ಮೊದಲ ಹೆಂಡತಿಯನ್ನು ಕೊಂದಿದ್ದ ಏಜೆ! ಲೀಲಾಗೆ ಶುರುವಾಯ್ತು ಅನುಮಾನ

By ಪೂರ್ವ

ಹಿಟ್ಲರ್ ಕಲ್ಯಾಣ ಧಾರವಾಹಿಯಲ್ಲಿ ಇದೀಗ ಏಜೇ ಲೀಲಾಗೆ ಲೈಟ್ ಆಗಿ ಲವ್ ಆಗಿದೆ. ಲೀಲಾ ಚಳಿಯಲ್ಲಿ ನಡುಗುತ್ತಿದ್ದ ವೇಳೆ ಏಜೆ ಲೀಲಾಳನ್ನು ಅದೆಷ್ಟು ಆರೈಕೆ ಮಾಡಿ ಚೆನ್ನಾಗಿ ನೋಡಿಕೊಂಡಿದ್ದಾನೆ. ಇದೀಗ ಲೀಲಾ ಮೊಬೈಲ್‌ಗೆ ಮೊದಲನೇ ಹೆಂಡತಿಯ ತಮ್ಮ ಕರೆ ಮಾಡಿ ಏಜೆ ಒಳ್ಳೆಯವರು ಅಲ್ಲ ಆತನೇ ನನ್ನ ಅಕ್ಕನನ್ನು ಕೊಂದಿದ್ದು ಎಂದೆಲ್ಲ ಹೇಳುತ್ತಾನೆ ಅದನ್ನು ಲೀಲಾ ನಂಬುತ್ತಾಳೆ!

ಏಜೆ, ಲೀಲಾಗೆ ಕಾಫಿ ತೆಗೆದುಕೊಂಡು ಹೋಗುವ ವೇಳೆ ಲೀಲಾ ಫೋನ್ ರಿಂಗ್ ಆಗುತ್ತದೆ. ಫೋನ್ ಅನ್ನು ಲೀಲಾ ಬಳಿ ತೆಗೆದುಕೊಂಡು ಹೋಗುತ್ತಾನೆ. ಬಳಿಕ ಮೊದಲು ಕಾಫಿಯನ್ನು ನೀಡುತ್ತಾನೆ ಬಳಿಕ ಫೋನ್ ನೀಡಿ ಮಾತನಾಡುವಂತೆ ಹೇಳುತ್ತಾನೆ. ಫೋನ್ ನಲ್ಲಿದ್ದ ನಂಬರ್ ನೋಡಿ ಲೀಲಾ ಶಾಕ್ ಆಗುತ್ತಾಳೆ. ಬಳಿಕ ಕರೆ ಸ್ವೀಕರಿಸಿ ಮಾತನಾಡುತ್ತಾಳೆ. ನಾನು ಸ್ವಲ್ಪ ಬ್ಯುಸಿ ಇದ್ದೇನೆ ಮತ್ತೆ ಮಾತನಾಡುತ್ತೇನೆ ಎಂದು ಹೇಳುತ್ತಾ ಕಾಲ್ ಅನ್ನು ಕಟ್ ಮಾಡದೆ ಇಡುತ್ತಾಳೆ.

