ರೇವತಿಯ ಹುಡುಗನಿಗೆ ಲೀಲಾ ಆವಾಜ್: ನಿಜ ವಿಚಾರ ತಿಳಿಸಿದ ಏಜೆ

By ಪೂರ್ವ

ಲೀಲಾಗೆ ತಂಗಿ ರೇವತಿಯದ್ದೇ ಚಿಂತೆ ಆಕೆಯ ಮದುವೆಯನ್ನು ಹೀಗೆ ಮಾಡಬೇಕು ಹಾಗೆ ಮಾಡಬೇಕು. ರೇವತಿ ಹುಡುಗನನ್ನು ನಾನೇ ಖುದ್ದಾಗಿ ನೋಡಬೇಕು ಎಂದು ನೂರಾರು ಕನಸುಗಳನ್ನು ಇಟ್ಟುಕೊಂಡಿದ್ದಾಳೆ. ಏಜೆ ಬಳಿ ಮೊದಲೇ ಲೀಲಾ ಹೇಳಿರುತ್ತಾಳೆ ರೇವತಿಯನ್ನು ನಾನು ಚಿಕ್ಕ ವಯಸ್ಸಿನಿಂದಲೂ ನೋಡುತ್ತಾ ಬಂದಿದ್ದೇನೆ ಆಕೆಯ ಹುಡುಗ ಹೇಗಿರಬೇಕು ಎಂಬ ಕಲ್ಪನೆಯೂ ಲೀಲಾ ಮನದಲ್ಲಿ ಮೂಡಿದೆ. ಹಾಗಾಗಿ ರೇವತಿ ಮದುವೆಯಾಗುವ ಹುಡುಗನನ್ನು ನಾನು ನೋಡಬೇಕು ಎನ್ನುತ್ತಾಳೆ.

ಈ ಸಮಯದಲ್ಲಿ ಸರು-ಲಕ್ಷ್ಮಿ, ಏಜೆ ಬಳಿ ಬಂದು ನಮಗೂ ಏನಾದರು ಕೆಲಸ ಕೊಡಿ ಏಜೆ ಕುಳಿತು ಕುಳಿತು ಸಾಕಾಯಿತು. ನಾವು ರೇವತಿ ಮದುವೆಯಲ್ಲಿ ಜವಾಬ್ದಾರಿ ತೆಗೆದುಕೊಳ್ಳೋಣ ಎಂದುಕೊಂಡಿದ್ದೇವೆ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಏಜೆ ನೀವಿಬ್ಬರೂ ಲೀಲಾ ಮನೆಗೆ ಹೋಗಿ ಹಾಗಾದರೆ ಎಂದು ಹೇಳಿ ಇಬ್ಬರನ್ನೂ ಕಳುಹಿಸುತ್ತಾನೆ. ಇನ್ನು ಏಜೆ, ಲೀಲಾಳನ್ನೂ ಜೋರಾಗಿ ಕರೆಯುತ್ತಾನೆ. ಲೀಲಾ ಓಡಿಕೊಂಡು ಏಜೆ ಮುಂದೆ ಬಂದು ನಿಲ್ಲುತ್ತಾಳೆ. ಇದನ್ನು ನೋಡಿದ ಏಜೆ, ಲೀಲಾ ಬಳಿ ಕೇಳುತ್ತಾನೆ ನಿನ್ನ ತಲೆ ಎಲ್ಲಿದೆ ಲೀಲಾ ಎಂದು ಕೇಳಿದಾಗ ಲೀಲಾ ಉತ್ತರ ಇನ್ನೇನಿರುತ್ತೆ ಬಿಡಿ ಕುತ್ತಿಗೆ ಮೇಲೆ ಎಂದು ಹೇಳಿರುತ್ತಾರೆ. ಇದನ್ನು ಕೇಳಿ ಏಜೆಗೆ ಇನ್ನೂ ಸಿಟ್ಟು ಬಂದರೂ ಸುಮ್ಮನಾಗುತ್ತಾನೆ.

ಏಜೆ, ನಾವು ಇವತ್ತು ರೇವತಿ ಹುಡುಗನನ್ನು ಭೇಟಿ ಆಗಲು ಹೋಗುತ್ತಾ ಇದ್ದೇವೆ ಎಂದು ಹೇಳಿದಾಗ ಲೀಲಾಗೆ ಖುಷಿ ತಡೆಯಲು ಆಗುವುದಿಲ್ಲ. ಬಳಿಕ ಲೀಲಾ ರೇವತಿ ಬಳಿ ಹೇಳುವುದಾಗಿ ಹೇಳುತ್ತಾರೆ. ಇದನ್ನು ಕೇಳಿದ ಏಜೆ, ಯಾರಿಗೆ ಯಾರಿಗೆ ತಿಳಿಸಬೇಕು ಎಲ್ಲರಿಗೆ ತಿಳಿಸಿದ್ದೇನೆ, ನೀನು ಮಾತ್ರ ಎಲ್ಲೂ ಎಡವಟ್ಟು ಮಾತ್ರ ಮಾಡಬಾರದು ಎಂದು ಹೇಳುತ್ತಾರೆ. ಬಳಿಕ ಲೀಲಾ ರೇವತಿ ಹುಡುಗನನ್ನು ನೋಡಲು ತಯಾರಾಗಿ ಬರುತ್ತಾಳೆ.

