For Quick Alerts
  ALLOW NOTIFICATIONS  
  For Daily Alerts

  ಲೀಲಾಳ ಮೇಲೆ ಕೋಪಗೊಂಡ ಏಜೆ! ಕಾರಣ ಏನು?

  By ಪೂರ್ವ
  |

  'ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ ಇತ್ತೀಚೆಗೆ, ಲೀಲಾಳನ್ನು ಹೇಗಾದರೂ ಮಾಡಿ ಮಟ್ಟ ಹಾಕಬೇಕು ಏಜೆ ಲೀಲಾಳನ್ನು ಹೇಗಾದರೂ ದೂರ ಮಾಡಬೇಕು ಎಂದೆಲ್ಲಾ ಆಲೋಚನೆ ಮಾಡಿ ಅನೇಕ ಪ್ಲಾನ್‌ಗಳನ್ನು ಮಾಡುತ್ತಾಳೆ ದುರ್ಗಾಂಬಾ ಆದರೆ ಆ ಪ್ಲಾನ್ ಎಲ್ಲಾ ಪ್ಲಾಪ್ ಆಗಿ ದುರ್ಗಾಂಬಾಳ ಮುಖಕ್ಕೆ ಮಂಗಳಾರತಿ ಎತ್ತುತ್ತಾನೆ ಏಜೆ.

  ಆದರೆ ಇದನ್ನು ತಲೆಯಲ್ಲಿ ಇಟ್ಟುಕೊಂಡ ದುರ್ಗಾ ಮಾತ್ರ ಹೇಗಾದರೂ ಮಾಡಿ ಲೀಲಾಳನ್ನು ಮನೆಯಿಂದ ಓಡಿಸಬೇಕು ಎಂದು ಆಲೋಚನೆ ಮಾಡುತ್ತಾಳೆ. ಆದರೆ ಅದೆಲ್ಲ ಹಳ್ಳ ಹಿಡಿದ ಬಳಿಕ ಸರು ಸರಿಯಾಗಿ ದುರ್ಗಾನ ಕಾಲು ಎಳೆಯುತ್ತಾಳೆ ಅಕ್ಕ ನೀವು ಮಾಡಿದ ಪ್ಲಾನ್ ಫ್ಲಾಪ್ ಆಗಲ್ಲ ಹಾಗೆ ಹೀಗೆ ಎಂದು ಹೇಳುತ್ತಿದ್ದೀರಿ ಅಲ್ವಾ ಇದೀಗ ಏಜೆ ಕೈಯಿಂದ ಕೂಡ ಬೈಸಿಕೊಂಡೆವು ಎಂದು ಹೇಳುತ್ತಾರೆ.

  'ಹಿಟ್ಲರ್ ಕಲ್ಯಾಣ' ಸೀರಿಯಲ್‌ಗೆ ಎಂಟ್ರಿ ಕೊಟ್ಟ ನಟ ಶರಣ್!'ಹಿಟ್ಲರ್ ಕಲ್ಯಾಣ' ಸೀರಿಯಲ್‌ಗೆ ಎಂಟ್ರಿ ಕೊಟ್ಟ ನಟ ಶರಣ್!

  ಅದಕ್ಕೆ ದುರ್ಗಾ, ಇನ್ನು ಲೀಲಾಳನ್ನು ಟಾರ್ಗೆಟ್ ಮಾಡುವುದು ಬೇಡ ಲೀಲಾ ತಾಯಿ ಕೌಸಲ್ಯಳನ್ನು ಟಾರ್ಗೆಟ್ ಮಾಡೋಣ ಅಲ್ಲಿ ನೋವಾದರೆ ಲೀಲಾಗು ನೋವಾಗುತ್ತದೆ. ಲೀಲಾ ತವರು ಮನೆಯವರಿಗೆ ಕಿರಿ ಕಿರಿ ಆದರೆ ಲೀಲಾ ಕೂಡ ನೋವು ಅನುಭವಿಸುತ್ತಾಳೆ ಎಂದು ಹೇಳುತ್ತಾಳೆ. ಇನ್ನೂ ಶರಣ್, ಅಭಿ ಎಂದು ಏಜೆಯನ್ನೂ ಕರೆದರಲ್ವಾ ಅವರದ್ದು ಏಜೆ ಹೆಸರಲ್ವ ಅಭಿ ಅನ್ನೋದು ಅವರ ಹೆಸರಾ? ಎಂದೆಲ್ಲ ಯೋಚನೆ ಮಾಡುತ್ತಾತ್ತಿರುತ್ತಾಳೆ ಲೀಲಾ. ಆ ಹೆಸರಿನಲ್ಲಿ ಏನೋ ರಹಸ್ಯ ಅಡಗಿದೆ ಎಂದು ನನಗೆ ಅನ್ನಿಸುತ್ತದೆ ಎಂದು ಹೇಳುತ್ತಾಳೆ. ಬಳಿಕ ಏಜೆಗೆ ಕಾಫಿ ಕೊಡುವ ನೆಪದಲ್ಲಿ ಎಲ್ಲವನು ತಿಳಿದುಕೊಳ್ಳಬೇಕು ಎನ್ನುವ ಕಾತರ ಹೆಚ್ಚಾಗಿ ಕಾಡುತ್ತಾ ಇರುತ್ತದೆ ಆಗ ಅಲ್ಲಿಗೆ ಏಜೆ ಬರುತ್ತಾರೆ.

