ಲೀಲಾ ಬಿಟ್ಟು ರೇವತಿ ಮೇಲೆ ಕಣ್ಣಿಟ್ಟ ದುರ್ಗಾ! ಏನಿದು ಮಾಸ್ಟರ್ ಪ್ಲ್ಯಾನ್?

By ಪೂರ್ವ

'ಹಿಟ್ಲರ್ ಕಲ್ಯಾಣ' ಧಾರವಾಹಿಯಲ್ಲಿ ಇದೀಗ ದುರ್ಗಾ, ಲೀಲಾಳ ಕುಟುಂಬದ ಮೇಲೆ ಬ್ರಹ್ಮಾಸ್ತ್ರ ಪ್ರಯೋಗ ಮಾಡಿದ್ದಾಳೆ. ಲೀಲಾಳ ತಂಗಿ ರೇವತಿಗೆ ಗಂಡು ಹುಡುಕಲು ಶುರು ಮಾಡಿದ್ದಾರೆ ಕೌಸಲ್ಯ ಹಾಗೂ ಚಂದ್ರಶೇಖರ್. ಅದಕ್ಕಾಗಿ ವರ ಅನ್ವೇಷಣೆ ಮಾಡುವವರನ್ನು ಕರೆದುಕೊಂಡು ಬಂದಿದ್ದಾರೆ. ಬಳಿಕ ರೇವತಿಗೆ ಒಳ್ಳೆ ಹುಡುಗನನ್ನು ನೋಡುತ್ತಾರೆ ಜಾತಕ ನೋಡುತ್ತಾರೆ. ಅದೆಲ್ಲ ಕೂಡಿ ಬಂದ ಮೇಲೆ ರೇವತಿಯನ್ನು ಕರೆಯುತ್ತಾರೆ. ಮಹಡಿ ಮೇಲಿದ್ದ ರೇವತಿ ಅಪ್ಪನ ಕರೆಗೆ ಹೂ ಗುಟ್ಟಿ ಬರುತ್ತಾಳೆ.

ಮದುವೆ ಬಗ್ಗೆ ಪುರೋಹಿತರನ್ನು ಕರೆಯಿಸಿದಾಗಲೆ ರೇವತಿಗೆ ಗೊತ್ತಾಗುತ್ತದೆ ನನ್ನ ಮದುವೆ ಬಗ್ಗೆ ಮಾತು ಕತೆ ನಡೆಯುತ್ತಿದೆ ಎಂದು. ರೇವತಿಗೆ ಹುಡುಗನ ಫೋಟೋ ತೋರಿಸಿ ಈತ ಆಗಬಹುದ ಬಹಳ ಉತ್ತಮವಾಗಿ ಓದಿಕೊಂಡಿದ್ದಾನೆ. ನೋಡಲು ಚೆನ್ನಾಗಿದ್ದಾನೆ ಎಂದಾಗ ರೇವತಿ ಹೇಳುತ್ತಾಳೆ ನಾನು ನಿಮಗೆ ಒಪ್ಪಿಗೆ ಆಗಿರುವ ಹುಡುಗನನ್ನು ಮದುವೆಯಾಗಲು ರೆಡಿ ಎಂದು ಹೇಳುತ್ತಾಳೆ ಇದನ್ನು ಕೇಳಿದ ಕೌಸಲ್ಯ ಬಹಳ ಖುಷಿ ಪಡುತ್ತಾಳೆ.

ರೇವತಿ ಹೇಳುತ್ತಾಳೆ, ನನ್ನ ಮದುವೆಯ ಸಂಪೂರ್ಣ ಜವಾಬ್ದಾರಿಯನ್ನು ಬಾವ ನೋಡುತ್ತೇನೆ ಎಂದಿದ್ದಾರೆ ಮೊದಲು ಬಾವನಿಗೆ ಈ ಸಂಬಂಧ ಒಪ್ಪಿಗೆ ಆಗಬೇಕು ಆ ಬಳಿಕ ಮದುವೆ ನಡೆಯುತ್ತದೆ ಎಂದಾಗ ರೇವತಿ ಪೋಷಕರು ಪುರೋಹಿತರನ್ನು ಏಜೆ ಮನೆಗೆ ಹೋಗುವಂತೆ ಹೇಳುತ್ತಾರೆ. ಇನ್ನೂ ಏಜೆ ಮನೆಗೆ ಪುರೋಹಿತರು ಬರುತ್ತಾರೆ. ಪುರೋಹಿತರನ್ನು ನೋಡಿದ ಏಜೆಯ ಸೊಸೆಯಂದಿರು ಅಲ್ಲಿಗೆ ಬರುತ್ತಾರೆ. ದುರ್ಗಾ ಪುರೋಹಿತರ ಬಳಿ ಅನೇಕ ಪ್ರಶ್ನೆಗಳನ್ನು ಕೇಳುತ್ತಾಳೆ.

