ಲೀಲಾ ನೋವಿಗೆ ಸ್ಪಂದಿಸಿದ ಏಜೆ: ದುರ್ಗಾ ಕುತಂತ್ರಕ್ಕೆ ಕಡಿವಾಣ ಯಾವಾಗ?

By ಪೂರ್ವ

'ಹಿಟ್ಲರ್ ಕಲ್ಯಾಣ' ಧಾರವಾಹಿ ಚೆನ್ನಾಗಿ ಮೂಡಿ ಬರುತ್ತಿದ್ದು ನೋಡುಗರ ಮನ ಸೆಳೆಯುತ್ತಿದೆ. ಏಜೆ ಪತ್ನಿ ಕಣ್ಣೀರು ಹಾಕುತ್ತಾ ಇರುವುದನ್ನು ಕಂಡು ಪ್ರಶ್ನೆ ಮಾಡುತ್ತಾನೆ. ಇದರಿಂದ ಕುಪಿತಗೊಂಡ ಲೀಲಾ ಏಜೆಗೆ ಬಯ್ಯುತ್ತಾಳೆ. ಏಜೆ ಮಾತ್ರ ತುಟಿಕ್ ಪಿಟಿಕ್ ಎನ್ನದೆ ಸುಮ್ಮನೆ ಇರುತ್ತಾನೆ. ನನ್ನನ್ನು ಏನು ಮರ ಎಂದುಕೊಂಡು ಇದ್ದೀರಾ, ನನಗೂ ಮನಸಿದೆ ನನಗೂ ಅಳು ಬರುತ್ತದೆ. ನನ್ನನ್ನು ನನ್ನ ಪಾಡಿಗೆ ಬಿಟ್ಟು ಬಿಡಿ ಎಂದು ಜೋರಾಗಿ ಹೇಳುತ್ತಾಳೆ. ಬಳಿಕ ಜೋರಾಗಿ ಮಾತನಾಡಿದ್ದಕ್ಕೆ ಏಜೆ ಬಳಿ ಕ್ಷಮೆ ಕೇಳುತ್ತಾಳೆ ಲೀಲಾ.

ಸಮಾಧಾನ ಮಾಡಿಕೊಂಡ ಲೀಲಾ ಬಳಿ ಕೇಳುತ್ತಾನೆ ಏನಾಯ್ತು ಲೀಲಾ ನೀನು ಸುಮ್ಮನೆ ಅಳುವುದಿಲ್ಲ. ನೀನು ಬಹಳ ಗಟ್ಟಿ ಗಿತ್ತಿ ಕೂಡ ಯಾಕೆ ಅಳುತ್ತಿರುವೆ ಏನಾಯ್ತು ಅಂತಹದ್ದು ಎಂದು ಕೇಳುತ್ತಾನೆ. ಆಗ ಲೀಲಾ ಹೇಳುತ್ತಾಳೆ ನಾನು ಅಷ್ಟು ಪ್ರೀತಿಯಿಂದ ಸೀರೆ ತೆಗೆದುಕೊಂಡು ಬಂದಿದ್ದೆ ಅಮ್ಮ ಹಾಗೂ ರೇವತಿಗೆ ಕೊಡಲು ಆದರೆ ನೀವು ಅದನ್ನು ಕೊಡಲು ಬಿಡದೆ ನೀವು ತಂದ ಸೀರೆಯನ್ನು ಕೊಡಲು ಹೇಳಿದಿರಿ ಎಂದು ಹೇಳುತ್ತಾಳೆ. ಇದಕ್ಕೆ ಕಾರಣವನ್ನು ಏಜೆ ನೀಡುತ್ತಾರೆ.

