Don't Miss!
- Finance
ಅಭ್ಯರ್ಥಿಯ ಸಂದರ್ಶನ ಮಾಡುತ್ತಿದ್ದಾಗಲೇ ಗೂಗಲ್ ಎಚ್ಆರ್ ವಜಾ!
- Technology
ಒಪ್ಪೋ ಕಂಪೆನಿಯ ಈ ಸ್ಮಾರ್ಟ್ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- Automobiles
ಭಾರತದಲ್ಲಿ ಶೀಘ್ರ ಬಿಡುಗಡೆಯಾಗಲಿದೆ ಬಹುನಿರೀಕ್ಷಿತ ಹೀರೋ ಮೆಸ್ಟ್ರೋ Xoom: ಹೇಗಿದೆ ಗೋತ್ತಾ?
- Sports
ಅರ್ಶ್ದೀಪ್ 'ನೋಬಾಲ್' ಎಸೆಯಲು ಕಾರಣ ವಿವರಿಸಿದ ಮೊಹಮ್ಮದ್ ಕೈಫ್
- Lifestyle
ವೃತ್ತಿ ಬದುಕಿನಲ್ಲಿ ಯಸಸ್ಸು ಪಡೆಯಲು ಚಾಣಕ್ಯ ಹೇಳಿದ ಸಪ್ತ ಸೂತ್ರಗಳು
- News
ಪುಲ್ವಾಮಾಕ್ಕೆ ಭೇಟಿ ನೀಡಿದ ರಾಹುಲ್ ಗಾಂಧಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಲೀಲಾ ಮೇಲೆ ಮುನಿಸಿಕೊಂಡ ಕೌಸಲ್ಯ ರೇವತಿ ಮದುವೆ ನಿಲ್ಲಿಸುತ್ತಾಳ ಲೀಲಾ?
ಏಜೆ ತನ್ನ ಮಾತು ಕೇಳುತ್ತಿಲ್ಲ. ನನ್ನ ತಂದೆ ತಾಯಿ ಮತ್ತು ತಂಗಿ ನನ್ನ ಮಾತು ಕೇಳಬಹುದು ಎಂದುಕೊಂಡು ರೇವತಿ ಮದುವೆ ನಿಲ್ಲಿಸಲು ಲೀಲಾ ತನ್ನ ತವರು ಮನೆಗೆ ಹೋಗಿದ್ದಾಳೆ. ತಂದೆಯ ಮನೆಗೆ ಬಂದು ಬಾಗಿಲು ಬಡಿದ ವೇಳೆ ಬಾಗಿಲು ತೆರೆದಿದ್ದು ಮಾತ್ರ ವಿಕ್ರಂ. ಆತನನ್ನು ಕಂಡ ಕೂಡಲೇ ಲೀಲಾ ಶಾಕ್ ಆಗುತ್ತಾಳೆ ಈತ ಯಾಕೆ ನಮ್ಮ ಮನೆಗೆ ಬಂದಿದ್ದಾನೆ ಎಂದು ಯೋಚನೆ ಮಾಡುತ್ತಾಳೆ. ತಾಯಿ ಕೌಸಲ್ಯ, ಲೀಲಾ ಬಂದಿರುವುದನ್ನು ಗಮನಿಸಿ ಅರೆರೆ ಲೀಲಾ ಹೇಗಿದ್ದೀಯಾ ಚೆನ್ನಾಗಿ ಇದ್ದೀಯಾ ಎಂದು ಕೇಳುತ್ತಾಳೆ. ಇದನ್ನು ಕೇಳಿದ ಲೀಲಾ ಚೆನ್ನಾಗಿ ಇದ್ದೇನೆ ಇವರೇನು ಇಲ್ಲಿ ಬಂದಿದ್ದು ಎಂದು ಕೇಳುತ್ತಾಳೆ.
