ಲೀಲಾ ಮೇಲೆ ಸ್ಫೋಟಗೊಂಡ ಕೋಪ: ಕೊಲ್ಲಲು ಮುಂದಾದ ಏಜೆ!

By ಪೂರ್ವ

'ಹಿಟ್ಲರ್ ಕಲ್ಯಾಣ' ಧಾರವಾಹಿ ಚೆನ್ನಾಗಿ ಮೂಡಿ ಬರುತ್ತಿದೆ. ಏಜೆ ಪ್ರಾಣಕ್ಕೇ ಕುತ್ತು ಬರುತ್ತಾ ಎಂಬ ಆತಂಕದಲ್ಲಿದ್ದಾಳೆ ಲೀಲಾ. ಅಂತರಾಳ ತಮ್ಮ ವಿಕ್ರಂ ಏಜೆಯನ್ನು ಕೊಲ್ಲಲು ಏನು ಕಾರಣ ಎಂಬುವುದೇ ಅರ್ಥ ಆಗದೆ ಗೊಂದಲದಲ್ಲಿದ್ದಾಳೆ. ಇನ್ನು ಗೊಂಬೆ ಕೂರಿಸುವ ವೇಳೆ ಲೀಲಾ ಏನೋ ಟೆನ್ಶನ್‌ನಲ್ಲಿ ಇರುತ್ತಾಳೆ. ಈ ವೇಳೆ ದುರ್ಗಾ ಲೀಲಾ ಳನ್ನು ಕರೆದು ಏನಾಯಿತು ಎಂದೆಲ್ಲ ಕೇಳುತ್ತಾ ಇರುತ್ತಾಳೆ. ಇನ್ನು ಸರು ಹಾಗೂ ವಿಶ್ವರೂಪ ಏನೋ ಯೋಚನೆ ಮಾಡುತ್ತಾ ಇರುತ್ತಾರೆ.

ಲೀಲಾ ಯಾಕೆ ಹೀಗೆ ಆಡುತ್ತಿದ್ದಾಳೆ? ಏಜೆ, ಲೀಲಾಗೆ ಏನು ಬಯ್ಯುತ್ತಿಲ್ಲವಲ್ಲ ಎಂದು ಆಲೋಚನೆ ಮಾಡುತ್ತಾ ಇರುವ ವೇಳೆ ವಿಶ್ವರೂಪ ಅದಕ್ಕೆ ಒಗ್ಗರಣೆ ಹಾಕುತ್ತಾನೆ. ಆದರೂ ಕೊನೆಗೆ ಸರು, ಏಜೆ-ಲೀಲಾಳನ್ನು ದೂರ ಮಾಡುತ್ತಿರುವ ಯೋಚನೆ ಮಾಡಿದ ವೇಳೆ ವಿಶ್ವ ರೂಪ, ಸರು ಗಮನ ಬೇರೆಡೆ ಹರಿಸುತ್ತಾನೆ. ಲೀಲಾ ಕುಡಿದ ಮತ್ತು ಇಳಿದ ಮೇಲೆ ಏನೋ ಯೋಚನೆ ಮಾಡುತ್ತಾ ಇರುತ್ತಾಳೆ. ವಿಕ್ರಂನನ್ನು ಹೇಗೆ ಈ ಮನೆಯಿಂದ ಓಡಿಸುವುದು ಎಂದೆಲ್ಲ ಯೋಚನೆ ಮಾಡುತ್ತಾಳೆ. ಬಳಿಕ ದುರ್ಗಾಳನ್ನು, ಸರು ಕರೆದುಕೊಂಡು ಬರುತ್ತಾಳೆ.

