For Quick Alerts
  ALLOW NOTIFICATIONS  
  For Daily Alerts

  ಚಳಿಗೆ ಕುಸಿದು ಬಿದ್ದ ಲೀಲಾ, ರಕ್ಷಣೆಗೆ ಬಂದ ಏಜೆ!

  By ಪೂರ್ವ
  |

  'ಹಿಟ್ಲರ್ ಕಲ್ಯಾಣ' ಧಾರವಾಹಿಯಲ್ಲಿ ದಿನೇ ದಿನೇ ಟ್ವಿಸ್ಟ್ ಮೇಲೆ ಟ್ವಿಸ್ಟ್ ಎದುರಾಗುತ್ತಲೇ ಇದೆ. ಇದೀಗ ಲೀಲಾ ಆಪತ್ತಿನಲ್ಲಿ ಸಿಲುಕಿ ಹಾಕಿಕೊಂಡಿದ್ದಾರೆ. ಏಜೆ ಲೀಲಾಳನ್ನು ಕಾಪಾಡುತ್ತಾನೆಯೆ?

  ದುರ್ಗಾ ಹಾಗೂ ಸರಸ್ವತಿ ಕಾಫಿ ಕುಡಿಯುತ್ತಾ ಇಂತಹ ಸುಗಂಧ ಭರಿತ ಚಹಾ ಕುಡಿಯದೆ ನಾನು ಬಹಳ ದಿನ ಆಯ್ತು ಏಷ್ಟು ಸೊಗಸಾಗಿದೆ ಎಂದು ಚಹಾ ಹಿರುತ್ತಾಳೆ ಸರಸ್ವತಿ. ಆಕೆಯ ಮಾತಿಗೆ ಕೋಪಗೊಂಡ ದುರ್ಗಾ ಸ್ವಲ್ಪ ಮೆತ್ತಗೆ ಚಹಾ ಹೀರು ನನಗೆ ಕಿರಿ ಕಿರಿ ಆಗುತ್ತದೆ ಎನ್ನುತ್ತಾಳೆ. ಇದನ್ನು ಕೇಳಿದ ಸರು, ದುರ್ಗಾ ಬಳಿ ಕ್ಷಮೆ ಕೇಳುತ್ತಾಳೆ. ಬಳಿಕ ಲೀಲಾಳನ್ನೂ ನೋಡಿದ ದುರ್ಗಾ ನನಗೆ ಚಹಾ ಕುಡಿಯಲು ಬಹಳ ಆನಂದ ಆಗುತ್ತಿದೆ ಯಾಕೆಂದರೆ ನಾವು ಚಹಾ ಪುಡಿಗೆ 12,000 ಕೊಡುತ್ತೇವೆ ಎನ್ನುತ್ತಾಳೆ.

  ಬಳಿಕ ಲೀಲಾಳ ಮನೆಯಲ್ಲಿ ಆ ಹಣದಲ್ಲಿ ಮೂರು ತಿಂಗಳ ರೇಶನ್ ಬರುತ್ತದೆ. ಅಂತಹದರಲ್ಲಿ ಇಂತಹ ರುಚಿಯಾದ ಕಾಫಿ ಅವರಿಗೆ ಹೇಗೆ ಸಿಗುತ್ತದೆ ಬೇಕೆ ಎಂದು ಕೇಳುತ್ತಾಳೆ. ಇದನ್ನು ಕೇಳಿದ ಲೀಲಾ ಕೊಂಚ ನೊಂದುಕೊಳ್ಳುತ್ತಾರೆ. ಬಳಿಕ ಸುಮ್ಮನಾಗುತ್ತಾಳೆ. ಇಷ್ಟೆಲ್ಲ ಆದರೂ ದುರ್ಗಾ ಮಾತ್ರ ತನ್ನ ಹಠ ಬಿಡುತ್ತಿಲ್ಲ. ಲೀಲಾಗೆ ಹೇಗಾದರೂ ಮಾಡಿ ಪಾಠ ಕಲಿಸಬೇಕು ಎಂದೆಲ್ಲ ಯೋಚನೆ ಮಾಡಿ ಒಂದು ಮಾಸ್ಟರ್ ಪ್ಲಾನ್ ಮಾಡುತ್ತಾಳೆ.

