ಅಂತರಾಳ ನೆನಪಲ್ಲಿ ಏಜೆ! ಲೀಲಾಳ ವರ್ತನೆ ಕಂಡು ಬೆರಗಾದ ಅಭಿರಾಮ್

By ಪೂರ್ವ

ಕೌಸಲ್ಯ ಮನೆಯಲ್ಲಿ ಖುಷಿಯ ವಾತಾವರಣ ಮನೆ ಮಾಡಿದೆ. ರೇವತಿಗೆ ಗೊತ್ತು ಮಾಡಿರುವ ವರನನ್ನು ಏಜೆ, ನೋಡಿ ಒಪ್ಪಿಗೆ ಸೂಚಿಸಿದ್ದಾರೆ ಎಂದು ದಂಪತಿ ಖುಷಿ ಪಡುತ್ತಿದ್ದಾರೆ. ಹಾಗೆಯೆ ಗಂಡಿನ ಕಡೆಯವರು ರೇವತಿಯನ್ನು ನೋಡಲು ಬರುತ್ತಾರೆ ಎಂದ ಕೂಡಲೆ ರೇವತಿ ನಾಚಿ ನೀರಾಗಿದ್ದಾಳೆ. ಇದನ್ನು ನೋಡಿದ ಕೌಸಲ್ಯ ಖುಷಿ ದುಪ್ಪಟ್ಟಾಗಿದೆ. ಆದರೆ ಕೌಸಲ್ಯಳ ಖುಷಿಯನ್ನು ಕಸಿದು ಕೊಳ್ಳಲು ದುರ್ಗಾ ಮಾಸ್ಟರ್ ಪ್ಲಾನ್ ಮಾಡಿದ್ದಾಳೆ. ದುರ್ಗಾಳ ಆಮಿಷಕ್ಕೆ ಬಲಿಯಾದ ಬ್ರೋಕರ್, ರೇವತಿ ಜೀವನದಲ್ಲಿ ಆಟ ಆಡಲು ಶುರು ಮಾಡಿದಂತೆ ಕಾಣುತ್ತಿದೆ.

ಇದು ಲೀಲಾ ಗಮನಕ್ಕೆ ಇನ್ನೂ ಬಂದಿಲ್ಲ. ದುರ್ಗಾ ಸೇಡು ಕೌಸಲ್ಯ ಮನೆಯನ್ನು ಸ್ಮಶಾನ ಮಾಡುವ ಹಾಗೆ ಕಾಣುತ್ತಿದೆ. ಇನ್ನು ದುರ್ಗಾ ಬಳಿ ಬ್ರೋಕರ್ ಮಾತನಾಡಿ ಹೋಗುತ್ತಿರುವುದನ್ನು ನೋಡಿದ ಲೀಲಾ ಏನು ಬ್ರೋಕರ್ ಇಲ್ಲಿಗೆ ಬಂದಿದ್ದೀರಾ ನನ್ನ ಮದುವೆ ಮಾಡುತ್ತೇನೆ ಎಂದು ಹೇಳಿ ಕಾಗೆ ಹಾರಿಸಿದ್ದು ಆಯ್ತು. ಇಲ್ಲಿಗೆ ಬಂದು ಯಾರ ಮದುವೆ ಮಾಡಲು ಹೊರಟಿದ್ದೀರಾ? ಎಂದು ಕೇಳಿದಾಗ ಬ್ರೋಕರ್ ಹೇಳುತ್ತಾರೆ ಲೀಲಾ ನಿನಗೆ ಈ ವಿಚಾರ ತಿಳಿದಿಲ್ವಾ. ನಿನ್ನ ತಂಗಿಗೆ ಮದುವೆ ಗೊತ್ತಾಯ್ತು ನಾಳೆಯೇ ಗಂಡಿನ ಕಡೆಯವರು ಬರುತ್ತಿದ್ದಾರೆ ಎಂದು ಹೇಳಿದಾಗ ಲೀಲಾಗೆ ಆಶ್ಚರ್ಯ ಆಗುತ್ತದೆ.