ಲಂಚ ನೀಡಿ ಪುರೋಹಿತರ ಬುಟ್ಟಿಗೆ ಹಾಕಿಕೊಂಡ ದುರ್ಗಾ

ಲಂಚ ನೀಡಿ ಪುರೋಹಿತರ ಬುಟ್ಟಿಗೆ ಹಾಕಿಕೊಂಡ ದುರ್ಗಾ

ಬಳಿಕ ಆಕೆಗೆ ತಿಳಿಯುತ್ತದೆ ರೇವತಿ ಮದುವೆ ವಿಚಾರವಾಗಿ ಇವರು ಬಂದಿದ್ದಾರೆ ಎಂದು ಆ ವೇಳೆ ದುರ್ಗಾ ಹೇಳುತ್ತಾಳೆ ಪುರೋಹಿತರೆ ನಾನು ನಿಮಗೆ 3 ಲಕ್ಷ ಕೊಡುತ್ತೇನೆ ರೇವತಿಗೆ ಎಂಥ ಹುಡುಗ ಹುಡುಕಬೇಕು ಎಂದು ನಾನು ಹೇಳುತ್ತೇನೆ ಆ ರೀತಿಯ ಹುಡುಗನನ್ನೇ ಹುಡುಕ ಬೇಕು ಎಂದಾಗ ಪುರೋಹಿತರು ಹಣದ ಮೋಹಕ್ಕೆ ಬಲಿಯಾಗಿ ಆಯ್ತು ಎಂದು ಒಪ್ಪಿಗೆ ಸೂಚಿಸುತ್ತಾರೆ.

ಕೌಸಲ್ಯಗೆ ಚಾಟಿ ಏಟು ಕೊಡಲು ಸಜ್ಜಾದ ದುರ್ಗಾ

ಕೌಸಲ್ಯಗೆ ಚಾಟಿ ಏಟು ಕೊಡಲು ಸಜ್ಜಾದ ದುರ್ಗಾ

ಬಳಿಕ ದುರ್ಗಾ ಮನದಲ್ಲೇ ಯೋಚನೆ ಮಾಡುತ್ತಾಳೆ ನನಗೆ ಇಷ್ಟೆಲ್ಲ ಕಾಟ ಕೊಟ್ಟಿದ್ದಿಯಾ ಕೌಸಲ್ಯ, ನಿನ್ನ ಕುಟುಂಬ ನೋವಿನಲ್ಲಿ ನರಳ ಬೇಕು ಹಾಗೆ ಮಾಡುತ್ತೇನೆ ಎಂದು ಹೇಳಿಕೊಳ್ಳುತ್ತಾಳೆ. ಇತ್ತ ಕೌಸಲ್ಯಗೆ ಪುರೋಹಿತರು ಕರೆ ಮಾಡುತ್ತಾರೆ ಬಳಿಕ ಏಜೆ ಮದುವೆ ಒಪ್ಪಿಗೆ ಕೊಟ್ಟಿದ್ದಾರೆ ನಾಳೆನೇ ಗಂಡಿನ ಕಡೆಯವರು ಬರುತ್ತಾರೆ ರೆಡಿ ಆಗಿರಿ ಎಂದು ಹೇಳಿ ಕರೆ ಕಟ್ ಮಾಡುತ್ತಾರೆ. ಇದನ್ನು ಕೇಳಿದ ಕೌಸಲ್ಯ ಖುಷಿಯಾಗುತ್ತಾಳೆ. ಮನೆಯವರಿಗೆ ಹೇಳಿ ಇನ್ನೂ ಸಂಬ್ರಮ ಪಡುತ್ತಾಳೆ.