  ಲೀಲಾ ಮಾತಿಗೆ ಏಜೆ ಫುಲ್ ಖುಷ್

  ಲೀಲಾ ಮಾತಿಗೆ ಏಜೆ ಫುಲ್ ಖುಷ್

  ಲೀಲಾ ಬಳಿ ಆಡಿಷನ್‌ಗೆ ಯಾಕೆ ತೆರಳಿಲ್ಲ? ಎಂದು ಕೇಳಿದಾಗ ಲೀಲಾ ಹೇಳಿದ ಮಾತುಗಳು ಏಜೆಗೆ ಬಹಳ ಖುಷಿ ನೀಡುತ್ತದೆ. ಆರು ತಿಂಗಳು ಅಜ್ಜಿ ಬರುವುದಿಲ್ಲ. ಅಜ್ಜಿ ಬರುವ ವರೆಗೆ ನಿಮ್ಮನ್ನು ನಾನೇ ನೋಡಿಕೊಳ್ಳಬೇಕು. ನನ್ನ ನಗುವಿಗೋಸ್ಕರ ನೀವು ಏನೆಲ್ಲಾ ಮಾಡಿದ್ರಿ ಆದರೆ ನನ್ನ ಆಸೆಗೋಸ್ಕರ ಕನಸಿಗೋಸ್ಕರ ನೀವು ಏನೆಲ್ಲಾ ಮಾಡಿದ್ರಿ ಹಾಗೆಯೇ ನಾನು ಕೂಡ ನಿಮ್ಮನ್ನು ಚೆನ್ನಾಗಿ ನೋಡಿ ಕೊಳ್ಳಬೇಕು ಎಂದು ಅಂದುಕೊಂಡಿದ್ದೇನೆ ಆ ಪ್ರಕಾರವಾಗಿ ನಾನು ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಹೇಳುತ್ತಾಳೆ.

  ಮೊದಲ ಹೆಂಡತಿಯನ್ನು ಕೊಂದಿದ್ದ ಏಜೆ! ಲೀಲಾಗೆ ಶುರುವಾಯ್ತು ಅನುಮಾನಮೊದಲ ಹೆಂಡತಿಯನ್ನು ಕೊಂದಿದ್ದ ಏಜೆ! ಲೀಲಾಗೆ ಶುರುವಾಯ್ತು ಅನುಮಾನ

  ಜವಾಬ್ದಾರಿಯುತವಾಗಿ ಮಾತನಾಡಿದ ಲೀಲಾ

  ಜವಾಬ್ದಾರಿಯುತವಾಗಿ ಮಾತನಾಡಿದ ಲೀಲಾ

  ಏಜೆ ಖುಷಿ ಪಡುತ್ತಾರೆ ಅಮ್ಮ ಇದ್ದಿದ್ದರೆ ಏಷ್ಟು ಖುಷಿ ಪಡುತ್ತಿದ್ದಳು. ನೀನು ಆಡಿದ ಮಾತು ಏಷ್ಟು ಜವಾಬ್ದಾರಿಯುತವಾಗಿ ಇತ್ತು ಎಂದರೆ ನನಗೆ ಬಹಳ ಖುಷಿ ಆಯ್ತು ಎಂದು ಹೇಳುತ್ತಾರೆ. ಇತ್ತ ಕೌಸಲ್ಯ ಹಾಗೂ ಚಂದ್ರಶೇಖರ್ ಮಾತನಾಡುತ್ತಾ ಇರುತ್ತಾರೆ. ರೇವತಿಯ ಮದುವೆಯನ್ನು ಅದ್ದೂರಿಯಾಗಿ ಮಾಡಬೇಕು ಎಂದೆಲ್ಲ ಯೋಚನೆ ಮಾಡುತ್ತಾಳೆ ಆಗ ಕೌಸಲ್ಯ ಹೇಳುತ್ತಾಳೆ. ನಮ್ಮ ರೇವತಿ ಮದುವೆಯನ್ನು ಅಳಿಯಂದಿರು ಹಾಗೂ ಲೀಲಾ ಅದ್ಧೂರಿಯಾಗಿ ಮಾಡುತ್ತೇನೆ ಎಂದು ಹೇಳಿದ್ದಾರೆ ಎನ್ನುತ್ತಾಳೆ.