  ಏಜೆ ಮಲಗುವುದನ್ನು ಕಾಯುತ್ತಿದ್ದ ಸೊಸೆಯಂದಿರು

  ಏಜೆ ಮಲಗುವುದನ್ನು ಕಾಯುತ್ತಿದ್ದ ಸೊಸೆಯಂದಿರು

  ಏಜೆ ಮಲಗುವುದನ್ನೆ ಕಾಯುತ್ತಾ ಕುಳಿತ ದುರ್ಗಾ, ಸರು ಏಜೆ ಮಲಗಿದ ಬಳಿಕ ಲೀಲಾ ಬರುವುದನ್ನೇ ಕಾಯುತ್ತಾ ಕುಳಿತು ಲೀಲಾ ಬಂದ ಕೂಡಲೇ ನಾಟಕ ಮಾಡ ತೊಡಗುತ್ತಾರೆ. ಸರಸ್ವತಿ ಹಾಗೂ ದುರ್ಗಾ ಮಾತನಾಡುತ್ತಾ ಇರುತ್ತಾರೆ ಬಾಲ್ಕನಿಯಲ್ಲಿ ರೇವತಿ ಬಂದ ಹಾಗೆ ಕಾಣುತ್ತಿತ್ತು. ರೇವತಿ ಬಂದಳು ಎಂದು ಅನ್ನಿಸುತ್ತದೆ ಎಂದು ಹೇಳುತ್ತಾರೆ ಇದನ್ನು ಕೇಳಿಸಿಕೊಂಡ ಲೀಲಾ ಎನು ರೇವತಿ ಬಂದಿದ್ದಾಳ ಎಂದು ಹೇಳುತ್ತಾ ಬಾಲ್ಕನಿಯ ಹೊರಗೆ ಬಂದು ನೋಡುತ್ತಾರೆ ಆದರೆ ರೇವತಿ ಮಾತ್ರ ಎಲ್ಲೂ ಕಾಣಿಸುವುದಿಲ್ಲ.

  ರೇವತಿ ಬಳಿ ಮಾತನಾಡಲು ಬಂದ ಲೀಲಾ ಗೆ ಶಾಕ್

  ರೇವತಿ ಬಳಿ ಮಾತನಾಡಲು ಬಂದ ಲೀಲಾ ಗೆ ಶಾಕ್

  ಇದನ್ನೆ ಕಾಯುತ್ತಿದ್ದ ದುರ್ಗಾ ಸರು ಓಡಿಕೊಂಡು ಬಂದು ಬಾಲ್ಕನಿ ಡೋರ್ ಹಾಕುತ್ತಾರೆ. ಹೊರಗಡೆ ಸಿಕ್ಕಾಪಟ್ಟೆ ಚಳಿ ಆ ಚಳಿಯಲ್ಲಿ ಒದ್ದಾಡುತ್ತಾ ಬಾಗಿಲ ಬಳಿ ಬಂದರೆ ಬಾಗಿಲು ಹಾಕಿರುತ್ತದೆ ಆ ವೇಳೆ ಲೀಲಾಗೆ ತಿಳಿಯುತ್ತದೆ ಇದು ದುರ್ಗಾ ಮಾಡಿದ ಸಂಚಿಗೆ ಬಲಿಯಾಗಿದ್ದೆನೆ ಎಂದು. ಜೋರಾಗಿ ಕೂಗಿದರೆ ಏಜೆ ಗೆ ತೊಂದರೆ ಆಗುತ್ತದೆ ಎಂದು ಹೇಳಿ ಸುಮ್ಮನಾಗುತ್ತಾಳೆ. ಲೀಲಾ ಚಳಿಯಿಂದ ತನ್ನನ್ನು ರಕ್ಷಿಸಿಕೊಳ್ಳಲು ಮಾಡುತ್ತಿರುವ ಎಲ್ಲಾ ಪ್ರಯತ್ನಗಳು ಸಿಸಿ ಕ್ಯಾಮೆರಾದ ಮೂಲಕ ಸೆರೆಯಾಗುತ್ತಿರುತ್ತವೆ.

