ರೇವತಿಯ ಕಿಡ್ನಾಪ್ ಮಾಡಿದ ದೇವ್‌ನ ಹುಟ್ಟಡಗಿಸುತ್ತಾನ ಏಜೆ?

By ಪೂರ್ವ

'ಹಿಟ್ಲರ್ ಕಲ್ಯಾಣ' ಧಾರಾವಾಹಿಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಗುತ್ತಿದೆ. ಇದೀಗ ರೇವತಿಯನ್ನು ಕಿಡ್ನಾಪ್ ಮಾಡಿದ್ದಾನೆ ದೇವ್. ಹಬ್ಬದ ಸಂತಸದಲ್ಲಿ ಇದ್ದ ಲೀಲಾ ಕುಟುಂಬದ ಮೇಲೆ ದೇವ್ ಕರಿ ನೆರಳು ಬಿದ್ದಿದೆ. ಈಗಲಾದರೂ ದೇವ್ ಆಟಕ್ಕೆ ಕಡಿವಾಣ ಹಾಕುತ್ತಾನಾ ಏಜೆ ಎಂಬ ಕುತೂಹಲ ಧಾರವಾಹಿ ಪ್ರಿಯರಲ್ಲಿ ಮೂಡಿದೆ. ಇನ್ನೊಂದೆಡೆ ಲೀಲಾ ತವರು ಮನೆಯಲ್ಲಿ ಹಬ್ಬದ ಸಂತಸ ಮನೆ ಮಾಡಿದೆ ರೇವತಿ, ಲೀಲಾ, ಕೌಸಲ್ಯ ಹಾಗೂ ಏಜೆ ಸೊಸೆಯಂದಿರು ಭರದ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಒಳ್ಳೆಯ ಉಡುಗೆ ತೊಡುಗೆ ತೊಟ್ಟು ಮಡಿಯಲ್ಲಿ ದೇವರ ಕಾರ್ಯಗಳನ್ನು ಮಾಡುತ್ತಿದ್ದಾರೆ ಏಜೆ ಸೊಸೆಯರು. ಲೀಲಾ-ಏಜೆ ತಂದಿರುವ ಗಣೇಶನಿಗೆ ಅಲಂಕಾರ ಮಾಡಲಾಗುತ್ತದೆ. ಮನದಲ್ಲಿ ವಿಷ ಕಾರುತ್ತಿರುವ ದುರ್ಗಾ, ಏಜೆ ಮುಂದೆ ಸಾಚಾ ಥರ ನಾಟಕ ವಾಡುತ್ತಾಳೆ. ಇದಕ್ಕೆ ಸರಿಯಾಗಿ ಕೌಸಲ್ಯ, ಏಜೆ ಸೊಸೆಯಂದಿರ ಕಾಲು ಎಳೆಯುತ್ತಿರುತ್ತಾಳೆ. ಕೌಸಲ್ಯಾ, ಏಜೆ ಸೊಸೆಯಂದಿರನ್ನು ಕಂಡು ಅನಿಷ್ಟಗಳೆಲ್ಲ ನಮ್ಮನ್ನು ನೋಡಿ ಯಾವಾಗ ಇವರ ಕಾಲು ಎಳೆದು ಹಾಕುವುದು ಎಂಬುವುದನ್ನು ಕಾಯುತ್ತಾ ಇರುತ್ತಾರೆ ಎಂದು ಹೇಳುತ್ತಾಳೆ.