ಬಳಿಕ ಏಜೆ ಬಳಿ ಬಹಳ ಪ್ರೀತಿಯಿಂದ ಮಾತನಾಡುತ್ತಾಳೆ. ಏಜೆ ಅಲ್ಲಿಂದ ತೆರಳಿದ ಬಳಿಕ ಕರೆಯಲ್ಲಿ ಇನ್ನೂ ಇದ್ದ ಏಜೆಯ ಮೊದಲನೇ ಹೆಂಡತಿಯ ಅಣ್ಣನ ಬಳಿ ಮಾತನಾಡುತ್ತಾಳೆ. ನೋಡಿದಿರಾ ನಾನು ಏಜೆ ಎಷ್ಟು ಖುಷಿಯಿಂದ ಇದ್ದೇವೆ ಎಂದು, ಈಗಲಾದರೂ ನಿಮಗೆ ತಿಳಿಯಿತಾ ಎಂದು ಹೇಳುತ್ತಾಳೆ. ನೀವು ಏಜೆ ಬಗ್ಗೆ ಇಲ್ಲಸಲ್ಲದನ್ನು ಹೇಳಿ ನನ್ನ ತಲೆ ಕೆಡಿಸಿದ್ದು ಸಾಕು ಎಂದೆಲ್ಲ ಹೇಳುತ್ತಾಳೆ ಅತ್ತ ಕಡೆಯಿಂದ ಲೀಲಾ ನಿನ್ನನ್ನು ಮೀಟ್ ಮಾಡಬೇಕು ಎಂದೆಲ್ಲ ಹೇಳುತ್ತಾರೆ. ಬಳಿಕ ನಾಳೆ ಮೀಟ್ ಮಾಡುತ್ತೇನೆ ಎಂದು ಹೇಳಿ ಕರೆ ಕಟ್ ಮಾಡುತ್ತಾಳೆ. ಇತ್ತ ಕೌಸಲ್ಯ ಒಬ್ಬಳೇ ಮಾತನಾಡುತ್ತಾ ಇರುತ್ತಾಳೆ ನಾವು ಯಾರಿಗೆ ಫೋನ್ ಮಾಡದೇ ಇರಬಹುದು. ಆದರೆ ಶತ್ರು ಗಳಿಗೆ ಕರೆಯನ್ನು ಮಾಡುತ್ತಾ ಇರಬೇಕು ಎಂದುಕೊಂಡು ದುರ್ಗಾ ಗೆ ಕರೆ ಮಾಡುತ್ತಾಳೆ

ದುರ್ಗಾ ಗೆ ವಾರ್ನಿಂಗ್ ಕೊಟ್ಟ ಕೌಸಲ್ಯ

ದುರ್ಗಾ ಗೆ ವಾರ್ನಿಂಗ್ ಕೊಟ್ಟ ಕೌಸಲ್ಯ

ದುರ್ಗಾ ಬಹಳ ಯೋಚನೆಯಲ್ಲಿ ಮುಳುಗಿರುತ್ತಾರೆ. ಕೌಸಲ್ಯ ಕರೆ ಮಾಡಿದ್ದನ್ನು ನೋಡಿದ ದುರ್ಗಾ ಕೋಪದಿಂದ ಕಿಡಿಕಾರುತ್ತಾಳೆ. ಕಾಲ್ ರಿಸೀವ್ ಮಾಡಿದ ವೇಳೆ ಕೌಸಲ್ಯ ಬಳಿ ಮಾತನಾಡಿ ದುರ್ಗಾಗೆ ಇನ್ನೂ ಕೋಪ ಹೆಚ್ಚಾಗುತ್ತದೆ. ಬಳಿಕ ತನ್ನ ಮಗಳನ್ನು ನೋಯಿಸಲು ಯತ್ನಿಸಿದರೆ ಏನಾದರು ಪ್ರಾಬ್ಲೆಮ್ ನೀಡಿದರೆ ನಾನು ಸುಮ್ಮನಿರುವುದಿಲ್ಲ. ಈಗಾಗಲೆ ನೀವು ಹಲವು ಪ್ಲಾನ್‌ಗಳನ್ನು ಮಾಡಿರಬಹುದು ಆದರೆ ಏನಾದರು ಸಮಸ್ಯೆ ಆಯಿತು ಎಂದು ಗೊತ್ತಾದರೆ ನಾನು ಸುಮ್ಮನೆ ಬಿಡುವುದಿಲ್ಲ ಎಂದು ಹೇಳಿ ಕಟ್ ಮಾಡುತ್ತಾಳೆ.