ನೋಡು ಅಕ್ಕ, ಲೀಲಾ ಕುಡಿದು ಹೇಗೆ ಆಡ್ತಿದ್ದಾಳೆ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಲೀಲಾ ಕುಡಿದ ಮತ್ತಿನಲ್ಲಿ ಇರುವವರ ಹಾಗೆ ಆಕ್ಟಿಂಗ್ ಮಾಡುತ್ತಾಳೆ. ಹೇಯ್ ನೀನು ಮಳ್ಳಿ ಎಂದು ಸರುಳಿಗೆ ತೋರಿಸಿ ಹೇಳುತ್ತಾಳೆ. ದುರ್ಗಳತ್ತ ಕೈ ತೋರಿಸಿ ಇವಳು ಕಳ್ಳಿ ಎಂದು ಹೇಳಿದರೆ ಇನ್ನು ಲಕ್ಷ್ಮಿ ಗೆ ಸುಳ್ಳಿ ಎಂದು ಹೇಳುತ್ತಾಳೆ ಇದನ್ನು ಕೇಳಿದ ದುರ್ಗಾಗೆ ಸಿಕ್ಕಾ ಪಟ್ಟೆ ಕೋಪ ಬರುತ್ತದೆ. ಬಳಿಕ ಅಲ್ಲಿಂದ ದುರ್ಗಾ, ಸರು ಹೋಗುತ್ತಾರೆ. ಅವರು ಹೋಗುತ್ತಿರುವುದನ್ನು ಕಾಯುತ್ತಿದ್ದ ಲೀಲಾ ಮಾತ್ರ ಅವರ ಪೆಚ್ಚಾದ ಮುಖಗಳನ್ನು ನೋಡಿ ನಗುತ್ತಾಳೆ.

ಏಜೆ ಬಳಿ ಕ್ಷಮೆ ಯಾಚಿಸಿದ ಲೀಲಾ

ಏಜೆ ಬಳಿ ಕ್ಷಮೆ ಯಾಚಿಸಿದ ಲೀಲಾ

ಬಳಿಕ ಏಜೆ ಬಳಿ ಬಂದ ಲೀಲಾ, ಏಜೆ ಬಂದು ತಪ್ಪಾಯಿತು ಕ್ಷಮಿಸಿ ಎಂದು ಕೇಳುತ್ತಾಳೆ ಇದನ್ನು ಕೇಳಿದ ಏಜೆ ಸುಮ್ಮನಾಗುತ್ತಾರೆ. ಏಜೆ ಹೇಳುತ್ತಾರೆ ನೀನು ಮಾಡಿದ್ದು ತಪ್ಪು ಎಂದು ಎಣಿಸಿದರೆ ಮುಂಚೆ ಆ ತಪ್ಪು ಆಗದೆ ಇರುವ ಹಾಗೆ ನೋಡಿಕೋ. ಸರಿ ಎನಿಸಿದರೆ ಸುಮ್ಮನಿರು ಕ್ಷಮೆ ಎಲ್ಲಾ ಕೇಳಲು ಬರಬೇಡ ಎಂದು ಹೇಳುತ್ತಾರೆ. ಬಳಿಕ ಏಜೆ ಹೇಳುತ್ತಾರೆ ನನ್ನ ಮುಂಚೆ ಹಿಟ್ಲರ್ ಎಂದೆಲ್ಲ ಕರೆಯುತ್ತಿದ್ದರು. ಅನಂತರ ಹೋದ ಮೇಲೆ ನಾನು ಜೀವಂತ ಶವ ಆಗಿದ್ದೆ ಆದರೆ ಇದೀಗ ವಿಕ್ರಂ ಸಿಕ್ಕಿದ್ದಾನೆ ಆತ ಅಂಬಾರಿ ಇರುವ ಆನೆ ತೆಗೆದುಕೊಂಡು ಬಂದು ಕೊಟ್ಟಿದ್ದಾನೆ ಎನ್ನುತ್ತಾನೆ.

ವಿಕ್ರಂ ಬಗ್ಗೆ ಏಜೆಗೆ ಅಪಾರ ನಂಬಿಕೆ

ವಿಕ್ರಂ ಬಗ್ಗೆ ಏಜೆಗೆ ಅಪಾರ ನಂಬಿಕೆ

ನನಗೆ ಅಂತರ ಬೇರೆ ಅಲ್ಲಾ ವಿಕ್ರಂ ಬೇರೆ ಅಲ್ಲ ಅವರಿಬ್ಬರೂ ನನಗೆ ಒಂದೇ ಆದರೆ ಆತನಿಗೆ ನೋವಾದರೆ ನನಗೆ ನಾವಾದ ಹಾಗೆ ಅದಕ್ಕೆ ಯಾರಿಗೂ ನೋವು ಆಗದೆ ಹಾಗೆ ನೋಡಿಕೋ ಎಂದು ಹೇಳಿ ಹೋಗುತ್ತಾನೆ. ಬಳಿಕ ಲೀಲಾ ಗೊಂಬೆ ಕೂರಿಸುವ ಬಗ್ಗೆ ಯೋಚನೆ ಮಾಡುತ್ತಾ ಇರುವ ವೇಳೆ ದುರ್ಗಾ ಕನಸು ಕಂಡಿದ್ದು ಅಪಶಕುನದ ಸೂಚನೆ, ಯಾರೋ ಸಾಯುವ ಸೂಚನೆ ಎಂದು ಹೇಳುತ್ತಾಳೆ ಸರು. ಆಗ ಅಲ್ಲಿಗೆ ಬಂದ ಲೀಲಾ ಏನಾಯ್ತು ಏನು ಕನಸು ಎಂದು ಭಯ ಬಿದ್ದು ಕೇಳುತ್ತಾಳೆ.

