ನಿಜಕ್ಕೂ ಬದಲಾದಳಾ ದುರ್ಗಾ? ಅಥವಾ ಇದೆಲ್ಲ ನಾಟಕವಾ?

By ಪೂರ್ವ

ದುರ್ಗಾ ನಿಜಕ್ಕೂ ಬದಲಾಗಿದ್ದಾಳ ಅಥವಾ ಹಾಗೆ ನಾಟಕ ಮಾಡುತ್ತಾ ಇದ್ದಾಳೊ ಅಥವಾ ನಿಜಕ್ಕೂ ಬಲದಾಗಿದ್ದಾಳೊ ಗೊತ್ತಿಲ್ಲ. ಆದರೆ ಇದು ತೀರಾ ಅನಿರೀಕ್ಷಿತ ಅಷ್ಟೇ ಅಲ್ಲ, ಇದರ ಹಿಂದೆ ಏನಾದರೂ ಕುಟಿಲ ಸಂಚಿದ್ದೀತೂ ಎಂಬ ಅನುಮಾನ ಎಲ್ಲರಿಗೂ. ದುರ್ಗಾಳನ್ನು ಸಮಾಧಾನ ಮಾಡಲು ಹೋದ ಲೀಲಾ ಸಂಕಷ್ಟಕ್ಕೆ ಸಿಲುಕುವ ಅನುಮಾನ ವೀಕ್ಷಕರದ್ದು. ಸರಸು ಹಾಗೂ ಲಕ್ಷ್ಮಿ ಕೂಡ ದುರ್ಗಾಳಲ್ಲಿ ಆದ ಬದಲಾವಣೆಯನ್ನೂ ಕಂಡು ಅವಾಕ್ಕಾಗಿದ್ದಾರೆ.

ಲೀಲಾ ಏನು ಮಾಟ ಮಂತ್ರ ಮಾಡಿದ್ದಾಳೆ ಏನೋ, ದುರ್ಗಾ ಅಕ್ಕ ಕೂಡ ಅತ್ತ ತಿರುಗಿ ಬಿಟ್ಟರು ಎಂದು ಯೋಚನೆ ಮಾಡುತ್ತಾ ಇರುತ್ತಾರೆ ಉಳಿದ ಸೊಸೆಯರು. ಇನ್ನು ಲೀಲಾಗೆ ಮಾತ್ರ ದುರ್ಗಾ ಉತ್ತಮ ಪಾರ್ಟನರ್ ಸಿಕ್ಕಾ ಹಾಗೆ ಅನ್ನಿಸಿತು. ದುರ್ಗಾ, ಇಷ್ಟು ಒಳ್ಳೆಯವಳು ಆಗುತ್ತಾಳ ಎಂಬುವುದನ್ನು ನಂಬಲು ಕೂಡ ಅವಳಿಂದ ಸಾದ್ಯ ಆಗುತ್ತಿಲ್ಲ. ಇನ್ನು ಲೀಲಾ ಮೇಲೆ ಅತಿಯಾದ ಕಾಳಜಿ ಮಾಡುತ್ತಿರುವ ದುರ್ಗಾ ಳನ್ನು ಕಂಡು ಎಲ್ಲರಿಗೂ ಅನುಮಾನ ಮೂಡಿದೆ. ಸೋಫಾ ಮೇಲೆ ಮಲಗಲು ಹೋದ ಲೀಲಾಗೆ ಆದಿ ಪಾರುವಿನದ್ದೆ ಚಿಂತೆ ಅವರನ್ನು ಎಷ್ಟು ಹೊತ್ತಿಗೆ ನೋಡುತ್ತೇನೆ ಎಂದು ಕಾದುಕೊಂಡು ಇರುತ್ತಾಳೆ. ಅವರಿಬ್ಬರನ್ನು ನೋಡಿದರೆ ಲೀಲಾಗೆ ಏನೋ ಸಮಾಧಾನ.