ಬಳಿಕ ರೇವತಿ ಹುಡುಗನನ್ನು ನೋಡಲು ಹೋಗುತ್ತಾರೆ. ಒಂದು ರೆಸಾರ್ಟ್ ಬಳಿ ಬಂದು ನಿಂತುಕೊಳ್ಳುತ್ತಾರೆ. ಇತ್ತ ಲೀಲಾಗೆ ಕಾತರ ತಡೆಯಲು ಆಗುತ್ತಿಲ್ಲ. ತಾವು ಏಷ್ಟು ದೂರದಿಂದ ಬಂದಿದ್ದೇವೆ ಆದರೆ ಹುಡುಗ ಇನ್ನೂ ಬಂದಿಲ್ಲ ಅಲ್ವಾ ಎಂದುಕೊಂಡು ತನ್ನ ಕಾತರತೆಯನ್ನು ವ್ಯಕ್ತ ಪಡಿಸುತ್ತಾಳೆ. ಅದಕ್ಕೆ ಏಜೆ, ಲೀಲಾಳನ್ನು ಸಮಾಧಾನ ಮಾಡುತ್ತಾನೆ. ಆತ ತಮಗೋಸ್ಕರ ಬರುತ್ತಿದ್ದಾನೆ ಆದುದರಿಂದ ನಾವೇ ಆತನಿಗಿಂತ ಕೊಂಚ ಬೇಗ ಬರಬೇಕು ಅಲ್ವಾ ಎಂದು ಹೇಳುತ್ತಾನೆ.

ಏಜೆ ಬಳಿ ದುಃಖ ತೋಡಿಕೊಂಡ ಲೀಲಾ

ಏಜೆ ಬಳಿ ದುಃಖ ತೋಡಿಕೊಂಡ ಲೀಲಾ

ಆಗ ಲೀಲಾ ಏಜೆ ಬಳಿ ಹೇಳುತ್ತಾಳೆ ಏನು ಏಜೆ ಹೀಗೆ ಹೇಳುತ್ತ ಇದ್ದೀರಾ ನಾವು ಯಾರಿಗೋಸ್ಕರ ಮೀಟ್ ಆಗಲು ಬಂದಿದ್ದೇವೆ ಅಂತ ಅಲ್ಲ ನಾವು ಯಾರನ್ನು ಮೀಟ್ ಆಗುತ್ತೇವೆ ಎಂಬುವುದು ಇಂಪಾರ್ಟೆಂಟ್. ಮೀಟ್ ಆಗಲು ಬಂದಿದ್ದು ಸೆಲೆಬ್ರಿಟಿ ಏಜೆ, ನೀವು ಬಂದಿದ್ದೀರಿ ಎಂದ ಮೇಲೆ ಒಂದು ಗಂಟೆ ಮುಂಚೆ ಬಂದು ಕಾಯಬೇಕಲ್ವ. ಎಲ್ಲಿ ಬಂದೆ ಇಲ್ಲ ಹುಡುಗ ಎಂದುಕೊಂಡು ಸುತ್ತ ನೋಡಬೇಕಾದರೆ ಇನ್ನೂ ಏಜೆಗೆ ಕಿರಿ ಕಿರಿ ಆಗುತ್ತದೆ. ಬಳಿಕ ಏಜೆ ಬಳಿ ರಿಕ್ವೆಸ್ಟ್ ಮಾಡುತ್ತಾಳೆ.

ಹುಡುಗನನ್ನು ಮೊದಲು ನೋಡಬೇಕೆಂದ ಲೀಲಾ

ಹುಡುಗನನ್ನು ಮೊದಲು ನೋಡಬೇಕೆಂದ ಲೀಲಾ

ಯಾವುದೋ ಹೊಸ ಜಾಗಕ್ಕೆ ಕರೆದುಕೊಂಡು ಬಂದು ನನ್ನ ಒಬ್ಬಳನ್ನೆ ಈ ರೀತಿ ಬಿಟ್ಟು ಹೋಗಬೇಡಿ ನನಗೆ ಭಯ ಆಗುತ್ತದೆ ಎಂದು ಮನದಲ್ಲಿ ಮೂಡಿದ ಭಯವನ್ನು ತೋಡಿಕೊಳ್ಳುತ್ತಾಳೆ. ಬಳಿಕ ಲೀಲಾಗೆ ಏಜೆ ಒಂದೆರಡು ಬುದ್ದಿ ಮಾತನ್ನು ಹೇಳುತ್ತಾರೆ. ಮದುವೆ ಆಗುವ ವೇಳೆ ಎಲ್ಲವೂ ಚೆನ್ನಾಗಿ ಇರುತ್ತದೆ. ಮದುವೆ ಆದ ಬಳಿಕ ಒಟ್ಟಿನಲ್ಲಿ ಮದುವೆ ಮಾಡಿಕೊಳ್ಳುವವರು ಈ ವೇಳೆ ಮಾತನಾಡಿದರೆ ಒಳ್ಳೆಯದು ಎಂದು ಹೇಳಿದಾಗ ರೇವತಿಯನ್ನು ನಾನೇ ಬೆಳೆಸಿದ್ದು ಅಲ್ವಾ ಆದ ಕಾರಣ ನಾನೇ ಹುಡುಗನ ನೋಡಿ ಓಕೆ ಮಾಡಬೇಕು ಎಂದು ಲೀಲಾ ಹೇಳುತ್ತಾಳೆ.

