For Quick Alerts
  ALLOW NOTIFICATIONS  
  For Daily Alerts

  ಪ್ರೇಮಿಗಳನ್ನು ಒಂದು ಮಾಡಿದ ಏಜೆಯ ಜೀವ ತೆಗೆಯಲು ವಿಕ್ರಂ ಯೋಜನೆ!

  By ಪೂರ್ವ
  |

  'ಹಿಟ್ಲರ್ ಕಲ್ಯಾಣ' ಧಾರವಾಹಿ ಅದ್ಭುತವಾಗಿ ಮೂಡಿ ಬರುತ್ತಿದ್ದು ದಿನಕ್ಕೊಂದು ಟ್ವಿಸ್ಟ್‌ಗಳನ್ನು ನೀಡಿ ಜನರ ಮನ ಗೆಲ್ಲಲು ಪ್ರಯತ್ನ ಮಾಡುತ್ತಿದ್ದಾರೆ. ಇದೀಗ, ಸಾಯಲು ಹೊರಟಿರುವ ಪ್ರೇಮಿಗಳನ್ನು ಒಂದು ಮಾಡಿದ್ದಾರೆ ಏಜೆ. ಸಾಯುವ ಉದ್ದೇಶದಿಂದ ಬೆಟ್ಟದ ಮೇಲೆ ನಿಂತ ಪ್ರೇಮಿಗಳನ್ನು ಎಷ್ಟೇ ಇಳಿಯಲು ಹೇಳಿದರು ಪ್ರೇಮಿಗಳು ಮಾತ್ರ ಸಾವು ಮಾತ್ರ ಇದಕ್ಕೊಂದೆ ಪರಿಹಾರ ಎಂದು ಹೇಳುತ್ತಾರೆ. ಆದರೆ ಏಜೆ ಆ ಪ್ರೇಮಿಗಳ ಅಪ್ಪ ಅಮ್ಮನನ್ನು ಕರೆದು ಮಕ್ಕಳು ಏನು ಮಾಡಲು ಹೊರಟಿದ್ದಾರೆ ಎಂಬುವುದನ್ನು ಹೇಳುತ್ತಾರೆ. ತಂದೆ ತಾಯಿ ಯಂತು ಇದನ್ನೆಲ್ಲ ನೋಡಿ ಕಂಗಾಲಾಗುತ್ತಾರೆ.

  ಆ ವೇಳೆ ಹುಡುಗನ ತಾಯಿ ಹೇಳುತ್ತಾರೆ. ಆ ಹುಡುಗಿ ಜೊತೆ ಸೇರಬೇಡ ಎಂದು ಎಷ್ಟು ಹೇಳಿದರೂ ಕೇಳಲ್ಲ ಅಲ್ಲ ನೀನು. ಪ್ರೀತಿ-ಗೀತಿ ಮಾಡಿ ನಮ್ಮ ಮಾನ ಮರ್ಯಾದೆಯನ್ನು ತೆಗೆಯ ಬೇಡ ಎಂದು ಹೇಳಿದೆ ಅಲ್ವಾ ಎಂದು ಜೋರಾಗಿ ಹೇಳುತ್ತಾಳೆ. ಆದರೆ ಏಜೆ ಪ್ರೇಮಿಗಳ ಪಾಡು ತಂದೆ ತಾಯಿಗೆ ತಿಳಿಸಲೆಂದು ಕರೆಯಿಸಿ ಮನವರಿಕೆ ಮಾಡುವ ಪ್ರಯತ್ನ ಮಾಡುತ್ತಾರೆ.

  ಹುಡುಗನ ತಾಯಿ ಬಳಿ ಹೇಳುತ್ತಾರೆ ಪ್ರೀತಿ ಎಂಬುವುದು ಒಂದು ಅಸಹ್ಯ ಅಲ್ವಾ? ಹಾಗಾದರೆ ಗಂಡ ಹೆಂಡತಿನ ಪ್ರೀತಿಸಬಾರದು. ತಾಯಿ ಮಗೂನ ಪ್ರೀತಿ ಮಾಡಬಾರದು ಅಲ್ವಾ ಅಮ್ಮ? ಎಂದು ಹೇಳಿದಾಗ ಹುಡುಗನ ತಾಯಿ ಸುಮ್ಮನೆ ಆಗುತ್ತಾರೆ. ಬಳಿಕ ಮಾತು ಮುಂದುವರಿಸಿದ ಏಜೆ ನೀವು ವಯಸ್ಸಲ್ಲಿ ನನಗಿಂತ ತುಂಬಾ ದೊಡ್ಡವರು. ಆದರೆ ಒಂದು ಮಾತು ಹೇಳುತ್ತೇನೆ. ಕೆಲವರು ಕೈಯಲ್ಲಿ ಮಾಣಿಕ್ಯ ಹಿಡಿದು ಅದನ್ನು ತಾತ್ಸಾರ ಮಾಡುತ್ತಾರೆ. ಎನು ಇಲ್ಲದೆ ಇರುವವರು ಅದಕ್ಕೆ ತುಂಬಾ ಬೆಲೆ ಕೊಡುತ್ತಾರೆ ಎನ್ನುತ್ತಾರೆ.