ಅದಕ್ಕೆ ಲೀಲಾ ಯಾರು? ಎಂದು ಕೇಳಿದಾಗ ದುರ್ಗಾ ಕೆಮ್ಮುತ್ತಾಳೆ. ಆಗ ಕೌಸಲ್ಯ, ಲೀಲಾಗೆ ದುರ್ಗಾ ಕಡೆಯತ್ತ ಕಣ್ಸನ್ನೆ ಮಾಡುತ್ತಾಳೆ. ಇನ್ನು ದುರ್ಗಾ, ಕೌಸಲ್ಯಳನ್ನು ನೋಡುತ್ತಿರಬೇಕಾದರೆ ಕೌಸಲ್ಯ, ಏಜೆಯನ್ನು ಕರೆಯುತ್ತಾಳೆ. ಏಜೆ ನಿಮ್ಮ ಸೊಸೆಯಂದಿರ ಬಗ್ಗೆ ಹೇಳಬೇಕಿತ್ತು ಎಂದಾಗ ದುರ್ಗಾಗೆ ಶಾಕ್ ಆಗುತ್ತದೆ. ಬಳಿಕ ಮಾತು ಮುಂದುವರಿಸಿದ ಕೌಸಲ್ಯ ಸೊಸೆಯಂದಿರು ಬಹಳ ಅಚ್ಚುಕಟ್ಟಾಗಿ ಕೆಲಸ ಮಾಡಿದ್ದಾರೆ ನಾವೇ ಮಾಡುತ್ತೇನೆ ಎಂದು ಹೇಳಿ ಎಲ್ಲಾ ಕೆಲಸ ಅವರೇ ಮಾಡುತ್ತಾರೆ ಎಂದು ಹೇಳುತ್ತಾಳೆ. ಇದನ್ನು ಕೇಳಿದ ದುರ್ಗಾ ಸ್ವಲ್ಪ ಸಮಾಧಾನ ಪಟ್ಟುಕೊಳ್ಳುತ್ತಾಳೆ.

ಮಗಳು ಅಳಿಯನನ್ನು ಕಂಡು ಫುಲ್ ಖುಷ್

ಮಗಳು ಅಳಿಯನನ್ನು ಕಂಡು ಫುಲ್ ಖುಷ್

ಇನ್ನು ಮನೆಗೆ ಬಂದ ಚಂದ್ರಶೇಖರ್ ಭಾರಿ ಖುಷಿಯಲ್ಲಿ ಇದ್ದಾರೆ. ಹಬ್ಬಕ್ಕೆ ಅಳಿಯಂದಿರು ಮಗಳು ಬರುವುದಿಲ್ಲ ಎಂದಾಗ ಬೇಸರವಾಗಿತ್ತು ಹಾಗೆಯೇ ಗಣೇಶನ ವಿಗ್ರಹವು ಇಲ್ಲ, ಹೇಗೆ ಪೂಜೇ ಮಾಡುವುದು ಎಂದು ಯೋಚನೆ ಮಾಡುತ್ತಿದ್ದೆ ಅದನ್ನು ಆ ದೇವರು ಕೇಳಿಸಿಕೊಂಡ ಅನ್ನಿಸುತ್ತದೆ, ಅದಕ್ಕೆ ಈ ರೀತಿ ಪವಾಡ ಮಾಡಿದ್ದಾನೆ ಎಂದು ಖುಷಿಯಲ್ಲಿ ಹೇಳುತ್ತಾರೆ. ಗಂಡನನ್ನು ನೋಡಿದ ಕೌಸಲ್ಯ ಸಹ ಖುಷಿಯಾಗುತ್ತಾಳೆ. ಹಬ್ಬದ ಆಚರಣೆ ಸಹ ಲೀಲಾ ತವರಲ್ಲಿ ಕಳೆ ಕಟ್ಟಿದೆ.

ಆಟಕ್ಕೆ ಫುಲ್ ಸ್ಟಾಪ್ ಇಡುತ್ತಾನ ಏಜೆ?

ಆಟಕ್ಕೆ ಫುಲ್ ಸ್ಟಾಪ್ ಇಡುತ್ತಾನ ಏಜೆ?

ಈ ವೇಳೆ ಅದೇನೋ ತರಲು ರೇವತಿ ಮನೆಯಿಂದ ಹೊರ ಹೋಗುತ್ತಾಳೆ. ರಸ್ತೆ ಬದಿ ನಿಂತಿರುವ ವೇಳೆ ರೇವತಿಯನ್ನು ದೇವ್ ಕಿಡ್ನಾಪ್ ಮಾಡುತ್ತಾನೆ. ನಾಲ್ಕೈದು ಗೂಂಡಾಗಳನ್ನು ಇಟ್ಟುಕೊಂಡು ರೇವತಿಯನ್ನು ಅಪಹರಿಸಿ ಬಲವಂತದಿಂದ ಮದುವೆ ಆಗುವುದಾಗಿ ಹೇಳುತ್ತಾನೆ. ಏಜೆ ಮೇಲಿನ ಸಿಟ್ಟಿಗೆ ರೇವತಿಯನ್ನು ಬಲಿ ಪಶು ಮಾಡುತ್ತಿದ್ದಾನೆ ದೇವ್. ಇದೀಗ ದೇವ್ ನನ್ನು ಕಂಡ ರೇವತಿ ಥೂ ನೀಚ ನೀನಾ ಬಿಟ್ಟು ಬಿಡು ನನ್ನ. ಇಂಥ ಕೆಲಸ ಮಾಡಲು ಏಷ್ಟು ಧೈರ್ಯ ನಿನಗೆ ಎಂದೆಲ್ಲಾ ಹೇಳುತ್ತಾಳೆ.