ಇದನ್ನು ಕೇಳಿದ ಕೌಸಲ್ಯ ಇವರು ನಮಗೆ ಒಂದು ತರ ಆಪತ್ ಬಾಂಧವ ಇದ್ದ ಹಾಗೆ ಇವರು ನಮ್ಮ ವಿಕ್ರಂ ಎಂದು ಪರಿಚಯ ಮಾಡಿಸುತ್ತಾಳೆ. ಇದನ್ನು ಕೇಳಿದ ಲೀಲಾ ಏನು ನಮ್ಮ ವಿಕ್ರಮನ ಇದು ಯಾವಾಗಲಿಂದ ನಿನ್ನೆ ಮೊನ್ನೆ ಬಂದವರು ಅಮ್ಮನಿಗೆ ಹೆಚ್ಚಾದರ ಎಂದು ಮನದಲ್ಲಿ ಅಂದುಕೊಳ್ಳುತ್ತಾ ಇರುವಾಗ ಕೌಸಲ್ಯ ಟೀ ಮಾಡಿಕೊಂಡು ಬರಲು ಹೋಗುತ್ತಾಳೆ. ಇದನ್ನು ನೋಡಿದ ಕೌಸಲ್ಯ ಈ ವೇಳೆ ವಿಕ್ರಂಗೆ ತನ್ನ ಮನೆಗೆ ಏತಕ್ಕಾಗಿ ಬಂದದ್ದು. ತನ್ನ ತಂಗಿ ಭವಿಷ್ಯ ಹಾಳು ಮಾಡಲು ಯಾರಿಂದ ಕೂಡ ಸಾಧ್ಯ ಇಲ್ಲ ಎಂದು ಹೇಳುತ್ತಾಳೆ ಇದನ್ನು ಕೇಳಿದ ವಿಕ್ರಂ ನಗುತ್ತಾನೆ.

ಲೀಲಾ ತವರು ಮನೆಯಲ್ಲಿ ವಿಕ್ರಂ
ನೀನು ಆ ಫೂಟೇಜ್ ನನಗೆ ಕೊಡಲಿಲ್ಲ ಎಂದರೆ ನಿನ್ನ ತಂಗಿ ಜೀವನ ಹಾಳು ಮಾಡುತ್ತೇನೆ ಆದ ಕಾರಣ ನನಗೆ ಅದನ್ನು ನೀಡದೆ ನಾನು ಇಲ್ಲಿಂದ ಹೋಗುವುದಿಲ್ಲ ಎಂದು ಹೇಳುತ್ತಾನೆ. ಅದಕ್ಕೆ ಲೀಲಾ ಹೇಳುತ್ತಾಳೆ ನಾನು ಈ ಮದುವೆ ನಾ ನಿಲ್ಲಿಸುತ್ತೇನೆ. ನನಗೆ ನನ್ನ ತಂಗಿ ಜೀವನ ಮುಖ್ಯ ಎಂದು ಹೇಳುತ್ತಾಳೆ ಲೀಲಾ. ಇದನ್ನು ಕೇಳಿದ ವಿಕ್ರಂಗೆ ಸಿಟ್ಟು ಬರುತ್ತದೆ. ಅದೇ ವೇಳೆ ಕೌಸಲ್ಯ ಟೀ ಕಪ್ ಹಿಡಿದುಕೊಂಡು ಬರುತ್ತಾಳೆ.

ಅಮ್ಮನ ಬಳಿ ಮದುವೆ ನಿಲ್ಲಿಸಲು ಹೇಳಿದ ಲೀಲಾ
ಟೀ ತೆಗೆದುಕೊಂಡ ಲೀಲಾ ಅಮ್ಮನ ಬಳಿ, 'ಅಮ್ಮ ಚುಕ್ಕಿ ಮದುವೆ ತಯಾರಿ ನಿಲ್ಲಿಸಿ. ಈ ಮದುವೆ ನಡೆಯುವುದಿಲ್ಲ. ನಡೆಯಲು ನಾನು ಬಿಡುವುದು ಇಲ್ಲ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಕೌಸಲ್ಯಾಗೆ ಬಹಳ ಕೋಪ ಬರುತ್ತದೆ. ಮದುವೆಗಾಗಿ ಎಲ್ಲಾ ಅರೇಂಜ್ ಮೇಂಟ್ ಮಾಡಿ ಆಗಿದೆ ಆದರೆ ಇದೀಗ ಮದುವೆ ಆಗುವುದು ಇಲ್ಲ ಎಂದರೆ ಏನು ಅರ್ಥ. ಮದುವೆ ನಡೆದೇ ನಡೆಯುತ್ತದೆ. ನಿನಗೆ ಯಾಕೆ ಇಂಥ ಯೋಚನೆ ಬಂತು ಎಂದು ಹೇಳಿದಾಗ ಅಲ್ಲಿಗೆ ಬಂದ ಲೀಲಾ ತಂದೆ ಕೂಡ ಶಾಕ್ ಆಗುತ್ತಾರೆ.