  ಹುಡುಗಿ ಅನಾಥೆ ಎಂದ ಹೆತ್ತವರಿಗೆ ಪ್ರತ್ಯುತ್ತರ ನೀಡಿದ ಏಜೆ

  ಹುಡುಗಿ ಅನಾಥೆ ಎಂದ ಹೆತ್ತವರಿಗೆ ಪ್ರತ್ಯುತ್ತರ ನೀಡಿದ ಏಜೆ

  ಆ ಹುಡುಗಿಗೆ ತನ್ನವರು ಯಾರೂ ಇಲ್ಲ. ನಿಮ್ಮ ಮಗನನ್ನು ಮದುವೆ ಆಗಿ ಬಂದರೆ ನಿಮ್ಮಿಬ್ಬರನ್ನೂ ಅಪ್ಪ ಅಮ್ಮನ ಸ್ಥಾನದಲ್ಲಿ ಇಡುತ್ತಾಳೆ ಎಂದಾಗ ಹುಡುಗನ ತಾಯಿ ತಕರಾರು ಎತ್ತುತ್ತಾರೆ ಆದರೂ ಹಿಂದೆ ಮುಂದೆ ಇರದ ಹುಡುಗೀನ ಹೇಗೆ.. ಎಂದು ಮುಂದೆ ಹೇಳದೆ ಸುಮ್ಮನಾಗುತ್ತಾರೆ. ಬಳಿಕ ಏಜೆ ಇಬ್ಬರು ಪ್ರೇಮಿಗಳನ್ನು ಒಂದು ಮಾಡುವತ್ತ ಇನ್ನೂ ಹೆಚ್ಚು ಒತ್ತಾಯ ಮಾಡುತ್ತಾರೆ.

  ಪೋಷಕರ ಮನಸ್ಸು ಬದಲಿಸಿದ ಏಜೆ

  ಪೋಷಕರ ಮನಸ್ಸು ಬದಲಿಸಿದ ಏಜೆ

  ಆ ಹುಡುಗ ಮಾತ್ರ ನನ್ನನ್ನು ಸಾಯಲು ಬಿಡಿ ಅಮ್ಮ ಒಪ್ಪಲ್ಲ ಇದೆ ಕಾರಣಕ್ಕೆ ನಾವು ಸಾಯಲು ಬಂದಿದ್ದು ಈಗಲಾದರೂ ನಿಮಗೆ ತಿಳಿಯಿತು ಅಲ್ವಾ ಎಂದು ಹೇಳಿದಾಗ, ಆ ಹುಡುಗನಿಗೆ ಏಜೆ ಸಮಾಧಾನ ಮಾಡುತ್ತಾನೆ. ಬಳಿಕ ಹುಡುಗನ ತಂದೆ ಬಳಿ ಹೇಳುತ್ತಾರೆ ಏಜೆ ತನ್ನ ಮಗ ಚೆನ್ನಾಗಿರಲಿ ಎಂದು ಕೇಳಿ ಕೇಳಿದ್ದನ್ನು ಕೊಡುತ್ತಿದ್ದ ನೀವು ಪ್ರಾಣಕಿಂತ ಹೆಚ್ಚಾಗಿ ಒಂದು ಹುಡುಗೀನ ಪ್ರೀತಿ ಮಾಡಿದ್ದಾನೆ. ಇದನ್ನು ತಿಳಿದೂ ನೀವು ಸುಮ್ಮನೆ ಇದ್ದೀರಾ ಎಂದು ಹೇಳುತ್ತಾನೆ.

