ಛಾಯಾಳ ಬಣ್ಣದ ಮಾತಿಗೆ ಮರುಳಾಗದ ಲೀಲಾ: ನಿಜ ಬಯಲು ಮಾಡುತ್ತಾಳ?
'ಹಿಟ್ಲರ್ ಕಲ್ಯಾಣ' ಧಾರವಾಹಿ ಅಚಾನಕ್ ತಿರುವುಗಳ ಮೂಲಕ ನೋಡುಗರಿಗೆ ಮುದ ನೀಡುತ್ತಿದೆ. ಅದೆಷ್ಟೇ ಕಷ್ಟ ಆದರೂ ಲೀಲಾ, ಏಜೆ ಮನೆಯಲ್ಲಿ ಹಲ್ಲು ಕಚ್ಚಿಕೊಂಡಿದ್ದಾಳೆ. ಇದೀಗ ತನ್ನ ತಂಗಿಗೆ ಉತ್ತಮ ವರ ಬಂದಿದ್ದಾನೆ ಎಂದು ತಿಳಿದು ಲೀಲಾ ಕುಣಿದು ಕುಪ್ಪಳಿಸುತ್ತಿದ್ದಾಳೆ. ಬಳಿಕ ಅಮ್ಮನಿಗೂ ಕರೆ ಮಾಡಿ ಬಹಳ ಉತ್ತಮ ಹುಡುಗ. ಆತ ಫಾರಿನ್ ನಲ್ಲಿ ಬೇರೆ ಇರುವುದು, ಎನೂ ತೊಂದರೆ ಇಲ್ಲ. ನಮ್ಮ ಚುಕ್ಕಿ ಬಹಳ ಖುಷಿ ಆಗಿ ಇರುತ್ತಾಳೆ ಎಂದು ಹೇಳುತ್ತಾಳೆ.
ಇದನ್ನು ಕೇಳಿದ ಕೌಸಲ್ಯಗೆ ಬಹಳ ಖುಷಿ ಆಗುತ್ತದೆ. ಅಪ್ಪನ ನೆನಪಾಗಿ ಕರೆ ಮಾಡಿ ಮಾತನಾಡಬೇಕು ಅನ್ನಿಸುತ್ತದೆ. ತಂದೆಗೆ ಕರೆ ಮಾಡಿದ ವೇಳೆ ಆ ಕರೆಯನ್ನು ವಿಕ್ರಂ ತೆಗೆಯುತ್ತಾನೆ. ಆದರೆ ವಾಯ್ಸ್ ಬೇರೆ ಕೇಳುತ್ತಿರುವುದರಿಂದ ಮೊಬೈಲ್ ವಾಪಸ್ ನೋಡುತ್ತಾಳೆ ಇದನ್ನು ನೋಡಿದ ವಿಕ್ರಂ ಹೇಳುತ್ತಾನೆ ಇದು ನಿಮ್ಮ ತಂದೆಯದ್ದೇ ಮೊಬೈಲ್ ಎಂದಾಗ ಲೀಲಾಗೆ ಶಾಕ್ ಆಗುತ್ತದೆ.
ಆಗ ವಿಕ್ರಂ, ಶಾಕ್ ಆಯಿತಾ? ನಾನೇ ನಿನ್ನ ತಂದೆಯ ಮೊಬೈಲ್ ನಿಂದಾ ಮಾತನಾಡುತ್ತಾ ಇರುವುದು. ಏಜೆ ಸಾವು ನಿಮ್ಮ ಕೈ ಯಲ್ಲಿ ನಿನ್ನ ತಂಗಿ ಮದುವೆ ನನ್ನ ಕೈಯಲ್ಲಿ ಎಂದು ಲೀಲಾಗೆ ಎಚ್ಚರಿಕೆ ಮೇಲೆ ಬೆದರಿಕೆ ಹಾಕುತ್ತಾನೆ. ಏಜೆ ನೋಡಿರುವ ಹುಡುಗನನ್ನು ನೋಡಿ ನಿಮ್ಮ ಮನೆಯವರು ಎಲ್ಲರೂ ಖುಷಿ ಆದರಂತೆ, ಆದರೆ ಟ್ವಿಸ್ಟ್ ಏನು ಗೊತ್ತಾ ಏಜೆ ಹುಡುಗರನ್ನು ನೋಡಿ ಇರಬಹುದು ಆದರೆ ಏಜೆಗೆ ಹುಡುಗನನ್ನು ತೋರಿಸಿದ್ದು ನಾವೇ ಎಂದು ಹೇಳುತ್ತಾನೆ ವಿಕ್ರಂ. ಇದನ್ನು ಕೇಳಿದ ಲೀಲಾ ಗೆ ಸಿಡಿಲು ಬಡಿದ ಹಾಗೆ ಆಗುತ್ತದೆ.

