ರೇವತಿಗೆ ತಾಳಿ ಕಟ್ಟಲು ಮುಂದಾದ ದೇವ್, ಅಡ್ಡಗಟ್ಟಿದ ಏಜೆ

By ಪೂರ್ವ

'ಹಿಟ್ಲರ್ ಕಲ್ಯಾಣ' ಧಾರವಾಹಿಯಲ್ಲಿ ಆಕ್ಷನ್ ಎಪಿಸೋಡ್ ನಡೆಯುತ್ತಿದೆ. ಇದೀಗ ಏಜೆ, ದೇವ್‌ನ ಎಲ್ಲಾ ಆಟವನ್ನು ನಿಲ್ಲಿಸಲು ಬಂದಿದ್ದಾನೆ. ನೀನು ಕರೆದರೆ ಏಜೆ ಬರುತ್ತಾರಾ ಅದು ಹೇಗೆ ಬರುತ್ತಾರೆ ನಾನು ನೋಡುತ್ತೇನೆ ಎಂದೆಲ್ಲ ಹೇಳಿದ ದೇವ್, ಅದೇ ವೇಳೆಗೆ ಏಜೆ ಬಂದು ಡೋರ್ ತೆಗೆದುದನ್ನು ನೋಡಿ ಶಾಕ್ ಆಗುತ್ತಾನೆ. ಬಳಿಕ ಬಂದ್ಯಾ ಏಜೆ. ನನಗೆ ಎಷ್ಟೆಲ್ಲ ಹಿಂಸೆ ಮಾಡಿದ್ದೀಯಾ ಇದೀಗ ನನ್ನ ಕೋಟೆಗೆ ಎಂಟ್ರಿ ನೀಡಿದ್ದಿಯಾ. ಇನ್ನೂ ಮುಂದೆ ಇದೆ ನಿನಗೆ ಮಾರಿ ಹಬ್ಬ. ಗೂಂಡಾಗಳ ಬಳಿ ಹೇಳುತ್ತಾನೆ ಇವನಿಗೆ ಸರಿಯಾಗಿ ಬಾರಿಸಿ ಎಂದು.

ಏಜೆ ಬಂದಿದ್ದನ್ನು ನೋಡಿದ ರೇವತಿಗೆ ಬಹಳ ಆನಂದ ಆಗುತ್ತದೆ. ಏಜೆ ಅಲ್ಲಿಯೇ ಇದ್ದ ಒಂದು ದಿಬ್ಬದಲ್ಲಿ ಕೂರುತ್ತಾನೆ. ಕೂತು ಗೂಂಡಾಗಳ ಬಳಿ ಮಾತನಾಡುತ್ತಾನೆ ನನ್ನ ಕನ್ನಡಕ 30,000 ಬೆಲೆ, ನನ್ನ ವಾಚ್ ಒಂದು ಲಕ್ಷ ದ್ದು ಎಂದು ಕೈಯಲ್ಲಿ ಇದ್ದನ್ನು ತೆಗೆದು ಪಕ್ಕದಲ್ಲಿ ಇಡುತ್ತಾನೆ ಬಳಿಕ ಗೂಂಡಾಗಳ ಬಳಿ ಬೆಟ್ಟಿಂಗ್ ಕಟ್ಟುತ್ತಾನೆ. ಇದನ್ನೆಲ್ಲ ನೋಡಿದ ದೇವ್ ಗೆ ತಲೆ ಕೆಟ್ಟು ಹೋಗುತ್ತದೆ.

Zee Kannada serial Hitler Kalyana Written Update on September 7th

ಗೂಂಡಾಗಳ ವರ್ತನೆಗೆ ದೇವ್ ಶಾಕ್

ಗೂಂಡಾಗಳ ವರ್ತನೆಗೆ ದೇವ್ ಶಾಕ್

ಏಜೆ ಮಾತಿಗೆ ಮರುಳಾಗಿ ಮಾತನಾಡಲು ತೊಡಗುತ್ತಾರೆ. ಏಜೆ ಹೇಳುತ್ತಾನೆ ರೇವತಿ ದೇವ್ ನ ಮದುವೆ ಆಗಲ್ಲ ಇದು ನನ್ನ ಬೆಟ್. ಇದಕ್ಕೆ ಒಂದುವರೆ ಲಕ್ಷದಷ್ಟು ಮೊತ್ತದ ವಸ್ತುಗಳನ್ನು ಇಟ್ಟಿದ್ದೇನೆ. ದೇವ್, ರೇವತಿಯನ್ನು ಮದುವೆ ಆಗುತ್ತೀನಿ ಎನ್ನುವ ನೀವು ಏನು ಬೆಟ್ ಕಟ್ಟುತ್ತೀರ ಎಂದು ಏಜೆ ಕೇಳಿದ ವೇಳೆ ಇದ್ದ ಬದ್ದ ಚಿಲ್ಲರೆ ಹಣವನ್ನು ಇಡುತ್ತಾರೆ. ಬಳಿಕ ಯಾರು ಗೆಲ್ಲಬಹುದು ಎಂದು ಕುತೂಹಲ ದಿಂದ ನೋಡುತ್ತಾರೆ. ಇದನ್ನೆಲ್ಲ ನೋಡಿದ ದೇವ್ ಗೆ ತಲೆ ಕೆಟ್ಟು ಹೋಗುತ್ತದೆ.

