twitter
    For Quick Alerts
    ALLOW NOTIFICATIONS  
    For Daily Alerts

    ಹಿಟ್ಲರ್ ಕಲ್ಯಾಣ: ಕೌಸಲ್ಯಾಳ ಮಾಸ್ ಲುಕ್, ಖಡಕ್ ಮಾತಿಗೆ ಬೆಚ್ಚಿಬಿದ್ದಳಾ ದುರ್ಗಾ..?

    By ಎಸ್ ಸುಮಂತ್
    |

    ಎಜೆ ಸೊಸೆಯಂದಿರು ಎಂದರೆ ಏನು ಅಂದುಕೊಂಡಿದ್ದೀರಾ..? ಎಲ್ಲವೂ ಕುಳಿತಲ್ಲಿಗೆ ಬರುತ್ತದೆ. ಎದ್ದು ಹೋಗುವ ಅವಶ್ಯಕತೆಯೂ ಇರುವುದಿಲ್ಲ. ಕುಳಿತುಕೊಳ್ಳುವುದು ರಾಯಲ್ ಸೋಫಾ, ತಿನ್ನುವ ಫುಡ್ ಎಲ್ಲವು ಹೈಜಿನ್ ಫುಡ್. ಕೆಲಸ ಮಾಡಿ ಅಭ್ಯಾಸವೇ ಇಲ್ಲ. ಹೀಗೆ ಒಂದೊಂದೆ ಒಂದೊಂದೆ ಕಂಡಿಷನ್ ಅನ್ನು ಅದು ಕೌಸಲ್ಯ ಮುಂದೆ ಹೇಳುವಾಗ ಅಷ್ಟೇ ರಾಯಲ್ ಟ್ರೀಟ್ಮೆಂಟ್ ಅನ್ನು ಕೌಸಲ್ಯ ನೀಡದೆ ಇರುತ್ತಾಳೆಯೇ. ಎಜೆಯ ಮೂರು ಸೊಸೆಯಂದಿರಿಗೂ ಕೌಸಲ್ಯ ಕಡೆಯಿಂದ ಇನ್ನೆಂದೂ ಮರೆಯುವುದಕ್ಕೆ ಆಗದಂತ ಟ್ರೀಟ್ ಮೆಂಟ್ ಸಿಕ್ಕಾಗಿದೆ.

    ಈಗ ಕೌಸಲ್ಯ ಮನೆಯಿಂದ ತಮ್ಮ ಬಂಗಲೆಗೆ ಹೊರಡುವ ಸಮಯ. ಎಜೆ ನೀವೂ ಇರಿ ಎಂದರೆ ಇನ್ನು ಇಲ್ಲಿಯೇ ಇರುತ್ತೀವಿ ಅಂತ ಬೇರೆ ಸೊಸೆಯಂದಿರು ಹೇಳಿ ಬಿಟ್ಟಿದ್ದಾರೆ. ಎಜೆ ಬೇರೆ ಲೀಲಾಳನ್ನು ಕರೆದು ಏನು ಮಾಡೋಣಾ ಎಂದು ಕೇಳಿದಾಗ ಲೀಲಾ ಬೇಡ ಮನೆಗೆ ಕರೆದುಕೊಂಡು ಹೋಗೋಣಾ ಎಂದು ಹೇಳಿ ರಿಲೀಫ್ ನೀಡಿದ್ದಾಳೆ. ಆದರೆ ಮನೆಯಿಂದ ಹೊರಡುವುದಕ್ಕೂ ಮುನ್ನ ಎಜೆ ದೊಡ್ಡ ಸೊಸೆ ದುರ್ಗಾ, ಕೌಸಲ್ಯಾಳನ್ನು ಕೆಣಕಿ ಹೋಗಿದ್ದಾಳೆ.