ಲೀಲಾ ಗೆ ಎಚ್ಚರಿಕೆ ನೀಡಿದ ವಿಕ್ರಂ
'ನೀವು ನೋಡಿರುವ ಹುಡುಗ ನಾನು ಸೆಲೆಕ್ಟ್ ಮಾಡಿ ಇರುವ ಹುಡುಗ. ನಾನು ಕುಳಿತುಕೋ ಅಂದರೆ ಕುಳಿತುಕೊಳ್ಳುತ್ತಾನೆ, ನಿಂತುಕೋ ಎಂದರೆ ನಿಂತುಕೊಳ್ಳುತ್ತಾನೆ. ಈಗ ಏನು ಹೇಳುವಿರಿ ನೀವು ಎಂದು ಹೇಳುತ್ತಾನೆ. ಆ ವೇಳೆ ಅಲ್ಲಿಗೆ ಬಂದ ಲೀಲಾ ತಂದೆ ವಿಕ್ರಂ ಬಳಿ ಯಾರದ್ದಪ್ಪ ಫೋನ್ ಎಂದು ಕೇಳುತ್ತಾನೆ ಇದನ್ನು ಕೇಳಿದ ಲೀಲಾ ದಂಗಾಗುತ್ತಾಳೆ.

ವಿಕ್ರಂ ಜಾಲದಲ್ಲಿ ಸಿಲುಕಿದ ಲೀಲಾಳ ತಂದೆ
ಆದರೆ ಲೀಲಾ ತಂದೆಯನ್ನು ನೋಡಿ ವಿಕ್ರಂ ಹೇಳುತ್ತಾನೆ, ಫೋನ್ ರಿಂಗ್ ಆಗುತ್ತಿತ್ತು ಯಾರು ಇಲ್ಲದನ್ನು ನೋಡಿ ನಾನೇ ರಿಸೀವ್ ಮಾಡಿ ಬಿಟ್ಟೆ ಸಾರಿ ಕೇಳುವುದು ಯಾಕೆ ನಾನು ಮಾತನಾಡುತ್ತೇನೆ ಎಂದು ಹೇಳುತ್ತಾರೆ. ಇದನ್ನು ಕೇಳಿದ ವಿಕ್ರಂ ಸುಮ್ಮನಾಗುತ್ತಾನೆ. ಲೀಲಾ ತಂದೆ ಲೀಲಾ ಬಳಿ ಮೆತ್ತಗೆ ಮಾತನಾಡುತ್ತಾರೆ. ಬಳಿಕ ನಡೆದ ದಾರಿಯಲ್ಲಿ ಏನಾಯಿತು ಎಂಬುವುದನ್ನು ವಿಸ್ತಾರವಾಗಿ ಲೀಲಾ ಬಳಿ ಆಕೆಯ ತಂದೆ ವಿವರಣೆ ನೀಡುತ್ತಾರೆ. ಬಳಿಕ ವಿಕ್ರಂ ಕಾಪಾಡಿರುವ ವಿಚಾರವನ್ನು ಹೇಳುತ್ತಾರೆ ಇದನ್ನು ಕೇಳಿದ ಲೀಲಾಗೆ ವಿಕ್ರಂನ ಕೆಂಗಣ್ಣು ತಂದೆಯ ಮೇಲೆ ಬಿದ್ದಿದೆ ಎಂದು ಸ್ಪಷ್ಟವಾಗಿ ಗೊತ್ತಾಗುತ್ತದೆ.

