Don't Miss!
- News
ಕೆಲವೇ ಕ್ಷಣಗಳಲ್ಲಿ ತುಮಕೂರಿಗೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿ, ಸಿದ್ಧತೆ ಹೇಗಿದೆ ತಿಳಿಯಿರಿ
- Technology
ಟೆಲಿಗ್ರಾಮ್ನಲ್ಲಿ ವಾಟ್ಸಾಪ್ ಅನ್ನೇ ಮೀರಿಸುವ ಫೀಚರ್ಸ್!; ಬಳಕೆದಾರರಿಗೆ ಸಾಕಷ್ಟು ಅನುಕೂಲ
- Finance
ಅದಾನಿ ಡಾಲರ್ ಬಾಂಡ್ ವಿರುದ್ಧ ಸಾಲ ನೀಡಲು ಸ್ಟಾಡರ್ಡ್ ಚಾರ್ಟೆಡ್ ನಕಾರ: ವರದಿ
- Sports
ಬಾರ್ಡರ್-ಗವಾಸ್ಕರ್ ಟ್ರೋಫಿ: ಭಾರತವನ್ನು ಮಣಿಸಲು ಆಸಿಸ್ ತಂಡಕ್ಕೆ ಮಿಚೆಲ್ ಜಾನ್ಸನ್ ಸಲಹೆ
- Automobiles
ಸೆಲ್ಟೋಸ್ನ ಗೇರ್ಬಾಕ್ಸ್ನಲ್ಲಿ ದೋಷ ಕಂಡು ಬಂದಾಗ ಉಚಿತವಾಗಿ ಬದಲಾಯಿಸಿ ಕೊಟ್ಟ ಕಿಯಾ
- Lifestyle
ಮಕ್ಕಳನ್ನು 'ಅಮ್ಮ' ದಡಾರದಿಂದ ರಕ್ಷಿಸಲು ಇದೇ ತಿಂಗಳು ತಪ್ಪದೆ ಕೊಡಿಸಿ MR ಲಸಿಕೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ವಿಕ್ರಂ ಜಾಲದಿಂದ ತಂಗಿಯನ್ನು ಹೇಗೆ ರಕ್ಷಿಸುತ್ತಾಳೆ ಲೀಲಾ?
ಲೀಲಾ, ವಿಕ್ರಂ ಬಂಡವಾಳ ಬಯಲು ಮಾಡಲು ತಯಾರಾಗಿ ನಿಂತಿದ್ದಾಳೆ. ಏಜೆ ಬಳಿ ವಿಕ್ರಂ ಬಗ್ಗೆ ಏನೇ ಹೇಳಿದರೂ ಅದು ಯಾವುದನ್ನು ಕೇಳದೆ ವಿಕ್ರಂ ಪರವಾಗಿಯೇ ಮಾತನಾಡುತ್ತಾ ಇರುತ್ತಾನೆ. ಇದನ್ನೆಲ್ಲ ನೋಡಿದ ಲೀಲಾಗೆ ಬಹಳ ಬೇಸರ ಆಗುತ್ತದೆ ಹೇಗಾದರೂ ಆಗಲಿ ಏನಾದರು ಆಗಲಿ ನಾನು ನಿಜ ವಿಚಾರ ಏಜೆಗೆ ಹೇಳಲೇ ಬೇಕು ಇಲ್ಲವಾದರೆ ನನ್ನ ತಂಗಿಯ ಜೀವನ ಹಾಳಾಗಿ ಹೋಗುತ್ತದೆ ಎಂದುಕೊಳ್ಳುತ್ತಾಳೆ.
ಈ ಮದುವೆಯನ್ನು ಹೇಗಾದರೂ ಮಾಡಿ ತಡೆಯಬೇಕು ಇಲ್ಲವಾದರೆ ನಾನು ತುಂಬಾ ದೊಡ್ಡ ಬೆಲೆ ತೆರಬೇಕಾಗುತ್ತದೆ ಎಂದು ಮನದಲ್ಲಿ ಅಂದುಕೊಳ್ಳುತ್ತಾಳೆ. ರೇವತಿಗೆ ನೋಡಿರುವ ಹುಡುಗ ವಿಕ್ರಂ ಕಡೆಯವನು. ಆತನೇ ಎಲ್ಲವನ್ನೂ ನೋಡಿ ಮತ್ತೆ ಏಜೆಗೆ ತಿಳಿಸಿ ಏಜೆ ಆ ಹುಡುಗನ ಬಳಿ ಮಾತನಾಡಿದ ಬಳಿಕವೇ ಲೀಲಾ ಗೆ ತೋರಿಸಿದ್ದು. ಆದರೆ ಲೀಲಾ, ಏಜೆ ಮಾತನ್ನು ಸ್ವಲ್ಪ ಕೂಡ ಕೇಳದೆ ವಿಕ್ರಂ ಬಗ್ಗೆ ಹೇಳಲು ಹೋಗುತ್ತಾಳೆ.
