ಏಜೆ ಮನೆಗೆ ಎಂಟ್ರಿ ಕೊಟ್ಟ ವಿಕ್ರಂ: ಒಳಸಂಚು ಏಜೆಗೆ ತಿಳಿಯುತ್ತಾ?

By ಪೂರ್ವ

ಏಜೆ ಮನೆಗೆ ಇದೀಗ ವಿಕ್ರಂ ಎಂಟ್ರಿಯಾಗಿದ್ದಾನೆ. ಏಜೆ ಮೊದಲನೇ ಹೆಂಡತಿ ಅಂತರ ಸಹೋದರ ವಿಕ್ರಂ ಏಜೆಯೊಂದಿಗೆ ಇದ್ದು ಏಜೆ ವಿರುದ್ದ ಮಸಲತ್ತು ಮಾಡಲು ಬಂದಿದ್ದಾನೆ ಎಂದು ಲೀಲಾಗೆ ತಿಳಿದಿದೆ. ವಿಕ್ರಂ ಅದೆಷ್ಟೋ ಬಾರಿ ಲೀಲಾ ಜೊತೆ ಏಜೆ ಬಗ್ಗೆ ಮಾತನಾಡಬೇಕು ಎಂದು ಕರೆದರೂ ಲೀಲಾ ಮಾತ್ರ ವಿಕ್ರಂ ಮಾತು ಕೇಳುತ್ತಾ ಇರಲಿಲ್ಲ. ಇದರಿಂದ ಕೋಪಗೊಂಡ ವಿಕ್ರಂ, ಏಜೆಯ ಮನೆಗೆ ಬರುತ್ತಾನೆ. ವಿಕ್ರಂನನ್ನು ನೋಡಿದ ಏಜೆ ಬಹಳ ಖುಷಿ ಪಡುತ್ತಾರೆ. ದಸರಾ ಹಬ್ಬ ಎಂದರೆ ಸಿಡಿದು ಬೀಳುತ್ತಿದ್ದ ಏಜೆ ಇದೀಗ ವಿಕ್ರಂನನ್ನು ಕಂಡೊಡನೆ ಬಹಳ ಖುಷಿ ಪಡುತ್ತಾರೆ.

ಮನೆಗೆ ಆದರದಿಂದ ವಿಕ್ರಂನನ್ನು ಕರೆತಂದ ಏಜೆಯನ್ನು ನೋಡಿದ ಲೀಲಾಗೆ ಶಾಕ್ ಆಗುತ್ತದೆ. ವಿಕ್ರಂ ಯಾಕೆ ಮನೆಗೆ ಬಂದ? ಏಜೆಗೆ ಆತ ಏನಾಗಬೇಕು ಎಂದೆಲ್ಲ ಯೋಚನೆ ಮಾಡುತ್ತಿದ್ದ ಲೀಲಾಗೆ ಕೊನೆಗೂ ಉತ್ತರ ಸಿಕ್ಕಿತು. ಆತ ಬೇರೆ ಯಾರು ಅಲ್ಲ ಏಜೆಯ ಮೊದಲ ಹೆಡತಿ ಅಂತರಾಳ ತಮ್ಮ ಎಂದು. ಅಂತರ ಅಕ್ಕನ ತಮ್ಮ ಏಜೆ ಪ್ರಾಣಕ್ಕೆ ಕುತ್ತು ತರಲು ಯೋಚನೆ ಮಾಡಿದರೆ ಎಂಬೆಲ್ಲ ಆಲೋಚನೆಗಳು ಆಕೆಯ ಮನದಲ್ಲಿ ಮೂಡುತ್ತವೆ.