  ಕೌಸಲ್ಯಗೆ ಮಗಳ ಮದುವೆ ಚಿಂತೆ

  ಕೌಸಲ್ಯಗೆ ಮಗಳ ಮದುವೆ ಚಿಂತೆ

  ನನಗೆ ಬಹಳ ಖುಷಿ ಆಗುತ್ತಿದೆ ನನ್ನ ಮಗಳು ರಾಣಿಯ ಹಾಗೆ ಇರಬೇಕು ಎಂದೆಲ್ಲ ಹೇಳಿದಾಗ ಚಂದ್ರಶೇಖರ್ ಹೇಳುತ್ತಾರೆ ನಾವು ಆ ರೀತಿ ಎಲ್ಲಾ ಅಳಿಯಂದಿರ ಕೈ ಯಿಂದ ಹಣ ತೆಗೆದುಕೊಳ್ಳಬಾರದು ಅದು ಸರಿಯಲ್ಲ ಎಂದು ಹೇಳಿದಾಗ ಕೌಸಲ್ಯ, ಚಂದ್ರಶೇಖರ್ ಸ್ವಾಮಿಗಳೇ ನೀವು ಆ ಬಗ್ಗೆ ಯೋಚಿಸಬೇಡಿ ನಿಮ್ಮ ಮುಂದೆ ಇದೆಲ್ಲದನ್ನು ಹೇಳಿದರೆ ನೀವು ಹೀಗೆ ಹೇಳುತ್ತೀರಿ ಎಂದು ಗೊತ್ತು. ನೀವು ನಿಮ್ಮ ಮಗಳ ಮದುವೆ ಮಾಡಿಸುವುದು ಅಷ್ಟರಲ್ಲೇ ಇದೆ. ನೀವು ಯಾರನ್ನೋ ತಂದು ರೇವತಿಗೆ ಮದುವೆ ಮಾಡಿಸಲು ತಯಾರಾಗಿದ್ದೀರ ನಾನು ಹಾಗಲ್ಲ ನನ್ನ ಮಗಳನ್ನು ಒಳ್ಳೆಯ ವರನಿಗೆ ಕೊಟ್ಟು ಮದುವೆ ಮಾಡುತ್ತೇನೆ ಎಂದೆಲ್ಲ ಹೇಳುತ್ತಾರೆ. ಇದನ್ನು ಕೇಳಿದ ಚಂದ್ರಶೇಖರ್ ಸುಮ್ಮನಾಗುತ್ತಾರೆ.

  ಏಜೆಗೆ ಸಿಟ್ಟು ತರಿಸಿದ ಲೀಲಾ!

  ಏಜೆಗೆ ಸಿಟ್ಟು ತರಿಸಿದ ಲೀಲಾ!

  ಇನ್ನೂ ಈ ವಿಚಾರದಲ್ಲಿ ಏನಾದರು ದುರ್ಗಾ, ಕೌಸಲ್ಯ ಗೆ ಕಾಟ ಕೊಡಬಹುದು ಎಂದೆಲ್ಲ ಆಲೋಚನೆಗಳು ಅಭಿಮಾನಿಗಳ ಮನದಲ್ಲಿ ಬಂದು ಹೋಗಿದೆ. ಇದೀಗ ಲೀಲಾ ಏಜೆಯನ್ನು ಅಭಿ ಎಂದು ಯಾಕೆ ಕರೆಯುತ್ತಾರೆ ಎಂದು ಯೋಚಿಸುತ್ತಾ ಇರುವ ವೇಳೆ ಒಂದು ಐಡಿಯಾ ಹೊಳೆಯುತ್ತದೆ. ಬಳಿಕ ಏಜೆ ಗೆ ಕಾಫಿ ಇಡುವ ಸ್ಥಳದಲ್ಲಿ ಕಾಫಿ ಇತ್ತು ಗುಡ್ ಮಾರ್ನಿಂಗ್ ಅಭಿ ಎಂದು ಬರೆದಿರುತ್ತದೆ. ಇದನ್ನು ನೋಡಿ ಏಜೆ ಕುಪಿತರಾಗಿದ್ದಾರೆ. ಮುಂದೇನು ಎಂಬುವುದನ್ನು ಕಾದು ನೋಡಬೇಕಿದೆ.

  English summary
  Zee Kannada serial Hitler Kalyana Written Update on September 21th episode. Know more about it.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X