟು ದುಡಿದರು ನಿನ್ನ ದುರಾಸೆ ಮಾತ್ರ ಕಡಿಮೆ ಆಗುವುದಿಲ್ಲ ಅಲ್ವಾ ಎಂದು ಹೇಳುತ್ತಾರೆ. ಇದನ್ನು ಕೇಳಿದ ಕೌಸಲ್ಯ ಹೌದು ನನಗೆ ದುರಾಸೆ, ನೀವು ನನಗೆ ತುಂಬಾ ಕೊಟ್ಟಿದ್ದೀರಿ ಅಲ್ವಾ ಅದಕ್ಕೆ ನನಗೆ ದುರಾಸೆ. ನನಗೆ ನೀವು ಕೈಗೊಂದು ಆಳು ಕಾಲಿಗೆ ಒಂದು ಆಳು ಬೆಳಗ್ಗೆ ಎದ್ದ ತಕ್ಷಣ ಟೀ ಕೊಡಲು ಜನ ಹಾಗೆಯೇ ಹೊರಗೆ ಹೋದಾಗ ಎರಡೆರಡು ಕಾರು ಎಂದೆಲ್ಲ ವ್ಯಂಗ್ಯವಾಗಿ ಹೇಳಿದಾಗ ಚಂದ್ರಶೇಖರ್ ಸುಮ್ಮನಾಗುತ್ತಾರೆ. ರೇವತಿಗೆ ಇದನ್ನು ಕೇಳಲು ಆಗದೆ ಒಳಗೆ ಹೋಗುತ್ತಾಳೆ. ಏನೇ ಬದಲಾದರೂ ತನ್ನ ತಾಯಿ ಬದಲಾಗಲು ಸಾದ್ಯ ಇಲ್ಲ ಎಂದು ಮನದಲ್ಲಿ ಯೋಚನೆ ಮಾಡುತ್ತಾಳೆ.

More from Filmibeat

English summary
Zee Kannada serial Hitler Kalyana Written Update on November 15th episode. Know more about it.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X