ಲೀಲಾಗೆ ಹಲವು ಪ್ರಶ್ನೆ ಮೂಡಿದ್ದಾವೆ

ಲೀಲಾಗೆ ಹಲವು ಪ್ರಶ್ನೆ ಮೂಡಿದ್ದಾವೆ

ದಸರಾ ಹಬ್ಬವನ್ನು ಈ ವರ್ಷ ಅದ್ದೂರಿಯಾಗಿ ಆಚರಣೆ ಮಾಡೋಣ. ಈ ವರ್ಷ ನನಗೆ ಬಹಳ ಹರುಷ ನೀಡಿದೆ. ಲೀಲಾ ಈ ಬಾರಿ ಅಂತರ ನಾನು ಲೀಲಾ ವಿಕ್ರಂ ಎಲ್ಲರೂ ಸೇರಿ ಅದ್ದೂರಿಯಾಗಿ ಆಚರಣೆ ಮಾಡೋಣ ಎಂದು ಹೇಳುತ್ತಾರೆ ಏಜೆ. ಬಳಿಕ ವಿಕ್ರಂ ಬಳಿ ಮಾತನಾಡುತ್ತಾ, ವಿಕ್ರಂ, ನಿನ್ನನ್ನು ಹುಡುಕಾಡದ ಸ್ಥಳ ಇಲ್ಲ. ಎಲ್ಲಿ ಹೋಗಿದ್ದೆ ನೀನು ಎಂದೆಲ್ಲ ಕೇಳುತ್ತಾರೆ. ಬಳಿಕ ಲೀಲಾಳನ್ನು ತೋರಿಸಿ ಈಕೆ ನನ್ನ ಹೆಂಡತಿ ಲೀಲಾ ಎಂದು ಹೇಳಿದಾಗ ವಿಕ್ರಂ ನನಗೆ ಗೊತ್ತು ಎಂದು ಹೇಳಿದಾಗ ಲೀಲಾ-ಏಜೆ ಇಬ್ಬರು ಶಾಕ್ ಆಗುತ್ತಾರೆ. ಆಗ ಏಜೆ ಹೇಗೆ ಗೊತ್ತು ನಿನಗೆ ಲೀಲಾ ಎಂದು ಆಶ್ಚರ್ಯ ದಿಂದ ಕೇಳುತ್ತಾಳೆ. ಇದನ್ನು ಕೇಳಿದ ವೇಳೆ ವಿಕ್ರಂ ಅಲ್ಲಾ ಏಜೆ ನೀವೇ ಹೇಳಿದ್ದು ಅಲ್ವಾ ಈಗ ಎಂದು ಹೇಳಿ ಸುಮ್ಮನಾಗುತ್ತಾರೆ.

ಲೀಲಾ ಭಯ ಕಂಡು ದುರ್ಗಾಗೆ ಆಶ್ಚರ್ಯ

ಲೀಲಾ ಭಯ ಕಂಡು ದುರ್ಗಾಗೆ ಆಶ್ಚರ್ಯ

ಲೀಲಾ ಭಯದಿಂದ ಬೆವರಿ ಹೋಗುತ್ತಿರುವುದನ್ನು ನೋಡಿದ ದುರ್ಗಾ ಎನಿವತ್ತು ವಿಕ್ರಂನನ್ನು ನೋಡಿ ಲೀಲಾ ಇಷ್ಟೊಂದು ಬೆವರುತ್ತಿದ್ದಾಳೆ ಏನಾಯ್ತು ಆಕೆಗೆ ಎಂದು ಯೋಚನೆ ಮಾಡುತ್ತಾ ಇರುತ್ತಾಳೆ. ಇನ್ನು ಲೀಲಾ ಏಜೆ ಬಳಿ ಯಿಂದ ತೆರಳುತ್ತಾಳೆ ಆಗ ಅಲ್ಲಿಗೆ ಬಂದ ದುರ್ಗಾ ಎನು ಲೀಲಾ ಇಷ್ಟೊಂದು ಬೆವರುತ್ತಿದ್ದಿಯಾ ಏನಾಯ್ತು ಎಂದೆಲ್ಲ ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳುತ್ತಾ ಇರುತ್ತಾರೆ. ಬಳಿಕ ದುರ್ಗಾ ಲೀಲಾ ಕಂಡು ಕುಹಕ ಆಡುತ್ತಾಳೆ ಇದನ್ನು ಕೇಳಿ ಲೀಲಾ ನಿಮ್ಮ ಮಾತಿಗಿಂತ ನನ್ನ ಮಾತೇ ಇಲ್ಲಿ ಮುಖ್ಯವಾಗುತ್ತೆ ಅದರಲ್ಲಿ ನಿಮ್ಮ ಸ್ಥಾನ ಏನೆಂಬುವುದು ನಿಮಗೆ ತಿಳಿಯುತ್ತದೆ. ಎಂದು ಹೇಳಿ ಅಲ್ಲಿಂದ ತೆರಳುತ್ತಾಳೆ ಇದರಿಂದ ಕೋಪ ಗೊಂಡ ದುರ್ಗಾ ನನಗೆ ಎದುರು ಮಾತನಾಡುತ್ತಾಳೆ, ಎಂದು ಕೋಪ ವ್ಯಕ್ತಪಡಿಸುತ್ತಾಳೆ.

