ವಿಕ್ರಂ ಮಾತಿಗೆ ಮರುಳಾಗಿ ಸಂಕಷ್ಟಕ್ಕೆ ಸಿಲುಕುತ್ತಾರ ಸರಸು-ಲಕ್ಷ್ಮಿ?

By ಪೂರ್ವ

ಸರಸು ಹಾಗೂ ಲಕ್ಷ್ಮೀ ವಿಕ್ರಂ ಜಾಲದಲ್ಲಿ ಸಿಕ್ಕಿಬಿದ್ದಿದ್ದಾರೆ. ಇದೀಗ ವಿಕ್ರಂ, ಸರಸು ಹಾಗೂ ಲಕ್ಷ್ಮಿಗೆ ಕರೆ ಮಾಡುತ್ತಾನೆ ಕರೆ ಸ್ವೀಕರಿಸಿದ ಸರಸು ಯಾರು ಎಂದು ಕೇಳಿದರೆ? ನಾನು ಬಾಬಾ ಎಂದು ಆ ಕಡೆಯಿಂದ ಉತ್ತರ ಬರುತ್ತದೆ. ವಿಕ್ರಂ ಫೋನ್‌ನಲ್ಲಿ ಮಾತನಾಡುತ್ತಾ ಇದ್ದಾನೆ ಎಂದು ಸರಸು ಹಾಗೂ ಲಕ್ಷ್ಮಿಗೆ ತಿಳಿಯಲೇ ಇಲ್ಲ. ಬದಲಾಗಿ ನಮ್ಮ ಬಗ್ಗೆ ತಿಳಿದೋ ಯಾರೋ ಒಬ್ಬ ಬಾಬಾ ಈ ಕೆಲಸ ಮಾಡುತ್ತಾ ಇದ್ದಾನೆ ಎಂದುಕೊಂಡು ಸರಸು ಮಾತನಾಡುತ್ತಾಳೆ.

ಏಜೆಯಿಂದ ಲೀಲಾಳನ್ನು ದೂರ ಮಾಡಲು ನಿಮಗೊಂದು ಫೋನ್ ಕೊಡುತ್ತೇನೆ ಆ ಫೋನ್ ಮೂಲಕ ನೀವು ಯಾರ ಬಳಿ ಏನು ಮಾತನಾಡಿದರು ಅದು ಬೇರೆ ಧ್ವನಿಯಲ್ಲಿ ಕೇಳುತ್ತದೆ. ನಿಮ್ಮ ಧ್ವನಿ ಅಂತ ಯಾರಿಗೂ ತಿಳಿಯಲು ಸಾಧ್ಯ ಇಲ್ಲ ಎಂದು ಹೇಳಿದಾಗ ಲಕ್ಷ್ಮಿ ಬಾಬಾ ಬಳಿ ಕೇಳುತ್ತಾಳೆ ನಾವು ಮಾತನಾಡುವುದು ನಮ್ಮ ಧ್ವನಿ ಎಂದು ಯಾರಿಗೂ ತಿಳಿಯುವುದಿಲ್ಲವೆ ಎಂದು ಹೇಳುತ್ತಾಳೆ. ಆಗ ಅತ್ತ ಕಡೆಯಿಂದ ಮಾತನಾಡುತ್ತಿದ್ದ ವಿಕ್ರಂ ಹೇಳುತ್ತಾನೆ, ನೀವು ಏಜೆಯನ್ನ ಆಟ ಆಡಿಸಬೇಕು. ಅಂತರ ಸಿಕ್ಕಿದ್ದಾಳೆ ಎಂದು ಹೇಳಬೇಕು. ಎಂದಾಗ ಶಾಕ್ ಆದ ಸರಸು-ಲಕ್ಷ್ಮಿ, ಏನು ಅಂತರ ಅಕ್ಕ ಸಿಗುತ್ತಿದ್ದಾರಾ ಎಂತಹ ಸಿಹಿ ಸುದ್ದಿ ಎಂದು ಹೇಳುತ್ತಾಳೆ.

ಏಜೆ ವಿರುದ್ಧ ಐಡಿಯಾ ಕೊಡುವ ಬಾಬಾ!

ಏಜೆ ವಿರುದ್ಧ ಐಡಿಯಾ ಕೊಡುವ ಬಾಬಾ!