    ಕೌಸಲ್ಯಾಳನ್ನು ಕೆಣಕಿದ ದುರ್ಗಾ

    ಕೌಸಲ್ಯಾಳನ್ನು ಕೆಣಕಿದ ದುರ್ಗಾ

    ಕೌಸಲ್ಯ ಮಾಸ್ ಗೂ ಸೈ ಕ್ಲಾಸ್ ಗೂ ಸೈ ಎನ್ನುವಂತ ಕ್ಯಾರೆಕ್ಟರ್ ಇರುವವಳು. ಕೆಣಕಿದರೆ ಮತ್ತೆ ಮತ್ತೆ ದ್ವೇಷಕಾರುವಂತ ಹೆಣ್ಣು. ಸ್ವಾಭಿಮಾನಕ್ಕೆ ಅಡ್ಡಿಯಾದರೆ ಅವರನ್ನು ಉರಿದು ತಿನ್ನುವ ತನಕ ಬಿಡುವುದಿಲ್ಲ. ಸ್ಟೇಟಸ್, ಹಣ, ಶ್ರೀಮಂತಿಕೆ ಎಂದೆಲ್ಲಾ ಎಜೆ ಸೊಸೆಯಂದಿರು ಕೌಸಲ್ಯಾಳನ್ನು ಕೆಣಕಿ ಕೆಂಡ ಮಾಡಿಬಿಟ್ಟಿದ್ದಾರೆ. ಒಂದೇ ಒಂದು ಚಾನ್ಸ್ ಸಿಗಲಿ ಅಂತ ಕೌಸಲ್ಯ ಕೂಡ ಕಾಯುತ್ತಾ ಇದ್ದಳು. ಲೀಲಾ ಅದಕ್ಕೆ ತಕ್ಕನಾದ ಅವಕಾಶವನ್ನು ನೀಡಿಯೇ ಬಿಟ್ಟಿದ್ದಾಳೆ. ಕೌಸಲ್ಯ ಈಗ ಸೊಸೆಯಂದಿರಿಗೆ ಚೆನ್ನಾಗಿ ರುಬ್ಬಿ ಕಳುಹಿಸಿದ್ದಾಳೆ. ಆದರೆ ರುಬ್ಬಿಸಿಕೊಂಡ ದುರ್ಗ ಸುಮ್ಮನೆ ಇರುತ್ತಾಳಾ. ನೋ ವೇ ಚಾನ್ಸೆ ಇಲ್ಲ. ಕೌಸಲ್ಯಾಳ ಬಳಿ ಬಂದು ಮುಂದಿದೆ ಮಾರಿ ಹಬ್ಬ ಅಂತ ಹೇಳಿ ಹೋಗಿದ್ದಾಳೆ.

    ಸೊಸೆಯಂದಿರ ಟಾರ್ಗೆಟ್ ಅತ್ತೆ..!

    ಸೊಸೆಯಂದಿರ ಟಾರ್ಗೆಟ್ ಅತ್ತೆ..!

    ಕೌಸಲ್ಯ ಪಾಠ ಕಲಿಸಬೇಕು ಎಂಬ ಆತುರದಲ್ಲಿ ಊಟ ಸರಿಯಾಗಿ ನೀಡಿಲ್ಲ, ಮಲಗುವುದಕ್ಕೂ ಸರಿಯಾದ ವ್ಯವಸ್ಥೆ ಮಾಡಿಲ್ಲ. ಇದು ಎಜೆ ಸೊಸೆಯಂದಿರ ಮನದಲ್ಲಿ ಗಟ್ಟಿಯಾಗಿ ಕುಳಿತು ಬಿಟ್ಟಿದೆ. ಕೌಸಲ್ಯಾಳ ಬಳಿ ಬಂದ ದುರ್ಗಾ ಇದನ್ನು ಪ್ರಸ್ತಾಪಿಸಿದ್ದಾಳೆ. ನಮ್ಮೆಲ್ಲರಿಗೂ ಊಟ, ನಿದ್ದೆಯನ್ನು ಕೊಡದೆ ಇಷ್ಟೊಂದೆಲ್ಲಾ ಹಿಂಸೆ ನೀಡಿದ್ದೀರಿ ಅಲ್ವಾ. ಇದು ನಿಮ್ಮ ಮನೆ. ಆದ್ರೆ ನಾವೀಗ ಈ ವನವಾಸ ಮುಗಿಸಿ ನಮ್ಮ ಮನೆಗೆ ಹೋಗುತ್ತಿದ್ದೀವಿ. ಆದರೆ ಲೀಲಾ ಲೈಫ್ ಲಾಂಗ್ ಅದೇ ಮನೆಯಲ್ಲಿ ಇರಬೇಕು. ಮೂರು ಜನ ಸೊಸೆಯಂದಿರಿಂದ ಇನ್ನು ಮುಂದೆ ಪ್ರತಿದಿನ ಟಾರ್ಚರ್ ಅನ್ನು ನಿಮ್ಮ ಮಗಳು ಅನುಭವಿಸಬೇಕಾಗುತ್ತದೆ ಎಂದಿದ್ದಾಳೆ.

    ಲೀಲಾ ಮುಖದಲ್ಲಿ ಆತಂಕ..!

    ಲೀಲಾ ಮುಖದಲ್ಲಿ ಆತಂಕ..!

