ಮನೆಗೆ ಬಂದ ಗಣಪ: ನಡೆಯಲಿಲ್ಲ ಲೀಲಾ ಸೊಸೆಯರ ಆಟ
ಸೊಸೆಯಂದಿರ ಮುದ್ದಿನ ಅತ್ತೆಯಾಗಿ ಮಿಂಚುತ್ತಿರುವ ಬೆಡಗಿ ಲೀಲಾ. ಇದೀಗ 'ಹಿಟ್ಲರ್ ಕಲ್ಯಾಣ' ಧಾರಾವಾಹಿ ಚೆನ್ನಾಗಿ ಮೂಡಿ ಬರುತ್ತಿದ್ದು ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಲೀಲಾ ತವರು ಮನೆಗೆ ಏಜೆ ಸೊಸೆಯಂದಿರನ್ನು ಲೀಲಾ ಕಳುಹಿಸುವುದು ಇದೀಗ ಲೀಲಾ ಮನೆಯವರಿಗೆ ಮುಳುವು ಆದ ಹಾಗೆ ಕಂಡು ಬರುತ್ತಿದೆ.
ಲೀಲಾ ಗಣೇಶ ಹಬ್ಬಕ್ಕೆ ತವರು ಮನೆಗೆ ಹೋಗಬೇಕು ಎಂಬ ಆಸೆಯಲ್ಲಿ ಇದ್ದಳು. ಹಿಂದಿನ ವರುಷ ಗಣೇಶ ಹಬ್ಬವನ್ನು ಎಷ್ಟೆಲ್ಲ ವಿಜೃಂಭಣೆಯಿಂದ ಆಚರಣೆ ಮಾಡಿದ್ದೆವು ಆದರೆ ಈ ವರ್ಷ ಬಹಳ ಬೇಸರವಾಗಿದೆ. ಮನೆಯವರ ನೆನಪು ಕಾಡುತ್ತಿದೆ ಎಂದು ಬೇಸರ ಹೊರ ಹಾಕುತ್ತಿದ್ದಳು ಇದನ್ನು ಕಂಡ ಏಜೆ ಆಕೆಯನ್ನು ತವರು ಮನೆಗೆ ಕರೆದುಕೊಂಡು ಹೋಗುವ ನಿರ್ಧಾರ ಮಾಡುತ್ತಾನೆ. ಬಳಿಕ ಲೀಲಾ ಬಳಿ ಬಂದು ಸರ್ಪ್ರೈಸ್ ಕೊಡುವುದಾಗಿ ಹೇಳುತ್ತಾನೆ.
ಲೀಲಾ, ಇದೇನಪ್ಪಾ ಸರ್ಪ್ರೈಸ್ ಎಂದೆಲ್ಲಾ ಹೇಳುತ್ತಿದ್ದಾರೆ ಎಲ್ಲಿಗೆ ಕರೆದುಕೊಂಡು ಹೋಗುತ್ತಾರೆ ಎಂದು ಯೋಚನೆ ಮಾಡುತ್ತಾಳೆ. ಇತ್ತ ಏಜೆ ಸೊಸೆಯಂದಿರು ಮಾಡಿದ ಕಿತಾಪತಿಯಂದ ಗಣೇಶ ವಿಗ್ರಹ ತರಲು ಆಗದೆ ಲೀಲಾ ತಂದೆ ಚಡಪಡಿಸುತ್ತಿದ್ದಾರೆ. ಮುಹೂರ್ತ ಮೀರುವುದರ ಒಳಗೆ ಗಣೇಶ ವಿಗ್ರಹವನ್ನು ತಂದು ಪ್ರತಿಷ್ಠಾಪನೆ ಮಾಡಬೇಕು ಇಲ್ಲವಾದರೆ ಕಂಟಕ ಎದುರಾಗುತ್ತದೆ ಎಂದೆಲ್ಲ ಹೇಳಿ ಹೋದ ಚಂದ್ರಶೇಖರ್ ಈ ಬಾರಿ ಮುಹೂರ್ತಕ್ಕೆ ಸರಿಯಾಗಿ ವಿಗ್ರಹ ತರುತ್ತೇನೆ ಎಂದು ತೆರಳಿದವರು ಇನ್ನೂ ಬಂದಿಲ್ಲ. ವಿಗ್ರಹ ಪ್ರತಷ್ಠಾಪಿಸಲು 5 ನಿಮಿಷ ಬಾಕಿ ಇದೆ ಅಷ್ಟೆ.