ಬಿಟ್ಟುಬಿಡಿ ಎಂದು ಗೋಗರೆವ ರೇವತಿ

ಬಿಟ್ಟುಬಿಡಿ ಎಂದು ಗೋಗರೆವ ರೇವತಿ

ನನ್ನ ಬುದ್ದಿ ಎಲ್ಲಾ ನಿನಗೆ ಗೊತ್ತಾಗಿದೆ ಅಲ್ವಾ. ನಾನು ಇದೀಗ ನಿನ್ನ ಸುಮ್ಮನೆ ಬಿಟ್ಟರೆ ನೀನು ಬೇರೆ ಹುಡುಗನನ್ನು ಮದುವೆ ಆಗುತ್ತಿಯ. ಅದಕ್ಕೆ ನಿನ್ನನ್ನು ನಾನು ಮದುವೆ ಆಗುತ್ತೇನೆ. ಏಜೆ ಮೇಲೆ ಸೇಡು ತೀರಿಸಿಕೊಳ್ಳುತ್ತೇನೆ ಎಂದಾಗ ರೇವತಿ ನೀನು ಕಿಡ್ನಾಪ್ ಮಾಡಿರುವುದು ಏಜೆಗೆ ತಿಳಿದರೆ ಖಂಡಿತವಾಗಿಯು ನಿನ್ನನ್ನು ಸುಮ್ಮನೆ ಬಿಡುವುದಿಲ್ಲ ಎಂದು ಹೇಳಿದಾಗ ದೇವ್ ಹೇಳುತ್ತಾನೆ ಏಜೆಗೆ ಕರೆ ಮಾಡಿ ಕರೆಸುತ್ತೇನೆ. ಏಜೆ ಎದುರೇ ನಿನ್ನ ಮದುವೆ ಆಗುತ್ತೇನೆ. ಎಂದು ಹೇಳಿ ರೇವತಿ ಫೋನ್ ನಿಂದ ಏಜೆಗೆ ಕರೆ ಮಾಡುತ್ತಾನೆ.

