'ಹಿಟ್ಲರ್ ಕಲ್ಯಾಣ' ಸೀರಿಯಲ್‌ಗೆ ಎಂಟ್ರಿ ಕೊಟ್ಟ ನಟ ಶರಣ್!

By ಪೂರ್ವ

'ಹಿಟ್ಲರ್ ಕಲ್ಯಾಣ' ಧಾರವಾಹಿ ಚೆನ್ನಾಗಿ ಮೂಡಿ ಬರುತ್ತಿದ್ದು ನೋಡುಗರ ಮನಸ್ಸಿಗೆ ಮುದ ನೀಡುತ್ತಿದೆ. ಇದೀಗ ಲೀಲಾ, ಏಜೆ ಬಳಿ ಸರ್ಪ್ರೈಸ್ ನೀಡುತ್ತೇನೆ ಎಂದು ಹೇಳಿ ಸಿಕ್ಕಿ ಹಾಕಿಕೊಂಡಿದ್ದಾಳೆ. ಏನು ಮಾಡುವುದು ಎಂದು ಯೋಚಿಸುತ್ತಾ ಇರಬೇಕಾದರೆ ಏಜೆ ಪಿಎ ಅಲ್ಲಿಗೆ ಬರುತ್ತಾನೆ. ವಿಶ್ವರೂಪ ಬಳಿ ತನ್ನ ಪೀಕಲಾಟವನ್ನು ಹೇಳುತ್ತಾಳೆ. ಏನು ಮಾಡುವುದು ಎಂದು ದಿಕ್ಕೇ ತೋಚದ ಹಾಗೆ ಆಗುತ್ತಿದೆ ನನಗೆ ಬಹಳ ಬೇಸರ ಆಗುತ್ತಿದೆ ಎನು ಮಾಡುವುದು ಗೊತ್ತಾಗುತ್ತಿಲ್ಲ ಎಂದು ಹೇಳುತ್ತಾಳೆ.

ವಿಶ್ವರೂಪ, 'ಮೇಡಂ, ನೀವು ಏನೂ ತೊಂದರೆ ತೆಗೆದುಕೊಳ್ಳಬೇಡಿ ನಾನು ಅದರ ಅರೇಂಜ್ ಮೇಂಟ್ ಮಾಡುತ್ತೇನೆ ಎಂದು ಹೇಳುತ್ತಾನೆ. ಬಳಿಕ ಸ್ವಲ್ಪ ಸಮಾಧಾನ ಮಾಡಿಕೊಂಡ ಲೀಲಾ ತನ್ನ ಕೆಲಸದಲ್ಲಿ ತಲ್ಲೀನಲಾಗುತ್ತಾಳೆ. ಏಜೆ ಸೊಸೆಯಂದಿರು ಲೀಲಾ ಮೇಲೆ ಕಿಡಿ ಕಾರುತ್ತಿದ್ದಾರೆ. ಇನ್ನೇನು ಮಾಡಲು ಸಾಧ್ಯ ಇಲ್ಲ. ಎಲ್ಲಾ ಮುಗಿದೇ ಹೋಯಿತು ಎಂದೆಲ್ಲ ಸರು ಹೇಳಿದರೆ ಲಕ್ಷ್ಮೀ ಕೂಡ ಅದನ್ನೇ ಹೇಳುತ್ತಾಳೆ. ಇದನ್ನೆಲ್ಲ ಕೇಳಿಸಿಕೊಂಡ ದುರ್ಗಾ ಮಾತ್ರ ಸುಮ್ಮನಿರುತ್ತಾಳೆ.

ಏಜೆ-ಲೀಲಾ ಒಂದಾಗಲು ಬಿಡಬೇಕು ಆಗಲೇ ಏಜೆ ಹಾಗೂ ಲೀಲಾಳನ್ನು ದೂರ ಮಾಡಬಹುದು ಎಂದು ಯೋಚನೆ ಮಾಡುತ್ತಾ ಇರುತ್ತಾಳೆ. ಆದರೆ ಏಜೆ ಗದರಿದ್ದನ್ನು ಕಂಡು ಲೀಲಾ ಮಾತ್ರ ಬಹಳ ಖುಷಿ ಪಟ್ಟಿದ್ದಾರೆ ಆದರೆ ಮೂವರು ಸೊಸೆಯಂದಿರಿಗು ಬಹಳ ಕೋಪಗೊಂಡಿದ್ದಾರೆ. ಹೇಗಾದರೂ ಮಾಡಿ ಲೀಲಾ ಹಾಗೂ ಏಜೆ ಯನ್ನು ದೂರ ಮಾಡಬೇಕು ಎಂದು ಯೋಚನೆ ಮಾಡುತ್ತಾಳೆ ದುರ್ಗಾ ಏನೇ ಪ್ಲಾನ್ ಮಾಡಿದರು ಅದು ಪ್ಲಾಪ್ ಆಗುತ್ತಿದೆ.