ಇದನ್ನು ನೋಡಿದ ಛಾಯಾ ಆತಂಕಗೊಳ್ಳುತ್ತಾಳೆ. ಆದರೆ ಲೀಲಾಳ ಮಾತನ್ನು ಅರ್ಧಕ್ಕೆ ತಡೆದ ಏಜೆ, ನನ್ನ ಬಳಿ ಇದನ್ನು ಹೇಳಬೇಡ. ವಿಕ್ರಂ ನೋಡಿದ್ದಾನೆ ಎಂದು ಹೇಳಿದರೆ ನಾನು ಅದನ್ನು ನೋಡುವ ಅಗತ್ಯ ಇಲ್ಲ. ಆದರೆ ಆ ಹುಡುಗ ನನಗೆ ಬಹಳ ಇಷ್ಟ ಆಗಿದ್ದಾನೆ. ಅದಾದ ಬಳಿಕ ನಾನು ನಿನಗೆ ತೋರಿಸಿದ್ದು ಎಂದು ಹೇಳುತ್ತಾನೆ. ಇದನ್ನು ಕೇಳಿದ ಛಾಯಾ ಸಿಕ್ಕಾಪಟ್ಟೆ ಖುಷಿಪಡುತ್ತಾಳೆ.

ಛಾಯಾ ಮುಖವಾಡ ಲೀಲಾ ಎದುರು ಕಳಚುತ್ತಾ
ನಿನಗೆ ವಿಕ್ರಂ ಅನ್ನು ಸಿಕ್ಕಿ ಹಾಕಿಸಲು ಸಾಧ್ಯ ಇಲ್ಲ ಲೀಲಾ ಏನೇ ಮಾಡಿದರೂ ಅದರಲ್ಲಿ ನೀನೇ ಸಿಕ್ಕಿ ಹಾಕಿಕೊಳ್ಳುತ್ತಿಯಾ. ನೀನು ಏನೇ ಮಾಡಿದರೂ ವಿಕ್ರಂ ಬಗ್ಗೆ ಹೇಳಲು ಅಸಾಧ್ಯ. ಆ ರೀತಿ ಬಲೆಯಲ್ಲಿ ಬಿದ್ದಿದ್ದಿಯಾ ಎಂದು ಮನದಲ್ಲಿ ಅಂದುಕೊಳ್ಳುತ್ತಾಳೆ. ಆಕೆ ಹೇಳುತ್ತಾಳೆ, ನಿಮಗೆ ಹೇಳಲು ಬರುತ್ತಿಲ್ಲ ಆದರೆ ನನಗೆ ಹೇಳದೆ ವಿಧಿ ಇಲ್ಲ ಏಜೆ ಹೇಗಾದರೂ ಈ ಮದುವೆಯನ್ನು ಕ್ಯಾನ್ಸಲ್ ಮಾಡಿ ಬಿಡಿ ಎಂದು ಹೇಳುತ್ತಾಳೆ. ಆಗ ಏಜೆ ''ನೀನು ಸ್ವಲ್ಪ ಗಮನವಿಟ್ಟು ಕೇಳು ನನಗೆ ಇದೀಗ ನಿನ್ನ ಮನದಲ್ಲಿ ನಡೆಯುತ್ತಿರುವ ವಿಚಾರ ತಿಳಿಯುತ್ತಾ ಇದೆ. ನೀನು ರೆವತಿಯನ್ನು ಬಹಳ ಹಚ್ಚಿಕೊಂಡು ಇದ್ದೀಯಾ. ಅವಳು ಮದುವೆ ಮಾಡಿಕೊಂಡು ಹೋದ ಬಳಿಕ ನಿನ್ನ ಬಳಿ ಇರುವುದಿಲ್ಲ ಎನ್ನುವ ಪೊಸೆಸಿವ್ ಮೆಸ್ ನಿನ್ನ ಕಾಡುತ್ತಿದೆ ಎನ್ನುತ್ತಾನೆ.