  ಚಳಿಯಲ್ಲಿ ಪರದಾಡಿದ ಲೀಲಾ

  ಚಳಿಯಲ್ಲಿ ಪರದಾಡಿದ ಲೀಲಾ

  ಇದನ್ನು ಲ್ಯಾಪ್ ಟಾಪ್ ಮೂಲಕ ದುರ್ಗಾ, ಸರು ನೋಡಿ ಖುಷಿ ಪಡುತ್ತಿರುತ್ತಾರೆ. ಅಂದು ಕೌಸಲ್ಯ ಮಾಡಿದ ಕೆಲಸಕ್ಕೆ ಇಂದು ಲೀಲಾ ಗೆ ಇಂತಹ ದೊಡ್ಡ ಶಿಕ್ಷೆಯನ್ನು ನೀಡಿದ್ದಾರೆ ಸೊಸೆಯಂದಿರು. ಹೀಗೆ ನೋಡುತ್ತಿರಬೇಕಾದರೆ ಲೀಲಾ ಮೂಗಿನಿಂದ ರಕ್ತ ಬರುತ್ತಿರುವುದನ್ನು ಕಂಡು ದುರ್ಗಾ ಇನ್ನೂ ಖುಷಿ ಪಡುತ್ತಾಳೆ. ಇದನ್ನು ನೋಡಿದ ಸರು ಹೇಳುತ್ತಾಳೆ.

  ನಿದ್ದೆಯಿಂದ ಎದ್ದು ಲೀಲಾಳನ್ನು ಹುಡುಕಿದ ಏಜೆ

  ನಿದ್ದೆಯಿಂದ ಎದ್ದು ಲೀಲಾಳನ್ನು ಹುಡುಕಿದ ಏಜೆ

  ಇದನ್ನು ಕೇಳಿ ದುರ್ಗಾಗೆ ಕೊಂಚ ಕೋಪ ಬಂದರೂ ಕೊನೆಗೆ ಸುಮ್ಮನಾಗುತ್ತಾಳೆ. ಈ ವೇಳೆಗೆ ಏಜೆಗೆ ಎಚ್ಚರವಾಗುತ್ತದೆ. ಪಕ್ಕದಲ್ಲಿ ಲೀಲಾ ಇಲ್ಲದನ್ನು ಕಂಡು ಲೀಲಾ ಎತ್ತ ಹೋಗಿದ್ದಾಳೆ ಎಂದು ಯೋಚಿಸುತ್ತಾ ಇರುತ್ತಾರೆ. ಬಳಿಕ ಲೀಲಾ ಲೀಲಾ ಎಂದು ಕರೆಯುತ್ತಾರೆ. ಬಳಿಕ ದುರ್ಗಾ ರೂಮ್‌ಗೆ ಏಜೆ ಬಂದು ಲೀಲಾ ಎಲ್ಲೂ ಕಾಣಿಸುತ್ತಿಲ್ಲ ಎಂದು ಹೇಳಿದಾಗ ದುರ್ಗಾ ಏನೋ ಸಬೂಬು ಹೇಳುತ್ತಾಳೆ. ಆದರೆ ಏಜೆ ಮನಸ್ಸು ತಡೆಯದೆ ಲೀಲಾಳನ್ನು ಬಹಳ ಹುಡುಕಾಡುತ್ತಾನೆ. ಈ ವೇಳೆ ಬಾಲ್ಕನಿಯ ಬಾಗಿಲು ಹಾಕಿರುವುದನ್ನು ನೋಡಿ ಬಾಗಿಲು ತೆರೆಯುತ್ತಾನೆ ಅಲ್ಲಿ ಲೀಲಾ ಕುಸಿದು ಬಿದ್ದಿರುವುದನ್ನು ಕಂಡು ಆತಂಕಿತನಾಗುತ್ತಾನೆ. ಮುಂದೇನು ಎಂಬುವುದನ್ನು ಕಾದು ನೋಡಬೇಕಿದೆ.

  English summary
  Zee Kannada serial Hitler Kalyana Written Update on September 13th episode. Know more about it.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X