ಲೀಲಾಗೆ ಏಜೆಯ ಮೊದಲನೇ ಹೆಂಡತಿಯ ತಮ್ಮನ ಕರೆ

ಲೀಲಾಗೆ ಏಜೆಯ ಮೊದಲನೇ ಹೆಂಡತಿಯ ತಮ್ಮನ ಕರೆ

ಇತ್ತಕಡೆ ಲೀಲಾಗೆ ಏಜೆ ಮೊದಲನೇ ಹೆಂಡತಿಯ ತಮ್ಮ ಕರೆ ಮಾಡುತ್ತಾನೆ. ಏಜೆ ಒಳ್ಳೆಯವನಲ್ಲ ಒಳ್ಳೆಯವನ ಹಾಗೆ ನಟನೆ ಮಾಡುತ್ತಿದ್ದಾನೆ ಇದೆಲ್ಲ ನಿಮಗೆ ಅರ್ಥ ಆಗುತ್ತಿಲ್ಲ ಎಂದೆಲ್ಲ ಹೇಳಿ ಲೀಲಾ ತಲೆ ತಿನ್ನುತ್ತಾನೆ. ಇದನ್ನು ಕೇಳಿದ ಲೀಲಾ ಕೋಪ ಗೊಂಡು ಹೇಳಿದ್ದು ಅರ್ಥ ಆಗೋದಿಲ್ಲ ನಿಮಗೆ ಎಷ್ಟು ಸಲ ಹೇಳುವುದು ಕರೆ ಮಾಡಬೇಡಿ ಎಂದು ಆದರೂ ಕರೆ ಮಾಡುತ್ತೀರಾ ಎಂದೆಲ್ಲ ಹೇಳುತ್ತಾರೆ. ಈ ರೀತಿ ಹೇಳಬೇಕಾದರೆ ಹಿಂದೆ ಗಡೆ ಬಂದ ಏಜೆ ಬಂದು ಲೀಲಾ ಎಂದು ಕರೆಯುತ್ತಾರೆ. ಏಜೆ ಧ್ವನಿ ಕೇಳಿ ಲೀಲಾ ಗೆ ಶಾಕ್ ಆಗುತ್ತದೆ.

ಏಜೆ ಬಳಿ ಸುಳ್ಳು ಹೇಳುವ ಲೀಲಾ

ಏಜೆ ಬಳಿ ಸುಳ್ಳು ಹೇಳುವ ಲೀಲಾ

ಬೇಗ ಕರೆ ಕಟ್ ಮಾಡಿ ಏಜೆಯತ್ತ ನೋಡಿ ಗೆಳತಿ ಕರೆ ಮಾಡಿರುವುದು..ಎಂದೆಲ್ಲ ಹೇಳಿದಾಗ ಏಜೆ ಕೇಳುತ್ತಾರೆ ಲೀಲಾ ನನ್ನಿಂದ ಏನಾದರು ಮುಚ್ಚಿ ಇಡುತ್ತಿದ್ದಿಯಾ ಎಂದು ಕೇಳುತ್ತಾರೆ ಇದನ್ನು ಕೇಳಿದ ಲೀಲಾ ಬೆಚ್ಚಿ ಬೀಳುತ್ತಾಳೆ. ಬಳಿಕ ಏನು ಇಲ್ಲ ಏಜೆ ಎಂದು ಹೇಳಿ ಅಲ್ಲಿಂದ ಹೊರಟುಬಿಡುತ್ತಾಳೆ. ಸ್ವಲ್ಪ ಹೊತ್ತಿನ ಬಳಿಕ ಏಜೆ ಲೀಲಾಳನ್ನು ಕರೆದು ಅದು ಯಾರು ನಿನ್ನ ಗೆಳತಿ ಕರೆ ಮಾಡು ಎಂದು ಹೇಳುತ್ತಾಳೆ. ಲೀಲಾ ಭಯ-ಭೀತಳಾಗುತ್ತಾಳೆ. ಬಳಿಕ ಆ ನಂಬರಿಗೆ ಕರೆ ಮಾಡುತ್ತಾಳೆ ಮುಂದೆ ಎನು ಎಂಬುವುದನ್ನು ಕಾದು ನೋಡಬೇಕಿದೆ.

More from Filmibeat

English summary
Zee Kannada serial Hitler Kalyana Written Update on September 22th episode. Know more about it.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X