ಏಜೆಗೆ ಧನ್ಯವಾದ ಹೇಳಿದ ಲೀಲಾ

ಏಜೆಗೆ ಧನ್ಯವಾದ ಹೇಳಿದ ಲೀಲಾ

ಲೀಲಾ ನೀನು ತಂದಿದ್ದ ಸೀರೆ ಹರಿದು ಹೋಗಿತ್ತು ಆದರೆ ಇದು ನಿನ್ನ ಗಮನಕ್ಕೆ ಬಂದಿರಲಿಲ್ಲ. ಇದನ್ನು ಯಾರು ಮಾಡಿದರು ಎಂಬುವುದು ಗೊತ್ತಿಲ್ಲ ಆದರೆ ಆ ಹರಿದ ಸೀರೆಯನ್ನು ನಿನ್ನ ಅಮ್ಮನಿಗೆ ರೇವತಿಗೆ ಕೊಟ್ಟಿದ್ದರೆ ಖಂಡಿತ ಅವರು ಬೇಸರ ಪಟ್ಟುಕೊಳ್ಳುತ್ತಿದ್ದರೂ ಅದಕ್ಕಾಗಿ ನಾನು ಸೀರೆಯನ್ನು ಬೇರೆ ತಂದು ಕೊಟ್ಟೆ ಎಂದು ಹೇಳುತ್ತಾರೆ. ಇದನ್ನು ಕೇಳಿ ಲೀಲಾ ಗೆ ಕೊಂಚ ಸಮಾಧಾನ ಆಗುತ್ತದೆ. ಬಳಿಕ ಏಜೆಗೆ ಧನ್ಯವಾದ ಹೇಳುತ್ತಾಳೆ.

ಕೌಸಲ್ಯಗೆ ನೋವು ಕೊಟ್ಟ ಖುಷಿಯಲ್ಲಿ ದುರ್ಗಾ

ಕೌಸಲ್ಯಗೆ ನೋವು ಕೊಟ್ಟ ಖುಷಿಯಲ್ಲಿ ದುರ್ಗಾ

ಇತ್ತ ದುರ್ಗಾ ಹಾಗೂ ಸರು ಮಾತನಾಡಿಕೊಳ್ಳುತ್ತ ಇರುತ್ತಾರೆ. ಸರು ಹೇಳುತ್ತಾಳೆ ಅಕ್ಕ ರೇವತಿ ಮದುವೆ ನಿಂತು ಹೋಗಿರುತ್ತೆ, ನಾವು ಕೊಟ್ಟಿದ್ದ ಹರಿದ ಸೀರೆಯನ್ನು ಆ ಕೌಸಲ್ಯಗೆ ಕೊಟ್ಟಿರುತ್ತಾರೆ ಅಲ್ವಾ. ಮದುವೆ ಮುರಿದು ಬಿದ್ದಿರುತ್ತೆ. ಆಹಾ ಇದೀಗ ಅವರ ಮನೆ ಧಗ-ಧಗ ಎಂದು ಹೊತ್ತಿ ಉರಿತುತ್ತಿರಬಹುದು ಎಂದು ಹೇಳುತ್ತಿರುತ್ತಾರೆ. ಇದನ್ನೆಲ್ಲ ನೋಡಿದ ದುರ್ಗಾ ಖುಷಿಯಿಂದ ಸಣ್ಣ ನಗೆ ನಗುತ್ತಾಳೆ. ಬಳಿಕ ಹೇಳುತ್ತಾಳೆ ಲೀಲಾ ಕಣ್ಣಲ್ಲಿ ಆ ಕೌಸಲ್ಯ ಕಣ್ಣಲ್ಲಿ ನೀರು ಹರಿಸದೆ ನಾನು ಬಿಡುವುದಿಲ್ಲ ಎಂದೆಲ್ಲ ಹೇಳುತ್ತಾಳೆ. ಇನ್ನೂ ಆಳುತ್ತಿರುವ ಲೀಲಾ ಳನ್ನು ನೋಡಿ ಏನಾಯ್ತು ಲೀಲಾ ಯಾಕೆ ಈ ರೀತಿ ಮಂಕಾಗಿದ್ದಿಯಾ ಎಂದು ಹೇಳಿದಾಗ ಏಜೆಗೆ ತನ್ನ ಮನದ ನೋವೆಲ್ಲಾ ಹೇಳುತ್ತಾಳೆ.