ಮಗಳ ಮಾತು ಕೇಳಿ ಅಪ್ಪ ನಿರಾಳ
ಮನೆಯಲ್ಲಿ ಲೀಲಾ ತಂಗಿ ರೇವತಿ ತಂದೆಗೆ ಕರೆ ಮಾಡಿ ಎಲ್ಲಿದಿರಪ್ಪ ಮುಹೂರ್ತಕ್ಕೆ ಇನ್ನೂ ಐದು ನಿಮಿಷ ಇದೆ ಅಷ್ಟೇ. ವಿಗ್ರಹ ಸಿಕ್ಕಿತಾ ಅಪ್ಪ ಎಂದು ಪ್ರಶ್ನೆ ಮೇಲೆ ಪ್ರಶ್ನೆ ಕೇಳಿದಾಗ ಚಂದ್ರ ಶೇಖರ್ ಅಳುತ್ತಾರೆ. ಗಾಡಿ ಕೆಟ್ಟು ಹೋಗಿದೆ ಸರಿಯಾದ ಸಮಯದಲ್ಲಿ ನನಗೆ ವಿಗ್ರಹ ತರಲು ಆಗುವುದಿಲ್ಲ. ನಮ್ಮನ್ನು ದೇವರೇ ಕಾಪಾಡಬೇಕು ಈ ಬಾರಿಯೂ ಕಂಟಕ ಎದುರಾಗುತ್ತದೆ ಎಂದು ಭಯ ಪಡುತ್ತಿದ್ದೇನೆ ಎಂದು ಅಳುತ್ತಾರೆ. ಇದನ್ನು ಕೇಳಿದ ರೇವತಿಗೆ ದಿಕ್ಕೇ ತೋಚದ ಹಾಗೆ ಆಗುತ್ತದೆ.

ದುರ್ಗಳನ್ನು ನೋಡಿ ಮುಗುಳ್ನಕ್ಕ ಕೌಸಲ್ಯ
ಇದನ್ನು ಕೇಳಿದ ಕೌಸಲ್ಯ ಮಾತ್ರ ನಲುಗಿ ಹೋಗಿದ್ದಾಳೆ. ಈ ಬಾರಿ ಕಂಟಕ ಎದುರಾಗುತ್ತೆ ಎಂದುಕೊಂಡು ಅಳುತ್ತಾಳೆ. ಬಳಿಕ ದೇವರ ಮೊರೆ ಹೋಗುತ್ತಾಳೆ. ಇದನ್ನೆಲ್ಲ ಕೇಳಿದ ದುರ್ಗಾ, ಲಕ್ಷ್ಮಿ, ಸರಸ್ವತಿ ಖುಷಿ ಯಿಂದ ನಗುತ್ತಾರೆ. ಈ ಬಾರಿ ಕೌಸಲ್ಯ ಕೂಡ ಸಾಯುತ್ತಾಳೆ ಎಂಬುವುದು ಅವರ ಖುಷಿಗೆ ಕಾರಣ. ಇನ್ನೂ ಈ ವೇಳೆ ಏಜೆ ಹಾಗೂ ಲೀಲಾ ಕೌಸಲ್ಯ ಮನೆಗೆ ಗಣೇಶನ ವಿಗ್ರಹದ ಜೊತೆ ಬರುತ್ತಾರೆ ಇದನ್ನು ಕಂಡ ಮೂವರು ಸೊಸೆಯರಿಗೆ ಕೋಪ ಕೂಡ ಬರುತ್ತದೆ ಹಾಗೆಯೇ ಶಾಕ್ ಕೂಡ ಆಗುತ್ತದೆ.