ಪೂಜೆ ಮಾಡುವ ವೇಳೆ ಅಪಶಕುನ

ಪೂಜೆ ಮಾಡುವ ವೇಳೆ ಅಪಶಕುನ

ಆಗ ದುರ್ಗಾ ಏನೋ ನದಿ ಇರುವಂತೆ ಕನಸು ಬಿತ್ತು ಎಂದು ಹೇಳಿದಾಗ ಲೀಲಾ ಭಯ ಗೊಳ್ಳುತ್ತಾಳೆ. ಅಷ್ಟರಲ್ಲಿ ಆಗಲೇ ಏಜೆ ಅಲ್ಲಿಗೆ ಬರುತ್ತಾರೆ. ಪೂಜೆ ಮಾಡಲು ಎಲ್ಲಾ ರೆಡಿ ಇದೆಯಾ ಎಂದು ಕೇಳುತ್ತಾಳೆ ಅದಕ್ಕೆ ಲೀಲಾ ಹೌದು ಎಂದು ತಲೆಯಾಡಿಸುತ್ತಾಳೆ. ಲೀಲಾ ಬಳಿ ಪೂಜೆ ಮಾಡಲು ಹೇಳುತ್ತಾನೆ ಆ ವೇಳೆ ಸರು ವಿಕ್ರಂ ಬರಲಿ ಎಂದಾಗ ಏಜೆ ಹೇಳುತ್ತಾರೆ ಆತ ಬರುವುದು ಎಷ್ಟು ಗಂಟೆ ಆಗುತ್ತದೋ ಗೊತ್ತಿಲ್ಲ ಪೂಜೆ ಮಾಡಿ ಮುಗಿಸೋಣ ಎಂದು ಹೇಳುತ್ತಾರೆ. ಲೀಲಾ ಫೂಜೆ ಮಾಡುವ ವೇಳೆ ಅಪಶಕುನವಾಗುತ್ತದೆ.

ಲೀಲಾ ಕುತ್ತಿಗೆಗೆ ಕೈ ಹಾಕಿದ ಏಜೆ

ಲೀಲಾ ಕುತ್ತಿಗೆಗೆ ಕೈ ಹಾಕಿದ ಏಜೆ

ಆಗ ಅಲ್ಲಿಗೆ ವಿಕ್ರಂ ಕೂಡ ಬರುತ್ತಾನೆ. ಲೀಲಾ ಬಳಿ ಗುಟ್ಟಾಗಿ ಹೇಳುತ್ತಾನೆ ಇನ್ನೂ 20 ನಿಮಿಷ ಬಾಕಿ ನಾನು ತಂದ ಗಿಫ್ಟ್ ನಿಂದಲೆ ಏಜೆ ಅಂತ್ಯ ಆಗುತ್ತದೆ ಎಂದು ಹೇಳುತ್ತಾರೆ. ಆ ವೇಳೆ ಪೂಜೆ ಮಾಡುವುದು ಬಿಟ್ಟು ಏಜೆ ಕೈ ಯಲ್ಲಿ ಇದ್ದ ಆನೆಯನ್ನು ಹೊರಗೆ ತಂದು ಎಸೆಯುತ್ತಾಳೆ. ಇದನ್ನು ನೋಡಿದ ಏಜೆಗೆ ಮಾತ್ರ ಸಿಕ್ಕಾ ಪಟ್ಟೆ ಕೋಪ ಬರುತ್ತದೆ. ಲೀಲಾ ಕುತ್ತಿಗೆಯನ್ನು ಹಿಡಿಯುತ್ತಾರೆ ಏಜೆ ಮುಂದೇನು ಎಂಬುವುದನ್ನು ಕಾದು ನೋಡಬೇಕಿದೆ.

More from Filmibeat

English summary
Zee Kannada serial Hitler Kalyana Written Update on October 7th episode. Know more about it.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X