ದುರ್ಗಾ ಪ್ಲಾನ್‌ನಿಂದಾಗಿ ಏಜೆ-ಲೀಲಾ ಇನ್ನಷ್ಟು ಹತ್ತಿರ

ದುರ್ಗಾ ಪ್ಲಾನ್‌ನಿಂದಾಗಿ ಏಜೆ-ಲೀಲಾ ಇನ್ನಷ್ಟು ಹತ್ತಿರ

ದುರ್ಗಾ ಏನೇ ಪ್ಲಾನ್ ಮಾಡಿದರು ಲೀಲಾ-ಏಜೆಯ ಸಂಬಂಧ ಗಟ್ಟಿಯಾಗುತ್ತಲೇ ಇದೆ. ಇದನ್ನು ನೋಡಿ ಹೊಟ್ಟೆ ಉರಿದುಕೊಳ್ಳುತ್ತಿದ್ದಾರೆ ಸೊಸೆಯರು. ಇತ್ತ ವಿಶ್ವರೂಪ್ ಎಲ್ಲಾ ಅರೇಂಜ್ ಮೆಂಟ್ ಮಾಡಿರುತ್ತಾನೆ ಅದನ್ನು ಅದನ್ನು ಲೀಲಾ ಸಹ ನೋಡುವುದಿಲ್ಲ. ಲೀಲಾ ಏಜೆಯನ್ನು ಕರೆದುಕೊಂಡು ಬರುತ್ತಾಳೆ. ಏಜೆ ಕೋಣೆ ಬಳಿ ಬಂದು ಸರ್ಪ್ರೈಸ್ ಎಂದು ಬಾಗಿಲು ಸರಿಸಿದಾಗ ಏಜೆ ಲೀಲಾ ಗೆ ಸರ್ಪ್ರೈಸ್ ಬದಲು ಶಾಕ್ ಆಗಿತ್ತು ಅಲ್ಲಿ ಪಸ್ಟ್ ನೈಟ್ ಗೆ ಬೇಕಾದ ಎಲ್ಲಾ ತಯಾರಿಯನ್ನು ಮಾಡಲಾಗಿರುತ್ತದೆ.

ಲೀಲಾ ಸರ್ಪ್ರೈಸ್ ಕಂಡು ಅವಕ್ಕಾದ ಏಜೆ

ಲೀಲಾ ಸರ್ಪ್ರೈಸ್ ಕಂಡು ಅವಕ್ಕಾದ ಏಜೆ

ಏಜೆ-ಲೀಲಾ ಬಳಿ ಕೇಳುತ್ತಾರೆ ಏನೀದೆಲ್ಲ ಎಂದು ಹೇಳಿದಾಗ ಸರ್ಪ್ರೈಸ್ ಏಜೆ ಎಂದು ಹೇಳುತ್ತಾಳೆ. ಬಳಿಕ ಹಾರ್ಟ್ ಆಕಾರದಲ್ಲಿ ಹೂವಿನ ಚಿತ್ರ ಮಾಡಿರುವುದೇ ನಿಮಗೋಸ್ಕರ ಯಾಕೆಂದರೆ ನಿಮ್ಮ ಹೃದಯ ಹೂವಿನ ಹಾಗೆಯೇ ಬಹಳ ಮೃದು ಆಗಿದೆ ಎಂದೆಲ್ಲ ಹೇಳುತ್ತಾಳೆ. ಆದರೆ ಏಜೆಗೆ ಇದೆಲ್ಲ ಲೀಲಾ ಅರೇಂಜ್ ಮಾಡಿಲ್ಲ ಬೇರೆಯವರ ಕೈವಾಡ ಇದೆ ಎಂದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಲೀಲಾ ಬಳಿ ಏಜೆ ಕೇಳುತ್ತಾರೆ ಯಾರು ಈ ಅರೇಂಜ್ ಮಾಡಿದ್ದು ಎಂದು ಕೇಳುತ್ತಾನೆ.