ಬಳಿಕ ಬಾಬಾನ ಬಳಿ ಹೇಳುತ್ತಾಳೆ ಅಂತರ ಅಕ್ಕ ಸಿಕ್ಕಿದರೆ ಏಜೆ ಜೀವನ ಆಟೋಮ್ಯಾಟಿಕ್ ಆಗಿ ಸರಿ ಹೋಗುತ್ತದೆ. ಆಗ ಲೀಲಾಳನ್ನೂ ಸುಲಭವಾಗಿ ಹೊರಗೆ ದಬ್ಬಬಹುದು ಎಂದು ಹೇಳುತ್ತಾರೆ. ಆಗ ಅತ್ತ ಕಡೆಯಿಂದ ಆತುರ ಪಡಬೇಡಿ ನಿಮಗೆ ನಾನು ಎಲ್ಲಾ ವಿಚಾರ ಹೇಳುತ್ತಾ ಹೋಗುತ್ತೇನೆ ಎಂದು ಹೇಳುತ್ತಾನೇ ಏನೆಲ್ಲ ಮಾಡಬೇಕು ಏಜೆಗೆ ಯಾವ ರೀತಿಯ ಟಾಸ್ಕ್ ನೀಡಬೇಕು ಇದನ್ನೆಲ್ಲ ಹೇಳುತ್ತಾನೆ ಬಳಿಕ ಕರೆ ಕಟ್ ಮಾಡುತ್ತಾನೆ.

ವಿಕ್ರಂ ಮನದಲ್ಲಿ ನೂರಾರು ಯೋಜನೆ

ವಿಕ್ರಂ ಮನದಲ್ಲಿ ನೂರಾರು ಯೋಜನೆ

ಬಳಿಕ ಮನದಲ್ಲಿ ಯೋಚನೆ ಮಾಡುವ ವಿಕ್ರಂ, ಸರಸು ಹಾಗೂ ಲಕ್ಷ್ಮಿ ಏಜೆ ಕೈ ಗೆ ಸಿಕ್ಕಿ ಹಾಕಿಕೊಳ್ಳಬಹುದು ಆದರೆ ನಾನು ಖಂಡಿತ ಅವರ ಕೈ ಗೆ ಸಿಕ್ಕಿ ಬೀಳುವುದಿಲ್ಲ ಎಂದುಕೊಳ್ಳುತ್ತಾನೆ. ಇನ್ನು ದುರ್ಗಾ ಹಾಗೂ ಲೀಲಾ ಇಬ್ಬರು ಅನ್ಯೋನ್ಯವಾಗಿ ಇರುತ್ತಾರೆ. ಮುಂಚೆ ಹಾವು ಮುಂಗುಸಿ ಹಾಗೆ ಕಿತ್ತಾಟ ನಡೆಸಿದ್ದವರು ಇದೀಗ ಉತ್ತಮವಾಗಿ ಇಬ್ಬರು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಜೀವನ ಸಾಗಿಸುತ್ತಾ ಇರುತ್ತಾರೆ. ಈ ವೇಳೆ ಲೀಲಾ, ದುರ್ಗಾ ಬಳಿ ಬಂದು ನೀವು ದೊಡ್ಡ ತಪ್ಪು ಮಾಡಿದಿರಿ ಎಂದಾಗ ದುರ್ಗಾಗೆ ಆತಂಕ ಆಗುತ್ತದೆ. ಬಳಿಕ ಲೀಲಾ ಹೇಳುತ್ತಾಳೆ ನನ್ನ ಫ್ರೆಂಡ್ ರಿಕ್ವೆಸ್ಟ್ ನೀವು ಯಾಕೆ ಅರ್ಥ ಮಾಡಿಕೊಂಡಿಲ್ಲ ಎಂದು ಕೇಳುತ್ತಾಳೆ.