ಹಬ್ಬದ ಸಂಭ್ರಮದಲ್ಲಿ ಇದ್ದ ಏಜೆಗೆ ಶಾಕ್

ಹಬ್ಬದ ಸಂಭ್ರಮದಲ್ಲಿ ಇದ್ದ ಏಜೆಗೆ ಶಾಕ್

ರೇವತಿ ಕರೆ ಮಾಡಿದ್ದಾಳೆ ಎಂದುಕೊಂಡು ಫೋನ್ ಎತ್ತುವ ಏಜೆಗೆ ದೇವ್ ಧ್ವನಿ ಕೇಳಿಸುತ್ತದೆ. ಹಬ್ಬದ ಸಂಭ್ರಮದಲ್ಲಿ ಇರುವ ಏಜೆಗೆ ಕೊಂಚ ಶಾಕ್ ಆಗುತ್ತದೆ. ಎಲ್ಲರ ಮುಂದೆ ಏನೂ ಹೇಳದೆ ದೇವ್ ಹೇಳುವ ಮಾತುಗಳನ್ನು ಕೇಳಿಸಿಕೊಳ್ಳುತ್ತಾ ಇರುತ್ತಾನೆ. ರೇವತಿ ಇದೀಗ ನನ್ನ ವಶದಲ್ಲಿ ಇದ್ದಾಳೆ ಇವತ್ತು ರೇವತಿಗೆ ನನಗೆ ಮದುವೆ. ನೀವು ನಮ್ಮ ಮದುವೆಗೆ ಬರಬೇಕು ಹೂವು ತಗೊಂಡು ಬರುತ್ತೀರಾ ಅಥವಾ ಬರಿ ಕೈಯಲ್ಲಿ ಬರುತ್ತೀರಾ ಅದು ನಿಮಗೆ ಬಿಟ್ಟ ವಿಚಾರ. ನೀವು ರೇವತಿಯನ್ನು ಅದು ಹೇಗೆ ಕರೆದುಕೊಂಡು ಹೋಗುತ್ತೀರಾ ನಾನು ನೋಡುತ್ತೇನೆ , ಇಲ್ಲಿ ಬಂದರೆ ನಿಮ್ಮ ಜೀವಕ್ಕೂ ಗ್ಯಾರಂಟಿ ಇಲ್ಲ. ಇವತ್ತು ನನ್ನ ರೇವತಿ ಮದುವೆ. ನನಗೆ ಎಷ್ಟೆಲ್ಲ ಚಿತ್ರ ಹಿಂಸೆ ಮಾಡಿದ್ದೀರಾ ಅದರಲ್ಲಿ ನಿಮ್ಮ ಪಾತ್ರ ಬಹಲ ದೊಡ್ಡದಿದೆ ಎಂದು ಹೇಳಿ ಕಾಲ್ ಕಟ್ ಮಾಡುತ್ತಾನೆ ದೇವ್.

ಏಜೆ ಮನೆಯಿಂದ ಹೊರಟಿದ್ದನ್ನು ಕಂಡು ಶಾಕ್ ಆದ ಮನೆ ಮಂದಿ

ಏಜೆ ಮನೆಯಿಂದ ಹೊರಟಿದ್ದನ್ನು ಕಂಡು ಶಾಕ್ ಆದ ಮನೆ ಮಂದಿ

ಆ ವೇಳೆ ಚಂದ್ರಶೇಖರ್ ಹೇಳುತ್ತಾರೆ. ಇದೀಗ ಬಹಳ ಖುಷಿ ಆಗಿದ್ದಿವಿ. ಇನ್ನೂ ರೇವತಿ ಮದುವೆ ಆಗಿ ಬಿಟ್ಟರೆ ನನಗೆ ಬಹಳ ಖುಷಿ ಆಗುತ್ತದೆ ಎಂದಾಗ ಕೌಸಲ್ಯ ಹೇಳುತ್ತಾಳೆ ಆ ಜವಾಬ್ದಾರಿಯನ್ನು ಅಳಿಯಂದಿರು ಹಾಗೂ ಲೀಲಾ ತೆಗೆದುಕೊಂಡಿದ್ದಾರೆ ನೀವು ನಿಶ್ಚಿಂತೆ ಇಂದ ಇರಿ ಎಂದು ಹೇಳಿದಾಗ ಏಜೆ ಹೇಳುತ್ತಾರೆ ಪೂಜೆಗೆ ಸಿದ್ಧತೆ ಮಾಡಿಕೊಳ್ಳಿ ನಾನು ಬರುತ್ತೇನೆ ಎಂದು ಅಲ್ಲಿಂದ ಹೊರಟೆ ಬಿಡುತ್ತಾರೆ. ಇದನ್ನು ಕಂಡ ಮನೆಯವರಿಗೆ ಆತಂಕ ಆಗುತ್ತದೆ ಲೀಲಾ, ಏಜೆಯನ್ನು ಕರೆಯುತ್ತಾಳೆ ಈ ವೇಳೆ ಏಜೆ, ಲೀಲಾ ಬಳಿ ರೇವತಿ ಎಲ್ಲಿ ಎಂದು ಕೇಳುತ್ತಾನೆ ಆಗ ಲೀಲಾ ಗೆ ಶಾಕ್ ಆಗುತ್ತದೆ. ಮುಂದೇನು ಎಂಬುವುದನ್ನು ಕಾದು ನೋಡಬೇಕಿದೆ.

More from Filmibeat

English summary
Zee Kannada serial Hitler Kalyana Written Update on September 6th episode. Know more about the episode.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X