ಕೋಪಗೊಂಡ ದುರ್ಗಾ

ಕೋಪಗೊಂಡ ದುರ್ಗಾ

ಆಗ ಅಲ್ಲಿಗೆ ಬಂದ ಸರು ಏನಕ್ಕಾ ಏನಾಯ್ತು ಯಾಕೆ ಇಷ್ಟು ಕೋಪ ಮಾಡಿಕೊಂಡು ಇದ್ದೀರಾ. ಏನಾಯ್ತು ನಿಮಗೆ ಎಂದು ಕೇಳುತ್ತಾಳೆ. ನಾನು ಆಗ ನಿಮಗೆ ಬೈದೆ ಅಲ್ವಾ ನನ್ನ ಮೇಲೆ ನೀವು ಕೋಪ ಮಾಡಿಕೊಂಡು ಇದ್ದೀರಾ ಎಂದು ಕೇಳಿದಾಗ ಹಾಗೇನಿಲ್ಲ ಬೇಸರ ಪಟ್ಟುಕೊಳ್ಳಬೇಡ ನಾನು ಬೇರೆ ಕಾರಣಕ್ಕೆ ಕೋಪ ಮಾಡಿಕೊಂಡಿದ್ದೇನೆ ಎಂದು ಲೀಲಾ ಹೇಳಿದ ಎಲ್ಲ ಮಾತುಗಳನ್ನು ಸರು ಬಳಿ ಹೇಳುತ್ತಾಳೆ. ಬಳಿಕ ಹೇಳುತ್ತಾಳೆ ಲೀಲಾಳನ್ನು ಹೇಗೆ ಮುಗಿಸುವುದು ಎಂಬುವುದನ್ನು ನಾನು ನೋಡುತ್ತಿದ್ದೇನೆ ಎಂದೆಲ್ಲ ಸರು ಬಳಿ ತನ್ನ ಕೋಪವನ್ನು ಬಿಚ್ಚಿ ಇಡುತ್ತಾಳೆ.

ಕೆಲಸದವರಿಗೆ ಸಂಬಳ ಹೆಚ್ಚಿಸಿದ ಏಜೆ

ಕೆಲಸದವರಿಗೆ ಸಂಬಳ ಹೆಚ್ಚಿಸಿದ ಏಜೆ

ದುರ್ಗಾ ಹಾಲ್ ನಲ್ಲಿ ನಿಂತು ಇರಬೇಕಾದರೆ ಕೆಲಸದವರನ್ನು ಕರೆದು ಈ ಬಾರಿ ಅದ್ದೂರಿಯಾಗಿ ದಸರಾ ಹಬ್ಬ ಆಚರಣೆ ಮಾಡಿ ಈ ಬಾರಿ ನಿಮಗೆ 15 ಪರ್ಸೆಂಟ್ ಇನ್ಕ್ರಿಮೆಂಟ್ ಕೊಡುತ್ತೇನೆ ಎಂದೆಲ್ಲ ಹೇಳುತ್ತಿರುವುದನ್ನು ಕೇಳಿದ ಏಜೆ ಸೊಸೆಗೆ ಶಾಕ್ ಆಗುತ್ತದೆ. ಕಾರ್ಮಿಕರು ಬಹಳ ಖುಷಿ ಪಡುತ್ತಾರೆ. ಬಳಿಕ ಏಜೆಯನ್ನು ಕರೆದ ದುರ್ಗ ಏಜೆ ನೀವು 15 ಪರ್ಸೆಂಟ್ ಸಂಬಳದಲ್ಲಿ ಇನ್ಕ್ರಿಮೆಂಟ್ ಕೊಟ್ಟರೆ ನಮಗೆ ಕೋಟ್ಯಂತರ ರೂಪಾಯಿ ಲಾಸ್ ಆಗುತ್ತದೆ ಎಂದು ಹೇಳುತ್ತಾರೆ. ಅದಕ್ಕೆ ದುರ್ಗಾಗೆ ಏಜೆ ಸಮಾಜಾಯಿಸಿಯನ್ನು ನೀಡುತ್ತಾರೆ.

More from Filmibeat

English summary
Zee Kannada serial Hitler Kalyana Written Update on October 4th episode. Know more about it.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X