ದುರ್ಗಾಗೆ ಲೀಲಾ ಪ್ರಶ್ನೆ

ದುರ್ಗಾಗೆ ಲೀಲಾ ಪ್ರಶ್ನೆ

ಹೀಗೆ ಹೇಳುತ್ತಾ ಕಂಬಳಿ ಸರಿ ಮಾಡುತ್ತಾ ಇರುವ ವೇಳೆ ಅಲ್ಲಿಗೆ ಬಂದ ದುರ್ಗಾ ಹೇಳುತ್ತಾಳೆ ಬೇರೆ ಜೋಡಿನ ನೋಡಿದರೆ ನಿನಗೆ ನಿದ್ದೆ ಬರಬಹುದು ಏನೋ ಆದರೆ ನಿಮ್ಮಿಬ್ಬರನ್ನೂ ನೋಡಿದರೆ ನನಗೆ ನಿದ್ದೆ ಬರುತ್ತಿಲ್ಲ ಎಂದು ಹೇಳುತ್ತಾಳೆ ದುರ್ಗಾ. ಇದನ್ನು ಕೇಳಿದ ಲೀಲಾ, ದುರ್ಗಾ ಅವರೇ ನೀವೇನು ಇಷ್ಟು ಹೊತ್ತಲ್ಲಿ. ನೀವು ಯಾವ ಜೋಡಿ ನೋಡಿ ನಿದ್ದೆ ಬರಲ್ಲ ಅಂದದ್ದು ಎಂದಾಗ ಏಜೆ-ಲೀಲಾ ಜೋಡಿ ಎಂದು ದುರ್ಗಾ ಜೋರಾಗಿ ನಗುತ್ತಾ ಹೇಳುತ್ತಾಳೆ. ಇದನ್ನು ಕೇಳಿದ ಲೀಲಾ ಜೋರಾಗಿ ನಗುತ್ತಾಳೆ. ಮೊದಲನೆಯದಾಗಿ ನಮ್ಮದು ಜೋಡಿ ಜೋಡಿನೆ ಅಲ್ಲ, ನಾವಿಬ್ಬರೂ ಜೋಡಿ ಅಂತ ನೀವು ಹೇಗೆ ತಿಳಿಯುತ್ತಿರಾ ಎಂದು ಕೇಳುತ್ತಾಳೆ.

ಮಧ್ಯರಾತ್ರಿ ಲೀಲಾ-ದುರ್ಗಾ ಮಾತುಕತೆ

ಮಧ್ಯರಾತ್ರಿ ಲೀಲಾ-ದುರ್ಗಾ ಮಾತುಕತೆ

ಇದನ್ನು ಕೇಳಿದ ದುರ್ಗಾ ಬೇಸರದಿಂದ ಇದೆ ನನಗೆ ಬೇಸರ ಆಗುತ್ತಿರುವುದು ಲೀಲಾ ನಿನ್ನನ್ನು ನೀನೇ ಯಾಕೆ ಇಷ್ಟು ಕೆಳಗೆ ಮಾಡಿಕೊಳ್ಳುತ್ತಾ ಇದ್ದೀಯಾ. ನೀನು ಏಜೆಗೆ ತಕ್ಕನಾದ ಹೆಂಡತಿ ಅಲ್ಲ ಅಂತ ನೀನೆ ಹೇಗೆ ಅಂದುಕೊಳ್ಳುತ್ತಿಯಾ ಎಂದಾಗ ಲೀಲಾ ಹೇಳುತ್ತಾಳೆ, ಏಜೆಗೆ ಹಾಗೂ ಅಂತರ ಅಕ್ಕನಿಗೆ ಇಬ್ಬರು ಒಳ್ಳೆಯ ಜೋಡಿ ಎಂದು ಎಲ್ಲರೂ ಹೇಳುತ್ತಾರೆ. ಇದರ ಮಧ್ಯೆ ನಂದು ಏನಿಲ್ಲಪ್ಪ, ಎಂದಾಗ ದುರ್ಗಾ ಹೇಳುತ್ತಾಳೆ ನೀನು ಈ ಮನೆ ಯಜಮಾನಿ. ನಿನ್ನ ಏಜೆ ಮಧ್ಯೆ ಹೇಗೆ ಬೇಕಾದರೂ ಆಗಿ ಇರಲಿ ಆದರೆ ಏಜೆ ನಿನಗೆ ಎಲ್ಲರ ಮುಂದು ತಾಳಿ ಕಟ್ಟಿದ್ದಾರೆ ಆ ಕಾರಣ ನೀನು ಅವರ ಹೆಂಡತಿ ಕೂಡ. ಯಾರು ಒಪ್ಪಲಿ ಬಿಡಲಿ ನಿಮ್ಮ ಜೋಡಿಯನ್ನು ಆ ಭಗವಂತನೇ ಒಂದು ಮಾಡುತ್ತಾನೆ. ಇಲ್ಲಾಂದ್ರೆ ಎಲ್ಲೋ ಇದ್ದಿದ್ದ ನಿಮ್ಮನ್ನು. ಈ ಮನೆಗೆ ಬರುವ ಹಾಗೆ ಮಾಡಲು ಆಗುತ್ತಿತ್ತ ಎಂದು ದುರ್ಗಾ ಹೇಳುತ್ತಾಳೆ.