ಲೀಲಾ ಮಾತಿಗೆ ಚಂದ್ರ ಶೇಖರ್ ಶಾಕ್
ಮದುವೆಗೆ ಸಾಕಷ್ಟು ಖರ್ಚು ಆಗಿದೆ. ಮದುವೆ ಬೇಡ ಎಂದು ಈಗ ಹೇಳಿ ಬಿಟ್ಟರೆ ಏನು ಅರ್ಥ ಇದು ಸರಿಯಾದ ನಿರ್ಧಾರ ಅಲ್ಲ. ಮಗಳ ಈ ಯೋಚನೆಗೆ ಏನು ಹೇಳಬೇಕೋ ಎಂದು ತಿಳಿಯದೇ ಸುಮ್ಮನಾಗುತ್ತಾರೆ. ಈ ವೇಳೆ ಕೌಸಲ್ಯ ಬಾಯಿಗೆ ಬಂದ ಹಾಗೆ ಬಯ್ಯುತ್ತಾ ಇರುತ್ತಾಳೆ ಈ ವೇಳೆ ಅಲ್ಲಿಗೆ ಬಂದ ಚುಕ್ಕಿ ಅಕ್ಕ ದಯಮಾಡಿ ಇಲ್ಲಿಂದ ಹೋಗು ಅಮ್ಮ ಬೈಯಲು ಶುರು ಮಾಡಿದರೆ ಮತ್ತೆ ನಿಲ್ಲಿಸುವುದಿಲ್ಲ. ಆ ಕಾರಣ ದಯಮಾಡಿ ಹೋಗಿ ಬಿಡು ಎಂದು ಬೇಸರದಿಂದ ಹೇಳುತ್ತಾಳೆ.

ಲೀಲಾಳನ್ನು ಮನೆಯಿಂದ ಹೊರ ಕಳಿಸಿದ ರೇವತಿ
ಇದನ್ನು ಕೇಳಿದ ಲೀಲಾ, ಚುಕ್ಕಿ ನೀನು ನನ್ನ ಅರ್ಥ ಮಾಡಿಕೊಳ್ಳುತ್ತಾ ಇಲ್ಲ ಅಲ್ವಾ ಎಂದು ಹೇಳುತ್ತಾಳೆ ಇದನ್ನು ಕೇಳಿದ ರೇವತಿ, ದುಃಖದಿಂದ ಕಣ್ಣೀರು ಹಾಕುತ್ತಾಳೆ. ಕೌಸಲ್ಯಾಗೆ ಮಾತ್ರ ಕೆಂಡದಂಥ ಕೋಪ ಬಂದಿರುತ್ತದೆ. ಇನ್ನು ಮನೆಯಿಂದ ಹೊರ ನಡೆದ ಲೀಲಾ ನೇರವಾಗಿ ತನ್ನ ಮನೆಗೆ ಬರುತ್ತಾಳೆ. ಪೆಂಡ್ರೈವ್ ಕೊಟ್ಟರೆ ಏಜೆ ಮರ್ಯಾದೆ ಹೋಗುತ್ತೆ. ಇಲ್ಲ ಎಂದರೆ ಚುಕ್ಕಿ ಜೀವನ ಹಾಳಾಗಿ ಹೋಗುತ್ತದೆ. ಏನು ಮಾಡಲಿ ಮದುವೆ ನಿಲ್ಲಿಸೋಣ ಎಂದು ಹೇಳಿದರೆ ಅಮ್ಮ ನನ್ನ ಮೇಲೆ ತಪ್ಪು ತಿಳಿದಳು. ಆದರೆ ಪರಿಸ್ಥಿತಿ ಬೇರೆ ಥರ ಇರುವುದರಿಂದ ವಿಷಯವನ್ನು ಯಾರ ಬಳಿ ಹೇಳಿಕೊಳ್ಳಲು ಆಗದೆ ಸಂಕಟ ಆನಿಭವಿಸುವ ಹಾಗೆ ಆಯಿತಲ್ವ ಎಂದು ಪರದಾಡುತ್ತಾಳೆ.