ಮತ್ತೆ ಎಡವಟ್ಟು ಮಾಡಿಕೊಂಡ ಲೀಲಾ

ಮತ್ತೆ ಎಡವಟ್ಟು ಮಾಡಿಕೊಂಡ ಲೀಲಾ

ಈ ವೇಳೆ ರೇವತಿ ಓಡೋಡಿ ಅಕ್ಕನ ಬಳಿ ಬರಬೇಕಾದರೆ ಎಡವಿ ಬೀಳುತ್ತಿರುವಾಗ ಒಬ್ಬ ಹುಡುಗ ಬಂದು ಹಿಡಿದು ಕೊಳ್ಳುತ್ತಾನೆ. ಇದನ್ನು ನೋಡಿದ ಲೀಲಾ ಓಡೋಡಿ ಬರುತ್ತಾಳೆ. ಬಳಿಕ ಆ ಹುಡುಗನಿಗೆ ಧನ್ಯವಾದ ಹೇಳುತ್ತಾರೆ. ಬಳಿಕ ಲೀಲಾ, ರೇವತಿ ಬಳಿ ಮೆತ್ತಗೆ ಬರಲು ಹೇಳುತ್ತಾಳೆ. ಬಳಿಕ ಏಜೆ ಬಳಿ ಬಂದು ಏಜೆ ನಮ್ಮ ಹುಡುಗಿ ಬಂದಾಯಿತು ಎಲ್ಲಿ ಹುಡುಗ ಎಂದಾಗ ಅಲ್ಲಿಗೆ ರೇವತಿ ಎಡವಿದಾಗ ಹಿಡಿದುಕೊಂಡ ಯುವಕ ಬರುತ್ತಾನೆ. ಲೀಲಾ ಆ ಹುಡುಗನನ್ನು ನೋಡಿ ತರಾಟೆಗೆ ತೆಗೆದುಕೊಳ್ಳುತ್ತಾಳೆ. ಹಲೋ ಬಾಸ್ ಥಾಂಕ್ಸ್ ಎಂದು ಹೇಳಿ ಆಯಿತು ತಾನೇ. ಇನ್ನೇನು ಹಾರ ಹಾಕಿ ಸನ್ಮಾನ ಮಾಡಬೇಕಾ ಎಂದು ಕೇಳುತ್ತಾಳೆ.

ರೇವತಿ ಹುಡುಗನಿಗೆ ಲೀಲಾ ಫುಲ್ ಕ್ಲಾಸ್

ರೇವತಿ ಹುಡುಗನಿಗೆ ಲೀಲಾ ಫುಲ್ ಕ್ಲಾಸ್

ಆ ವೇಳೆ ರೇವತಿಯನ್ನು ನೋಡುತ್ತಾ ಇರಬೇಕಾದರೆ ಯಾಕೆ ಹಾಗೆ ಗುರಾಯಿಸಿ ನೋಡುತ್ತಾ ಇದ್ದೀರಾ ಯಾವತ್ತೂ ಹುಡುಗಿಯರನ್ನು ನೋಡದವರ ಹಾಗೆ ನೀವು ಹುಡುಗಿಯರನ್ನು ನೋಡೆ ಇಲ್ವಾ. ಇವರು ಯಾರು ಅಂತ ನಿಮಗೆ ಗೊತ್ತಾ? ಏಜೆ ನೋಡಿ ಯಾವ ಥರ ಗುರಾಯಿಸುತ್ತ ಇದ್ದಾರೆ ಅಂತ. ಎಂದು ಲೀಲಾ ಕೋಪದಿಂದ ಹೇಳಬೇಕಾದರೆ ಏಜೆ ಮಾತ್ರ ಲೀಲಾ ಕಾಮ್ ಡೌನ್. ರೆವತಿಯನ್ನು ನೋಡಲು ಬಂದ ಹುಡುಗ ಇವರೇ ಎಂದು ಹೇಳುತ್ತಾರೆ. ಇದನ್ನು ಕೇಳಿದ ಲೀಲಾ ದಂಗಾಗುತ್ತಾಳೆ. ಇನ್ನು ರೇವತಿ ಮಾತ್ರ ನಾಚಿ ನೀರಾದಳು.

More from Filmibeat

English summary
Zee Kannada serial Hitler Kalyana Written Update on November 18th episode. Know more about it.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X