ಏಜೆ ಕೋಪಕ್ಕೆ ಗುರಿ ಆದ ವಿಶ್ವರೂಪ

ಏಜೆ ಕೋಪಕ್ಕೆ ಗುರಿ ಆದ ವಿಶ್ವರೂಪ

ಇದಕ್ಕೆ ಲೀಲಾ ಸುಮ್ಮನಾಗುತ್ತಾಳೆ. ಬಳಿಕ, ನೀವು ಪ್ರಾಮಿಸ್ ಮಾಡಿ ಯಾರ ಬಳಿ ಹೇಳುವುದು ಇಲ್ಲ ಎಂದು ಹೇಳುತ್ತಾರೆ. ಬಳಿಕ ಮೆತ್ತಗೆ ಹೇಳುತ್ತಾಳೆ ವಿಶ್ವ ರೂಪ್ ಎಂದು ಇದನ್ನು ಕೇಳಿದ ಏಜೆ, ವಿಶ್ವ ರೂಪ್ ನನ್ನು ಒಳಗೆ ಕಳುಹಿಸಿ ಎಂದು ಹೇಳುತ್ತಾನೆ. ಬಳಿಕ ಅಲ್ಲಿಂದ ಹೋಗುತ್ತಾಳೆ ಲೀಲಾ. ಆನಂತರ ಮತ್ತೊಂದು ದೃಶ್ಯದಲ್ಲಿ ಲೀಲಾ ಲಘು ಬಗೆಯಿಂದ ಏಜೆ ಗೆ ಕರೆ ಮಾಡಿ ನನ್ನನ್ನು ಯಾರೋ ಬಹಳ ಬೈದು ಬಿಟ್ಟರು ಎಂದು ಬೇಸರಿಸಿಕೊಂಡ ವೇಳೆ ಏಜೆ ಬರುತ್ತಾರೆ.

ಧಾರಾವಾಹಿಗೆ ಎಂಟ್ರಿ ಕೊಟ್ಟ ಶರಣ್

ಧಾರಾವಾಹಿಗೆ ಎಂಟ್ರಿ ಕೊಟ್ಟ ಶರಣ್

ಬಂದು ಜೋರಾಗಿ ಹೇಳುತ್ತಾರೆ ಯಾರು ಅದು ನನ್ನ ಹೆಂಡತಿಯನ್ನು ಬೈದಿದ್ದು ಎಂದು ಹೇಳಿದಾಗ ಲೀಲಾ ಕೂಡ ಜೋರಾಗಿ ಹೇಳುತ್ತಾಳೆ. ಇದನ್ನು ಕೇಳಿಸಿಕೊಂಡ ಒಬ್ಬಾತ ಬಾಗಿಲನ್ನು ತೆರೆದು ಹೊರಗೆ ಬರುತ್ತಾನೆ ಆತನನ್ನು ನೋಡಿ ಏಜೆ ಮಾತ್ರ ಸಖತ್ ಖುಷಿ ಪಟ್ಟಿದ್ದಾರೆ. ಅವರು ಬೇರೆ ಯಾರೂ ಅಲ್ಲ ನಟ ಶರಣ್. 'ಗುರು ಶಿಷ್ಯರು' ಸಿನಿಮಾದ ನಾಯಕ ಶರಣ್ ಹಾಗೂ ನಾಯಕಿ ನಿಶ್ವಿತ ಹಿಟ್ಲರ್ ಕಲ್ಯಾಣ ಧಾರಾವಾಹಿಯೊಳಗೆ ಎಂಟ್ರಿ ನೀಡಿದ್ದಾರೆ. ಮುಂದೆ ಎನು ಎಂಬುವುದನ್ನು ಕಾದು ನೋಡಬೇಕಿದೆ.

More from Filmibeat

English summary
Zee Kannada serial Hitler Kalyana Written Update on September 19th episode. Know more about the story.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X