ನಾಚಿ ನೀರಾದ ರೇವತಿ

ನಾಚಿ ನೀರಾದ ರೇವತಿ

ಸಣ್ಣ ಪುಟ್ಟದಕ್ಕೆ ಕರೆ ಮಾಡಿ ಎಲ್ಲಾ ವಿಚಾರ ಹೇಳುತ್ತಾರೆ. ಆದರೆ ರೇವತಿಗೆ ಮದುವೆ ಮಾಡುವ ವಿಚಾರ ಮಾತ್ರ ತನ್ನ ಬಳಿ ಪ್ರಸ್ತಾಪ ಮಾಡದಿರುವುದು ಲೀಲಾಗೆ ಕೋಪ ತರಿಸುತ್ತದೆ. ಬ್ರೋಕರ್ ಹೋದ ಬಳಿಕ ತಂದೆಗೆ ಕರೆ ಮಾಡಿ ಯಾಕಪ್ಪ ನನ್ನ ಬಳಿ ಏನು ಹೇಳಲಿಲ್ಲ? ನನಗೆ ನಿನ್ನ ಮೇಲೆ ಕೋಪ ಬಂದಿದೆ, ಹೋಗಪ್ಪ ಎಂದು ಲೀಲಾ ಹೇಳಿದಾಗ ಲೀಲಾಳ ತಂದೆ ನಗುತ್ತಾ, ಇದೆಲ್ಲ ಬೇಗ ಆಗಿ ಹೋದರೆ ಚಂದ. ನೀನೇನು ತಲೆ ಕೆಡಿಸಿಕೊಳ್ಳಬೇಡ. ಅದಕ್ಕೆ ಏಜೆ ಬಳಿ ಬ್ರೋಕರ್‌ನ ಕಳುಹಿಸಿದ್ದು ನಾಳೆಯೇ ಗಂಡಿನ ಕಡೆಯವರು ಬರುತ್ತಾರಂತೆ ಹಾಗಂತ ಬ್ರೋಕರ್ ಹೇಳಿದ್ದಾರೆ. ಎಂದು ಹೇಳಿ ಲೀಲಾ ಮುನಿಸನ್ನು ದೂರ ತಳ್ಳುತ್ತಾರೆ.

ಏಜೆಗೆ ಸನ್ಮಾನ ಮಾಡಿದ ಪ್ರತಿಷ್ಠಿತ ಸಂಸ್ಥೆ

ಏಜೆಗೆ ಸನ್ಮಾನ ಮಾಡಿದ ಪ್ರತಿಷ್ಠಿತ ಸಂಸ್ಥೆ

ಬಳಿಕ ಏಜೆ, ಲೀಲಾಳ ಫೋನ್ ಚೆಕ್ ಮಾಡದೆ ಲೀಲಾಗೆ ಕೊಟ್ಟಾಗ ಲೀಲಾ ಖುಷಿಯಾಗುತ್ತಾಳೆ. ಬಳಿಕ ಏಜೆ ಸನ್ಮಾನದ ಬಗ್ಗೆ ಹೇಳುತ್ತಿರುತ್ತಾರೆ. ಇತ್ತ ಏಜೆ, ಪಿಎ ಹಾರ ಹೀಗೆಲ್ಲ ಹಾಕಿಕೊಂಡು ಬರುವುದನ್ನು ನೋಡಿದ ಲೀಲಾ ಏನಿದು ಎಂದು ಕೇಳಿದಾಗ ಪಿಎ ವಿಶ್ವರೂಪ ಹೇಳುತ್ತಾನೆ ನನಗೆ ಸನ್ಮಾನ ಆಗೊದಾದರೆ ಕೆನ್ನೆ ಮೇಲೆ ಆಗುತ್ತೆ ಬಾಸ್ ಹೊಡೆದು ಹೊಡೆದು ನನ್ನ ಕೆನ್ನೆ ಊದಿಕೊಂಡು ಬಿಟ್ಟಿದೆ. ಸನ್ಮಾನ ಯಾರಿಗೆ ಆಗಿದ್ದು ಎಂದು ಕೇಳಿದಾಗ ಬಾಸ್‌ಗೆ ಎಂದು ಹೇಳುತ್ತಾನೆ ವಿಶ್ವರೂಪ. ಬಾಸ್ ಅನ್ನು ಪ್ರತಿಷ್ಠಿತ ಕಂಪನಿಯವರು ಕರೆದು ಸನ್ಮಾನ ಮಾಡಿದರೂ ಎಂದು ಖುಷಿಯಾಗಿ ಹೇಳಿ ಅಲ್ಲಿಂದ ಹೋರಾಡುತ್ತಾನೆ.

ಏಜೆ ದುಃಖಕ್ಕೆ ಕೊನೆ ಎಂದು?

ಏಜೆ ದುಃಖಕ್ಕೆ ಕೊನೆ ಎಂದು?