ಲೀಲಾ ಮಾತಿನಿಂದ ದುರ್ಗಾ ಶಾಕ್‌

ಲೀಲಾ ಮಾತಿನಿಂದ ದುರ್ಗಾ ಶಾಕ್‌

ಇದನ್ನು ಕೇಳಿದ ದುರ್ಗಾಗೆ ಕೊಂಚ ತಲೆಬಿಸಿ ಕಡಿಮೆ ಆಗುತ್ತದೆ. ಬಳಿಕ ಲೀಲಾ ಹೇಳುತ್ತಾಳೆ 15 ದಿವಸ ಹಿಂದೇನೆ ನಾನು ರಿಕ್ವೆಸ್ಟ್ ಕಳಿಸಿದ್ದೆ ಆದರೆ ನನಗೆ ಯಾವುದೇ ಉತ್ತರ ಬಂದಿಲ್ಲ ಎಂದು ಹೇಳುತ್ತಾಳೆ. ಬಳಿಕ ದುರ್ಗಾ ಸಮಾಧಾನ ಮಾಡುತ್ತಾಳೆ ಅಯ್ಯೋ ಲೀಲಾ ನಾನು ಈ ಸೋಷಿಯಲ್ ಮೀಡಿಯಾದಲ್ಲಿ ಇಲ್ಲ. ಲಕ್ಷ್ಮಿ ಸರು ಒತ್ತಾಯ ಮಾಡಿದ್ದಕ್ಕೆ ಅಕೌಂಟ್ ಕ್ರಿಯೇಟ್ ಮಾಡಿದೆ ಅದರಲ್ಲಿ ನಾನು ಆಕ್ಟಿವ್ ಇಲ್ಲ ಎಂದು ಹೇಳುತ್ತಾಳೆ. ಲೀಲಾ ಮಾತ್ರ ಅದನ್ನು ಯಾವುದನ್ನು ಕೇಳುವುದಿಲ್ಲ, ಕೊನೆಗೆ ದುರ್ಗಾ ಎಲ್ಲವನ್ನೂ ಒಪ್ಪಿಕೊಳ್ಳುತ್ತಾಳೆ.

ಸರಸು ಟಾಸ್ಕ್ ಗೆ ನಲುಗಿದ ಏಜೆ

ಸರಸು ಟಾಸ್ಕ್ ಗೆ ನಲುಗಿದ ಏಜೆ

ಲಕ್ಷ್ಮಿ-ಸರು ಏಜೆಯನ್ನು ಆಟ ಆಡಿಸಳು ಶುರು ಮಾಡಿದ್ದಾರೆ. ಸರು, ಏಜೆಗೆ ಕರೆ ಮಾಡಿ ಅಂತರ ಬಗ್ಗೆ ಮಾಹಿತಿ ಇದೆ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಏಜೆಗೆ ಶಾಕ್ ಆಗುತ್ತದೆ. ಬಳಿಕ ಅಂತರ ನಿಮಗೆ ಸಿಕ್ಕೆ ಸಿಗುತ್ತಾರೆ ಎಂದೆಲ್ಲ ಭರವಸೆಯನ್ನು ನೀಡುತ್ತಾಳೆ. ಲೀಲಾ ಮೊಬೈಲ್‌ಗೆ ಒಂದು ಮೆಸೇಜ್ ಬಂದಿದೆ ಇದರಲ್ಲಿ ಮಾಹಿತಿ ಇದೆ ಎಂದು ಹೇಳುತ್ತಾರೆ. ಇದನ್ನು ಕೇಳಿದ ಏಜೆ, ಲೀಲಾ ಬಳಿ ಓಡೋಡಿ ಬಂದು ಲೀಲಾ ನಿನ್ನ ಮೊಬೈಲ್ ಎಲ್ಲಿ ಎಂದು ಕೇಳುತ್ತಾನೆ ಲೀಲಾ ಏಜೆ ಮಾತು ಕೇಳಿ ಓಡೋಡಿ ಬರುತ್ತಾಳೆ. ಬಳಿಕ ಫೋನ್ ಇರುವ ಜಾಗವನ್ನು ಹೇಳುತ್ತಾಳೆ. ಬಳಿಕ ಅಲ್ಲಿ ಹೋಗಿ ಲೀಲಾ ಫೋನ್ ಅನ್ನು ತಡಕಾಡುತ್ತ ಇರುತ್ತಾನೆ ಮುಂದೇನು ಎಂಬುವುದನ್ನು ಕಾದು ನೋಡಬೇಕಿದೆ.

More from Filmibeat

English summary
Zee Kannada serial Hitler Kalyana Written Update on November 8th episode. Know more about the episode.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X