ಲೀಲಾ ಮನೆಯಲ್ಲಿ ಹಬ್ಬದ ವಾತಾವರಣ
ಇನ್ನೂ ಮನೆಗೆ ಬಂದ ಗಣೇಶನನ್ನು ನೋಡಿ ರೇವತಿ ಮಾತ್ರ ಅಕ್ಕ-ಬಾವ ಸರಿಯಾದ ಸಮಯಕ್ಕೆ ಬಂದಿದ್ದೀರಾ ಎಂದು ಖುಷಿ ಪಡುತ್ತಾಳೆ. ಇದನ್ನು ಕಂಡ ಕೌಸಲ್ಯ ಕೂಡ ಬಹಳ ಖುಷಿ ಪಡುತ್ತಾಳೆ. ಲೀಲಾ ಹೇಳುತ್ತಾಳೆ ಅಮ್ಮ ನೀವು ಗಣೇಶ ತಂದಿದ್ದೀರಾ ಗೊತ್ತು. ಆದರೂ ನಮ್ಮದೊಂದು ಗಣೇಶ ಇರಲಿ ಎಂದು ತಂದೆವು ಎಂದು ಹೇಳುತ್ತಾಳೆ. ಅದಕ್ಕೆ ಕೌಸಲ್ಯ ಖುಷಿ ಪಡುತ್ತಾ ಹೇಳುತ್ತಾಳೆ. ಒಳ್ಳೆಯ ಸಮಯಕ್ಕೆ ಗಣೇಶ ತಂದಿದ್ದೀರ ಮುಹೂರ್ತ ಮಿರೋ ಮುಂಚೆ ಗಣೇಶನನ್ನು ಕೂರಿಸಿ ಎಂದು ಹೇಳುತ್ತಾಳೆ.

ಗಣೇಶನಿಗೆ ಹೂವಿನಿಂದ ಅಲಂಕಾರ ಮಾಡಿದ ಮನೆಮಂದಿ
ಬಳಿಕ ಗಣೇಶನನ್ನು ಹೂವಿನಲ್ಲಿ ಅಲಂಕರಿಸಿದ ಮಂಟಪದಲ್ಲಿ ಕೂರಿಸುತ್ತಾರೆ. ಇನ್ನೂ ರೇವತಿ ಹೇಳುತ್ತಾಳೆ ಅಪ್ಪನಿಗೆ ಕರೆ ಮಾಡಿ ಅಪ್ಪ ನೀನು ತಲೆಬಿಸಿ ಮಾಡಿಕೊಳ್ಳಬೇಡ ಅಕ್ಕ ಬಾವ ಬಂದಿದ್ದಾರೆ ಗಣೇಶನನ್ನು ತಂದಿದ್ದಾರೆ ಎಂದು ಹೇಳುತ್ತಾಳೆ ಇದನ್ನು ಕೇಳಿದ ಚಂದ್ರಶೇಖರ್ ಖುಷಿ ಪಡುತ್ತಾರೆ. ಬಳಿಕ ಮನೆಗೆ ಬಂದು ಹಿರಿ-ಹಿರಿ ಹಿಗ್ಗುತ್ತಾರೆ. ಇನ್ನೂ ದೇವ್ ರೇವತಿಯನ್ನು ಕಿಡ್ನಾಪ್ ಮಾಡಿ ಏಜೆಗೆ ಕರೆ ಮಾಡುತ್ತಾನೆ. ಏಜೆಗೆ ಶಾಕ್ ಆಗುತ್ತದೆ. ಏಜೆ ಮುಂದೇನು ಮಾಡುತ್ತಾನೆ ಎಂಬುವುದನ್ನು ಕಾದು ನೋಡಬೇಕಿದೆ.


Click it and Unblock the Notifications