ತಟ್ಟೆಯಿಂದ ದೇವ್ ಗೆ ಬಡಿದ ರೇವತಿ

ತಟ್ಟೆಯಿಂದ ದೇವ್ ಗೆ ಬಡಿದ ರೇವತಿ

ಬಳಿಕ ರೇವತಿಯನ್ನು ಹಿಡಿದು ತಾಳಿ ಕಟ್ಟಲು ನೋಡುತ್ತಾನೆ ಆ ವೇಳೆ ಏಜೆ, ರೇವತಿಗೆ ಹೇಳುತ್ತಾನೆ ನಿನ್ನನ್ನು ನೀನು ಕಾಪಾಡಿಕೊಳ್ಳಬಹುದು. ಸಣ್ಣ ತಟ್ಟೆ ಕೂಡ ಸಾಕು ಎಂದು ಹೇಳುತ್ತಾನೆ ಆ ವೇಳೆ ಹೂ ಇಟ್ಟಿದ್ದ ತಟ್ಟೆಯನ್ನು ತೆಗೆದುಕೊಂಡು ದೇವ್‌ಗೆ ಹೊಡೆಯುತ್ತಾಳೆ ರೇವತಿ. ಬಳಿಕ ದೇವ್ ಅದೆಷ್ಟೇ ಸೆಣಸಾಟ ನಡೆಸಿದರು ಕೊನೆಗೆ ರೇವತಿ ಗೆಲ್ಲುತ್ತಾರೆ. ರೇವತಿ ಮನೆಗೆ ಬಾರದೆ ಇದ್ದಿದ್ದನ್ನು ನೋಡಿದ ಕೌಸಲ್ಯ ಚಿಂತಾಕ್ರಾಂತಳಾಗುತ್ತಾಳೆ. ಸಣ್ಣ ಕೆಲಸ ಹೇಳಿದ್ದು ಅದನ್ನು ಮಾಡಲು ಇಷ್ಟು ಹೊತ್ತು ಬೇಕಾ ಎಂದು ಹೇಳಿ ಆಕೆಗೆ ಕರೆ ಮಾಡಿ ಚಡ ಪಡಿಸುತ್ತಾ ಇರುತ್ತಾಳೆ.

ರೇವತಿಯನ್ನು ಕಾಣದೆ ಕೌಸಲ್ಯ ಚಡಪಡಿಕೆ

ರೇವತಿಯನ್ನು ಕಾಣದೆ ಕೌಸಲ್ಯ ಚಡಪಡಿಕೆ

ಇದನ್ನು ಕಂಡ ಲೀಲಾ ಗೆ ಎನು ಮಾಡಬೇಕು ಎಂದು ತೋಚುವುದಿಲ್ಲ. ಅಮ್ಮನಿಗೆ ಸಮಾಧಾನ ಹೇಳುತ್ತಾಳೆ ಬಳಿಕ ಏನಾಯ್ತು ಎಂದು ಕೇಳುತ್ತಾಳೆ ಅಮ್ಮನ ಗೋಳು ಕೇಳಲು ಆಗದೆ ಆಕೆಯೇ ರೇವತಿ ಗೆ ಕಾಲ್ ಮಾಡುವ ಹಾಗೆ ನಟಿಸುತ್ತಾರೆ. ಬಳಿಕ ಹೇಳುತ್ತಾಳೆ ಅಮ್ಮ ರೇವತಿ ಗೆ ಆಕೆಯ ಗೆಳತಿ ಸಿಕ್ಕಿದಲಂತೆ ಅವಳ ಮನೆಗೆ ಹೋಗಿದ್ದಾಳೆ ಈಗ ಬರುತ್ತಾಳೆ ಎಂದು ಹೇಳುತ್ತಾಳೆ ಅದಕ್ಕೆ ಲೀಲಾ ತಾಯಿ ಹೇಳುತ್ತಾರೆ ನಾನು ಕರೆ ಮಾಡಿದರೆ ಫೋನ್ ತೆಗಿಯಲ್ಲ ಅಕ್ಕ ಕರೆ ಮಾಡಿದರೆ ಬೇಗ ತೆಗೆಯುತ್ತಾರೆ. ಬೇಗ ಬರ ಹೇಳು ಅವಳನ್ನು ಎಂದು ಹೇಳಿ ಒಳ ಹೋಗುತ್ತಾಳೆ ಕೌಸಲ್ಯ.

ನಿಟ್ಟುಸಿರು ಬಿಟ್ಟ ರೇವತಿ

ನಿಟ್ಟುಸಿರು ಬಿಟ್ಟ ರೇವತಿ

ಲೀಲಾ ನಿಟ್ಟುಸಿರು ಬಿಡುತ್ತಾಳೆ. ಗಣೇಶ ಹಬ್ಬ ಆಗಿರೋದರಿಂದ ಅದ್ದೂರಿಯಾಗಿ ಅಡುಗೆ ಮಾಡಬೇಕು . ಏಜೆ ಸೊಸೆಯಂದಿರು ಅಡುಗೆ ಮಾಡುವಲ್ಲಿ ನಿರತರಾಗಿ ಇರುತ್ತಾರೆ. ಇತ್ತ ಒಂದು ಕಡೆ ದಟ್ಟ ಹೊಗೆ ಬರುತ್ತದೆ ಎತ್ತ ಕಡೆ ಎಂದು ನೋಡಿದರೆ ಬಾಣಲೆಯಲ್ಲಿ ಒಗ್ಗರಣೆ ಹಾಕಿ ಇಟ್ಟದ್ದು ಕರಟಿ ಹೋಗಿದೆ. ಅಬ್ಬಬ್ಬಾ ಏಜೆ ಸೊಸೆಯಂದಿರು ಮಾಡಿದ ಅಡುಗೆ ತಿನ್ನುವುದೇ ಒಂದು ಸವಲಾಗಿ ಪರಿಣಮಿಸಲಿದೆ. ಮುಂದೇನು ಎಂಬುವುದನ್ನು ಕಾದು ನೋಡಬೇಕಿದೆ.

More from Filmibeat

English summary
Zee Kannada serial Hitler Kalyana Written Update on September 7th episode. Know more about the episode.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X