ಏಜೆ ಮೊದಲನೇ ಹೆಂಡತಿಯ ಸಹೋದರನ ಬಳಿ ಲೀಲಾ ಮಾತು

ಏಜೆ ಮೊದಲನೇ ಹೆಂಡತಿಯ ಸಹೋದರನ ಬಳಿ ಲೀಲಾ ಮಾತು

ಇನ್ನೂ ಲೀಲಾ ಬಳಿ ಏಜೆ, ಮನೆಯಿಂದ ಎಲ್ಲೂ ಹೊರ ಹೋಗುವುದು ಬೇಡ ರೆಸ್ಟ್ ಮಾಡು ಎಂದು ಹೇಳಿ ಆಫೀಸ್ ಗೆ ತೆರಳುತ್ತಾರೆ. ಏಜೆ ಹೋದ ಬಳಿಕ ಏಜೆ ಮೊದಲಿನ ಹೆಂಡತಿಯ ಅಣ್ಣನನ್ನು ಮೀಟ್ ಮಾಡಲು ಹೋಗುತ್ತಾಳೆ. ಲೀಲಾ ಆತನ ಬಳಿ ಏಲೆ ಪರವಾಗಿ ಮಾತನಾಡುತ್ತಾಳೆ. ಆತ ಏಜೆ ಬಗ್ಗೆ ಎನು ಹೇಳಿದರು ಅದನ್ನು ಕೇಳದೆ ಲೀಲಾ ತನ್ನ ಪಾಡಿಗೆ ಹೊರಟು ಬರುತ್ತಾಳೆ.

ಏಜೆ ಬಳಿ ಅತ್ತೆಯ ಬಗ್ಗೆ ದೂರು ಹೇಳಿದ ಲೀಲಾ

ಏಜೆ ಬಳಿ ಅತ್ತೆಯ ಬಗ್ಗೆ ದೂರು ಹೇಳಿದ ಲೀಲಾ

ಇತ್ತ ಏಜೆ ಸೊಸೆಯಂದಿರು ಲೀಲಾ ಮನೆಯಿಂದ ಹೊರ ಹೋಗಿರುವ ವಿಚಾರ ತಿಳಿದು ಮಾತನಾಡುತ್ತಾ ಇರುತ್ತಾರೆ. ಏಜೆ ಹೋಗಬೇಡ ಎಂದು ಹೇಳಿದರು ಲೀಲಾ ಹೊರಗಡೆ ಹೋಗಿರುವುದನ್ನು ಏಜೆ ಬಂದ ಕೂಡಲೇ ಹೇಳುತ್ತಾರೆ. ಇನ್ನೂ ಏಜೆ ಕಾರು ನೋಡಿದ ಲೀಲಾ ಅಯ್ಯೋ ಏಜೆ ಮನೆಗೆ ಬಂದೆ ಬಿಟ್ಟಿದ್ದಾರೆ ಎಂದು ಓಡಿಕೊಂಡು ಬರುತ್ತಾಳೆ. ಬಂದಾಗ ಏಜೆ ಯನ್ನು ಮೂವರು ಸೊಸೆಯಂದಿರು ಸುತ್ತು ವರೆದು ನಿಂತಿದ್ದಾರೆ. ಮೆತ್ತಗೆ ಬಂದ ಲೀಲಾ ಏಜೆ ಬಳಿ ಬಂದು ನಿಂತುಕೊಳ್ಳುತ್ತಾಳೆ. ಬಳಿಕ ದುರ್ಗಾ ಏಷ್ಟು ದೈರ್ಯ ನಿಮಗೆ ಏಜೆ ಹೋದ ಕೂಡಲೇ ಮನೆಯಿಂದ ಹೋಗಿದ್ದೀರಿ ಅಲ್ವಾ ಎಂದೆಲ್ಲ ಕೋಪದಿಂದ ಹೇಳುತ್ತಾಳೆ.

ಏಜೆ ಮಾತಿಗೆ ಲೀಲಾ ಶಾಕ್

ಏಜೆ ಮಾತಿಗೆ ಲೀಲಾ ಶಾಕ್

ಬಳಿಕ ಹೇಳುತ್ತಾಳೆ ನಿಮಗೆ ಯಾರು ಒಪ್ಪಿಗೆ ಕೊಟ್ಟಿದ್ದು ಹೊರಗೆ ಹೋಗಲು ಎಂದು ಹೇಳಿದಾಗ ಕೋಪ ಗೊಂಡ ಏಜೆ ಆಕೆ ನನ್ನ ಹೆಂಡತಿ ಈ ಮನೆ ಯಜಮಾನಿ ಎಲ್ಲಿಗೆ ಬೇಕಾದರೂ ಹೋಗಬಹುದು ಎಂದು ಹೇಳುತ್ತಾರೆ ಇದನ್ನು ಕೇಳಿ ದುರ್ಗಾ ಗೆ ಶಾಕ್ ಆಗುತ್ತದೆ. ಮುಂದೇನಾಗುತ್ತದೆ ಕಾದು ನೋಡಬೇಕಿದೆ.

More from Filmibeat

English summary
Zee Kannada serial Hitler Kalyana Written Update on September 15th episode.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X