ಹೆಂಡತಿಗೆ ಸಾಂತ್ವನ ಹೇಳಿದ ಏಜೆ

ಹೆಂಡತಿಗೆ ಸಾಂತ್ವನ ಹೇಳಿದ ಏಜೆ

ಗಂಡಿನ ಕಡೆಯವರು ಮನೆಯವರಿಗೆ ಅನ್ನಬಾರದ ಮಾತನ್ನು ಹೇಳಿ ಹೋಗುತ್ತಾರೆ ಇದನ್ನೆಲ್ಲ ಕೇಳಿ ಅಪ್ಪ ಅಮ್ಮ ಹಾಗೂ ಚುಕ್ಕಿಗೆ ಆಗಿರುವ ಆತಂಕದ ಬಗ್ಗೆ ಹೇಳುತ್ತಾಳೆ. ನಾವು ಅಲ್ಲಿ ಹೋದಾಗ ಏನೂ ಆಗದ ಸ್ಥಿತಿಯಲ್ಲಿ ಇದ್ದರೂ ಆದರೆ ಅವರ ಮನದಲ್ಲಿ ಹುದುಗಿರುವ ನೋವು ನನಗೆ ಅಷ್ಟೇ ಕಾಣುತ್ತಿದೆ ಎಂದು ಹೇಳಿ ಅಳುತ್ತಾಳೆ. ಇನ್ನೂ ಇದಕ್ಕೆ ಪ್ರತಿಕ್ರಿಯಿಸಿದ ಏಜೆ ಎಲ್ಲಿ ನಿನ್ನ ತಂದೆ ತಾಯಿಗೆ ಫೋನ್ ಮಾಡು ಎಂದು ಹೇಳುತ್ತಾರೆ. ಆ ವೇಳೆ ರೇವತಿ, ಕೌಸಲ್ಯ ಬಳಿ ಬೇಸರ ಮಾಡಬೇಡ ಅಮ್ಮ ನನಗೆ ಮದುವೆನೇ ಬೇಡ ಎಂದು ಹೇಳಿದಾಗ ಯಾಕೆ ಬೇಡ ಮದುವೆ ಆಗಬೇಕು ಕಣೆ ಎಂದೆಲ್ಲ ಹೇಳುತ್ತಾಳೆ.

ರೇವತಿಗೆ ಕರೆ ಮಾಡಿದ ಲೀಲಾ

ರೇವತಿಗೆ ಕರೆ ಮಾಡಿದ ಲೀಲಾ

ಬಳಿಕ ಊಟ ಮಾಡಲು ಯಾರಿಗೂ ಮನಸು ಬರುತ್ತಿರಲಿಲ್ಲ. ಲೀಲಾ ಫೋನ್ ಬಂದಿರುವುದನ್ನು ನೋಡಿದ ರೇವತಿ ರಿಸೀವ್ ಮಾಡುತ್ತಾಳೆ. ಆಗ ಏಜೆ ಹೇಳುತ್ತಾರೆ ನನಗೆ ಎಲ್ಲಾ ವಿಚಾರ ತಿಳಿಯಿತು. ಇನ್ನೂ ಒಂದು ತಿಂಗಳಲ್ಲಿ ರೇವತಿ ಮದುವೆ ನಾನೇ ಮಾಡುತ್ತೇನೆ. ಆಕೆಗೆ ನಾನೇ ಹುಡುಗನನ್ನು ಹುಡುಕುತ್ತೇನೆ. ನೀವು ಏನೂ ತಲೆಬಿಸಿ ಮಾಡಿಕೊಳ್ಳಬೇಡಿ ಎಂದೆಲ್ಲ ಹೇಳಿದಾಗ ಖುಷಿಯಿಂದ ಕುಪ್ಪಳಿಸಿದ ಚಂದ್ರಶೇಖರ್ ಏಜೆ ನೀವು ನಮ್ಮ ಭಾಗದ ದೇವರು ಎಂದೆಲ್ಲ ಹೇಳಿ ಖುಷಿಯಿಂದ ಕರೆ ಕಟ್ ಮಾಡುತ್ತಾರೆ. ಇದನ್ನು ಕೇಳಿದ ರೇವತಿ ಕೂಡ ಹೇಳುತ್ತಾಳೆ ಏಜೆ ನನ್ನ ತಂದೆ ಹೇಳಿದ ಹಾಗೆಯೇ ನೀವು ನಮ್ಮ ಭಾಗದ ದೇವರು ಎಂದು ಹೇಳುತ್ತಾಳೆ. ಇನ್ನೂ ಲೀಲಾ ಏಜೆ ಜೀವನದಲ್ಲಿ ನಡೆದ ಕರಾಳ ದಿನಗಳನ್ನು ತಿಳಿದುಕೊಳ್ಳಲು ಹೊರಟಿದ್ದಾಳೆ ಮುಂದೆ ಏನಾಗುತ್ತದೆ ಎಂಬುವುದನ್ನು ಕಾದುನೋಡಬೇಕಿದೆ

More from Filmibeat

English summary
Zee Kannada serial Hitler Kalyana Written Update on September 29th episode. Know more about it.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X