  ಪ್ರೇಮಿಗಳು ನನಗೆ ಹತ್ತಿರ: ಏಜೆ

  ಪ್ರೇಮಿಗಳು ನನಗೆ ಹತ್ತಿರ: ಏಜೆ

  ನೀವು ಬರುವುದು 5 ನಿಮಿಷ ಆಗುತ್ತಿದ್ದರೆ ಅವರ ನಗುವನ್ನು ಫೋಟೋದಲ್ಲಿ ನೋಡಬೇಕಿತ್ತು ಎಂದು ಹೇಳುತ್ತಾನೆ. ಇದನ್ನು ಕೇಳಿದ ಹೆತ್ತವರು ಬೇಸರ ಮಾಡಿಕೊಳ್ಳುತ್ತಾರೆ. ಬಳಿಕ ಅದು ಹೇಗೊ ಪ್ರೇಮಿಗಳನ್ನು ಒಂದು ಮಾಡುತ್ತಾರೆ ಏಜೆ. ಬಳಿಕ ಲೀಲಾ ಏಜೆ ಬಳಿ ಒಂದು ಪ್ರಶ್ನೆ ಕೇಳುತ್ತಾಳೆ. ನಿಮಗೆ ಪ್ರೇಮಿಗಳನ್ನು ಯಾಕೆ ಒಂದು ಮಾಡಬೇಕು ಅನ್ನಿಸ್ತು. ಎಂದಾಗ ಏಜೆ ಮಾತ್ರ ಆತನ ಹುಚ್ಚು ಪ್ರೀತಿ ನನಗೆ ಇಷ್ಟ ಆಯಿತು. ಯಾರು ಹೆಚ್ಚು ಪ್ರೀತಿ ಮಾಡುತ್ತಾರೋ ಅವರೆಲ್ಲ ನನಗೆ ಹತ್ರ ಆದ ಹಾಗೆ ಅನ್ನಿಸುತ್ತದೆ. ಪ್ರೀತಿ ಅಂದರೆ ಏನು ಅದನ್ನು ಕಳೆದುಕೊಂಡರೆ ಏನ್ ಆಗುತ್ತದೆ ಎಂಬುವುದನ್ನು ನನಗಿಂತ ಚೆನ್ನಾಗಿ ಯಾರು ಅರ್ಥ ಮಾಡಿಕೊಳ್ಳಲು ಸಾಧ್ಯ ಇಲ್ಲ. ಅವರಿಬ್ಬರನ್ನು ಒಂದು ಮಾಡಲು ಇರೋ ಕೆಲಸವನ್ನು ಬಿಟ್ಟು ಬಂದೆ. ಎಂದು ಹೇಳಿ ಹೊರಡಲು ಅನುವಾದಾಗ ಲೀಲಾ ದೇವಾಲಯಕ್ಕೆ ಹೋಗಿ ಬರುತ್ತೇನೆ ಎಂದು ಹೇಳುತ್ತಾಳೆ .

  ಏಜೆ ಜೀವ ಉಳಿಸಿದ ಲೀಲಾ

  ಏಜೆ ಜೀವ ಉಳಿಸಿದ ಲೀಲಾ

  ಬಳಿಕ ಅಲ್ಲಿಂದ ದೇವರ ದರ್ಶನಕ್ಕೆ ಲೀಲಾ ಒಬ್ಬಳೇ ತೆರಳುತ್ತಾಳೆ. ಬಳಿಕ ಏಜೆ ಗೆ ಒಳ್ಳೆಯದಾಗಲಿ ಅವರಿಗೂ ಪ್ರೀತಿ ಸಿಗಬೇಕು ಎಂದು ಹೇಳುತ್ತಾಳೆ. ಅಸ್ಟ್ರಲ್ಲಿ ಅಲ್ಲಿಗೆ ಒಂದು ವ್ಯಾನ್ ಬಹಳ ವೇಗವಾಗಿ ಬರುತ್ತದೆ. ಇದನ್ನು ನೋಡಿದ ಲೀಲಾ ಏಜೆ ಎಂದು ಕಿರುಚುತ್ತಾ ಓಡಿ ಬರುತ್ತಾಳೆ. ಬಳಿಕ ಏಜೆ ಗೆ ಬಂದಿದ್ದ ಪ್ರಾಣಾ ಪಾಯಾದಿಂದ ರಕ್ಷಣೆ ಮಾಡುತ್ತಾಳೆ.

  English summary
  Zee Kannada serial Hitler Kalyana Written Update on October 17th episode. Know more about it.
  Wednesday, October 19, 2022, 20:14
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X