ಆ ವೇಳೆ ಏಜೆ ಸೀರೆಯನ್ನು ನೋಡುತ್ತಾ ಕೈಯಲ್ಲಿ ಮುಟ್ಟುತ್ತಾ ಮೊದಲನೆಯ ಹೆಂಡತಿಯ ನೆನಪು ಮಾಡಿಕೊಳ್ಳುತ್ತಾ ಇರುತ್ತಾನೆ. ಅಂತರಾ ನಾನು ಯಾವುದೇ ವಸ್ತು ಕೊಟ್ಟರು ಅದರಲ್ಲಿಯೂ ಸೀರೆ ಕೊಟ್ಟರೆ ನಿನ್ನ ಮುಖದಲ್ಲಿ ಆಗುತ್ತಿರುವ ಖುಷಿಯನ್ನು ನೋಡುವುದೇ ಒಂದು ಖುಷಿ. ಸೀರೆಯನ್ನು ಖುಷಿಯಿಂದ ಉಟ್ಟುಕೊಂಡು ಬರುತ್ತಿದ್ದೆ. ನನಗೆ ಅದನ್ನೆಲ್ಲ ನೋಡುತ್ತಿದ್ದಾಗ ಎಷ್ಟು ಖುಷಿ ಆಗುತ್ತಿತ್ತು ಗೊತ್ತಾ. ಆಗಿನಿಂದಲೂ ಕೂಡ ನಾನು ಏನೇ ತೆಗೆದುಕೊಂಡರು ಅದರಲ್ಲಿ ಒಂದು ಪಾಲು ನಿನಗೆ ತರುತ್ತೇನೆ. ನೀನು ಇರುತ್ತಿದ್ದರೆ ಈ ಸೀರೆ ನಿನಗೆ ಕೊಡುತ್ತಿದ್ದೆ. ಈ ಸೀರೆ ನಿನಗೆ ತುಂಬಾ ಚೆನ್ನಾಗಿ ಒಪ್ಪುತ್ತದೆ ಎಂದು ಹೇಳುತ್ತಾರೆ. ಆದರೆ ಇವತ್ತು ನಾನು ಇದ್ದೇನೆ ಸೀರೆ ಇದೆ ಆದರೆ ನೀನು ಇಲ್ಲ ಎಂದು ಏಜೆ ಭಾವುಕನಾಗುತ್ತಾನೆ.

ಲೀಲಾ ವರ್ತನೆ ನೋಡಿ ಏಜೆಗೆ ಅಂತರಾ ನೆನಪು

ಲೀಲಾ ವರ್ತನೆ ನೋಡಿ ಏಜೆಗೆ ಅಂತರಾ ನೆನಪು

ಆಗ ಅಲ್ಲಿಗೆ ಲೀಲಾ ಬರುತ್ತಾಳೆ ಸೀರೆಗಳನ್ನು ನೋಡಿ ಖುಷಿ ಪಡುತ್ತಾಳೆ. ಸೀರೆ ಬ್ಯುಸಿನೆಸ್ ಏನಾದರು ಶುರು ಮಾಡುತ್ತೀರ ಎಂದು ಕೇಳುತ್ತಾಳೆ. ಆಗ ಏಜೆ ಹೇಳುತ್ತಾರೆ ಒಂದು ಕಂಪನಿಗೆ ಉದ್ಘಾಟನೆ ಮಾಡಲು ಹೋಗಿದ್ದೆ. ಅವರು ಇದನ್ನು ಕಳುಹಿಸಿ ಕೊಟ್ಟಿದ್ದಾರೆ ಎಂದು ಹೇಳುತ್ತಾರೆ ಆಗ ಅಲ್ಲಿಗೆ ರೇವತಿಯು ಬರುತ್ತಾರೆ. ಆಗ ಏಜೆ, ಲೀಲಾ ಗೆ ಹೇಳುತ್ತಾರೆ ನಿನಗೆ ಯಾವ ಸೀರೆ ಬೇಕೋ ಅದನ್ನು ತೆಗೆದುಕೋ ಎಂದು ಹೇಳುತ್ತಾರೆ. ಆಗ ಲೀಲಾ ಹೇಳುತ್ತಾಳೆ ಸೆಲೆಕ್ಟ್ ಮಾಡಿಕೊಂಡರೆ ಪ್ರೀತಿಯಿಂದ ಕೊಡುತ್ತೀರಾ ಎಂದು ಕೇಳಿದಾಗ ಏಜೆ ಲೀಲಾಳ ಮುಖ ನೋಡುತ್ತಾರೆ. ಸರುಗೆ ಶಾಕ್ ಆಗುತ್ತದೆ. ಲೀಲಾ ಸೀರೆಗಳನ್ನು ಸೆಲೆಕ್ಟ್ ಮಾಡಿ ಏಜೆ ಕೈಯಲ್ಲಿ ಇದ್ದ ಸೀರೆಯನ್ನು ಖುಷಿಯಿಂದ ತೆಗೆದುಕೊಂಡು ಇದನ್ನೆಲ್ಲ ಇಟ್ಟುಕೊಂಡು ಮತ್ತೆ ಸೊಸೆಯಂದಿರಿಗೆ ಸೀರೆ ಕೊಡುತ್ತೇನೆ ಎಂದು ಹೇಳಿ ಅಲ್ಲಿಂದ ಹೊರಡುತ್ತಾಳೆ. ಲೀಲಾ ನಡವಳಿಕೆಯಿಂದ ಏಜೆಗೆ ಅಂತರಾಳ ನೆನಪಾಗುತ್ತದೆ.

More from Filmibeat

English summary
Zee Kannada serial Hitler Kalyana Written Update on September 23th episode. Know more about the episode.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X