ಲೀಲಾಳನ್ನು ಸಮಾಧಾನ ಪಡಿಸಿದ ಏಜೆ
ಮದುವೆ ಮಾಡಿ ಕಳುಹಿಸಿ ಕೊಡುವ ವೇಳೆ ಎಷ್ಟೋ ಜನ ತಂದೆ ತಾಯಿಗೆ ಈ ರೀತಿ ಅನ್ನಿಸುವುದು ಸಹಜ ಕೂಡ. ನಿನಗೆ ಅದೇ ಕಾಡುತ್ತಿರುವುದು ಕೂಡ ಮದುವೆ ಆದ ಬಳಿಕ ಆಕೆ ನಿನ್ನ ಜೊತೆ ಇರಲ್ಲ ಅದಕ್ಕಾಗಿ ನೀನು ಈ ರೀತಿ ಮಾತನಾಡುತ್ತಾ ಇದ್ದೀಯಾ. ಎಂದು ಹೇಳುತ್ತಾನೆ ಇದನ್ನು ಕೇಳಿದ ಛಾಯಾಗೆ ನಗು ಆದರೆ ಲೀಲಾ ಗೆ ಮಾತ್ರ ಬಹಳ ಬೇಸರ ಆಗುತ್ತದೆ. ಸರಸು ಹಾಗೂ ಲಕ್ಷ್ಮೀ ಮದುವೆ ಬಗ್ಗೆ ಏನೇನೋ ಮಾತುಗಳನ್ನು ಆಡುತ್ತಾ ಇರುವಾಗ ಲೀಲಾ ಮಾತ್ರ ನೀವು ಆ ಥರ ಏನು ಮಾತನಾಡಬೇಡಿ. ನನಗೆ ಬಾವನ ಮೇಲೆ ನಂಬಿಕೆ ಇದೆ ಆದ ಕಾರಣ ನನಗೆ ಏನು ಟೆನ್ಶನ್ ಇಲ್ಲ. ನನ್ನ ಹಣೆ ಬರಹ ಕೆಟ್ಟು ಹಾಗೇನಾದರೂ ಆದರೆ ಬಾವನಿಗಾಗಿ ಎಲ್ಲ ಸಹಿಸಿಕೊಳ್ಳುತ್ತಾ ಇರುತ್ತೇನೆ ಎಂದು ಹೇಳುತ್ತಾಳೆ.

ಛಾಯಾಗೆ ಏಜೆಯನ್ನು ಜೈಲಿಗೆ ಕಳಿಸುವ ಗುರಿ
ಇದನ್ನು ಕೇಳಿ ಸರಸ್ವತಿ ಲಕ್ಷ್ಮಿ ಇಬ್ಬರು ಸುಮ್ಮನಾಗುತ್ತಾರೆ. ಛಾಯಾ ಬಳಿ ಏಜೆ ಹೇಳುತ್ತಾನೆ ಇದೀಗ ಮನೆಯಲ್ಲಿ ಏನೆಲ್ಲಾ ನಡೆಯುತ್ತಿದೆ. ಅಂತರ ಇದ್ದಿದ್ದರೆ ಬಹಳ ಖುಷಿ ಆಗುತ್ತಿತ್ತು ಛಾಯಾ ಎಂದಾಗ ಛಾಯಾ ಮನದಲ್ಲಿ ಮಾತ್ರ ಬೇರೆಯೇ ಓಡುತ್ತ ಇರುತ್ತದೆ. ಈ ವೇಳೆ ಛಾಯಾ ಹೇಳುತ್ತಾಳೆ 'ಹೌದು ಏಜೆ ನೀವು ಹೇಳಿದ್ದು ನಿಜ ಈಗ ಅದೆಷ್ಟು ಖುಷಿ ಪಡುತ್ತಾರೋ ಏನೋ ಎಂದು ಹೇಳುತ್ತಾರೆ ಇದನ್ನು ಕೇಳಿದ ಏಜೆ ಖುಷಿ ಆಗುತ್ತಾರೆ. ಛಾಯಾ ಮಾತ್ರ ಮನದಲ್ಲಿ ಏಜೆ ಯನ್ನು ಹೇಗಾದರೂ ಸಿಕ್ಕಿ ಹಾಕಿಸಿ ಜೈಲಿಗೆ ಕಳುಹಿಸಿದರೆ ಅಂತರ ಮನಸ್ಸಿಗೆ ಶಾಂತಿ ಸಿಗುತ್ತದೆ ಎಂದು ಮನದಲ್ಲಿ ಅಂದುಕೊಳ್ಳುತ್ತಾಳೆ. ಛಾಯಾ ಹಾಗೂ ವಿಕ್ರಂ ಬಂಡವಾಳವನ್ನು ಬಯಲು ಮಾಡಬೇಕು ಎಂಬುವುದು ಲೀಲಾ ಗುರಿ. ಆದರೆ ಲೀಲಾ ಮಾತನ್ನು ಏಜೆ ನಂಬುತ್ತಾನ ಎಂಬುವುದೇ ದೊಡ್ಡ ಪ್ರಶ್ನೆ ಆಗಿದೆ.