    ದುರ್ಗಾ, ಕೌಸಲ್ಯ ಮೇಲೆ ರೊಚ್ಚಿಗೆದ್ದಿದ್ದಾಳೆ. ಅಷ್ಟೇ ಅಲ್ಲ ಸೊಸೆ ಲೀಲಾ ಮೇಲೂ ಕೋಪಗೊಂಡಿದ್ದಾಳೆ. ಕೌಸಲ್ಯಾಗೆ ಚಾಲೆಂಜ್ ಹಾಕಿದ್ದಾಳೆ. ಅಮ್ಮ ಮಗಳ ಆಟವನ್ನು ನಾನು ಕಣ್ಣಾರೆ ನೋಡಿಬಿಟ್ಟೆ. ಇನ್ನೇನಿದ್ದರೂ ನಮ್ಮ ಆಟವನ್ನು ನೀವೂ ನೋಡಬೇಕು ಅಷ್ಟೇ. ನನ್ನ ಲೈಫ್ ನಲ್ಲಿ ಕ್ವೆಷನ್ ಪೇಪರ್‌ನ ಖಾಲಿ ಬಿಟ್ಟ ಅಭ್ಯಾಸವೇ ಇಲ್ಲ. ಎಕ್ಸ್ಟ್ರಾ ಮಾರ್ಕ್ಸ್‌ಗೂ ಬರೆದು ಅಭ್ಯಾಸ. ನಾವಿಲ್ಲಿ ಅನುಭವಿಸಿದ ನೋವು, ಹತಾಶೆ, ಸಂಕಟ ನಿಮ್ಮ ಮಗಳು ಅಲ್ಲಿ ಅನುಭವಿಸಬೇಕು. ಹಾಗೇ ಮಾಡದೆ ಹೋದರೆ ನನ್ನ ಹೆಸರು ದುರ್ಗಾನೆ ಅಲ್ಲ ಎಂದಿದ್ದಾಳೆ. ಈ ಮಾತನ್ನು ದುರ್ಗಾ ಆಡುವಾಗ ಲೀಲಾ ಮತ್ತು ಕೌಸಲ್ಯ ಸ್ವಲ್ಪ ಹೆದರಿದವರಂತೆ ಕಂಡಿದ್ದಾರೆ.

    ಕೌಸಲ್ಯ ಎಚ್ಚರಿಕೆಗೆ ನಡುಗಿದ ದುರ್ಗಾ

    ಕೌಸಲ್ಯ ಎಚ್ಚರಿಕೆಗೆ ನಡುಗಿದ ದುರ್ಗಾ

    ದುರ್ಗಾ ಅದ್ಯಾವಾಗ ನಿಮ್ಮ ಮಗಳಿಗೆ ಇದೆ ಟಾರ್ಚರ್ ಅಂತ ಹೇಳಿದಳೋ ಕೌಸಲ್ಯ ರೌದ್ರವಾತಾರ ತಾಳಿದ್ದಾಳೆ. ದುರ್ಗಮ್ಮ ನಿಮ್ಮ ಹೋಮ್ ಪಿಚ್‌ನಲ್ಲಿ ನೀವೇ ಆಡಬೇಕು ಒಪ್ಪಿಕೊಳ್ಳುತ್ತೀನಿ. ಆದ್ರೆ ಆಫ್ ಸೆಂಚುರಿ ಹೊಡೆದಿರೋ ನಾನೆ ನಿಮ್ಮ ಮೂರು ಜನರನ್ನು ಈ ರೇಂಜಿನಲ್ಲಿ ರುಬ್ಬಿದ್ದೀನಿ ಅಂದ್ರೆ ನನ್ನ ಮಗಳು ಲೀಲಾ ಬಿಸಿ ರಕ್ತದ ಯುವತಿ ಇನ್ನು ಯಾವ ರೇಂಜಿನಲ್ಲಿ ರುಬ್ಬಬಹುದು. ಇವಳು ಕೌಸಲ್ಯ ಮಗಳು. ಕ್ರಿಕೆಟ್ ಗ್ರೌಂಡ್‌ನಲ್ಲೇ ಕಬ್ಬಡಿ ಆಡಿ ರುಬ್ಬಿ ಬಿಡುತ್ತಾಳೆ ಅಂತ ಹೆದರಿಸಿದ್ದಾಳೆ.

    English summary
    Zee kannada serial Hitler kalyana Written Update on September 12th episode. Here is the details about kousalya and Durga fighting
    Monday, September 12, 2022, 19:57
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X