ಛಾಯಾ ನಕಲಿ ಆಟ ತಿಳಿಯುತ್ತಾ ಲೀಲಾಗೆ?
ಇನ್ನು ವಿಕ್ರಂ ಬಗ್ಗೆ ಲೀಲಾ ಯೋಚನೆ ಮಾಡುತ್ತಾ ಇರುವಾಗ ಅಲ್ಲಿಗೆ ಬಂದ ಛಾಯಾ ಮೆತ್ತಗೆ ಲೀಲಾ ಅವರೇ ಎಂದು ನಾಟಕೀಯವಾಗಿ ಕರೆಯುತ್ತಾರೆ. ಏನು ಯೋಚನೆ ಮಾಡುತ್ತಾ ಇದ್ದೀರಾ ಎಂದು ಕೇಳುತ್ತಾಳೆ. ಲೀಲಾ ಹೇಳುತ್ತಾಳೆ ನಮ್ಮ ಜೀವನದಲ್ಲಿ ಯೋಚನೆ ಎನ್ನುವುದೇ ಇರಲಿಲ್ಲ ಛಾಯಾ ಅವರೇ ಆದರೆ ನಿಮ್ಮ ಗಂಡನಿಂದಾಗಿ ಹಗಲಿರುಳು ಯೋಚನೆ ಮಾಡುವ ಹಾಗೆ ಆಗಿದೆ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಛಾಯಾ ಮನದಲ್ಲೇ ನಗುತ್ತಾಳೆ. ಆದರೆ ಅದಾವುದೂ ತೋರ್ಪಡಿಸದೆ ಇರುತ್ತಾಳೆ.

ಏಜೆಗೆ ಸತ್ಯ ಹೇಳಲು ಹೊರಟ ಲೀಲಾ!
ಮಾತು ಮುಂದುವರೆಸಿದ ಲೀಲಾ, ವಿಕ್ರಂ ಆಟ ಮಿತಿ ಮೀರಿದೆ ಈ ಬಾರಿ ಮಾತ್ರ ಏಜೆ ಬಳಿ ಎಲ್ಲಾ ವಿಚಾರ ಹೇಳಿ ಬಿಡಬೇಕು ಇಲ್ಲವಾದರೆ ನಮಗೆ ಉಳಿಗಾಲ ಇಲ್ಲ ಎನ್ನುತ್ತಾಳೆ. ಈ ವೇಳೆ ಛಾಯಾ, ಏಜೆ ನಮ್ಮನ್ನೆಲ್ಲ ಎಷ್ಟು ಪ್ರೀತಿಯಿಂದ ನೋಡಿಕೊಳ್ಳುತ್ತಾ ಇದ್ದರೂ ಇದೀಗ ನನ್ನ ಗಂಡ ಏಜೆ ಹಿಂದೆ ಪಿತೂರಿ ನಡೆಸುತ್ತಾ ಇದ್ದಾರೆ ಇದು ಬೇಸರ ತಂದಿದೆ ಎಂದು ಹೇಳಿದಾಗ ಲೀಲಾ ಮಾತ್ರ ಸಿಟ್ಟಿನಿಂದ ನಿಂತು ನಾನೇ ಎಲ್ಲವನ್ನೂ ಏಜೆ ಬಳಿ ಹೇಳುತ್ತೇನೆ ಇಲ್ಲವಾದರೆ ಬಹಳ ಕಷ್ಟ ಎಂದುಕೊಂಡು ಏಜೆ ಬಳಿ ನಿಜ ವಿಚಾರ ಹೇಳಲು ಹೋಗುತ್ತಾಳೆ. ಇದನ್ನು ನೋಡಿದ ಛಾಯಾಗೆ ಸಿಕ್ಕಿ ಹಾಕಿಕೊಳ್ಳುವ ಲಕ್ಷಣ ಗೋಚರ ಆಗುತ್ತಿದೆ. ವಿಕ್ರಂ ಬಣ್ಣ ಬಯಲು ಮಾಡಲು ಹೋದ ಲೀಲಾಗೆ ಮುಂದೇನು ಕಾದಿದೆ ಎಂಬುವುದನ್ನು ಕಾದು ನೋಡಬೇಕಿದೆ.


Click it and Unblock the Notifications