ಲೀಲಾಗೆ ಸಲಹೆ ನೀಡಿದ ದುರ್ಗಾ

ಲೀಲಾಗೆ ಸಲಹೆ ನೀಡಿದ ದುರ್ಗಾ

ಬಳಿಕ ಮಾತು ಮುಂದುವರಿಸಿದ ದುರ್ಗಾ ಒಂದು ಮಾತು ನೆನಪಿನಲ್ಲಿ ಇಟ್ಟುಕೋ. ಏಜೆ-ಲೀಲಾ ಗಂಡ ಹೆಂಡತಿ ಆಗಬೇಕು ಎಂದು ನೀವು ಹುಟ್ಟಕ್ಕು ಮುಂಚೆ ನೀವಿಬ್ಬರೂ ಒಂದಾಗಲು, ಮದುವೆ ಅನ್ನೋದು ಒಂದು ನೆಪ ಅಷ್ಟೇ. ಎಂದೆಲ್ಲ ಹೇಳಿದಾಗ ಲೀಲಾಗೆ ತಲೆ ಕೆಟ್ಟುಹೋಗುತ್ತದೆ. ಅದಕ್ಕೆ ಲೀಲಾ ಹೇಳುತ್ತಾಳೆ ದುರ್ಗಾ ಅವರೆ ನಾನು ಏನು ಮಾಡಿದೆ ಅಂತ ನನಗೆ ಈ ನಾಡು ರಾತ್ರಿಯಲ್ಲಿ ಹೇಳುತ್ತಾ ಇದ್ದೀರಾ ಎಂದಾಗ ಲೀಲಾ ಮಲಗುವ ಜಾಗ ತೋರಿಸಿದ ದುರ್ಗಾ ಹೇಳುತ್ತಾಳೆ ನೋಡು ನಿನ್ನ ಜಾಗ ಎಲ್ಲಿದೆ ಎಂದು ನಮ್ಮ ಮನೆಯ ಸೆಕ್ಯುರಿಟಿಗೆ ಅವನಿಗೆ ಆದ ಒಂದು ರೂಮ್ ಇದೆ. ಅವನು ಅವನ ಹೆಂಡತಿ ಜೊತೇನೆ ಮಲಗುತ್ತಾನೆ. ಹಾಗಿದ್ದ ಮೇಲೆ ಈ ಮನೆಯ ಯಜಮಾನಿಗೆ ಒಂದು ರೂಮ್ ಇರಬೇಕಿತ್ತು ಅಲ್ವಾ. ಅದನ್ನು ಬಿಟ್ಟು ಇಲ್ಲಿ ಯಾಕೆ ಮಲಗುತ್ತಾ ಇದ್ದೀಯಾ ಎಂದು ಕೇಳುತ್ತಾಳೆ ದುರ್ಗಾ.

ಲೀಲಾಗೆ ಸಲಹೆ ಕೊಟ್ಟ ದುರ್ಗಾ

ಲೀಲಾಗೆ ಸಲಹೆ ಕೊಟ್ಟ ದುರ್ಗಾ

ಆಗ ನಗುತ್ತಾ ಲೀಲಾ, ದುರ್ಗಾ ಅವರೇ ನಿಮಗೆ ನಿದ್ದೆ ಬರುತ್ತಿಲ್ಲ ಅಂದ್ರೆ ಪಾರು ಧಾರಾವಾಹಿಯನ್ನು ನಾವಿಬ್ಬರೂ ಒಟ್ಟಿಗೆ ನೋಡೋಣ. ಅದು ಬಿಟ್ಟು ಏನೇನೋ ಮಾತನಾಡಬೇಡಿ ಎಂದು ಹೇಳುತ್ತಾಳೆ. ಇದನ್ನು ಕೇಳಿದ ದುರ್ಗಾ, ಲೀಲಾ ನಾನು ಹೇಳಿದ ಮಾತು ನಿಮಗೆ ಯಾಕೆ ಅರ್ಥ ಆಗುತ್ತಿಲ್ಲ. ಇನ್ನು ಎಷ್ಟು ದಿನ ಇಲ್ಲಿ ಮಲಗಿಕೊಳ್ಳುತ್ತ ಇರುತ್ತಿಯ. ನೀನು ಏಜೆಗೆ ಹತ್ರ ಆಗೋದಾದ್ರು ಯಾವಾಗ? ಹತ್ರ ಆಗಬೇಕು ಅಂದರೆ ಇಲ್ಲಿ ಮಲಗುವುದು ಬಿಟ್ಟು ಏಜೆ ರೂಮ್‌ನಲ್ಲಿ ಜಾಗ ಪಡೆಯಲು ನೋಡಬೇಕು ಎಂದು ಬುದ್ದಿ ಹೇಳುತ್ತಾ ಇರುತ್ತಾಳೆ. ಮುಂದೇನು ಎಂಬುವುದನ್ನು ಕಾದು ನೋಡಬೇಕಿದೆ.

More from Filmibeat

English summary
Zee Kannada serial Hitler Kalyana Written Update on November 7th episode. Know more about it
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X